Saturday, August 1, 2026
HomeಅಂಕಣI ಮಲೆನಾಡಿನ ಹೆಬ್ಬಾಗಿಲ I ಕನ್ನಡದ ಕಟ್ಟಾಳು I ಕರವೇ ಕಿರಣ್ I

I ಮಲೆನಾಡಿನ ಹೆಬ್ಬಾಗಿಲ I ಕನ್ನಡದ ಕಟ್ಟಾಳು I ಕರವೇ ಕಿರಣ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಮಲೆನಾಡಿನ ಹೆಬ್ಬಾಗಿಲ I ಕನ್ನಡದ ಕಟ್ಟಾಳು I ಕರವೇ ಕಿರಣ್ I

ಮಲೆನಾಡಿನದ ಕರವೇ ಕಿರಣ್ ಕುರಿತಾಗಿ ಒಂದಷ್ಟು ವಿಸ್ತೃತಗೊಳಿಸಬೇಕಾಗಿದೆ, ಈ ಹೊತ್ತು ಕನ್ನಡದ ಚಳುವಳಿಗಳನ್ನು ನೆನೆವು ಮಾಡಿಕೊಳ್ಳುವುದಾಗಿದೆ, ಹಿರಿಯರು ಹೋರಾಟದ ಮೂಲಕ ಕಟ್ಟಿದ ಕನ್ನಡದ ಕೋಟೆಯನ್ನು ಪ್ರಸ್ತುತ ದಿನಮಾನದಲ್ಲಿ ಕಿರಣ್ ಅಂತಹ ಹೋರಾಟದ ಕಟ್ಟಾಳುಗಳು ರಕ್ಷೆಯಾಗಿ ಕಟಿಬದ್ದತೆಯಿಂದ ಇರುವುದರಿಂದಲೇ, ಕನ್ನಡಿಗರ ಮತಗಳಿಂದ ಆಯ್ಕೆಯಾದ ರಾಜ್ಯಸರ್ಕಾರಗಳು ಕನ್ನಡಕ್ಕೊಂದಿಷ್ಟು ಅಧಿಕಾರದ ಪರಮಾವಧಿಗಳನ್ನು ಉಲ್ಲೇಖಿಸುತ್ತಿದ್ದಾರೆ,

ಆದರೆ ಅಚ್ಚರಿ ಎಂದರೆ ಪ್ರಾದೇಶಿಕ ಪಕ್ಷಗಳು ಕನ್ನಡಿಗರ ನೆಲದಲ್ಲಿ ಅಧಿಕಾರ ಹಿಡಿಯುವುದಕ್ಕಿಂತ ಬಹುತೇಕ ರಾಷ್ಟ್ರೀಯ ವಾದಗಳನ್ನು ಮಂಡಿಸುವ ಪಕ್ಷಗಳೇ ಆಳಿದ್ದೆಚ್ಚು, ಈ ಸಕಾರಣಗಳಿಂದ ಈ ನೆಲದ ಪ್ರಾದೇಶಿಕತೆಗೆ ಇಂದಿಗೂ ಅಷ್ಟೊಂದು ಮಹತ್ವ, ಪ್ರಾಶ್ಯಸ್ತ ನೀಡಲಾಗಿಲ್ಲ ಹೀಗಿದ್ದರೂ ರಾಜ್ಯದ ಕನ್ನಡದ ಪರ ಸಂಘಟನೆಗಳು ಕನ್ನಡದ ಅಭಿಮಾನದ ಭಾವುಟವನ್ನು ಎತ್ತಿ ಹಿಡಿದಿವೆ. ಇಂತಹ ಅನೇಕತೆಗಳ ನಡುವೆ ಕರವೇ ಕಿರಣ್ ಮಲೆನಾಡಿನಲ್ಲಿ ಕಳೆದ ಎರಡು ದಶಕಗಳಿಂದ ಕನ್ನಡದ ಹೋರಾಟದ ದೀವಿಗೆ ಬಿಡದಂತೆ ಹಿಡಿದಿದ್ದಾರೆ,

ಈ ಕುರಿತಾಗಿ ಇಲ್ಲಿ ಉಲ್ಲೇಖಿಸುವ ಜರೂರತ್ತಿದೆ, ಹೌದು ಮಲೆನಾಡಿನಲ್ಲಿ ಮಾನವೀಯತೆ-ಹೋರಾಟದ ಹಾದಿಯಲ್ಲಿ ಸದ್ದು ಮಾಡುವ ಆಟೋ ಚಾಲಕ ವೃತ್ತಿಯ ಕಾಯಕದೊಳಿದ್ದರೂ ಕನ್ನಡದ ಹೋರಾಟಗಳನ್ನು ಮೇಳೈಸಿಕೊಂಡ ಹಿರಿಮೆ ಇವರದ್ದು ಹೀಗಾಗಿಯೇ ಇಂತಿವರನ್ನು ದಣಿವರಿಯದ ಮಲೆನಾಡಿನ ಕನ್ನಡದ ದನಿ ಎಂದು ಉವಾಚಿಸಲಾಗುತ್ತದೆ, ಇಂತಿವ ಮಾದರಿಯಂತೆ ಹಲವು ಮನಸುಗಳಿಗೆ ಮಾರ್ಗದರ್ಶಕರಾಗಿ ನಾಡು-ನುಡಿ,-ಜಲ-ಭಾಷೆಗೆ ಒತ್ತುಕೊಟ್ಟು ಪ್ರಾದೇಶಿಕತೆಯೇ ತನ್ನ ಜೀವಾಳ ಎನ್ನುವ ಕರವೇ ಕಿರಣ್ ಅವರು ಕರವೇ-ಯುವಸೇನೆಯಿಂದ ಇದೀಗ ಕರವೇ ಸ್ವಾಭಿಮಾನಿ ಬಣದ ರಾಜ್ಯಾದ್ಯಕ್ಷರಾದ ಕೃಷ್ಣೇಗೌಡರವರ ನೇತೃತ್ವದಲ್ಲಿ ಹೋರಾಟವನ್ನು ತೀವ್ರಗೊಳಿಸಿದ್ದಾರೆ, ಇಂತಹದೊಂದು ವರದಿಯನ್ನು ಇಲ್ಲಿ ವಿಸ್ತೃತಗೊಳಿಸುತ್ತಿದ್ದೇನೆ.

ಕನ್ನಡದ ಸೇವೆ, ಸಾಮಾಜಿಕ ತುಡಿತಗಳ ಕಟ್ಟಿಕೊಂಡ ಆಟೋಚಾಲಕ ಕರವೇ ಕಿರಣ್, ಜನ ಸಮುದಾಯದ ಕ್ಲಿಷ್ಟಕರ ಸಂದರ್ಭದಲ್ಲಿಯು ದನಿಯಾಗಿ ನಿಂದವರು, ಅಂದು ಚೀನಾ ದೇಶದ ವುಹಾನ್ ನಗರದಿಂದ ವಿಶ್ವದೆಲ್ಲೆಡೆ ಪಸರಿಸುತ್ತಲೇ ಸಾಗಿದ ಕೋರೊನಾ-೧೯ ಎನ್ನುವ ಆನಾಹುತಕಾರಿ ವೈರಸ್ ಅಘೋಷಿತ ಸಾಂಕ್ರಮಿಕ ಯುದ್ದವನ್ನು ಸಾರಿತ್ತು, ಮೊದಲನೆ ಅಲೆ ೨೦೨೦ರಲ್ಲಿ ಭಾರತಕ್ಕೆ ಎರಗಿದ ಅವಸರ, ಭಯಬೀತಗೊಂಡ ವಾತಾವರಣ ಮಲೆನಾಡಿನ ಶಿವಮೊಗ್ಗ ನಗರಿಯೂ ಲಾಕ್ಡೌನ್, ಸೀಲ್ಡೌನ್ ಎದುರಿಸುತ್ತಿತ್ತು, ಅದಾಗ ಆಟೋಚಾಲಕನಾಗಿ ಹೋರಾಟದ ಹಾದಿಯಲ್ಲಿ ಮುನ್ನೆಡೆದು ಸದಾ ಸೇವಾ ಕೈಂಕರ್ಯದಲ್ಲಿ ಕನ್ನಡದ ಕಟ್ಟಾಳುವಾಗಿ ಮಲೆನಾಡಿಗೆ ಸಾಕಷ್ಟು ಕನ್ನಡಪರ-ಸಮಾಜಪರ ದನಿಯಾಗಿ ನಿಂದಿದ್ದವರೇ ಇಂತಿವರು ಎನ್ನುವುದು ಈ ಮಲೆನಾಡು ಎಂದಿಗೂ ಮರೆಯಲಾಗದು,

ಸಾಮಾನ್ಯ ಆಟೋ ಚಾಲಕನೋರ್ವನ ಎದೆಯಲ್ಲಿ ಶುರುವಿನ ಹೋರಾಟದ ಕಿಚ್ಚು, ಸೇವಾಭೂಮಿಕೆಯ ತುಡಿತ ನೋಡಿದಾಗಲೇ ಅನಿಸಿದ್ದು ಶಿವಮೊಗ್ಗದಂತಹ ಹೋರಾಟದ ಜನ್ಮಭೂಮಿಯಲ್ಲಿ ಕನ್ನಡದ ಕಟ್ಟಾಳುವಿನ ಸಂಘಟಿತ ಯಾತ್ರೆ ಮೊಳಗಲಿದೆ ಎಂದೆನಿಸಿತ್ತು, ಹೋರಾಟಗಳ ಲೆಕ್ಕ ಹಾಕುವುದಕ್ಕೆ ಸಾಧ್ಯವಿಲ್ಲ ಎನ್ನುವಷ್ಟು ಕರವೇ ಕಿರಣ್ ಇಂದಿಗೂ ಪ್ರಚಲಿತ ದನಿಯಾಗಿದ್ದಾರೆ,

ಹೀಗಾಗಿ ನನ್ನ ನೆಲ-ನನ್ನ ಜನ ಎನ್ನುವ ಪರಿಕಲ್ಪನೆಯಲ್ಲಿ ಕೋವಿಡ್ ಬಾಧೆ ಕಾಡುವುದಕ್ಕೆ ಶುರುಮಾಡಿದ್ದರ ವಿರುದ್ದ ಸಾಧ್ಯವಾದಷ್ಟು ಜನ ಸಹಾಯವನ್ನು ಮಾಡೋಣವೆಂದು ತೀರ್ಮಾನಿಸಿ ಅದರಂತೆ ಅಂದಿನ ಕರ್ನಾಟಕ ರಕ್ಷಣಾ ವೇದಿಕೆ-ಯುವಸೇನೆಯ ಅಡಿಯಲ್ಲಿ ಆಟೋ ಚಾಲಕರ ನೆರವಿಗೆ “ಪುಡ್ ಕಿಟ್” ನೀಡಿ ದೈರ್ಯ ತುಂಬಲು ಪ್ರಯತ್ನಿಸುತ್ತಾರೆ, ಕಾಯಕದಲ್ಲಿ ದೇವರನ್ನು ನೋಡುತ್ತೇನೆ ಎನ್ನುವ ಕರವೇ ಕಿರಣ್ ರವರು “ಕಾಯಕ ಯೋಗಿ”ಯು ಆಗಿದ್ದಾರೆ ಎಂದರೆ ತಪ್ಪಾಗಲಾರದು, ಬಡ-ಮಧ್ಯಮ ವರ್ಗದವರಿಗೂ ಪುಡ್ ಕಿಟ್ ತಲುಪಿಸುವಲ್ಲಿ ಹಾಗೂ ಸ್ಯಾನಿಟೈಸರ್ ಮಾಸ್ಕ್ ವಿತರಿಸಿ ಕೋರೊನಾ ವೈರಸ್ ಬಗ್ಗೆ ಅರಿವು ಮೂಡಿಸುವಲ್ಲಿ ಸಾಕಷ್ಟು ಶ್ರಮಿಸಿರುವ ಕರವೇ ಕಿರಣ್ ತಂಡದ ಜೊತೆಗೆ ಸದಾ ಜೊತೆಯಾದವರು ಕರವೇ ಸಂಘಟನೆಯ ಬಳಗದವರು. ಸ್ನೇಹಿತರು,

ಈಗಾಗಲೇ ಕೋವಿಡ್-೧೯ ಎನ್ನುವ ಸಾಂಕ್ರಮಿಕ ಕದನ ವಿಶ್ವದಲ್ಲಿ ಏರ್ಪಟ್ಟಿದೆ ಎನ್ನುವ ಸಂಗತಿಯನ್ನು ಕಳೆದ ಸಾಕಷ್ಟು ಲೇಖನಗಳಲ್ಲಿ ಮುದ್ರಿತವಾಗಿ ಅಭಿವ್ಯಕ್ತಿಸಲಾಗಿದೆ, ಹಾಗೆಯೇ ಈ ಕದನ ಯಾವಾಗ ಮುಗಿದು ಬಿಡುತ್ತದೆ ಮತ್ತೊಮ್ಮೆ ಅನ್ ಲಾಕ್‌ನಡಿ ಜೀವನ ಆರಂಭಿಸಿ ಬಿಡುತ್ತೇವೆ ಎನ್ನುವ ಸಂಭ್ರಮಕ್ಕೆ ಎರಡನೆ ಒಮ್ಮೆಲೆ ಮೆಲೆರಗಿದ ಅಲೆ ಹುಸಿ ಮಾಡಿ ಕಾಡುತ್ತಿದೆ. ಸಾವಿರಾರು ಹೆಣಗಳನ್ನು ಅನಾಯಾಸವಾಗಿ ಯಾವುದೇ ಪದ್ದತಿಗಳಿಲ್ಲದೆ, ಆಚರಣೆಗಳಿಲ್ಲದೆ, ಮೃತ ಕುಟುಂಬದವರಿಗೂ ದರ್ಶಿಸುವ ಭಾಗ್ಯಗಳಿಲ್ಲದೆ ಆಳದ ಕುಣಿಯಲ್ಲಿ ಮುಚ್ಚಲಾಗುತ್ತಿದೆ, ಹಲವಡೆ ಕಟ್ಟಿಗೆಗಳಿಲ್ಲದೆ ಅರೆ-ಬರೆ ಸುಡಲಾಗುತ್ತಿದೆ, ಇನ್ನೂ ಹಲವಡೆ ಪಿಪಿಇ ಕಿಟ್ ಹೊದಿಕೆಯಲ್ಲಿರುವ ಶವಗಳು ನದಿಯಲ್ಲಿ ತೇಲಿ ಬಂದಿರುವುದು ಅಂದಿನ ವರ್ತಮಾನದ ಸುದ್ದಿಗಳಲ್ಲಿ ನೋಡಿದ್ದೇವೆ.

ಇಂತಿಷ್ಟು ಪರಾಂಭರಿಸಿದಾಗ ನಾವುಗಳು ವಾಸ್ತವದ ಅಧ್ಯಯನವನ್ನು ನಮ್ಮೊಳಗಿಳಿದು ನಾವೇ ಮಾಡಿಕೊಳ್ಳಬೇಕಿದೆ, ಪ್ರತಿ ಮನಸುಗಳು ಕೂಡ ಸರಿ-ತಪ್ಪುಗಳನ್ನು ವಿಶ್ಲೇಷಿಸುತ್ತಲೇ ಇರುತ್ತದೆ ಆದರೆ ಅತ್ತಕಡೆ ಚಿತ್ತವರಿಸಿದೆ ಮೌನವಹಿಸಿ ಮತ್ತೆ ತಪ್ಪುಗಳ ಹಾದಿಯಲ್ಲಿ ಅರಿವೆಗಳಿಲ್ಲದೆ ಕಾವಿಟ್ಟುಕೊಳ್ಳುತ್ತೇವೆ, ಎಂದಾದರೂ ಎದೆಯ ದನಿಗಳನ್ನು ಆಲಿಸಿದ್ದೇ ಆದರೆ ಅಲ್ಲೊಂದು ಮಾನವೀಯತೆ ತಾಯಿಯಂತೆ ಮರುಗುತ್ತಲೇ ಇರುವುದು ಕೇಳಿಸುತ್ತದೆ. ಇಂತಹದೊಂದು ಅವಲೋಕನದ ಅಧ್ಯಯನಕ್ಕೆ ಪ್ರಸ್ತುತ ಕೋವಿಡ್ ಕಾಲಮಾನ ಎದುರುಮಾಡಿಕೊಟ್ಟಿದೆ, ಬದಲುಗೊಳ್ಳದ ಮನಸ್ಥಿತಿಗಳು ಆಗೆಯೇ ಇದೆ ಆ ಮನಸ್ಥಿತಿಗಳು ಗೋರಿಯಲ್ಲಿ ಕೊಳೆತರು ಅದರ ಕೂಳೆಗಳನ್ನು ಬೀದಿನಾಯಿಗಳೆದು ದುರ್ನಾತವನ್ನು ಸಮಾಜಕ್ಕೆ ಹರಿಯಬಿಡುತ್ತದೆ, ಇದು ಬದಲಾಗದ ಮನಸ್ಥಿತಿ ಎಂದೇ ಮೌನವಹಿಸುವುದು ಸಾರ್ವಕಾಲಿಕವಾಗಿಯೂ ಉತ್ತಮ ಎನ್ನಬಹುದು,

ಇಂತಹ ಅನೇಕತೆಗಳಲ್ಲಿ ಜನರ ಮನಪರಿವರ್ತನೆ ಆಗದಿದ್ದರೂ ಕನ್ನಡಪರ ಹೋರಾಟಗಾರರು ಎಂತಹುದೇ ಕ್ಲಿಷ್ಟಕರ ಸಮಸ್ಯೆಗಳು ಎದುರಾದರೂ ಕನ್ನಡಿಗರ ಸೇವೆಗೆ ಸಿದ್ದರಾಗಿರುತ್ತೇವೆ ಎಂದು ಪಣತೊಟ್ಟವರಂತೆ ಹಸಿದ ಸೂರುಗಳ ಬವಣೆಗಳನ್ನು ನೀಗಿಸಲು ಕೈಲಾದಷ್ಟು ಮುಂದಾಗುತ್ತಾರೆ, ಇದುವೇ ಸಾವಾಧಾನದ ಸಂಗತಿ ಎನ್ನಬಹುದಾಗಿದೆ, ಮೊದಲನೆ ಹಂತದಲ್ಲಿ ವಿವಿಧ ರಂಗಗಳಲ್ಲಿ ಸಂಕಷ್ಟದಲ್ಲಿರುವವನ್ನು ಗುರುತಿಸಿ ಆಟೋ ಚಾಲಕರಿಗೆ, ಪತ್ರಕರ್ತರಿಗೆ, ಬಡ-ಮದ್ಯಮ ಕುಟುಂಬದವರಿಗೆ, ಕಲಾವಿದರಿಗೆ ವಿಶೇಷವಾಗಿ ಕಿಟ್ ಸಿದ್ದಪಡಿಸಿ ನೀಡಿ ನಾಗರೀಕ ಪ್ರಶಂಸೆಗೆ ಕರವೇ ಕಿರಣ್ ಅವರು ಪಾತ್ರರಾಗುತ್ತಾರೆ, ಇಂತಿವ ಅನೇಕತೆಯ ಕನ್ನಡದ ಸೇವೋನ್ಮುಖಿ ಹೆಜ್ಜೆಗಳಿಗೆ ಸದಾ ಬೆಂಬಲಿಸುವ ಆನಂದಣ್ಣನವರ ಸಾಮಾಜಿಕ ಋಣಿಗಾಗಿ ಕರವೇ-ಯುವಸೇನೆಯ ಜೊತೆಯಲ್ಲಿ ಆನಂದಣ್ಣ ಯಂಗ್ ಬ್ರಿಗೇಡ್ ಸ್ಥಾಪನೆ ಮಾಡಿ ಎರಡು ಸಂಸ್ಥೆಗಳಡಿ ನಾವುಗಳು ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ, ಸೇವೆಯಲ್ಲಿಯೂ ಮುಖ್ಯವಾಹಿನಿಯಲ್ಲಿದ್ದೇವೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ,

ಮುಂದುವರೆದಂತೆ ಎರಡನೆಯ ಹಂತದಲ್ಲಿಯೂ ನೂರಾರು ಬದುಕುಗಳಿಗೆ ಪುಡ್ ಕಿಟ್ ಕೊಡಬೇಕೆಂದು ಪೂರ್ವ ತೀರ್ಮಾನದಂತೆ ಆರಂಭವಾದ ಸರಣಿ “ಪುಡ್ ಕಿಟ್” ವಿತರಣಾ ಕಾರ್ಯಕ್ರಮಗಳು ಗಾಂಧಿನಗರದ ಸೂರ್ಯಗಗನ ಪತ್ರಿಕಾಲಯದ ಮುಂದೆ ನಡೆಯಿತು ಇಲ್ಲಿ ಪತ್ರಿಕಾ ವಿತರಕರಿಗೆ ಹಾಗೂ ಸಗಟು ವಾಹನ ಚಾಲಕರಿಗೆ “ಪುಡ್ ಕಿಟ್” ವಿತರಿಸಿದರು, ರಾಮಮನೋಹರ ಲೋಹಿಯ ನಗರದಲ್ಲಿರುವ “ಮಾನಸ ಶಾಲೆ”ಯ ಶಿಕ್ಷಕರಿಗೆ, ಸಿಬ್ಬಂದಿಗಳಿಗೆ ವಿಶೇಷವಾಗಿ ಸಿದ್ದಪಡಿಸಿದ ಪುಡ್ ಕಿಟ್ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಧೃತಿಗೆಡುವ ಅಗತ್ಯವಿಲ್ಲ ಎಂದು ಆತ್ಮಸ್ಥೆರ್ಯ ತುಂಬಿದರು, ಈ ಸಂದರ್ಭದಲ್ಲಿ ನೆನಪಾದುದ್ದು ನಟ ದರ್ಶನ್ ಚಿತ್ರವೊಂದರ ಡೈಲಾಗ್, “ಅನ್ನ ಕೊಡುವ ರೈತ ನೇಣಿಗೇ ಶರಣಾಗಬಾರದು, ಪಾಠ ಹೇಳಿ ಕೊಡುವ ಮೇಷ್ಟ್ರು ಕಣ್ಣಲ್ಲಿ ನೀರು ಬರಬಾರದು” ಇದು ಸಾಂದರ್ಭಿಕವಾಗಿದ್ದರೂ ಈ ಹೊತ್ತಿನಲ್ಲಿ ಅದು ವಾಸ್ತವ ಮಾತಾಗಿದೆ. ನಿಜ ಎಂದಿಗೂ ಈ ಸಂಕಟಗಳು ಎದುರಾಗಲೇ ಬಾರದು ಎಂದಿದ್ದರೂ ನಮ್ಮನಾಳುವ ವ್ಯವಸ್ಥೆಗಳು ಅಂಧತ್ವದಿ ಮೊಳಗಿದ್ದಾರೆ, ಕಿವುಡುತನಗಳು ಕೂಡ ರಾರಾಜಿಸಿವೆ, ಹೀಗಾಗಿ ಕೋರೊನಾ ಈ ಕಾಲದ ತುರ್ತುವಿನಲ್ಲಿ ಆರ್ಥಿಕ ಬವಣೆಗೆ ಸಿಲುಕಿರುವ ಶೇಕಡ ೭೦% ಶಿಕ್ಷಕರು ಅತೀವ ಸಂಕಟದಲ್ಲಿದ್ದಾರೆ ಲಾಕ್ಡೌನ್ ಎದುರಿಸುವುದಕ್ಕೆ ಸಾಧ್ಯವಿಲ್ಲವಾಗಿದೆ,

ಅಂದಿನ ಸರಕಾರದ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ರವರು ಪೊಳ್ಳು ಭರವಸೆಗಳ ನೀಡಿ ೩.ಲಕ್ಷ ಶಿಕ್ಷಕರಿಗೆ ನೆರವು ಘೋಷಣೆ ಮಾಡುತ್ತೇವೆಂದು ಅದು ಘೋಷಣೆಯಲ್ಲಿಯೇ ಮೊಳಗಿದೆ, ಇಂತಹ ಆರ್ಥಿಕ ದುರ್ಬಲತೆ ಅನುಭವಿಸುತ್ತಿರುವ ಶಾಲೆಗಳಲ್ಲಿ ಶಿಕ್ಷಕರ ಸಂಬಳ ಕೇವಲ ಮೂರು ಸಾವಿರದಿಂದ ಐದು ಸಾವಿರ ಎಂದರೆ ನಿಬ್ಬೆರಗಾಗಬೇಕು, ಇದೀಗ ಲಾಕ್ಡೌನ್ ನಿಂದಾಗಿ ಇನ್ನಷ್ಟು ಸಂಧಿಗ್ಧತೆಯಲ್ಲಿರುವ ಶಿಕ್ಷಣ ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ಪಗಾರ್ ಕೂಡ ನೀಡಲು ಮುಂದಾಗದೆ ಹೆಣಗಾಡುತ್ತಿದ್ದಾರೆ ಇಂತಹ ವಸ್ತುಸ್ಥಿತಿ ಅರಿತುಕೊಂಡೇ ಶಿಕ್ಷಕರಿಗೆ ನೆರವು ನೀಡಲು ಮುಂದಾಗಿರುವ ಕರವೇ-ಯುವಸೇನೆ ಘಟಕ ಹಾಗೂ ಆನಂದಣ್ಣ ಯಂಗ್ ಬ್ರಿಗೇಡ್ ನಿಲುವುಗಳನ್ನು ನಾವುಗಳು ಶ್ಲಾಘಸಿಲೇ ಬೇಕು ಅಂತಹದೊಂದು ದನಿ ಇವರುಗಳದ್ದಾಗಿತ್ತು,

ವೃದ್ದಾಪ್ಯದವರಿರುವ ವೃದ್ದಾಶ್ರಮ, ಅನಾಥ ಮಕ್ಕಳಿಗೆ ಒಂದು ದಿನದ ಊಟದ ವ್ಯವಸ್ಥೆಯನ್ನು ಮಾಡಿ ದಿನದ ಲಾಕ್ಡೌನ್ ನಿಯಮಾವಳಿಗಳ ಮಧ್ಯೆಯೇ ನೂರಾರು ಜನರಿಗೆ ಪುಡ್ ಕಿಟ್ ನೀಡಿ ಕೋರೊನಾ ಕುರಿತಾಗಿ ಅರಿವು ಮೂಡಿಸಿದ ಅವರ ಗಡಿಬಿಡಿಗಳು, ಸಾಮಾಜಿಕ ಕಾಳಜಿಯನ್ನು ನೋಡಿದಾಗ ಎಂತಹವರು ಕೂಡ ಅರ್ಥೈಸಿಕೊಂಡು ಮೆಚ್ಚುಗೆ ಮಾತುಗಳನ್ನು ಖುದ್ದು ತಿಳಿಸದೇ ಇರಲಾರರು, ಆಚ್ಚರಿ ಎಂದರೆ ಸಾಕಷ್ಟು ಸಂಘಟನೆಗಳಿವೆ ಅದು ಕೇವಲ ಬಕೆಟ್ ಗಾಗಿ ರಾಜಕೀಯದ ವೈಭವಿಕರಣಕ್ಕಾಗಿ, ಹಪಾಹಪಿತನಕ್ಕಾಗಿ , ಸ್ವಯಂ ಅಭಿವೃದ್ದಿಗಾಗಿಯೇ ಕಟ್ಟಿಕೊಂಡು ಅವಕಾಶವಾದಿತನದಿ ಬ್ಯಾನರ್ ಗಳನ್ನು ತೋರಿಸಿ ಮೂಲೆಗೆ ಮುದುಡಿಕೊಳ್ಳುವ ಇಂತಹ ಮನಸ್ಥಿತಿಗಳು ನಿಜಕ್ಕೂ ನೈತಿಕತೆ ಕಳೆದುಕೊಂಡಿರುತ್ತದೆ ಇಂತಿವುಗಳ ನಡುವೆಯೇ.. ಸಾತ್ವಿಕ ಮನಸಿನಿಂದ ಸೇವೆ ಸಲ್ಲಿಸಲು ಮುಂದಾಗಿರುವ ಸಂಘಟನೆಗಳು ಕೂಡ ಇವೆ ಇಂತಹ ಮೇರು ಸಾಲಿನಲ್ಲಿ ಶಿವಮೊಗ್ಗದ ಸಾಮಾನ್ಯ ಆಟೋಚಾಲಕರಾದ ಕರವೇ ಕಿರಣ್ ತಮ್ಮ ನಾಯಕತ್ವವನ್ನು ಗುರುತಿಸಿಕೊಂಡಿರುವುದು ಮಲೆನಾಡಿಗರಿಗದು ಹೆಮ್ಮೆಯ ಸಂಗತಿ ಎನ್ನುವುದು ಇಂದಿಗೂ ಶಾಸನವಾಗಿದೆ,

ಇನ್ನೂ ಬದುಕು, ಶಿಕ್ಷಣ, ವ್ಯಾಪಾರ, ಆರೋಗ್ಯಕೇಂದ್ರ, ಇನ್ನಿತರ ರಂಗಗಳ ಬದಲಾವಣೆಗೊಂಡಿರುವ ಕಠೋರಮಯ ಪರಿಸ್ಥಿತಿ, ಆತಂಕಕಾರಿ ವಾತಾವರಣದ ನಡುವೆ ಕೋರೊನಾ ಕದನ ನಂತರವೂ ಮಾನವೀಯ ಮನಸುಗಳು ಕೂಡ ಪ್ರತಿರೋಧ ಒಡ್ಡಿವೆ. ಎಲ್ಲಿಯವರೆಗೂ ಮಾನವೀಯ ಮೌಲ್ಯಗಳು ಮನುಷ್ಯ ಬದುಕಿನಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಯಾವುದೇ ರಕ್ಕಸ ನರ್ತನಗಳು ಸಾಧ್ಯವಿಲ್ಲ ಇದ್ದರೆ ತಾತ್ವಿಕ ಕಾಲದಿ ಮಾತ್ರವೇ ಆಗಿರುತ್ತದೆ ನಂತರ ಅದು ನಶಿಸಿ ಹೋಗುತ್ತದೆ ಎನ್ನುವುದು ಇತಿಹಾಸದ ಪುಟಗಳನ್ನು ನೆನಪು ಮಾಡುತ್ತದೆ. ಈ ನಡುವೆ ಶ್ಲೋಕವನ್ನು ಉಲ್ಲೇಖಿಸಿ, ದೂರದ ಊರಿನಲ್ಲಿದ್ದರೂ ಸಹ ಇಂತಹ ಸಾಮಾನ್ಯ ಆಟೋಚಾಲಕ ಕರವೇ ಕಿರಣ್ ರವರ ದಿಟ್ಟ ಹೋರಾಟ ಸೇವೆಗಳಿಗೆ ಸದಾ ಬೆಂಬಲಿತ ದನಿಯಾದವರಲ್ಲಿ ಮುಖ್ಯವಾಗಿ ಬೆಂಗಳೂರಿನ ಆನಂದಣ್ಣನವರ ಮಾರ್ಗದರ್ಶನವಿತ್ತು

ಇನ್ನೂ ಕರವೇ ಕಿರಣ್ ಇದೀಗ ಕರವೇ-ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಹೋರಾಟದ ನಗರಿ ಶಿವಮೊಗ್ಗದಲ್ಲಿ ವಿನೂತನ ಹೋರಾಟಗಳ ಕಟ್ಟಿರುವುದಲ್ಲದೆ ಸಾಮಾಜಿಕ ಸೇವೆ, ಕನ್ನಡದ ಕಾರ್ಯಕ್ರಮಗಳನ್ನು ಚಾಚು ತಪ್ಪದೆ ಮುಂದುವರೆಸಿಕೊಂಡು ಬಂದಿದ್ದಾರೆ, ಬಹುಷ್ಯಃ ಇಷ್ಟು ಸುಧೀರ್ಘವಾಗಿ ಕನ್ನಡದ ಹೋರಾಟ, ಸಾಮಾಜಿಕ ನ್ಯಾಯಕ್ಕಾಗಿ ದನಿ ಎತ್ತಿದ ಹೋರಾಟಗಾರರಲ್ಲಿ ಮೊದಲಿಗರು ಕರವೇ ಕಿರಣ್ ಎಂದರೆ ತಪ್ಪಾಗಲಾರದು ಇಂತಹವರಿಗೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗಳು ನೀಡಬೇಕಾಗಿದ್ದ ರಾಜ್ಯ ಸರ್ಕಾರಗಳು ರಿಟೈರ್ಡ್ ವ್ಯಕ್ತಿತ್ವದ ಪಂಕ್ತಿಗಳಿಗೆ ಹರಿದು ಹಂಚುತ್ತಿರುವುದು ಬಲು ದುರಂತದ ಸಂಗತಿಯಾಗಿದೆ ಎನ್ನುವುದು ನನ್ನಯ ಅಂಬೋಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I