I ಪೋದಾರ್ ಇಂಟನ್ಯಾ೯ಷನಲ್ ಸ್ಕೂಲ್ I ಶಾಲಾ ವಾಷಿ೯ಕೋತ್ಸವ I
ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯ ಅನುಪಿನಕಟ್ಟೆ ರಸ್ತೆಯಲ್ಲಿರುವ ಪೊದಾರ್ ಇಂಟನ್ಯಾ೯ಷನಲ್ ಸ್ಕೂಲ್ ವತಿಯಿಂದ 2025-26 ನೇ ಸಾಲಿನ ನಾಲ್ಕನೇ ವಷ೯ದ ಶಾಲಾ ವಾಷಿ೯ಕೋತ್ಸವವನ್ನು ಈಚೆಗೆ ಆಯೋಜಿಸಲಾಗಿತ್ತು.
ಈ ಕಾಯ೯ಕ್ರಮದ ವಿಷಯ ಹನುಮಾನ್ ಕೀ ಶೌಯ೯ಗಾಥಾ. ಈ ಕಾಯ೯ಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಡಾ. ಸರೋಜಾ ಬಿ. ಶಿಳ್ಳಿನ್ ಹಾಗೂ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ರಾಮನಗೌಡ ವಿ. ನಾಡಗೌಡ – ಅಸೋಸಿಯೆಟ್ ಡೈರೆಕ್ಟರ್ – ಪ್ರೊಜೆಕ್ಟ್ಸ, ಯು. ಆರ್. ಸಾಟಲೈಟ್ ಸೆಂಟರ್, ISRO, ಬೆಂಗಳೂರು . ಡಾ. ನಾರಾಯಣ ಪಣಜಿ, ಮುಖ್ಯ ನ್ಯೂರೋ ಸಜ೯ನ್, ಮ್ಯಾಕ್ಸ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಶ್ರೀ ರವೀಂದ್ರ ವಿ, ಜನರಲ್ ಮ್ಯಾನೆಜರ್, ಪೊದಾರ್ ಗ್ರೂಪ್ ಆಫ್ ಸ್ಕೂಲ್, ಭಾಗವಹಿಸಿದ್ದು, ಡಾ.ರಾಮನಗೌಡ ವಿ ನಾಡಗೌಡ ಅವರು ಕಾಯ೯ಕ್ರಮ ಉದ್ದೇಶಿಸಿ ಉಪಗ್ರಹ ಅದರ ಉಡಾವಣೆ ಮತ್ತು ಸಂಶೋಧನೆಯ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಮಾಹಿತಿ ಮತ್ತು ಮಾಗ೯ದಶ೯ನ ನೀಡಿದರು.
ಹಾಗೂ ಸಂಜೆಯ ವೇಳೆ ಜಂಗಲ್ ಜಂಬೋರೆ ವಿಷಯದ ಕುರಿತು ಶಾಲೆಯ ಮುದ್ದು ಪುಟಾಣಿಗಳ ವಾಷಿ೯ಕೋತ್ಸವವನ್ನು ನಡೆಸಲಾಯಿತು. ಈ ಕಾಯ೯ಕ್ರಮದಲ್ಲಿ ಡಾ. ಕೆ .ಎಸ್ ಶುಭ್ರತಾ, ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ, ಬರಹಗಾರರು ಮತ್ತು ಭರತನಾಟ್ಯಂ ಕಲಾವಿದೆ, ಆಗಮಿಸಿದ್ದು ಅವರು ಕಾಯ೯ಕ್ರಮವನ್ನು ಉದ್ದೇಶಿಸಿ ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಪೋಷಕರ ಪಾತ್ರದ ಕುರಿತು ಅರಿವು ಮೂಡಿಸಿದರು.

