I ಬಾಯಿಗೆ ಬಟ್ಟೆ ತುರುಕಿ ಹತ್ಯೆಯ ಯತ್ನ I ಕಂಬನಿ ಮಿಡಿದ ಭಾವನ.ವಿ I
ಸಾಗರ : ಸೊರಬ ತಾಲ್ಲೂಕಿನ ಕರಣ್ ಎಂಬ ಗಂಡ ಮತ್ತು ಗಂಡನ ಕುಟುಂಬದವರಿಂದ ವರದಕ್ಷಿಣೆ ಕಿರುಕುಳ,ಬಾಯಿಗೆ ಬಟ್ಟೆ ತುರುಕಿ ಕುತ್ತಿಗೆ ಹಿಸುಕಿ ಕೊಲ್ಲುವ ಯತ್ನ ಮಾಡಿದ್ದಾರೆ ಎಂದು ಸಂತ್ರಸ್ಥೆ ೨೪ ವರ್ಷದ ಭಾವನ.ವಿ ಅವರು ಆರೋಪಿಸಿದರು.
ಅವರು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವಾಹವಾಗಿ ಕೇವಲ ೧-೨ ತಿಂಗಳು ಮಾತ್ರ ಚನ್ನಾಗಿ ನೋಡಿಕೊಂಡರು. ತದನಂತರ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದಾರೆ. ಕಾಲಿಂದ ಒದಿಯುವುದು, ಕೈಯಿಂದ ಗುದ್ದುವುದು, ಕೈಗೆ ಸಿಕ್ಕ ಪಾತ್ರೆ ಅಥವಾ ಯಾವುದೇ ವಸ್ತುಗಳಿಂದ ಹಲ್ಲೆ ನಡೆಸುವ ಮೂಲಕ ನಿನ್ನ ಕುಟುಂಬದವರ ಹತ್ತಿರ ವಿಷಯ ತಿಳಿಸಿದರೇ ಅಪಘಾತ ಮಾಡಿ ಕೊಲ್ಲುತ್ತೇನೆ ಎಂದು ನನ್ನ ಪತಿ ಕರಣ್ ಬೆದರಿಕೆ ಹಾಕಿದ್ದಾರೆ ಎಂದು ಆತನ ಪತ್ನಿ ಬಾವನ.ವಿ ಅವರು ಅಳಲು ತೋಡಿಕೊಂಡರು.

ಗಂಡ ಕರಣ್ ನಿರಂತರ ನನ್ನ ಮೇಲೆ ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ನಾನು ತವರು ಮನೆಗೆ ಹಬ್ಬಕ್ಕೆ ಹೋಗಿ ಬಂದರೂ ಸಹಿಸಿಕೊಳ್ಳುವುದಿಲ್ಲ. ನೀನು ಎಲ್ಲಿ ಎಲ್ಲಿ ತಿರುಗಿದ್ದೀಯಾ..? ಯಾರೊಂದಿಗೆ ಬದುಕು ಹಂಚಿಕೊಂಡಿದ್ದೀಯಾ..? ಡಿಎನ್‌ಎ ಪರೀಕ್ಷೆ ನಂತರ ಮನೆಯೊಳಗೆ ಸೇರಿಸುತ್ತೇನೆ ಎಂದು ಬೆದರಿಸುತ್ತಾರೆ. ಗಂಡನಿಂದ ನಡೆದ ಹಲ್ಲೆಯಿಂದ ಕಂಗೆಟ್ಟು ಸೊರಬ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದರು.

ತವರು ಮನೆಗೆ ಗಂಡನ ಮನೆಯಲ್ಲಿನ ವಿಷಯ ಬಾಯ್ಬಿಟ್ಟರೇ ನಿನ್ನ ತಂದೆಯನ್ನು ಬಿಡುವುದಿಲ್ಲ. ಚಪ್ಪಲಿಯಲ್ಲಿ ಹೊಡೆದು ಬುದ್ದಿ ಕಲಿಸುತ್ತೇವೆ. ತವರಿಗೆ ಹೋದದ್ದೇ ಆದಲ್ಲಿ ಮತ್ತೆ ನಿನ್ನನ್ನು ಮನೆಗೆ ಸೇರಿಸುವುದಿಲ್ಲ. ಹೊಸಿಲುದಾಟಿ ಹೋದನಂತರ ನಿನಗೆ ಡೈವರ್ ನೋಟೀಸ್ ಕಳುಹಿಸುತ್ತೇನೆ ಎಂದು ಹೆದರಿಸಿದ್ದಾರೆ.
ನನ್ನ ಮುಖದ ಮೇಲೆ ಹೊಡೆದು ಘಾಯಗೊಳಿಸುತ್ತಿದ್ದರು. ಮುಖದ ಘಾಯದ ಪೋಟೋ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಳ್ಳುತ್ತೇನೆ ಎಂದು ಗ್ರಹಿಸಿದ ನನ್ನ ಪತಿ ನನ್ನ ಬೆನ್ನು ಹಾಗೂ ಕುತ್ತಿಗೆ ಹಿಂದೆ ಹೊಡೆದು ವಿಕೃತ ಅಟ್ಟಹಾಸ ಪ್ರದರ್ಶಿಸುತ್ತಿದ್ದರೂ ಕರಣ ಅವರ ತಂದೆ ಮಗನನ್ನೆ ಬೆಂಬಲಿಸುತ್ತಾರೆ.ನೀನು ಹೊಂದಿಕೊಂಡು ಹೋಗಬೇಕು ಎಂದು ಹೇಳುವ ಮೂಲಕ ಮಗನಿಂದ ನಡೆದ ಹಲ್ಲೆಗೆ ಸಹಕಾರ ನೀಡುತ್ತಾರೆ ಎಂದು ದೂರಿದರು.

ನನ್ನ ಅತ್ತೆ ತನ್ನ ಮಗನ ಉಪಟಳದ ಕುರಿತು ಬುದ್ದಿ ಹೇಳುವ ಬದಲಿಗೆ ತನಗೆ ದೇವರು ಬರುತ್ತದೆ.ದೇವರು ಗಂಡನ ಮನೆಯಲ್ಲಿ ನಡೆದ ಘಟನೆಗಳನ್ನು ತವರಿಗೆ ತಿಳಿಸಬೇಡ ಎಂದು ಹೇಳಿದೆ ಮಗಳೇ ಎನ್ನುವ ಮೂಲಕ ದೇವರ ಹೆಸರಲ್ಲಿ ತನಗೆ ಬ್ಲಾಕ್‌ಮೇಲ್ ತಂತ್ರ ಉಪಯೋಗಿಸಿ ಗಂಡನ ಮನೆಯ ಹಿಂಸೆ ಹಲ್ಲೆ ದೌರ್ಜನ್ಯವನ್ನು ಎಲ್ಲಿಯೂ ಹೇಳದಂತೆ ಉಪಾಯದಿಂದ ಹಲವು ತಿಂಗಳುಗಳವರೆಗೂ ತಡೆದಿದ್ದಾರೆ ಎಂದರು.
ನನ್ನ ಅತ್ತೆ ವೀಣಾ ರಮಾನಂದ ಬಿಳಗಿಯವರ ಎದುರಿನಲ್ಲಿಯೇ ಮನೆಯಲ್ಲಿಯೇ ಗಂಡ ಕರಣ ಆರ್ ಬಿಳಗಿ ಮತ್ತು ಮಾವ ರಮಾನಂದ ಹಾಗೂ ಮೈದುನ ಚಿರಾಗ್ ಮೂರು ಜನ ಪಾರ್ಟಿ ಮಾಡುತ್ತಾರೆ.ಮಧ್ಯ ಸೇವಿಸುತ್ತಾರೆ.ಮೈದುನ ಚಿರಾಗ್ ಕುಡಿತದ ಚಟದ ಪರಿಣಾಮ ಮನೆಯಲ್ಲಿಯೇ ಕಳವು ಮಾಡುತ್ತಾನೆ.ಹಣ ಒಡವೆ ಕಳವು ಕುರಿತು ನನ್ನ ಗಂಡ ಕರಣ್ ಅವರೇ ಅವರ ತಮ್ಮ ಚಿರಾಗ್ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ನಡೆದಿದೆ ಎಂದರು.

ಮನೆಯಲ್ಲಿಯೇ ಕಳ್ಳರಿರುವಾಗ ೪೦೦೦ ರೂಗಳು ಕಳ್ಳತನವಾಗಿದೆ. ಕಳವು ನೀನೆ ಮಾಡಿದ್ದೀಯಾ ಎಂದು ಹೆಂಡತಿಯಾದ ನನ್ನ ಮೇಲೆಯೇ ನನ್ನ ಗಂಡ ಕರಣ ಆರ್ ಬಿಳಗಿ ಅವರು ಬನಬಂದಂತೆ ಹಲ್ಲೆ ನಡೆಸಿ ನನ್ಮನ ಬಾಯಿಗೆ ಬಟ್ಟೆ ತುರುಕಿ ಗಂಟಲು ಒತ್ತಿ ನನ್ನ ಉಸಿರುಗಟ್ಟಿಸಿ ಕೊಲ್ಲುವ ಹಂತದಲ್ಲಿ ಅಚಾನಕ್ಕಾಗಿ ನನ್ನ ಕೈಕಾಲುಗಳು ನಿತ್ರಾಣ ತಪ್ಪಿದಾಗ ಪ್ರಾಣ ಹೋಯಿತು ಎಂದುಕೊಂಡು ನೆಲಕ್ಕೆ ಬೀಳಿಸಿದರು.
ನನ್ನ ಗಂಡನ ಹಲ್ಲೆಯಿಂದ ಹೆದರಿ ಜೀವಭಯದಿಂದ ಮಹಡಿಯಲ್ಲಿನ ಬೆಡ್‌ರೂಂನಿಂದ ಅಡಿಗೆ ಮನೆಗೆ ಓಡಿ ಬಂದು ನನ್ನ ಅತ್ತೆಯ ಮೊಬೈಲ್ ಪಡೆದುಕೊಂಡು ನನ್ನ ತಂದೆ ಮನೆಗೆ ಪೋನಾಯಿಸಿ ವಿಷಯ ತಿಳಿಸಿ ತಂದೆವೆಂಕಟೇಶ್ ಗುಡಿಗಾರ್ ಅವರನ್ನು ಕರೆಯಿಸಿಕೊಂಡು ತವರುಮನೆಗೆ ಬಂದು ಸಾಗರದ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗುವ ಮೂಲಕ ಪ್ರಾಣ ಉಳಿಸಿಕೊಂಡಿದ್ದೇನೆ ಎಂದರು.
ಮಗಳ ಸೌಭಾಗ್ಯಕ್ಕೆ ದೌರ್ಭಾಗ್ಯ ತಂದ ಪತ್ನಿ ಪೀಡಕ ಕರಣ ಆರ್ ಬಿಳಗಿ :
ಬಾವನ ವಿ ಅವರು ಸಾಗರದ ಶಿವಪ್ಪನಾಯಕ ನಗರದ ಸಿಗಂದೂರು ರಸ್ತೆಯಲ್ಲಿನ ನಿವಾಸದ ತವರು ಮನೆ ಹೊಂದಿದ್ದು,೨೦೨೪ ರಲ್ಲಿ ಡಿಸೆಂಬರ್ ೨೧-೨೨ ರಲ್ಲಿ ಸಾಗರದ ಈಡಿಗರ ಸಮುದಾಯ ಭವನದಲ್ಲಿ ವಿವಾಹವನ್ನು ಸೊರಬದ ಕೆಇಬಿ ಕಚೇರಿ ಎದುರು ಸೊರಬ ಪಟ್ಟಣದ ನಿವಾಸಿ ರಮಾನಂದ ಮತ್ತು ವೀಣಾ ರಮಾನಂದ ಬಿಳಗಿಯವರ ಪ್ರಥಮ ಪುತ್ರ ಕರಣ ಆರ್ ಬಿಳಗಿ ಅವನೊಂದಿಗೆ ವಿವಾಹವಾಗಿತ್ತು ಎಂದು ಬಾವನ ವಿ ಅವರ ತಾಯಿ ಭಾಗ್ಯ ಅವರು ಮಾಹಿತಿ ನೀಡಿದರು.
೨೦೨೩ ರಲ್ಲಿ ಡಿಸೆಂಬರ್ ೨೮ ರಂದು ಸಾಗರದ ಗ್ರೀನ್ ಎಂಬೆಸ್ಸಿ ಹೊಟೇಲ್ ಸಭಾಂಗಣದಲ್ಲಿ ನನ್ನ ಮಗಳು ಬಾವನ ವಿ ಹಾಗೂ ಸೊರಬದ ಕರಣ ಆರ್ ಬಿಳಗಿ ಅವನೊಂದಿಗೆ ವಿವಾಹ ನಿಶ್ಚಯವಾಗಿತ್ತು.ನಿಶ್ಚಯಕ್ಕೂ ಮೊದಲು ನಾವು ಮದ್ಯಮ ವರ್ಗದವರು ನಾವು ಮನೆಯಲ್ಲಿಯೇ ನಿಶ್ಚಿತಾರ್ಥ ಸರಳವಾಗಿ ಮಾಡಿಕೊಡುತ್ತೇವೆ ಎಂದು ಹೇಳಿದ್ದರೂ ಕೇಳಲಿಲ್ಲ.ನಮಗೆ ದೊಡ್ಡ ದೊಡ್ಡ ನೆಂಟರು ಬರುತ್ತಾರೆ.ಆದ್ದರಿಂದ ಸ್ಟಾರ್ ಹೊಟೇಲ್ ಗ್ರೀನ್ ಎಂಬೆಸ್ಸಿಯಲ್ಲಿಯೇ ನಿಶ್ಚಯ ಮಾಡಿಕೊಡಿ ಎಂದು ಒತ್ತಾಯಿಸಿದರು ಎಂದರು.
ನನ್ನ ಮಗಳು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಳು.ಆದರೇ ಮದುವೆ ಗೊತ್ತು ಮಾಡಿದಾಕ್ಷಣ ಹುಡುಗಿ ಕೆಲಸ ಮಾಡಬಾರದು ಎಂದು ಒತ್ತಾಯಿಸಿ ಕಂಪನಿ ಕೆಲಸ ಬಿಡುವಂತೆ ಮಾಡಿದರು.ಹೀಗೆ ನಿಶ್ಚಯವಾಗಿ ವರ್ಷ ಕಳೆಯುತ್ತಿದ್ದಾಗ ಮನೆಯಲ್ಲಿ ಸುಮ್ಮನೆ ಕೂರಲಾರದೇ ಸಾಗರದಲ್ಲಿಯೇ ಉದ್ಯೋಗಕ್ಕೆ ಸಂದರ್ಶನಕ್ಕೆ ಹಾಜರಾಗಿರುವುದು ಗೊತ್ತಾಗಿ ಬಾವಿ ಅಳಿಯ ಸಾಗರಕ್ಕೆ ಆಗಮಿಸಿ ಮದುವೆಗೂ ಮೊದಲೆ ಬೆದರಿಸಿ ಕೆಲಸಕ್ಕೆ ಹೋಗುವುದೇ ಬೇಡ ಎಂದು ಗಲಾಟೆ ಮಾಡಿದರು.
ವಿವಾಹಕ್ಕೂ ಮುಂಚಿತವಾಗಿಯೇ ಗಲಾಟೆ ನಡೆಸುವ ಕುಟುಂಬದ ಸಂಬಂದ ಬೇಡ ಎಂದು ನಿಶ್ಚಿತಾರ್ಥ ಕಡಿದುಕೊಂಡು ಮೌನವಹಿಸಿದ್ದೆವು.ಇಲ್ಲಿಂದ ಹುಡುಗನ ಮನೆಯವರು ಹಾಗೂ ಹುಡುಗನ ವರಸೆ ಬದಲಾಯಿತು. ನಮ್ಮದು ತಪ್ಪಾಯಿತು. ಇನ್ನು ಹಾಗೆಲ್ಲ ಮಾಡುವುದಿಲ್ಲ. ನನಗೆ ಬಾವನ ಇಲ್ಲದಿದ್ದರೇ ನಾನು ಜೀವಂತ ಉಳಿಯುವುದಿಲ್ಲ ಎಂದು ಬೇಡಿಕೊಂಡರು.
ಕರಣ ಆರ್ ಬಿಳಗಿ ವಿಪರೀತ ನಾಟಕ ಮಾಡಿ ಕೈಯನ್ನು ಬ್ಲೇಡಿಂದ ಘಾಯಗೊಳಿಸಿಕೊಂಡು ಪ್ರಾಣ ಬಿಡುತ್ತೇನೆ.ನೀನಿಲ್ಲದೆ ಬದುಕುವುದಿಲ್ಲ ಎಂದು ಪೋಟೋ ಹೊಡೆದು ಮೊಬೈಲ್‌ಗೆ ಕಳುಹಿಸಿದ್ದರು.ಒಂದು ದಿನ ಮಧ್ಯರಾತ್ರಿ ೧ ಗಂಟೆ ಸಮಯದಲ್ಲಿ ಕೆರೆಗೆ ಹಾರಿ ಪ್ರಾಣ ಬಿಡುತ್ತೇನೆ. ಬಾವನ ವಿವಾಹಕ್ಕೆ ಒಪ್ಪುತ್ತಿಲ್ಲ ಎಂದು ಮನೆಬಿಟ್ಟು ಹೋಗಿದ್ದಾನೆ ಮಗ ಎಂದು ಕರಣ ಆರ್ ಬಿಳಗಿ ಅವರ ತಂದೆ ತಾಯಿ ಸಾಗರಕ್ಕೆ ಕರೆ ಮಾಡಿ ಮಗನ ಪ್ರಾಣ ಬಿಕ್ಷೆ ನೀಡಿ,ನಿಮ್ಮ ಮಗಳು ಬಾವನ ಅವಳನ್ನು ವಿವಾಹಕ್ಕೆ ಒಪ್ಪಿಸಿ ಎಂದು ಗೋಗೆರೆದರು.
ಕರಣ ಆರ್ ಬಿಳಗಿ ಮತ್ತು ಅವರ ಮನೆಯವರ ಗೋಳಾಟ ಹಾಗೂ ಕಳಕಳಿಯ ಪ್ರಾರ್ಥನೆಗೆ ಮರುಳಾದ ನನ್ನ ಮಗಳು ಬಾವನ ಮದುವೆಗೆ ಒಪ್ಪಿಕೊಂಡಳು.ಹೀಗೆ ಮದುವೆ ಒಪ್ಪಿಕೊಂಡ ನಂತರ ಮದುವೆ ಹತ್ತಿರ ಬರುತ್ತಿದ್ದಂತೆ ಮತ್ತೆ ವರಸೆ ಬದಲಿಸಿದ ಕರಣ ಆರ್ ಬಿಳಗಿ ಅವರ ಕುಟುಂಬ ಹೈಟೆಕ್ ಸಭಾಭವನದಲ್ಲಿಯೇ ವಿವಾಹ ಆಗಬೇಕು ಎಂದು ಹಟಹಿಡಿದರು.
ಇದು ನಮ್ಮ ಕುಟುಂಬದ ಆರ್ಥಿಕ ಸ್ಥಿತಿಗೆ ಹೈಟೆಕ್ ಮದುವೆ ಸಾಧ್ಯವಿಲ್ಲ ಎಂದು ಹೇಳಿದೆವು.ಆಗ ಖರ್ಚಾಗುವ ೫೦% ನೀವು ಕೊಡಿ ಎಂದು ಕರಣ ಆರ್ ಬಿಳಗಿ ಅವರ ಮನೆಯವರು ಹೇಳಿ ಒಪ್ಪಿಸಿದರು.ಆಗ ಸಾಗರದ ಈಡಿಗರ ಸಮುದಾಯ ಭವನದಲ್ಲಿ ವಿವಾಹವಾಯಿತು.ಬಂಗಾರದ ಚೈನು ಒಡವೆ ಕೇಳಿದರು.ಶಕ್ತಿ ಮೀರಿ ನೀಡಿ ವಿವಾಹ ಮಾಡಿದ್ದೇವೆ.ಈಗ ೫ ಲಕ್ಷ ವರದಕ್ಷಿಣೆ ಬೇಕು ಎಂದು ನನ್ನ ಮಗಳು ಬಾವನ ಅವಳಿಗೆ ಹೊಡೆದು ಬಡಿದು ಚಿತ್ರಹಿಂಸೆ ನೀಡುತ್ತಿದ್ದಾರೆ.ಆಸಿಡ್ ಹಾಕಿ ಮುಖ ಕೆಡಿಸಿ ಮತ್ಯಾವ ಗಂಡು ನಿನ್ನ ಮದುವೆ ಆಗದಂತೆ ವಿಕೃತಿ ಮಾಡುತ್ತೇನೆ ಎಂದು ಹೆದರಿಸುತ್ತಾರೆ ಎಂದು ಅಳಲು ತೋಡಿಕೊಂಡರು.
ಪೊಲೀಸರ ಸಹಕಾರ ಸಿಗುತ್ತಿಲ್ಲ.ಕರಣ ಆರ್ ಬಿಳಗಿ ಅವನಿಂದ ನನ್ನ ಮಗಳು ಬಾವನ ವಿ ಅವಳ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಪರಿಣಾಮ ಸೊರಬ ದಿಂದ ಸಾಗರ ಆಸ್ಪತ್ರೆಗೆ ದಾಖಲಾಗಿ ಪ್ರಾಣ ಉಳಿಸಿಕೊಂಡಿರುವ ಮಗಳ ಹೇಳಿಕೆ ಪಡೆದು ಎಫ್‌ಐಆರ್ ಮಾಡದ ಕುರಿತು ಈಗಲೂ ಅಸಮಾಧಾನವಿದೆ.ನಂತರ ಸೊರಬ ಠಾಣೆಗೆ ಲಿಖಿತ ದೂರು ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದ ನಂತರ ಸೊರಬ ಠಾಣೆಯಲ್ಲಿ ಕರಣ ಆರ್ ಬಿಳಗಿ ಮತ್ತು ಆತನ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿ ೦೪-೦೯-೨೦೨೫ ರಂದು ಸೊರಬ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂತ್ರಸ್ಥೆ ಬಾವನ.ವಿ ಅವರ ತಂದೆ ವೆಂಕಟೇಶ್ ಗುಡಿಗಾರ,ತಾಯಿ ಬಾಗ್ಯ ವೆಂಕಟೇಶ್,ಪ್ರಮುಖರುಗಳು ಉಪಸ್ಥಿತರಿದ್ದರು.


