I ಕರವೇ ಸ್ವಾಭಿಮಾನಿ I ಬಣಕ್ಕೆ ನೂತನ ನಗರ I ಅಧ್ಯಕ್ಷರ ನೇಮಕ I
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ನಗರ ಘಟಕದ ಅಧ್ಯಕ್ಷರನ್ನಾಗಿ ಜೀವನ್ ಡಿ ಇವರನ್ನು ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಸರ್ವಾನು ಮತದಿಂದ ಜಿಲ್ಲಾ ಘಟಕ ಆಯ್ಕೆ ಮಾಡಿದೆ ಎಂದು ಜಿಲ್ಲಾ ಘಟಕ ತಿಳಿಸಿದೆ,
ಇವರಿಗೆ ನಾಡು ನುಡಿ ನೆಲ ಜಲ ಭಾಷೆ ರೈತ ಪರ ವಿದ್ಯಾರ್ಥಿಪರ ಶೋಷಿತರ ಪರ ಧನಿಯಾಗಿರುವಂತೆ ಆದೇಶ ನೀಡಲಾಗಿದೆ ಅವರು ಪದಾಧಿಕಾರಿಗಳ ಆಯ್ಕೆ ಅಧಿಕಾರ ಹೊಂದಿದ್ದು ಸಂಘಟನೆಗೆ ಯಾವುದೇ ದಕ್ಕೆ ಬರದಂತೆ ಕಾರ್ಯ ನಿರ್ವಹಿಸಬೇಕೆಂದು ಸಂಘಟನೆ ಆಶಿಸುತ್ತದೆ.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ರವರು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ರಾಜ್ಯ ಅಧ್ಯಕ್ಷರ ಮುಖಾಂತರ ಆದೇಶ ಪತ್ರವನ್ನು ನೀಡಲಾಯಿತು

