Wednesday, September 16, 2026
Homeಸಾಹಿತ್ಯI ಬರಹಗಾರನಿಗಿಲ್ಲದ ಭದ್ರತೆ I

I ಬರಹಗಾರನಿಗಿಲ್ಲದ ಭದ್ರತೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಬರಹಗಾರನಿಗಿಲ್ಲದ ಭದ್ರತೆ I

ಹೌದು ಅವರು ಬಲಾಡ್ಯರು,
ನಾನೋರ್ವ ಬಲು ದುರ್ಬಲನು,
ಭಾವದಿ ಕಂಬನಿಗಳ ಮಿಡಿವವನು,
ಅವರು ಕೋಟಿ ಕಂತೆಗಳಿಟ್ಟವರು,

ಏನು ಬೇಕಾದರು ಮಾಡಲರ್ಹರು,
ರೌಡಿ ಎಲಿಮೆಂಟರಿಗಳ ಜಗಲಿಗಳವರು,
ಕಾನೂನು, ಅಧಿಕಾರದಂದಣ ಉಳ್ಳವರು,
ಬರಹಗಾರನಾಗಿ ಬರೆಯುವ ಆಗಿಲ್ಲ,

ಸಾಮಾಜಿಕ ನ್ಯಾಯ ಬಯಸುವ ಆಗಿಲ್ಲ,
ಗುರಿ ಮಾಡಿ, ಕಟ್ಟಿ ಹಾಕುವ ಹಪಾಹಪಿ ಯಾಕೆ..?!
ಇಲ್ಲಿನ ಇಂತಿವರಿಗೆ ರಾಜಕೀಯ ಗೊತ್ತಿಲ್ಲ,
ಒಂದೆಡೆ ವಿದ್ರೋಹಿಗಳ ನಂಟು, ಪಾಪದ ಗಂಟು,
ಅಭಿವ್ಯಕ್ತಿ ಕೊಲೆಗೆ ನಿಂದ ಹೊಂಚಿನ ಖದೀಮರು,

ಆದರೂ ಅವರಾಕೆ ಇದುವರೆಗೂ ಗೆಲ್ಲಲಿಲ್ಲ..!?
ಪಾಪ ವ್ಯರ್ಥದ ದಿನಮಾನ, ಇತ್ತಾಳೆ ಆಲಿಕೆಗಳು,
ನೋಟಿಸ್ ಕಳುಹಿ ಬೆದರಿಸಿ, ಹಿಂಡಿ ಇರಿಪ್ಪೆಗೊಳಿಸಿ,
ಅವನೊಬ್ಬ ದುರ್ಬಲನೆನ್ನುವ ಮಿಸ್ಟರಿಗಳು,

ರೌಡಿಗಳ ಛೂ ಬಿಟ್ಟು ಬದುಕು ನಿತ್ರಾಣಗೊಳಿಸಿ,
ಅವನೊಬ್ಬ ಏಕಾಂಗಿ, ಸಾಮಾನ್ಯ, ಮಾರ್ಜಾಲ,
ಆಚ್ಚರಿ ಈ ದುರ್ಬಲ ಎಂದಿಗೂ ಸೋಲಲಿಲ್ಲ,
ಇತ್ತಾಳೆ, ಅವಕಾಶವಾದಿಗಳೂ ಬಿಡಲಿಲ್ಲ,

ಬ್ಯಾಲೆನ್ಸ್ ಡ್ರಾಮದಿ ಕಪಟದ ಪಾತ್ರಧಾರಿಗಳು,
ಸುಳಿವಿಲ್ಲದೆ ದುರ್ಬಲನಿಂದೆಣೆದ ವೇದಿಕೆಗಳು,
ಒಂದೊಮ್ಮೆ ಗೆದ್ದು ಬೀಗಿ ಬಿಡಿ,
ದುರ್ಬಲನ ಸೂರು, ಅಭಿವ್ಯಕ್ತಿ ಮುಗಿದು ಬಿಡಲಿ,
ರಕ್ಕಸರ ಬಿಟ್ಟು ಕೊಚ್ಚಿಸಿ ಬಿಡಿ, ಇಳೆಗೆ ಬರಹದರ್ಪಣವಾಗಲಿ,
ಇನ್ನಷ್ಟು, ಮತ್ತಷ್ಟು ಕಿರುಕುಳ, ಮತ್ಸರದ ದಾಳಿ ಮೀರಲಿ,

ಮುಗಿದು ಹೋಗಲಿ ಈ ಅಭಿವ್ಯಕ್ತಿ ಬರಹಗಳು,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news