I ಕಂಟ್ರಿಕ್ಲಬ್ ಅಧ್ಯಕ್ಷರಾಗಿ ಪ್ರಕಾಶ್ I
ಶಿವಮೊಗ್ಗ:- ನಗರದ ಪ್ರತಿಷ್ಠಿತ ಕಂಟ್ರಿಕ್ಲಬ್ನ ೨೦೨೬-೨೦೨೮ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಿ.ಎನ್. ಪ್ರಕಾಶ್, ಉಪಾಧ್ಯಕ್ಷರಾಗಿ ಎನ್. ಭೀಮಣ್ಣ, ಕಾರ್ಯದರ್ಶಿಯಾಗಿ ಚೂಡಾಮಣಿ ಪವಾರ್, ಸಹಕಾರ್ಯದರ್ಶಿಯಾಗಿ ರಾಜೇಶ್ ಸುರಗಿಹಳ್ಳಿ ಹಾಗೂ ಖಜಾಂಚಿಯಾಗಿ ಜಿ. ಗಿರೀಶ್ ಅವರು ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಪಾಲ್ಗೊಂಡು ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಕಂಟ್ರಿಕ್ಲಬ್ನ ನೂತನ ನಿರ್ದೇಶಕರು ಉಪಸ್ಥಿತರಿದ್ದರು

