ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಶಿವಮೊಗ್ಗದಲ್ಲಿದೆ I ಬ್ಯಾಂಕಿಂಗ್ ಡೇಟಾ I ಕಬಳಿಸುವ ಡಿಎಸ್‌ಎ ಜಾಲ I
ಯಾವುದೇ ಕ್ಷೇತ್ರಗಳೇ ಆಗಲಿ ಅತ್ಯಾಧುನಿಕ ತಂತ್ರಜ್ಞಾನದೊಳು ಉನ್ನತೀಕರಣಗೊಂಡರು ಈ ವೃದ್ದಿಯ ಜೊತೆಗೆ ಅತೀವ ಸವಾಲುಗಳ ಪ್ರಯೋಗಕ್ಕೆ ಬಲಿಯಾಗುವುದು ಶ್ರೀ ಸಾಮಾನ್ಯ ಮಾತ್ರವೇ ಆಗಿದೆ, ಫ್ಯಾಂಡಮಿಕ್ ವರ್ಷಮಾನದ ನಂತರದಲ್ಲಿ ಆರ್ಥಿಕ ಅಸಮಾನತೆಗಳಿಂದ ಬಳಲುತ್ತಿರುವ ಬಹುತೇಕ ಬದುಕುಗಳು, ಹೇಗಾದರು ಸರಿಯೇ ಹತೋಟಿಗೆ ತರುವ ನಿಟ್ಟಿನಲ್ಲಿ ಹರಸಾಹಸವೇ ಮಾಡುತ್ತಿರುವುದು ಸಾಮಾನ್ಯವಾಗಿದೆ, ಇಂತಹದೊಂದು ದುರ್ಬಲತೆಯನ್ನು ಎಕಾನಿಮಿಕಲ್ ಸಪೋರ್ಟೆಡ್, ಹಾದಿಗಳನ್ನು ಹುಡುಕುವ ಅವಸರದಲ್ಲಿ ಸರಳೀಕರಣದಲ್ಲಿ ಸಾಲ ಸೌಲಭ್ಯ ಒದಗಿಸುತ್ತೇವೆ, ಎನ್ನುವ ಬಹತೇಕ (ಡಿಎಸ್‌ಎ) ಡೈರೆಕ್ಟ್ ಸೆಲ್ಲಿಂಗ್ ಏಜೆಂಟ್ಸ್ ಜಾಲಕ್ಕೆ ನರ-ನರಳಿಸಿರುವ ಘಟನೆಗಳು ಶಿವಮೊಗ್ಗದಲ್ಲಿವೆ, ಅಲ್ಲದೆ ಇಂತಿವರು ಯಾವ ಮಾದರಿಯಾಗಿ ತುರ್ತು ಪರಿಸ್ಥಿಗಳನ್ನು ಸೃಷ್ಠಿಸಿ, ಡೇಟಾ ಕಲೆಕ್ಟ್ ಮಾಡುವುದು, ಸರ್ವಿಸ್ ಹಣವೆಂದು ಪಾವತಿಸಿಕೊಳ್ಳುವುದು, ಲೋನ್ ಮಂಜೂರಾತಿ ಆದ್ಮೇಲೆ ಶೇಕಡ ೨% ರಿಂದ ೫% ರವರೆಗೆ ಕಮಿಷನ್ ಕೊಡಬೇಕು ಎಂದು ತಿಳಿಸುವುದು, ಈ ರೀತಿ ಅಲೆದಾಡಿಸಿ ಕೊನೆಗೊಮ್ಮೆ ನಿಮ್ಮದು ಸಿಬಿಲ್ ಪ್ರಾಬ್ಲಂ, ಲೀಗಲ್ ಪ್ರಾಬ್ಲಂ ಅಥವಾ ಇನ್ಟರ್ನಲ್ ನಾರ್ಮ್ಸ್, ಕಾರಣದಿಂದಾಗಿ ಲೋನ್ ರಿಜೆಕ್ಟ್ ಆಗಿದೆ, ಎಂದು ಕೆಲ ಡಿಎಸ್‌ಎ ಮೆಸೇಜ್‌ಗಳು ಬಂದರೆ ಇನ್ನೊಂದಿಷ್ಟು ಡಿಎಸ್‌ಎಗಳು ಯಾವುದೇ ಕಾರಣವಿಲ್ಲದೆ ಡೇಟಾ ಹಾಗೂ ಸರ್ವಿಸ್ ಮುಂಡಾಯಿಸಿ ಪೋನ್ ಪಿಕ್ ಮಾಡದೇ, ಮತ್ತೊಂದು ಡೇಟಾ ಕಲೆಕ್ಟ್ ಮಾಡುತ್ತಿರುವ ಅಸಲಿ ವರಾತಗಳ ಕಥಾನಕಗಳು ದುರಂದರ್ ಸಿನಿಮಾದ ರೆಹಮಾನ್ ಡಕಾಯಿತಿ ಸ್ಟೋರಿಗಿಂತಲೂ ಅನಾಹುತಕಾರಿಯಾಗಿದೆ.
ಹೌದು ಡಿಎಸ್‌ಎ ಎನ್ನುವ ಅಧಿಕೃತನೋ..? ಅನಧಿಕೃತನೋ ಗೊತ್ತಿಲ್ಲ ಈ ಬಗ್ಗೆ ತುರ್ತು ಅರ್ಥಿಕ ಸಾಲ ಸೌಲಭ್ಯ ಬಯಸುವ ನಾಗರೀಕ ಪರಿಶೀಲನೆಗೆ ಮುಂದಾಗುವುದಿಲ್ಲ ಬದಲಿಗೆ ನಾವು ಯಾವ ಬ್ಯಾಂಕಿನಲ್ಲಿ ಈ ಸೌಲಭ್ಯ ಪಡೆಯಲು ಡೇಟಾ ಪೂರೈಸುತ್ತಿದ್ದೇವೆ ಎನ್ನುವ ಲೆಕ್ಕಾಚಾರಗಳಿಗೂ ತೆರಳುವುದಿಲ್ಲ, ಏಕೆಂದರೆ ಬದುಕು ಎನ್ನುವುದು ಹೀಗೆ, ಬದುಕಿನ ವಿಷಮಸ್ಥಿತಿಗಳ ತುಲನೆಗೆ ಡಿಎಸ್‌ಎ ಅಂತಹ ಖದೀಮರಿಗೆ ನಂಬಿ ಡೇಟಾಗಳನ್ನು ಪೂರೈಸುತ್ತಿರುವ ಈ ಕಾಲಮಾನದಲ್ಲಿ ಟೆಕ್ನಿಕಲ್ ಆಗಿ ನಾವ್ಯಾಗೆ ವಂಚನೆಗೆ ಒಳಗಾಗುತ್ತಿದ್ದೇವೆ ಎನ್ನುವ ಗೋಜಿನಲ್ಲಿ ಮೊಕ್ಕಾಂ ಹೂಡುವುದಿಲ್ಲ, ಆದರೆ ಪೊಲೀಸರು ಈ ಕುರಿತಾಗಿ ಡಿಎಸ್‌ಎ ಎನ್ನುವ ಜಾಲವನ್ನು ತಮ್ಮದೇ ಗ್ರೌಂಡ್‌ನಲ್ಲಿ ಪೆರೆಡ್ ಮಾಡಿ ತನಿಖಿಸದಿದ್ದರೆ ಇದೊಂದು ಬಹುದೊಡ್ಡ ಪ್ರಮಾದವಾಗುವುದಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿದೆ.
ಡಿಎಸ್‌ಎ ಎನ್ನುವ ಬಹುತೇಕ ಬ್ಯಾಂಕಿಂಗ್ ಡೇಟಾ ಖದೀಮರು, ನಾಗರೀಕರು ಬಯಸುವ ಸಾಲ ಸೌಲಭ್ಯದ ಸಂಪೂರ್ಣ ಡೇಟಾ ಕಲೆ ಹಾಕುವ ಮುನ್ನ, ಅದನ್ನು ಅನಾಮಧೆಯವಾಗಿ ಅಪ್‌ಲೋಡ್ ಮಾಡುವ ಮೊದಲೇ ಸಿಬಿಲ್ ಚೆಕ್ ಮಾಡಿ ಸಾಲದ ಅರ್ಹತೆ, ಅನರ್ಹತೆಯನ್ನು ತಿಳಿಸಬಹುದಾಗಿದ್ದರು, ಡಿಎಸ್‌ಎಗಳು ತಿಳಿಸದೆ ಇನ್ನಿಲ್ಲದ ಡೇಟಾ ಕಲೆಕ್ಟ್ ಮಾಡುವುದಕ್ಕೆ ಮುಂದಡಿಯಾಗುವ ಅಸಲಿ ಕಾರಣ ಏನೆಂದರೆ ಈ ರೀತಿ ಕಲೆಕ್ಟ್ ಮಾಡಿ ಡೇಟಾ ಭದ್ರತೆ ಗಳೇ ಇಲ್ಲದ ಅಂತರಾಷ್ಟ್ರೀಯ ಫೈನಾನ್ಸ್ ಹಾಗೂ ಬ್ಯಾಂಕ್‌ಗಳಿಗೆ ಪೂರೈಸುವುದು ಒಂದು ಎಂಟ್ರಿಗೆ, ಕಮಿಷನ್ ಹಣಕ್ಕಾಗಿ ಎನ್ನುವ ಅಸಲಿ ವರಾತಗಳನ್ನು ಮೊದಲು ಪೊಲೀಸ್ ಇಲಾಖೆ ಗೊತ್ತು ಮಾಡಿಕೊಳ್ಳಬೇಕಾದ ಅತೀ ಜರೂರತ್ತಿದೆ,
ಹೇಗೆ ಡೇಟಾ ಕಲೆಕ್ಟ್ ಮಾಡುತ್ತಿದೆ ಈ ಡಿಎಸ್‌ಎ ಜಾಲ ಗೊತ್ತೇ..?! : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡೈರೆಕ್ಟ್ ಸೆಲ್ಲಿಂಗ್ ಏಜೆಂಟ್ ಎಂದು ಗುರುತಿಸಲಾಗಿದ್ದು ಶಿವಮೊಗ್ಗದಲ್ಲಿ ಇದೊಂದು ಖಾಸಗಿ ಫೈನಾನ್ಸ್ ವಲಯದಲ್ಲಿ ಬಾರಿ ಸದ್ದು ಮಾಡುತ್ತಿದೆ ಅಲ್ಲದೆ ವಿವಿಧತೆಯ ಸಾಲ ಬಯಸುವ ಜನ ಸಾಮಾನ್ಯರಿಂದ ಬ್ಯಾಂಕಿಂಗ್ ವಿವರಣೆಯ ಎಲ್ಲಾ ಡೇಟಾ ಎಂಟ್ರಿಗಳನ್ನು ಕಬಳಿಸುತ್ತಿದೆ, ಅಲ್ಲದೆ ಓಟಿಪಿ ಪಡೆದು ಟರ್ನ್‌ವರ್ ಮಾಡುತ್ತಿರುವ ಬ್ಯಾಂಕಿಂಗ್ ಹಣಕಾಸು ಖಾತೆಗಳನ್ನು ಪೆಚ್ಚಿಂಗ್ ಮಾಡಿಸಿದ್ದಲ್ಲದೆ, ಸಾಕಷ್ಟು ಡಾಕ್ಯುಮೆಂಟರಿಗಳನ್ನು ಕಲೆಹಾಕುವುದು, ಸರ್‍ವಿಸ್ ಶುಲ್ಕ ಪಾವತಿಸಿಕೊಳ್ಳುವುದು, ಕೊನೆಗೆ ವಾರಗಟ್ಟಲೇ ಕ್ರೆಡಿಟ್, ಎಕ್ಸಿಕ್ಯೂಟಿವ್, ಮ್ಯಾನೇಜರ್ ಅಂತೆಲ್ಲಾ ದೌಡಾಯಿಸಿ ಬಂದು ಮನೆ ಪೋಟೋ, ಸೆಲ್ಪಿ, ಮನೆಯೊಳಗಿನ ಹಾಲ್ ಮತ್ತು ಕಿಚನ್ ಕೊಠಡಿಗಳ ಸೆಲ್ಪಿ, ಸಾಲಗಾರರನ್ನು ಮನೆ ಹೊರಗೆ ನಿಲ್ಲಿಸಿ ಸೆಲ್ಪಿ ಇಂತಿಷ್ಟು ಡೇಟಾಗಳನ್ನು ಸಿಕ್ಕ, ಸಿಕ್ಕ ಅಂದರೆ ಒಂದಕ್ಕಿಂತ ಹೆಚ್ಚು ಫೈನಾನ್ಸ್ ಕಂಪನಿಗಳಿಗೆ ಅಪ್‌ಲೋಡ್ ಮಾಡುವು ಸಂದರ್ಭದಲ್ಲಿ ಸಾಕಷ್ಟು ಭಾರಿ ಓಟಿಪಿ ಪಡೆದು, ಕೊನೆಗೊಮ್ಮೆ ರಿಜಕ್ಟ್ ಆಗಿದೆ ಎಂದು ತಿಳಿಸುವ ಇಂತಹ ಡಿಎಸ್‌ಎ ಗಳಿಗೆ ಮೊದಲೇ ಸಿಬಿಲ್ ಚೆಕ್ ಮಾಡಿ ಹೇಳಬಹುದಾಗಿದ್ದರು ಹೇಳದೆ, ಈ ಬ್ಯಾಂಕಿಂಗ್ ಡೇಟಾಗಳನ್ನು ಬೇರೆಡೆಗೆ, ಹೊರರಾಜ್ಯಗಳಿಗೆ, ಸಮಾಜ ಘಾತುಕ ಹ್ಯಾಕಿಂಗ್ ಶಕ್ತಿಗಳಿಗೆ ಮಾರಾಟ ಮಾಡುವ ಹಾಗೂ ಮಲ್ಟಿ ನ್ಯಾಷನಲ್ ಫೈನಾನ್ಸ್ ಕಂಪನಿಗಳ ಹೆಸರಿನಲ್ಲಿರುವ ಹ್ಯಾಕಿಂಗ್ ಅಡ್ಡೆಗಳಿಗೆ ಕಲೆ ಹಾಕಿದ ಡೇಟಾಗಳನ್ನು ಪೂರೈಸುವ ಜಾಲವೇ ಇದಾಗಿದೆ.
ಡೇಟಾ ಎನ್ನುವುದು ಭದ್ರತಾ ನಿಯಮಗಳ ಅನುಸಾರವೇ ಕಲೆಕ್ಟ್ ಮಾಡಬೇಕಿದೆ ಹಾಗೂ ‘ಜನರಲ್ ಡೇಟಾ ಪ್ರೋಟಕ್ಷನ್ ರೆಗ್ಯೂಲೆಷನ್’ (ಜಿಡಿಪಿಆರ್) ನಿಯಮಗಳು ಬಲು ಕಠೀಣಗೊಳಿಸಿದೆ ಬಳಕೆದಾರರ ಡೇಟಾವನ್ನು ಸಂಗ್ರಹಿಸುವ ವ್ಯವಹಾರಗಳ ಮೇಲೆ ಕಾನೂನುಬದ್ಧ, ನ್ಯಾಯಯುತ, ಪಾರದರ್ಶಕತೆ ಹೊಂದಿರುವ ಬ್ಯಾಂಕುಗಳು ಡೇಟಾವನ್ನು ಕಾನೂನುಬದ್ಧವಾಗಿ, ನ್ಯಾಯಯುತವಾಗಿ ಪ್ರಕ್ರಿಯೇ ಗೊಳಿಸಬೇಕು ಮತ್ತು ಗ್ರಾಹಕರಿಗೆ ಅವರ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಈ ರೀತಿ ಅನುಸರಿಸದ ಅನೇಕ ಬ್ಯಾಂಕ್ ಹಾಗೂ ಫೈನಾನ್ಸ್‌ಗಳು ಡಿಎಸ್‌ಎ ಗಳಿಂದ ಕಲೆ ಹಾಕುವುದನ್ನು ನಿರ್ಭಂದಿಸಲಾಗಿದೆ ಎನ್ನುವ ಸತ್ಯ ಸಾಮಾನ್ಯರಿಗೇ ಆಗಲಿ, ಪೊಲೀಸ್‌ನವರಿಗೆ ಆಗಲಿ, ಸೈಬರ್ ಪೊಲೀಸ್ ಠಾಣೆಯ ಕಡತಕ್ಕೆ ಆಗಲಿ ಯಾವುದೇ ಅಗತ್ಯ ಮಾಹಿತಿಗಳು, ಹಾಗೂ ಇದನ್ನೇ ಬೇದಿಸಬೇಕಾದ ಕರ್ತವ್ಯಗಳು ಯಾವಾಗ ಮೊಟಕುಗೊಂಡು ಈ ಕುರಿತಂತೆ ತಾತ್ಸಾರತೆ ಮಾಡಿಕೊಂಡಿರುವುದರಿಂದಲೇ..! ಶಿವಮೊಗ್ಗದಲ್ಲಿ ನೂರೈವತ್ತಕ್ಕೂ ಹೆಚ್ಚು ಡಿಎಸ್‌ಎ ಮಂದಿಗಳಿರುವ ಜಾಲ ಹಾಡುಹಗಲೇ ಲೋನ್ ಹೆಸರಿನಲ್ಲಿ ಡೇಟಾ ಕಲೆ ಹಾಕುತ್ತಿರುವುದು ಸಾಮಾನ್ಯವಾಗಿದೆ.
ಹೀಗೆ ಡೇಟಾ ಕಲೆ ಹಾಕಿ ಡಿಎಸ್‌ಎಗಳು ಫ್ಹೇಕ್ ಫೈನಾನ್ಸ್ ಕಂಪನಿಗಳೆಂದು ಕಮಿಷನ್ ಆಸೆಗಾಗಿ ಪೂರೈಸುತ್ತಿರುವ ಈ ಹರಾಮಿಗಳಿಗೆ ಈ ಹೊತ್ತಿನ ಪ್ರಸ್ತುತ ದಿನಮಾನಕ್ಕೂ ಇದೊಂದು ಹ್ಯಾಕಿಂಗ್ ಮಾಫಿಯಾಕ್ಕೆ ಕೆಲಸ ಮಾಡುತ್ತಿದ್ದೇವೆ ಎನ್ನುವ ಸುಳಿವಿಲ್ಲದೆ, ಜನವಾಸಿಗಳ ಡೇಟಾವನ್ನು ಕೊಡಿಸಿ ಧಾರುಣ ವಂಚನೆಗಳಿಗೆ ಗುರಿ ಮಾಡುತ್ತಿದೆ, ಇಂತಿವರು ಡೇಟಾ ಪೂರೈಸಿದ ಕೆಲವೇ ಗಂಟೆಗಳಲ್ಲಿ ಸಾಲ ಸೌಲಭ್ಯ ಬಯಸಿದ ಗ್ರಾಹಕನ ಮೊಬೈಲ್‌ಗೆ ಬೇರೆ, ಬೇರೆ ಫೈನಾನ್ಸ್ ನಕಲಿ ಕಂಪನಿಗಳಿಂದ ನಿಮಗೆ ಲೋನ್ ಮಂಜೂರಾತಿ ಆಗಿದೆ, ಕಳಿಸಿರುವ ಓಟಿಪಿ ಅನುಸರಿಸಿ ಎಂದು ಮೇಸೇಜ್ ಲಿಂಕ್ ಬರುವುದಕ್ಕೆ ಶುರು ಮಾಡುತ್ತದೆ, ಹೀಗೆ ಆತ ಕ್ಲಿಕ್ ಮಾಡಿದ ತಕ್ಷಣ ಮತ್ತೊಂದು ಗೊತ್ತಿರದ ಫೈನಾನ್ಸ್ ಕಂಪನಿಗೆ ಸಾಲಗಾರನಾಗಿ ಬಿಡುವ ವಂಚನೆಯಂತಹ ಘಾತುಕಕ್ಕೆ ಈ ಡಿಎಸ್‌ಎ ಗಳು ಕಾರಣವಾಗುತ್ತಿರುವುದನ್ನು ಸ್ಥಳೀಯ ಉಸ್ತುವಾರಿ ಮಂತ್ರಿಗಳಾದ ಮಧು ಬಂಗಾರಪ್ಪನವರಿಗೆ, ಹಾಗೂ ಶಾಸಕರಾದ ಎಸ್.ಎನ್ ಚೆನ್ನಬಸಪ್ಪನವರಿಗೆ, ಹಾಗೂ ಮೊನ್ನೆಯಷ್ಟೆ ಬ್ಯಾಂಕಿಂಗ್ ವ್ಯವಸ್ಥೆಗಳ ಸರಳೀಕರಣದ ಬಗ್ಗೆ ಮಾತಾಡಿದ ಸಂಸದ ಬಿ.ವೈ ರಾಘವೇಂದ್ರರವರ ಚಿತ್ತಗಳಿಗೆ ಈ ವರದಿ ಸಾರ್ವಜನಿಕವಾಗಿ ತಲುಪಿಸುವ ಇರಾದೆ ಇದಾಗಿದೆ.
ಇನ್ನೂ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆಯವರು, ಜಿಲ್ಲಾರಕ್ಷಣಾಧಿಕಾರಿಗಳಾದ ಮಿಥುನ್‌ಕುಮಾರ್‌ರವರು ಈ ಡಿಎಸ್‌ಎ ಗಳನ್ನು ಕರೆಯಿಸಿ ಒಮ್ಮೆ ಪೊಲೀಸ್ ಗ್ರೌಂಡ್‌ನಲ್ಲಿ ಪೆರೆಡ್ ಮಾಡಿಸಿದರು ಅಸಲಿ ವರಾತಗಳು ಹೊರ ಬೀಳುತ್ತದೆ ಅಲ್ಲದೆ, ಸಾರ್ವಜನಿಕರಿಂದ ದೂರುಗಳು ಕೂಡ ದಾಖಲಾಗುತ್ತದೆ, ಎಂದು ಈ ಮೊದಲ ಹಂತದ ಸಮಗ್ರತೆಯನ್ನು ನಿಮ್ಮ ಮಂದಡಿ ವಿಸ್ತೃತಗೊಳಿಸಲಾಗಿದೆ, ಮುಂದಿನದ್ದು ಹಿಂದಿ ಸಿನಿಮಾ ದುರಂದರ್ನಲ್ಲಿ ರೆಹಮಾನ್ ಡಕಾಯಿತಿ ಎನ್ನುವ ಅನಾಹುತಕಾರಿಗಿಂತಲೂ ದೇಶದ ಆರ್ಥಿಕ ಅಭದ್ರತೆಗೆ ಈ ಅಂತರಾಷ್ಟ್ರೀಯ ಮಾಫಿಯಾ ಹೇಗೆ ಡಿಎಸ್‌ಎಗಳ ಮೂಲಕ ಕೆಲಸ ಮಾಡಿಸುತ್ತಿದೆ ಎನ್ನುವುದು ತಿಳಿಯುವುದಾಗಿದೆ.

