Sunday, August 2, 2026
Homeಸೂರ್ಯಗಗನI ಫೆ.24 ರಿಂದ ಶಿವಮೊಗ್ಗದ I ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ I ಎಸ್.ಕೆ...

I ಫೆ.24 ರಿಂದ ಶಿವಮೊಗ್ಗದ I ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ I ಎಸ್.ಕೆ ಮರಿಯಪ್ಪ I

I ಫೆ.24 ರಿಂದ ಶಿವಮೊಗ್ಗದ I ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ I ಎಸ್.ಕೆ ಮರಿಯಪ್ಪ I

ಶಿವಮೊಗ್ಗ : ನಗರದಲ್ಲಿ ಫೆ.24ರಿಂದ ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ಇರುತ್ತದೆ, ಎಂದಿನಂತೆ ಧಾರ್ಮಿಕ ವಿಧಿ ವಿಧಾನಗಳಂತೆ ಹಿರಿಯರು ನಡೆಸಿಕೊಂಡ ಹಳೆಯ ಪದ್ದತಿಯಂತೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ಎಸ್.ಕೆ ಮರಿಯಪ್ಪನವರು ಹೇಳಿದರು,

ಅವರು ಇಂದು ಶ್ರೀ ಕೋಟೆ ಮಾರಿಕಾಂಬ ದೇವಳದ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತಾನಾಡಿದರು, ಈ ಭಾರಿಯು ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು ಎಲ್ಲರಿಗೂ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ವಿವರಿಸಿದರು,

ಕೋಟಿ ಶ್ರೀ ಮಾರಿಕಾಂಬ ದೇವಿ ದೇವಸ್ಥಾನವು ಕೆಳದಿ ಶಿವಪ್ಪನಾಯಕ ರಾಜರ ಕಾಲದಿಂದಲೂ ಪ್ರಸಿದ್ಧವಾಗಿದ್ದು, ಭಕ್ತರಿಂದ ಹಿಂದಿನ ದಿನಗಳಲ್ಲಿ ಬಯಲು ಮಾರಿ, ಬಿಸಿಲು ಮಾರಿ, ಕೆಂಚ ಮಾರಿ ಎಂಬ ನಾಮಗಳಿಂದ ಪೂಜಿಸಲ್ಪಟ್ಟಿದೆ. ಪಟ್ಟಣದ ಹಿರಿಯರು ಮತ್ತು ಭಕ್ತರ ಏಕಮನಸ್ಸಿನ ಸಹಕಾರದಿಂದ ಶತಮಾನಗಳಿಂದ ದ್ವೈವಾರ್ಷಿಕ ಜಾತ್ರೆ ಸಂಭ್ರಮದಿಂದ ನಡೆಯುತ್ತಿದ್ದು, ರಾಜ್ಯಮಟ್ಟದಲ್ಲಿ ಐತಿಹಾಸಿಕ ಖ್ಯಾತಿ ಗಳಿಸಿದೆ ಎಂದು ಎಸ್.ಕೆ ಮರಿಯಪ್ಪನವರು ಹೇಳಿದರು,

ಜಾತ್ರೆಯ ಯಶಸ್ವಿ ನಿರ್ವಹಣೆಗೆ ಆರು ಬಾಬುದಾರರು, ಸಮಿತಿ ಸದಸ್ಯರು ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳನ್ನು ಒಳಗೊಂಡ ಉಪಸಮಿತಿಗಳನ್ನು ರಚಿಸಿ, ಯಾವುದೇ ಭೇದಭಾವವಿಲ್ಲದೆ ಎಲ್ಲರ ಸಹಭಾಗಿತ್ವದಲ್ಲಿ ಜಾತ್ರೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ ಮಂಗಳವಾರ, ಫೆ 24, ರಂದು ಬೆಳಿಗ್ಗೆ 5.00 ಗಂಟೆಗೆ, ಬಿ.ಬಿ. ರಸ್ತೆಯ ಬ್ರಾಹ್ಮಣ ಸಮಾಜದ ಕುಟುಂಬಗಳನ್ನು ಮಂಗಳ ವಾದ್ಯಗಳೊಂದಿಗೆ ಆಹ್ವಾನಿಸಿ ಪೂಜೆ ನೆರವೇರಿಸಲಾಗುವುದು. ಸಮಾಜದ ಹಿರಿಯರು ಹಾಗೂ ಮಂಗಳ ವಾದ್ಯಗಳೊಂದಿಗೆ ಉಡಿ ಮತ್ತು ಬಸ್ಸಿಂಗ ಪೂಜೆಯನ್ನು ಗಾಂಧಿ ಬಜಾರ್‌ನಲ್ಲಿರುವ ಶ್ರೀ ಮಾರಿಕಾಂಬ ದೇವಿಯ ಗೃಹದಲ್ಲಿ ನೆರವೇರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜವು ವಿಸರ್ಜನಾ ಮೂರ್ತಿಗೆ ಮಂಗಳ ದ್ರವ್ಯಗಳನ್ನು ಅರ್ಪಿಸಿ ಸಾರ್ವಜನಿಕ ಪೂಜೆಗೆ ಚಾಲನೆ ನೀಡಲಿದೆ ಎಂದು ವಿವರಿಸಿದರು,

ಮಂಗಳವಾರ ರಾತ್ರಿವರೆಗೂ ಲಕ್ಷಾಂತರ ಭಕ್ತರು ಶ್ರೀ ಮಾರಿಕಾಂಬ ದೇವಿಗೆ ಉಡಿ ಅರ್ಪಿಸಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಉಪ್ಪಾರ ಸಮಾಜವು ದೇವಿಯನ್ನು ರಥದಲ್ಲಿ ಕುಳ್ಳಿರಿಸಿ ಗದ್ದಿಗೆಗೆ ಮೆರವಣಿಗೆಯಲ್ಲಿ ಕರೆತರುತ್ತದೆ. ಇದೇ ಸಂದರ್ಭದಲ್ಲಿ ಗಂಗಾಪರಮೇಶ್ವರಿ ದೇವಾಲಯದ ಗಂಗಾಭಕ್ತರು ಗಂಗಾ ಪೂಜೆ ನೆರವೇರಿಸಿ ಮಂಗಳ ವಾದ್ಯಗಳೊಂದಿಗೆ ಅಮ್ಮನಿಗೆ ಪೂಜೆ ಸಲ್ಲಿಸಲಿದ್ದಾರೆ.

ಬುಧವಾರ ಬೆಳಿಗ್ಗೆ ಸುಮಾರು 4.00 ಗಂಟೆಗೆ, ವಿದ್ಯಾನಗರದ ಕಾರ್ಲಟ್ಟಿ ಹರಿಜನ ಸಮಾಜದವರು ಪ್ರಾರ್ಥನೆ ಸಮೇತ ಆಗಮಿಸಿ ಶ್ರೀ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಅಮ್ಮನನ್ನು ಗದ್ದುಗೆಗೆ ಆಸೀನಗೊಳಿಸಲಾಗುತ್ತದೆ. ನಂತರ ಕುರುಬ ಸಮಾಜದ ಚೌಡಿಕೆ ಕುಟುಂಬವು ಪೂಜೆ-ಅರ್ಪಣೆ ಸಲ್ಲಿಸುತ್ತದೆ. ಬುಧವಾರದಿಂದ ನಾಲ್ಕು ದಿನಗಳ ಕಾಲ ಗದ್ದುಗೆ ಪೂಜೆ ಕ್ರಮವಾಗಿ ನಡೆಯಲಿದ್ದು, ಬೆಳಿಗ್ಗೆ 6.00 ರಿಂದ ರಾತ್ರಿ 10.00 ಗಂಟೆಯವರೆಗೆ ವಾಲ್ಮೀಕಿ ಸಮಾಜ, ಮಧ್ಯಾಹ್ನ 10.00 ರಿಂದ ಸಂಜೆ 4.00, ಹಾಗೂ ಸಂಜೆ 4.00 ರಿಂದ ರಾತ್ರಿ 10.30ರವರೆಗೆ ಮಡಿವಾಳ ಸಮಾಜ ಪೂಜೆ ನೆರವೇರಿಸಲಿದ್ದಾರೆ.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಹಾ ಜಾತ್ರೆಯ ಉದ್ಘಾಟನೆ ಶನಿವಾರ, ಫೆಬ್ರವರಿ 28, 2026 ರಂದು ಸಂಜೆ 7.00 ಗಂಟೆಗೆ, ಭವ್ಯ ಶ್ರೀ ಮಾರಿಕಾಂಬಯ್ಯ ಉತ್ಸವದೊಂದಿಗೆ ನಡೆಯಲಿದೆ. ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಲಕ್ಷಾಂತರ ಭಕ್ತರು ಅಮ್ಮನನ್ನು ಅರಣ್ಯ ಪ್ರವೇಶಕ್ಕೆ ಅಪಾರ ಭಕ್ತಿಭಾವದಿಂದ ಕಳುಹಿಸಲಿದ್ದಾರೆ. ಸಂಪ್ರದಾಯದಂತೆ ಮಡಿವಾಳ ಸಮಾಜವು ಮಧ್ಯರಾತ್ರಿ ಅಮ್ಮನನ್ನು ಅರಣ್ಯಕ್ಕೆ ಕರೆದುಕೊಂಡು ಹೋಗಿ, ವಿಧಿ-ವಿಧಾನಗಳಂತೆ ಪೂಜೆ ನೆರವೇರಿಸಿ ಪುನಃ ಕರೆತರುತ್ತದೆ.

ಹೊಸ ಕುಸ್ತಿಪಟುಗಳನ್ನು ಉತ್ತೇಜಿಸುವ ಉದ್ದೇಶದಿಂದ, ಮಾರ್ಚ್ 6 ರಿಂದ 8, 2026 ರವರೆಗೆ, ನಗರದಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಖ್ಯಾತ ರಾಜ್ಯ ಹಾಗೂ ಅಂತರ್‌ರಾಜ್ಯ ಕುಸ್ತಿಪಟುಗಳ ಭಾಗವಹಿಸುವಿಕೆಯಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮಾರಿಕಾಂಬ ದೇವಿಯ ದಿವ್ಯ ಆಶೀರ್ವಾದ ಪಡೆಯಬೇಕೆಂದು ಶ್ರೀಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಮನವಿ ಮಾಡುತ್ತದೆ ಎಂದು ಗೋಷ್ಟಿಯಲ್ಲಿ ಎಸ್.ಕೆ ಮರಿಯಪ್ಪನವರು ಹೇಳಿದರು. ಈ ಸಂದರ್ಭದಲ್ಲಿ ಸಮಿತಿಯ ಮುಖಂಡರು ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I