Tuesday, August 4, 2026
Homeಸೂರ್ಯಗಗನI ಲ್ಯಾಂಡ್ ಡೆವಲಪರ್ I ಅನಿಲ್ ಪಾಟೀಲ್ I ಮೇಲೆ ಬೇಸ್ ಬ್ಯಾಟ್‌ನಿಂದ I  ಮಾರಣಾಂತಿಕ...

I ಲ್ಯಾಂಡ್ ಡೆವಲಪರ್ I ಅನಿಲ್ ಪಾಟೀಲ್ I ಮೇಲೆ ಬೇಸ್ ಬ್ಯಾಟ್‌ನಿಂದ I  ಮಾರಣಾಂತಿಕ ಹಲ್ಲೆ I

I ಲ್ಯಾಂಡ್ ಡೆವಲಪರ್ I ಅನಿಲ್ ಪಾಟೀಲ್ I ಮೇಲೆ ಬೇಸ್ ಬ್ಯಾಟ್‌ನಿಂದ I  ಮಾರಣಾಂತಿಕ ಹಲ್ಲೆ I

ಶಿವಮೊಗ್ಗ : ಲ್ಯಾಂಡ್ ಲಿಟಿಗೇಶನ್ ಮಂದಿಗಳ ಹಾವಳಿಗೆ ಕರೆನ್ಸಿ ಕಂತೆಗಳು ತೂಗುತ್ತಿದೆ, ಎನ್ನುವ ವಾಸ್ತವತೆಗಳ ನಡುವೆ ನೈಜ ಜಿಎಸ್‌ಟಿ ಡೆವಲಪರ್‍ಸ್‌ಗಳ ಮೇಲೆ ಸಲ್ಲದ ಕಾರಣಗೊಳಡ್ಡಿ ಒಂದಷ್ಟು ಭೂಗತ ವಲಯ ಆತಂಕ ಸೃಷ್ಠಿಸಿ ಕೆಲಸ ಮಾಡುತ್ತಿದೆ, ಅಲ್ಲದೆ ಬೆದರಿಕೆಯೊಡ್ಡಿ ಕಮಿಷನ್ ಯಾಚಿಸುತ್ತಿರುವುದು ಜೊತೆಗೆ ಪುಗ್ಸಟೆ ಸೈಟ್ ರಿಜಿಸ್ಟಾರ್ ಮಾಡಿಕೊಡಬೇಕು ಎನ್ನುವ ಬೇಷರತ್ ಧಮ್ಕಿಗಳು ಹಾಕುತ್ತಿರುವ ಅಸಲಿ ವರಾತಗಳಿಗೆ ಜುಲೈ.೭ ಮತ್ತು ಜುಲೈ.೮ ರಂದು ಭಾರ್ಗವಿ ಲೇ ಔಟ್‌ನಲ್ಲಿ ಜಿಎಸ್‌ಟಿ ಡೆವಲಪರ್ ಅನಿಲ್ ಪಾಟೀಲ್ ಮೇಲೆ ನಡೆದ ಘಟನೆ ಸಾಕ್ಷೀಕರಿಸಿದೆ.

ಹೌದು ಇದೊಂದು ಬೆದರಿಕೆಯ ಕಯ್ಯಾಲಿಯಲ್ಲಿ ಜರುಗಿದ ಘಟನೆ ಆಗಿದ್ದು, ಕೃಷಿನಗರದ ಭಾರ್ಗವಿ ಲೇ ಔಟ್‌ನಲ್ಲಿ ಲ್ಯಾಂಡ್ ಹೌಟ್‌ಲೆಟ್‌ಗಳನ್ನು ನಿರ್ಮಿಸುತ್ತಿರುವ ಅನಿಲ್ ಪಾಟೀಲ್ ಬೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯರೊಬ್ಬರ ಮನೆ ಮುಂದೆ ಆಟೋ ನಿಲ್ಲಿಸಿಕೊಂಡು ಪಾನಮತ್ತರಾಗುವುದನ್ನು ನೋಡಿ ಸ್ಥಳೀಯರು ನಿಲ್ಲಿಸದರಿ ಆಟೋ ತೆಗೆದುಕೊಂಡು ಹೋಗಿ ಎಂದು ವಾಗ್ವಾದಕ್ಕೆ ಇಳಿದಿದ್ದಾರೆ,

ಆ ಸಂದರ್ಭದಲ್ಲಿ ಲ್ಯಾಂಡ್ ಡೆವಲಪರ್ ಅನಿಲ್ ಪಾಟೀಲ್ ಎದುರಾಗಿದ್ದಾರೆ ಅವರು ಬುದ್ದಿ ಹೇಳಿ ಕಳುಹಿಸಿದ ತಪ್ಪಿಗೆ ಬೆದರಿಕೆ ಹಾಕಿದ್ದಾರೆ ಈ ಕಾರಣಕ್ಕಾಗಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ನಂತರ ಇದೇ ನೆವ ಮಾಡಿಕೊಂಡು ಅನಿಲ್  ಪಾಟೀಲ್ ಮೇಲೆ ಬೇಸ್ ಬ್ಯಾಟ್ ನಿಂದ ಮಾರಣಾಂತಿಕವಾಗಿ ಹಲ್ಲೆಯಂತಹ ಅನಾಹುತಕಾರಿ ಸಂಗತಿ ಜರುಗಿದೆ.

ಈ ಘಟನೆಯಿಂದ ಅತೀವ ಹಲ್ಲೆಗೊಳಗಾಗಿದ್ದ ಅನಿಲ್ ಪಾಟೀಲ್ ಸ್ಥಳೀಯ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇಂದು ಅನಿಲ್‌ರವರನ್ನು ಸೂರ್ಯಗಗನ ಬೇಟಿ ಮಾಡಿದ ಸಂದರ್ಭದಲ್ಲಿ ಹಲ್ಲೆಗೊಳಗಾಗಿದ್ದ ಅನಿಲ್ ನಡೆದ ಘಟನೆ ವಿವರಿಸಿದ್ದಾರೆ.

ಆರೋಪಿತರು ಬೇಸ್ ಬ್ಯಾಟ್ ಬಳಸಿ ಅಡ್ಡಗಟ್ಟಿ ನಡೆಸಿದ ಹಲ್ಲೆ : ಜುಲೈ.೭ರಂದು ನಡೆದ ಘಟನೆಯ ತರುವಾಯ ಎಂದಿನಂತೆ ಲ್ಯಾಂಡ್ ಡವಲಪರ್ ಅನಿಲ್ ಪಾಟೀಲ್ ಭಾರ್ಗವಿ ಲೇ ಹೌಟ್‌ಗೆ ಕಾರಿನಲ್ಲಿ ಬಂದಿದ್ದಾರೆ, ಬರುವುದನ್ನು ಕಾದಿದ್ದ ಆರೋಪಿಗಳಾದ ಜಗದೀಶ್, ಮಲ್ಲಿಕಾರ್ಜನ, ರಘು ಇನ್ನಿತರರು ಥಾರ್ ಜೀಪ್‌ನಿಂದ ಅವರ ಕಾರಿಗೆ ಅಡ್ಡಗಟ್ಟಿ ಹಿಡಿದೆಳೆಯುತ್ತಾರೆ, ವಾಚಮಗೋಚರವಾಗಿ ನಿಂದಿಸಿ ಯಾವ ಭೂಗತ ರೌಡಿಗಳಿಗೂ ಕಡಿಮೆ ಇಲ್ಲದಂತೆ ಜೀಪ್‌ನಲ್ಲಿದ್ದ ಬೇಸ್ ಬ್ಯಾಟ್ ತೆಗೆದುಕೊಂಡು ಬಂದು ಅನಿಲ್ ಪಾಟಿಲ್ ಮೇಲೆ ಮನ ಬಂದಂತೆ ಥಳಿಸುತ್ತಾರೆ, ಅದರಲ್ಲಿ ಜಗದೀಶ್ ಎಂಬಾತನೇ ಅಂಡರ್‌ವರ್ಲ್ಡ್ ಡಾನ್ ಎಂಬಂತೆ ವರ್ತಿಸಿದ್ದಾನೆ ಎನ್ನುವುದನ್ನು ಅನಿಲ್ ತಿಳಿಸುತ್ತಾರೆ,

ವೀಡಿಯೋ ಪುಟೇಜಸ್ ನಲ್ಲಿ ಇರುವಂತೆ ಅನಿಲ್‌ನನ್ನು ಥಳಿಸುತ್ತಿರುವ ಸಂದರ್ಭದಲ್ಲಿ ಆತ ಜೀವ ಹೋಗುವ ಆತಂಕದಲ್ಲಿ ಕೂಗಿ ಕೊಳ್ಳುವ ಜರ್ಜರಿತ ಘಟನೆ ಕೇವಲ ಹಿಂದಿನ ಕ್ಷುಲ್ಲಕ ಘಟನೆಯ ನೆಪಮಾತ್ರವಲ್ಲ ಇದರ ಹಿಂದೆ ಭೂಗತರ ನೆರಳಿರುವುದು ಅಕ್ಷರಶಃ ಸತ್ಯವಾಗಿದೆ, ಅವರ ಉದ್ದೇಶ ಈ ಘಟನೆ ಸ್ಪಷ್ಟನೆ ನೀಡುತ್ತದೆ, ಬೆದರಿ ಹೋಗಿ ಕೇಳಿದಷ್ಟು ಡಿಮ್ಯಾಂಡ್‌ಗಳನ್ನು ಪೂರೈಸುವತ್ತ ಮುಂದಾಗಬೇಕು ಅಂತಹದೊಂದು ವಾತಾವರಣ ಸೃಷ್ಟಿಸುವ ಕಯ್ಯಾಲಿಯಲ್ಲಿಯೇ ವಾಸ್ತವೀಕರಿಸಿದೆ,

ಪೊಲೀಸರು ಇಂತಹ ಘಟನೆಯನ್ನು ಸರಳೀಕರಣಗೊಳಿಸದೆ ಗಂಬೀರತೆಯಿಂದ ಅಡ್ಡಗಟ್ಟಿ, ಬೆದರಿಸಿ, ಮಾರಣಾಂತಿಕ ಹಲ್ಲೆ ನಡೆಸಿದ ಮುಖ್ಯ ಆರೋಪಿಗಳ ಮೇಲೆ ಗುಂಡು ಹಾರಿಸಲಿ, ಇನ್ನೊಮ್ಮೆ ಮತ್ತೊಂದು ಘಟನೆ ಜರುಗದಂತೆ ಖಾಕಿ ಖದರ್ ನಗರದಲ್ಲಿ ಕಾಪಿಟ್ಟುಕೊಳ್ಳಲಿ, ಇದೀಗ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ಸುಫಾರಿ ಪಡೆದಿರುವ ಸಂಗತಿಯನ್ನು ಡ್ರಿಲ್ ಮಾಡಿ ಬಯಲಿಗೆಳೆದು ಜಿಎಸ್‌ಟಿ ಡೆವಲಪರ್‍ಸ್ ಉದ್ಯಮಕ್ಕೆ ರಕ್ಷಣೆ ನೀಡಲಿ ಎನ್ನುವುದು ಈ ವರದಿಯ ಉದ್ದೇಶವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ನಗರ ಬಿಜೆಪಿಯಿಂದ ತುಂಗಾ ನದಿಗೆ ಭಕ್ತಿಪೂರ್ವಕ ಬಾಗಿನ ಅರ್ಪಣೆ I ಜಿಲ್ಲೆಯ ಸಮೃದ್ಧಿಗಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ... I ಕೆಇಎ ಸ್ಪಷ್ಟನೆ I ಒಎಂಆರ್ ಹಾಗೂ ಪ್ರಶ್ನೆಪತ್ರಿಕೆ ಕ್ರಮಸಂಖ್ಯೆ ಒಂದೇ ಇರುವುದು ಕಡ್ಡಾಯವಲ್ಲ I ಸುಳ್ಳುಸುದ್ದಿ ನಂಬದಂ... I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..?