Saturday, August 1, 2026
Homeಸಾಹಿತ್ಯI ಏನು ಬರೆಯಲಿ ಗೆಳತಿ I

I ಏನು ಬರೆಯಲಿ ಗೆಳತಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಏನು ಬರೆಯಲಿ ಗೆಳತಿ I

ಏನು ಬರೆಯಲಿ ನಾನು ನಿನ್ನ ಕುರಿತು
ನಸುನಗೆಯ ಬಿತ್ತಿ, ಹೊಸಬಗೆಯ ಹೊತ್ತಿ,
ಬೊಗಸೆ ಕಂಗಳಲಿ, ದಿಟ ನೋಟ ಮೊಗೆದು
ಎದೆಗೂಡಿನ ಪ್ರಶ್ನೆಗಳ ಕಾತರದ ಕಾವಿಟ್ಟ,
ಸುಗಂಧಿತ ದುಂಡು ಮಲ್ಲಿಗೆ ಮುಡಿದವಳೇ,
ನಾ ಏನು ಬರೆಯಲಿ ನಿನ್ನ ಕುರಿತು.

ಬಳ್ಳಿ ಹಬ್ಬಿದಂತಿರುವ ನೀಲವರ್ಣದ ನೀರೆ,
ಮುಳ್ಳು ಮೊನಚಿನಂಚಿನಲಿ ಅರಳಿದ ಮೊಗಧಾವರೆ
ದುಟಿಯಂಚಿನ ಇಳಿದಾದೆಡೆ ಕಪ್ಪು ಚುಕ್ಕಿ,
ದೃಷ್ಠಿ ಬೊಟ್ಟಿನಂತಿದೆ ಸೊಗಸಿನಂದಣವೇ..!
ನಾ ಏನು ಬರೆಯಲಿ ನಿನ್ನ ಕುರಿತು.

ಆತ್ಮದ ಮಾತಿಗೆ ಕಟಿಬಿದ್ದೆ,
ಸ್ನೇಹ ಸಾಂಗತ್ಯದ ಬಾನಕ್ಕಿಗೆ ರೆಕ್ಕೆ-ಪುಕ್ಕಗಳ ಕಟ್ಟಿದೆ,
ಹೊಳಪಿನ ಪಾದಗೆಜ್ಜೆಯ ಸದ್ದು ಆಲಿಸಿದೆ,
ಮಾತು-ಮೌನದ ಹೊತ್ತು ಹೊತ್ತಿಗೆಯಾಗಿಸಿದೆ,
ಅದೆಷ್ಟು ಪುಟಗಳ ತಿರುವಿದರು ನಿನ್ನ ಪ್ರತಿಬಿಂಬಿಸಿದೆ
ಹೊಂಗನಸಿನ ಕಾವಣದ ರಸದೊಡತಿಯೇ..
ನಾ ಏನು ಬರೆಯಲಿ ನಿನ್ನ ಕುರಿತು.
.
ಬೆಸುಗೆಯ ಧಾವಂತವಿದೆ, ಅಣಿಮುತ್ತುಗಳ ಅಣಿತಿಗೆ ಕಾಯುವೆ,
ಉಲ್ಲಾಸದ ಉನ್ಮಾದಿತ ಭಾವಗಳು ಸುಳಿದಾಡುತಿಹವು
ಚಂದಿರನ ಬಿಂದಿಗೆಯ ಬೆಳಕಿನೊಳಗೆ,
ಹಸಿರ ಹಾಸುಗಳಲಿ ಹೊಕ್ಕಿ, ಕಡಲಚಿಪ್ಪಿನ ಮುತ್ತುಗಳ ಸುರಿಸಿ.
ಬೆವರ ಮಳೆಯಲಿ ಮಿಂದು, ಮನಮೃದುಗಳಲಿ
ಮಧುಪಾನದಿ ತೇಲುವ ಉಕ್ಕಡವಾಗುವೆ.
ಹೇಳು ಗೆಳತಿ ನಾನು ಏನು ಬರೆಯಲಿ ನಿನ್ನ ಕುರಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I