Saturday, August 1, 2026
Homeಸೂರ್ಯಗಗನI ಶಾಸಕರ ಸಂಬಂಧಿಕರಾಗಲಿ ಯಾರೇ ಆಗಲಿ I ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ  I ಸತೀಶ್ ಜಾರಕಿಹೊಳಿ...

I ಶಾಸಕರ ಸಂಬಂಧಿಕರಾಗಲಿ ಯಾರೇ ಆಗಲಿ I ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ  I ಸತೀಶ್ ಜಾರಕಿಹೊಳಿ I

I ಶಾಸಕರ ಸಂಬಂಧಿಕರಾಗಲಿ ಯಾರೇ ಆಗಲಿ I ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ  I ಸತೀಶ್ ಜಾರಕಿಹೊಳಿ I

ತೀರ್ಥಹಳ್ಳಿ : ಹುಲಿಕಲ್ ಘಾಟಿ ಕುಸಿತದಿಂದ ೩ ಸಾವು ಆಗಿದೆ. ಪ್ರಕರಣ ವಿಚಾರವಾಗಿ ನಾನು ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡುತ್ತೇನೆ..ಯಾವ ಕಾರಣಕ್ಕೆ ಆಗಿದೆ ಹಾಗೂ ಮುಂದೆ ಶಾಶ್ವತವಾಗಿ ಆಗಬಾರದು ಎಂಬ ಚರ್ಚೆ ಮಾಡಲು ಭೇಟಿ ನೀಡಲಿದ್ದೇನೆ. ಸಮಸ್ಯೆ ಹೇಗೆ ಪರಿಹಾರ ಮಾಡಬೇಕು ಎಂಬ ಚರ್ಚೆ ಮಾಡಲಿದ್ದೇನೆ. ಸರ್ಕಾರದಿಂದ ಪರಿಹಾರ ಕೊಡುವ ಕೆಲಸ ಈಗಾಗಲೇ ಆಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ತೀರ್ಥಹಳ್ಳಿಯ ವಿಹಂಗಮ ರೆಸಾರ್ಟ್ ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಇಲಾಖೆಯಿಂದ ಗೈಡ್ಲೈನ್ಸ್ ಕೊಡಲಾಗಿದೆ ಅದನ್ನ ಗುತ್ತಿಗೆದಾರರು ಫಾಲೋ ಮಾಡಬೇಕಿತ್ತು. ಎರಡು ಕಡೆಯಿಂದನೂ ತಪ್ಪಾಗಿದೆ
ನಮ್ಮ ಅಧಿಕಾರಿಗಳಿಂದಲೂ ಆಗಿರಬಹುದು ಹಾಗೆ ಅವರು ಕೂಡ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿತ್ತು. ರಿಪೋರ್ಟ್ ಏನು ಬರುತ್ತದೆ ಎಂಬುದು ಹಾಗೂ ನಾನು ಅಲ್ಲಿಗೆ ಹೋದ ಮೇಲೆ ಹೇಗೆ ಅನಿಸುತ್ತದೆ ಎಂಬುದನ್ನು ನೋಡಿ ತೀರ್ಮಾನಕ್ಕೆ ಬರುತ್ತೇವೆ ಎಂದರು.

ಎರಡು ವರ್ಷಗಳ ಹಿಂದೆ ಕಾರವಾರದಲ್ಲೂ ಕೂಡ ಈ ರೀತಿಯ ಘಟನೆ ಆಗಿತ್ತು. ಅದೇ ಮಾದರಿಯಲ್ಲಿ ಈ ಘಟನೆ ಕೂಡ ಆಗಿದೆ. ಮುಂದಿನ ದಿನಗಳಲ್ಲಿ ಆಗುಂಬೆಯನ್ನು ಕೂಡ ನೋಡಿಕೊಂಡು ಕೆಲಸ ಮಾಡುತ್ತೇವೆ. ಅಲ್ಲೂ ಕೂಡ ಯಾವುದೇ ರೀತಿಯ ಭೂಕುಸಿತಗಳು ಆಗದಂತೆ ಕಾರ್ಯವನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದರು.

ಶಾಸಕರ ಸಂಬಂಧಿಕರಾಗಲಿ ಯಾರೇ ಆಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಸ್ಥಳದಲ್ಲಿ ಯಾರ ಲೋಪ ಇದೆ ಎಂಬುದನ್ನು ನೋಡಬೇಕಿದೆ. ನಮ್ಮ ಇಲಾಖೆಯಿಂದ ತಪ್ಪಾಗಿದೆಯಾ ಅಥವಾ ಗುತ್ತಿಗೆದಾರರಿಂದ ತಪ್ಪಾಗಿದೆಯೇ ಎಂಬುದನ್ನ ತನಿಖೆ ಮಾಡಬೇಕಿದೆ. ವರದಿ ಬಂದಮೇಲೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗಬಾರದು ಎಂದ ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದರು..

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I