I ಸಿದ್ದೇಶ್ವರ ನಗರದ ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟ I ಕಾಂಗ್ರೆಸ್ ಮುಖಂಡ ಹೆಚ್.ಸಿ ಯೋಗೇಶ್ ಬೇಟಿ I
ಶಿವಮೊಗ್ಗ : ನಗರದ ಸಿದ್ಧೇಶ್ವರ ನಗರದಲ್ಲಿ ಸಿಲೆಂಡರ್ ಸ್ಫೋಟದಿಂದ ಹಾನಿಗೊಳಗಾಗಿದ್ದು. ಇದರ ಕುರಿತಾಗಿ ಸ್ಪೋಟಗೊಂಡ ಮನೆಗೆ ತೆರಳಿ ಕುಟುಂಬಸ್ಥರನ್ನು ಮಾತನಾಡಿಸಿ ಧೈರ್ಯ ತುಂಬಿದ ಕಾಂಗ್ರೆಸ್ ಮುಖಂಡ ಹೆಚ್.ಸಿ ಯೋಗೇಶ್
ನಗರದ ಯಾವುದೇ ಕ್ಲಿಷ್ಟಕರ ಸಂದರ್ಭಗಳಲ್ಲಿ ದನಿಗೂಡಿಸುವ ಹಾಗೂ ಸ್ಪಂದಿಸುವ ಹೆಚ್.ಸಿ ಯೋಗೇಶ್ ರವರು ಜನಸ್ನೇಹಿ ರಾಜಕಾರಣಕ್ಕೆ ಮುಂದಾಗಿ ಜನಸಾಮಾನ್ಯರ ಐಕಾನ್ ಆಗುತ್ತಿದ್ದಾರೆ,
ಅವರು ಸಿಲಿಂಡರ್ ಸ್ಪೋಟದಿಂದ ಹಾನಿಗೊಳಗಾದ ಮನೆಗೆ ನೀಡಿದ ಸಂದರ್ಭದಲ್ಲಿ ಎನ್ಇಎಸ್ ವಿದ್ಯಾ ಸಂಸ್ಥೆಯಲ್ಲಿ ಓದುತ್ತಿರುವ ಮಗುವಿನ ಶಾಲೆಯ ಫೀಸ್ ಮೊತ್ತವನ್ನು ಕಡಿತಗೊಳಿಸಲು ಶಾಲಾ ಆಡಳಿತ ಮಂಡಳಿಗೆ ಮನವಿ ಕೂಡ ಮಾಡಿದ್ದಾರೆ,
ಅವರು ಸಹ ಸ್ಪಂದಿಸಿದ್ದು ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ನಾಗರಾಜ್ ರವರಿಗೂ ಸಹ ಧನ್ಯವಾದಗಳು, ಹಾಗೆ ಮತ್ತೋರ್ವ ಮಗು ಬೆಕ್ಕಿನ ಕಲ್ಮಠ ಓದುತ್ತಿದ್ದು ಆ ಮಗುವಿನ ಶಾಲಾ ಫೀಸ್ ಅನ್ನು ಪಡೆಯದೆ ವಿದ್ಯಾಭ್ಯಾಸ ನೀಡುವಂತೆ ವಿನಂತಿಸಿದ್ದಾರೆ, ಅದೇ ರೀತಿ ಜನವರಿ ಮೂರನೇ ತಾರೀಕಿನಂದು ನಡೆಯಲಿರುವ ಗುರು ಬಸವ ಜಯಂತಿಯ ಕಾರ್ಯಕ್ರಮ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ರವರಿಂದ ಮಗುವಿಗೆ ಶಾಲಾ ಸಮವಸ್ತ್ರ ಹಾಗೂ ಕೊಡಿಸುವ ಭರವಸೆಯನ್ನು ನೀಡಲಾಗಿದೆ. ದಿನನಿತ್ಯ ಬಳಸುವ ದಿನಸಿ ಪದಾರ್ಥಗಳನ್ನು ಸಹ ನೀಡುವ ಮುಖಾಂತರ ಸಹಕರಿಸಲಾಗಿದೆ. ಈ ಸಂದರ್ಭದಲ್ಲಿ ಸಿದ್ದೇಶ್ವರ ಭಾಗದ ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಗೇಗೌಡರವರು ಸಾರ್ವಜನಿಕರು ಮುಖಂಡರುಗಳು ಉಪಸ್ಥಿತರಿದ್ದರು.

