Tuesday, August 4, 2026
Homeಸೂರ್ಯಗಗನI ಶಿವಮೊಗ್ಗದ ಅನಧಿಕೃತ I ಅಡಿಕೆ ವ್ಯಾಪಾರಿಗಳ ಮೇಲೆ I ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ...

I ಶಿವಮೊಗ್ಗದ ಅನಧಿಕೃತ I ಅಡಿಕೆ ವ್ಯಾಪಾರಿಗಳ ಮೇಲೆ I ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ I

I ಶಿವಮೊಗ್ಗದ ಅನಧಿಕೃತ I ಅಡಿಕೆ ವ್ಯಾಪಾರಿಗಳ ಮೇಲೆ I ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ I

ಬೆಂಗಳೂರು, : ವಾಣಿಜ್ಯ ತೆರಿಗೆ ಇಲಾಖೆಯ ಬೆಂಗಳೂರಿನ ಜಾರಿ ವಿಭಾಗದ ಅಧಿಕಾರಿಗಳು ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೋಂದಣಿ ರಹಿತ ಅಡಿಕೆ ವ್ಯಾಪಾರಿಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.

ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಮತ್ತು ಮಂಗಳೂರುಗಳಲ್ಲಿ ಜಿಎಸ್‍ಟಿ ನೋಂದಣಿ ಪಡೆಯದೇ ಅಡಿಕೆ ವ್ಯಾಪಾರ ನಡೆಸಿ ತೆರಿಗೆ ವಂಚನೆ ಮಾಡುತ್ತಿದ್ದ ವ್ಯಾಪಾರಿಗಳ ಮಾಹಿತಿ ಸಂಗ್ರಹಿಸಿ ಅವರ ಗೋಡೌನುಗಳ ಮೇಲೆ ದಾಳಿ ನಡೆಸಿ ತೆರಿಗೆ ವಂಚನೆಯ ಮಾಹಿತಿ ಸಂಗ್ರಹಿಸಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಾರಿ, ದಕ್ಷಿಣ ವಲಯ ವಿಭಾಗದ ಅಪರ ಆಯುಕ್ತರಾದ ಚಂದ್ರಶೇಖರ್ ನಾಯಕ್ ರವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬೆಳೆದ ಅಡಿಕೆಯನ್ನು ತೆರಿಗೆ ವಂಚನೆ ಮಾಡಿ ಹೊರರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ ಸುಮಾರು 1.5ಕೋಟಿಯಷ್ಟು ತೆರಿಗೆ ವಂಚನೆ ಪತ್ತೆಯಾಗಿದ್ದು ಲೆಕ್ಕ ಪುಸ್ತಕಗಳ ಪರಿಶೀಲನೆ ಮುಂದುವರೆದಿದೆ ಎಂದು ಬೆಂಗಳೂರು ದಕ್ಷಿಣ ವಲಯದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಜಾರಿ) ಚಂದ್ರಶೇಖರ್ ನಾಯಕ ಎಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ನಗರ ಬಿಜೆಪಿಯಿಂದ ತುಂಗಾ ನದಿಗೆ ಭಕ್ತಿಪೂರ್ವಕ ಬಾಗಿನ ಅರ್ಪಣೆ I ಜಿಲ್ಲೆಯ ಸಮೃದ್ಧಿಗಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ... I ಕೆಇಎ ಸ್ಪಷ್ಟನೆ I ಒಎಂಆರ್ ಹಾಗೂ ಪ್ರಶ್ನೆಪತ್ರಿಕೆ ಕ್ರಮಸಂಖ್ಯೆ ಒಂದೇ ಇರುವುದು ಕಡ್ಡಾಯವಲ್ಲ I ಸುಳ್ಳುಸುದ್ದಿ ನಂಬದಂ... I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..?