I ಅಲೆಮಾರಿಗಳನ್ನು I ವಿವಾದಿತಗೊಳಿಸಿದ I ಹೆಚ್.ಆಂಜನೇಯರವರ ನಿಲುವು ಖಂಡನೀಯ I ಜಿ.ಪಲ್ಲವಿಯವರ ಮೇಲಿನ ಹಲ್ಲೆಗೆ I ಮುಂದಾದವರ ಮೇಲೆ I ಕಾನೂನು ಕ್ರಮಕ್ಕೆ I ಕುಳುವ ಯುವಸೇನೆ ಒತ್ತಾಯ I
ಶಿವಮೊಗ್ಗ : ಸರ್ಕಾರವೇ ಗುರುತಿಸಿದ ಕೊರಮ, ಕೊರಚ ಸಮುದಾಯಗಳು ಸೇರಿದಂತೆ ೫೧ ಅಲೆಮಾರಿಗಳ- ಅರೆ ಅಲೆಮಾರಿ ಪಟ್ಟಿಯಿಂದ ಹೊರಗಿಟ್ಟು, ಸಾಮಾಜಿಕ ಬಹಿಷ್ಕಾರದಂತಹ ಪೂರ್ವಯೋಜಿತ ಸಮಾವೇಶಕ್ಕೆ ಮುಂದಾಗಿ ಸಭೆಯಲ್ಲಿ ಸಮುದಾಯಗಳನ್ನು ಅಪಮಾನಿಸಿದ್ದಲ್ಲದೆ, ಅದೇ ಸಮುದಾಯದ ಮಹಿಳೆಯರ ಮೇಲೆ ಹಾಗೂ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿಯವರುಗಳ ಮೇಲಿನ ಹಲ್ಲೆ ಖಂಡನೀಯ, ಇದು ನಾಗರೀಕ ಸಮಾಜದ ವಿರೋಧವಾಗಿದೆ
ಎಂದು ಘಟನೆಯನ್ನು ಸಮಗ್ರ ತನಿಖೆಗೆ ಆಗ್ರಹಿಸಿ ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಸೀಮಂತ್ ಕುಮಾರ್ ಸಿಂಗ್-ಐಪಿಎಸ್, ಕಮಿಷನರ್ ಆಫ್ ಪೊಲೀಸ್, ಬೆಂಗಳೂರು ನಗರ ಇವರಿಗೆ ಕುಳುವ ಯುವ ಸೇನೆ ಪ್ರತಿಭಟನಾ ಮನವಿ ಸಲ್ಲಿಸಿದೆ.
ಕುಳುವ ಯುವಸೇನೆಯ ಜಿಲ್ಲಾಧ್ಯಕ್ಷರಾದ ಲೋಕೇಶ್ ಫೈಲ್ವಾನ್ ನೇತೃತ್ವದಲ್ಲಿ ಸಲ್ಲಿಸಿದ ಪ್ರತಿಭಟನಾ ಮನವಿಯಲ್ಲಿ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಘಟನೆ ಪೂರ್ವಯೋಜಿತವಾದದ್ದು ಹಾಗೂ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿಯವರ ಮೇಲಿನ ಹಲ್ಲೆ ಖಂಡನೀಯ, ತನಿಖೆಗೆ ಈ ಮೂಲಕ ದೂರು ದಾಖಲಿಸಿ ಕುಳುವ ಯುವ ಸೇನೆ ಆಗ್ರಹಿಸುತ್ತದೆ, ಜು.೫ ರಂದು ಮಾಜಿ ಸಚಿವ ಹೆಚ್.ಆಂಜನೇಯರವರ ನೇತೃತ್ವದ ವಿವಾದಿತ ಖಾಸಗಿ ಕಾರ್ಯಕ್ರಮದ ಮೂಲಕ ಅಲೆಮಾರಿ ಪಟ್ಟಿಯಿಂದ ಕೊರಮ, ಕೊರಚ ಸಮುದಾಯಗಳನ್ನು ತುಳಿದು, ವಿವಿಧ ಬೇಡಿಕೆಗಳಿಗೆ ಅರ್ಹವಲ್ಲದ ಜನರಿವರು, ಒಂದೆಡೆ ಒಳ ಮೀಸಲಾತಿಯು ಕೊಡದಿರಿ, ಇನ್ನೊಂದೆಡೆ ೫೧ ಸಮುದಾಯಗಳ ಅಲೆಮಾರಿ ಪಟ್ಟಿಯಲ್ಲಿ ಇವೆರೆಡು ಬದುಕುಗಳಿಗೆ ಗೋರಿ ಕಟ್ಟಿಬಿಡಿ ಎನ್ನುವ ಪರೋಕ್ಷ ಹಾಗೂ ಪ್ರತ್ಯೇಕ್ಷ ಸಾಕ್ಷೀಭೂತ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ಹಾಗೂ ನಾಗರೀಕ ಸಮಾಜಕ್ಕೆ ರವಾನಿಸಿದ ಮಾಜಿ ಸಚಿವ ಹೆಚ್.ಆಂಜನೇಯನವರು ೪೯ ಅಲೆಮಾರಿಗಳ ಪಂಗಡಗಳನ್ನು ಕೊರಮ, ಕೊರಚ ಸಮುದಾಯಗಳನ್ನು ಎತ್ತಿಕಟ್ಟಿ ಪ್ರಚೋದಿಸಿದ್ದು ಯಾವ ಸಾಮಾಜಿಕ ನ್ಯಾಯ ಎಂಬುದನ್ನು ಇದೀಗ ಕೇಸು ದಾಖಲಿಸಿಕೊಂಡು ತನಿಖಿಸುತ್ತಿರುವ ಹೈಗ್ರೌಂಡ್ ಪೊಲೀಸರು ಇದೊಂದು ಸಾಮಾಜಿಕ ಬಹಿಷ್ಕಾರ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ
ಇದೊಂದು ರಾಜ್ಯದಲ್ಲಿರುವ ಕೊರಮ.ಕೊರಚ ಸಮುದಾಯಗಳಿಗೆ ನೋವು ತರಿಸಿದ್ದು ಕುಳುವ ಯುವ ಸೇನೆಯ ಈ ಮನವಿ ದೂರನ್ನು ಸ್ವೀಕರಿಸಿ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತದೆ ಎಂದು ಕುಳುವ ಯುವಸೇನೆ ಹೇಳಿದೆ.
ಗಾಂಧಿ ಭವನದಲ್ಲಿ ಕೊರಮ, ಕೊರಚ ಸಮುದಾಯಗಳ ಮಹಿಳೆಯರ ಮೇಲಿನ ಹಲ್ಲೆ ಹಾಗೂ ಸಮುದಾಯಗಳನ್ನು ಪ್ರಚೋದಿಸುವ ಹುನ್ನಾರ, ಹಾಗೂ ಓರ್ವ ಪ್ರಬುದ್ದಮಾನದ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿಯವರ ಸಮಾಜದ ಮುಖ್ಯವಾಹಿನಿಯ ನಾಯಕತ್ವ ಸಹಿಸದ ಅಸಹಿಷ್ಣುತೆ, ಸಮಾಜದಲ್ಲಿ ಈ ಸಮುದಾಯಗಳ ಮೇಲಿನ ಬಹಿರಂಗ ತುಳಿತ, ಶೋಷಣೆಗಳನ್ನು ಯಥವತ್ತಾಗಿ ಬಿಂಬಿಸಿದ ಘಟನೆ ಇದಾಗಿದೆ, ಇದೊಂದು ಪೂರ್ವಯೋಜಿತ ಷಡ್ಯಂತ್ರ, ಹುನ್ನಾರವಾಗಿದ್ದು ಈ ಘಟನೆಯಲ್ಲಿ ಹಲ್ಲೆಗೆ ಯತ್ನಿಸಿದ ರಂಗೇನಹಳ್ಳಿಯ ಲೋಹಿತಾಕ್ಷ, ದಾವಣಗೆರೆಯ ವೀರೇಶ್, ಬಳ್ಳಾರಿಯ ಶಿವು, ಬೆಂಗಳೂರಿನ ಬಸವರಾಜ್, ಸುಭಾಷ್ ಚೌಹಾಣ್, ಶಂಕರ್ ಕುಮಾರ್, ಶಿವಮೊಗ್ಗದ ಜಾವಡೆ ಲೋಕೇಶ್ ರವರುಗಳನ್ನು ವಿಚಾರಣೆಗೊಳಪಡಿಸಿ ಇದಕ್ಕೆ ಪ್ರಚೋದಿಸಿದವರು ಯಾರು..? ಎನ್ನುವುದನ್ನು ತನಿಖಿಸಿ ಅವರ ಮೇಲು ಕೇಸು ದಾಖಲಿಸುವಂತೆ ಕುಳುವ ಯುವ ಸೇನೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ದೂರು ಮನವಿ ಅರ್ಪಿಸಿ ಒತ್ತಾಯಿಸಿದೆ ಈ ಸಂದರ್ಭದಲ್ಲಿ ಯುವಸೇನೆಯ ಶಿವುಕುಮಾರ್, ಚಂದ್ರಪ್ಪ, ಪ್ರಪುಲ್ಲಚಂದ್ರ, ನಾಗೇಶ್.ಡಿ, ದೇವರಾಜ್ ವಿಶ್ವ, ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


