I ಬೊಮ್ಮನಕಟ್ಟೆಯಲ್ಲಿ I ಕುಡಿತದ ನಶೆ ಪಾರ್ಟಿಯ ಹಾವಳಿಗೆ I ಬಿತ್ತು ಮತ್ತೊಂದು ಹೆಣ I
ಶಿವಮೊಗ್ಗ : ನಗರದಲ್ಲಿ ಲ್ಯಾಂಡ್ ಲಿಟಿಗೆಶನ್ ಹೊಡೆದಾಟ, ನಕಲಿ ದಾಖಲೆಗಳ ಪೋರ್ಜರಿಸ್ಟ್‌ಗಳ ಹಾವಳಿ, ಖಾಲಿ ನಿವೇಶನಗಳಿಗೆ ಬೇಲಿ ಸುತ್ತುವ ಗ್ಯಾಂಗ್, ನ್ಯಾಯಲಯಕ್ಕೂ ಸುಳ್ಳು ದಾಖಲೆಗಳ ನೀಡಿ ವ್ಯಾಜ್ಯ ಸೃಷ್ಟಿಸುವ ಇಲ್ಲೀಗಲ್ ಹಾದಿಯ ಲೀಗಲ್ ಮುಖವಾಡಿಗಳು, ಇದರೊಂದಿಗೆ ಗಾಂಜಾ ಹಾವಳಿ, ಸಮಾ ಪಾನಮತ್ತರ ನಶೆ ಪಾರ್ಟಿಗಳು ಇದೀಗ ಎಲ್ಲೆಂದರಲ್ಲಿ ಹೆಗ್ಗಿಲ್ಲದೆ ಭರ್ತಿ ಆಗಿವೆ,
ಇದನ್ನು ಅವಲೋಕಿಸಿದಾಗ ಶಿವಮೊಗ್ಗದಲ್ಲಿ ಎಸ್ಪಿ ಮಿಥುನ್ ಕುಮಾರ್‌ರವರು ಏನು ಮಾಡುತ್ತಿದ್ದಾರೆ..? ಇಂತಿವರಿಗೆ ಯಾವ ಸುಳಿವು ಇಲ್ಲವೇ..? ಎನ್ನುವುದಾಗಿದೆ, ಸಾರ್ವಜನಿಕ ಸ್ಥಳಗಳಿಗೆ ಇಂತಹ ಅಪ್ಯಾಯವನ್ನು ಸೃಷ್ಟಿಸುವ, ಜನರ ಆತಂಕಗಳಿಗೆ ಕಾರಣವಾಗುವ ಪ್ರದೇಶಗಳಿಗೆ ಬೇಟಿ ನೀಡದೆ, ಹವಾ ನಿಯಂತ್ರಿತ ಕೊಠಡಿಯಲ್ಲಿ ಅಫೀಶಿಯಲ್ ಡಿಜಿಟಲ್ ಕರ್ತವ್ಯ ನಿರ್ವಹಿಸಿದರೆ ಸಾಕೇ..? ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಏರಿಯಾಗಳಲ್ಲಿ ಒಮ್ಮೆಲೆ ಉನ್ನತ ಮಟ್ಟದ ಅಧಿಕಾರಿಗಳು ಗಸ್ತು ತಿರುಗಿದರೆ ಗೊತ್ತು ಮಾಡಿಕೊಳ್ಳಬಹುದಾಗಿದೆ, ಆಚ್ಚರಿ ಎಂದರೆ ಎಸ್ಪಿ ಮಿಥುನ್ ಕುಮಾರ್ ರವರು ವರ್ಗಾವಾಗಿ ಬಂದ ಮೇಲೆ ಕಲ್ಲು ಕ್ವಾರಿ, ಮರಳು ದಂಧೆಗಳು, ಲ್ಯಾಂಡ್ ಲಿಟಿಗೆಶನ್ ದಂಧೆ, ಕಾರ್ಡ್ಸ್, ಓಸಿ, ಮಟ್ಕಾ ದಂಧೆ, ಅಡಕೆ ಕಳ್ಳ ಸಾಗಾಟ, ಹೀಗೆ ತರಾವರಿ ಕಾಳಸಂತೆಗಳಿಂದ ಮಂತ್ಲಿ ಮಾಮೂಲಿ ಫಿಕ್ಸ್ ಮಾಡಿಕೊಂಡು, ಹಾಕಿಕೊಂಡಿರುವ ಖಾಕಿ ಐರನ್ ಕೂಡ ಸುಕ್ಕುಗಟ್ಟದಂತೆ ಕರ್ತವ್ಯ ನಿರ್ವಹಿಸುತ್ತಿರುವುದು ಶಿವಮೊಗ್ಗದಲ್ಲಿ ಕಳೆದ ಸಿದ್ದಪ್ಪ, ಮುರುಗನ್ ಎಸ್ಪಿ ಬಿಟ್ಟರೆ ಮಿಥುನ್ ಕುಮಾರ್ ಅವರಾಗಿದ್ದಾರೆ,
ಮುಂದಾದರು ಇನ್ನೇನು ವರ್ಗಾವಣೆಯ ಹೊಸ್ತಿಲಲ್ಲಿರುವ ಎಸ್ಪಿ ಮಿಥುನ್ ಕುಮಾರ್‌ರವರು ಕೆಲವು ಏರಿಯಾಗಳಿಗೆ ಸಂಜೆಗಳಿದ ಮೇಲೆ ಖುದ್ದು ಬೇಟಿ ಮಾಡಲಿ ಹಾಗೂ ಅದಕ್ಕೆ ತಕ್ಕಂತೆ ಎಲ್ಲಾ ಠಾಣೆಗಳಿಗೂ ತಾಕೀತು ಮಾಡಲಿ ಹೀಗಾದರೆ ಮಾತ್ರ ನಗರದ ಹೊರವಲಯದ ಬೊಮ್ಮನಕಟ್ಟೆಯಲ್ಲಿ ಪಾನಮತ್ತರ ಗ್ಯಾಂಗುಗಳ ಪಾರ್ಟಿ ಹೆಸರಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ಹತ್ತಿಕ್ಕಬಹುದಾಗಿದೆ,
ಬೊಮ್ಮನಕಟ್ಟೆ ಹೀಗೊಂದು ಆತಂಕಕಾರಿ ಸೃಷ್ಠಿಸಿಕೊಂಡಿದ್ದು ವಾರಕ್ಕೊಮ್ಮೆ ಗಲಾಟೆಗಳು, ಗ್ಯಾಂಗ್‌ವಾರುಗಳು, ಕಳ್ಳತನಗಳು, ಪಾನಮತ್ತರ ಕುಡಿತದ ಪಾರ್ಟಿಗಳು ಹೆಚ್ಚುಕೊಂಡಿರುವುದು ಖಾಕಿಗಳಿಂದಲೇ ಕಡಿವಾಡ ಹಾಕುವ ಅಗತ್ಯತೆ ಇದೆ, ಇದಾಗದಿದ್ದರೆ ನಿನ್ನೆ ರಾತ್ರಿ ಕುಡಿತದ ಪಾರ್ಟಿಗೆ ಹೋಗಿದ್ದ ಬೊಮ್ಮನಕಟ್ಟೆ ನಿವಾಸಿಗಳಾದ ಪವನ್, ಶಿವು ಯಾನೆ ಸಬ್ಬಲ್ ಶಿವು ನಡುವೆ ವಾಗ್ವಾದವಾಗಿದೆ, ಹಲವು ಠಾಣೆಗಳಲ್ಲಿ ಕೇಸು ದಾಖಲಿಸಿಕೊಂಡಿರುವ ರೌಡಿ ಶೀಟರ್ ಶಿವು ಯಾನೆ ಸಬ್ಬಲ್ ಶಿವು ಹಾರೆ ಕೋಲಿನಿಂದ ಹಲ್ಲೆ ಮಾಡಿದ್ದು ಅಲ್ಲದೆ ಮಚ್ಚಿನಿಂದ ಪವನ್ ಎಂಬಾತನನ್ನು ಕೊಲೆಗೈದಿದ್ದಾನೆ, ವಿನೋಬನಗರ ಪೊಲೀಸರು ಬೊಮ್ಮನಕಟ್ಟೆಯಲ್ಲಿ ಪೆರೆಡ್ ನಡೆಸಿ ಲಾಟಿ ರುಚಿ ತೋರಿಸದಿದ್ದರೆ ಇಂತಹ ಘಟನೆಗಳು ಮುಂದೆಯು ನಡೆಯುವುದರಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿದೆ,
ಸಧ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.


