I ಜು.20. ಸಾಹಿತ್ಯ ಗ್ರಾಮದಲ್ಲಿ I ವಿದ್ಯಾರ್ಥಿಗಳಿಂದ I ಆಷಾಡದ ಕಾವ್ಯ ಸಂಭ್ರಮ I ಡಿ. ಮಂಜುನಾಥ I
ಶಿವಮೊಗ್ಗ :- ಮಳೆಗಾಲದ ಮೋಡ, ಮಳೆ, ಚಳಿ, ಹಸಿರು ಹೊದ್ದ ನೆಲ, ಎಲ್ಲೆಲ್ಲೂ ಜಲಧಾರೆ ಈ ಎಲ್ಲಾ ಪ್ರಕೃತಿ ವಿಸ್ಮಯಗಳ ನಡುವೆ ನಮ್ಮ ವಿದ್ಯಾರ್ಥಿಗಳು ಗುಂಪಾಗಿ ಹಾಡು ಹೇಳಿದರೆ ಎಂಥಚಂದವಲ್ಲವೇ. ಅದನ್ನೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಕಾರದಲ್ಲಿ ಜುಲೈ 20 ನೆಯ ಭಾನುವಾರ ಸಂಜೆ 6 ಕ್ಕೆ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರ ಬಡಾವಣೆಯ ಸಾಹಿತ್ಯ ಗ್ರಾಮದಲ್ಲಿ ಆಷಾಡದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡದ ಹಲವು ಕವಿಗಳು ರಚಿಸಿದ ಕವನಗಳನ್ನು ನಮ್ಮ ವಿದ್ಯಾರ್ಥಿಗಳು ವೃಂದಗಾನದಲ್ಲಿ ಹಾಡು ಹೇಳುತ್ತಾರೆ. ಒಂದು ಪ್ರೌಢಶಾಲೆಯ ಹದಿನೈದು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಭಾಗವಹಿಸಲಿದ್ದಾರೆ. ರಾಮಕೃಷ್ಣ ವಿದ್ಯಾಸಂಸ್ಥೆ, ಅನನ್ಯ ಶಿಕ್ಷಣ ಸಂಸ್ಥೆ, ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ, ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ವಿನೋಬನಗರ ಸರ್ಕಾರಿ ಪ್ರೌಢಶಾಲೆ, ಕಸ್ತೂರಬಾ ಬಾಲಕಿಯರ ಪ್ರೌಢಶಾಲೆ, ಚಾಲುಕ್ಯ ನಗರದ ಶಿವಮೊಗ್ಗ ಪಬ್ಲಿಕ್ ಸ್ಕೂಲ್, ಗೋಪಿಶೆಟ್ಟಿಕೊಪ್ಪದ ವಿದ್ಯಾವರ್ಧಕ ಪಬ್ಲಿಕ್ ಸ್ಕೂಲ್, ಚಾಲುಕ್ಯ ನಗರದ ಸನ್ ಸಿಟಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಜನಪದ ಗಾಯಕ ಕಡದಕಟ್ಟೆ ತಿಮ್ಮಪ್ಪ ಅವರು ರಚಿಸಿದ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಗಾದೆಗಳನ್ನು ಆದರಿಸಿದ ಜನಪದ ಹಾಡುಗಳು ಮತ್ತು ಗಡಿಯಾರ ಎನ್ನುವುದು ಟಿಕ್ ಟಿಕ್ ಒಡಪುಗಳನ್ನು ಆಧರಿಸಿದ ಗೀತೆಗಳ ಧ್ವನಿ ಸುರುಳಿ ಬಿಡುಗಡೆ ಆಗಲಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್, ಡಿ. ಮಂಜುನಾಥ, ಅನನ್ಯ ಗಿರೀಶ್, ಬಸಪ್ಪ ಎನ್., ಮಹಾದೇವಿ, ಶಶಿರೇಖಾ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ಮನವಿಮಾಡಿದ್ದಾರೆ.

