Saturday, August 1, 2026
Homeಸೂರ್ಯಗಗನI ವೈದ್ಯರ ಸಲಹೆ ಇಲ್ಲದೆ ಸ್ವಯಂ ವೈದ್ಯ ಮಾಡಿಕೊಳ್ಳುವ ಅಭ್ಯಾಸ ಮನುಕುಲಕ್ಕೆ ಅಂಟಿದ ಶಾಪವಾಗಿದೆ I...

I ವೈದ್ಯರ ಸಲಹೆ ಇಲ್ಲದೆ ಸ್ವಯಂ ವೈದ್ಯ ಮಾಡಿಕೊಳ್ಳುವ ಅಭ್ಯಾಸ ಮನುಕುಲಕ್ಕೆ ಅಂಟಿದ ಶಾಪವಾಗಿದೆ I ಡಾ. ಅಮೃತ್ ಕಿಶನ್ ಉಪಾಧ್ಯಾಯ I

I ವೈದ್ಯರ ಸಲಹೆ ಇಲ್ಲದೆ ಸ್ವಯಂ ವೈದ್ಯ ಮಾಡಿಕೊಳ್ಳುವ ಅಭ್ಯಾಸ ಮನುಕುಲಕ್ಕೆ ಅಂಟಿದ ಶಾಪವಾಗಿದೆ I ಡಾ. ಅಮೃತ್ ಕಿಶನ್ ಉಪಾಧ್ಯಾಯ I

ಶಿವಮೊಗ್ಗ : ವೈದ್ಯರ ಸಲಹೆ ಇಲ್ಲದೆ ಸ್ವಯಂ ವೈದ್ಯ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುವುದು ಮನುಕುಲಕ್ಕೆ ಅಂಟಿದ ಕಂಟಕ ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರದ ಸೂಕ್ಷ್ಮ ಜೀವಾಣು ವಿಭಾಗದ ಮುಖ್ಯಸ್ಥ ಡಾ. ಅಮೃತ್ ಕಿಶನ್ ಉಪಾಧ್ಯಾಯ ಅಭಿಪ್ರಾಯಪಟ್ಟರು.
ಆಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಸಪ್ತಾಹ ಅಂಗವಾಗಿ ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರದ ಸೂಕ್ಷ್ಮ ಜೀವಾಣು ವಿಭಾಗ ಹಾಗೂ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಸಹಯೋಗ ದೊಂದಿಗೆ ಮ್ಯಾಕ್ಸ್ ಆಸ್ಪತ್ರೆಯಿಂದ ಗೋಪಿ ವೃತ್ತದವರೆಗೂ ಆಯೋಜಿಸಲಾಗಿದ್ದ ವಾಕ್ ಥಾನ್’ ನಲ್ಲಿ ಅವರು ಮಾತನಾಡಿದರು.

ವೈದ್ಯರ ಸಲಹೆ ಹಾಗೂ ಶಿಫಾರಸು ಇಲ್ಲದೆ ಸ್ವಯಂ ವೈದ್ಯ ಮಾಡಿಕೊಳ್ಳುವ ಅಭ್ಯಾಸ ಮನುಕುಲಕ್ಕೆ ಅಂಟಿದ ಶಾಪವಾಗಿದೆ. ಯಾರು ಸಹ ಇಂತಹ ಕೆಲಸ ಮಾಡಬಾರದು ಎಂದರು. ಯಾವ ಔಷಧಿಯನ್ನು ಯಾವ ಕೆಮಿಕಲ್ ಉಪಯೋಗಿಸಿ ತಯಾರಿಸಲಾಗುತ್ತದೆ ಎಂಬುದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಹೀಗಾಗಿ ತೆಗೆದುಕೊಳ್ಳುವ ಔಷಧಿಯಲ್ಲಿ ಯಾವ ಕೆಮಿಕಲ್ ಯಾವ ರೀತಿಯ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ ಇಂಟರ್ನೆಟ್ ನೋಡಿ, ಮೆಡಿಕಲ್ ಶಾಪ್ ಗಳಲ್ಲಿ ಕೇಳಿ ಮಾತ್ರೆ ಹಾಗೂ ಔಷಧಿ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದರು. ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರು ಶಿಫಾರಸು ಮಾಡುವ ಆಂಟಿ ಬಯೋಟಿಕ್ ಮಾತ್ರೆಯನ್ನು ಅವರು ಹೇಳಿದ ಪೂರ್ಣ ಕೋರ್ಸ್ ತೆಗೆದುಕೊಳ್ಳಬೇಕು. ಕೋರ್ಸ್ ಅನ್ನು ಅಪೂರ್ಣ ಮಾಡಿದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದರು.

ಸ್ವಯಂ ಆಗಿ ಆಂಟಿ ಬಯೋಟಿಕ್,ಗಳನ್ನು ತೆಗೆದುಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಗೋಪಿ ವೃತ್ತದವರೆಗೂ ವಾಕ್ ಥಾನ್ ಆಯೋಜಿಸಲಾಗಿತ್ತು. ಈ ಕುರಿತಂತೆ ವೈದ್ಯಕೀಯ ಕ್ಷೇತ್ರದಲ್ಲಿರುವವರು ಸಾಮಾಜಿಕ ಜಾಲತಾಣದಲ್ಲೂ ಸಹ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಅರಿವು ಮೂಡಿಸಲಾಯಿತು.ಈ ವರ್ಷದ Act Now: Product Our Present Secure Our Future ಎಂಬ ಈ ವರ್ಷದ ಘೋಷ ವಾಕ್ಯದ ಅಡಿಯಲ್ಲಿ ವಾಕ್ ಥಾನ್ ನಡೆಯಿತು.

ತಡಿಕೆಲ ಸುಬ್ಬಯ್ಯ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಎಸ್. ನಾಗೇಂದ್ರ, ಡಾ. ಲತಾ ನಾಗೇಂದ್ರ, ಡಾ. ಶ್ರೀನಿವಾಸ, ಡಾ. ವಿನಯ ಶ್ರೀನಿವಾಸ್, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಡೀನ್ ಡಾ. ವಿನಾಯಕ, ಪ್ರಾಂಶುಪಾಲರಾದ ಡಾ. ಸಿ. ಎಂ. ಸಿದ್ದಲಿಂಗಪ್ಪ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸತೀಶ್, ಡಾ. ರಾಕೇಶ್ ಬಿಸ್ಲಹಳ್ಳಿ, ಸುಬ್ಬಯ್ಯ ವೈದ್ಯಕೀಯ ಸಮೂಹ ಸಂಸ್ಥೆಗಳ ವಿಭಾಗ ಮುಖ್ಯಸ್ಥರು, ವೈದ್ಯಕೀಯ ಸಿಬ್ಬಂದಿ ವರ್ಗ, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I