ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಸುದ್ದಿ ಬಗೆಗಳ ಜೊತೆಗೆ I ಚೆಂದನವನದ ಸಿನಿಮಾ ಗೀಳು I
ಹೌದು ಹೀಗೊಂದು ಸಿನಿಮಾ ಗೀಳು ಹಚ್ಚಿಕೊಂಡಿದ್ದು ಮಗ ನಿಶಾಂತ್ ಎಸ್ ಗಾರಾ ನಿಂದ, ಅವ ನನ್ಮಗ ಎನ್ನೋ ಕಾರಣಕ್ಕೆ ಸಮರ್ಥನೀಯ ಸಾಲುಗಳಿಲ್ಲಿ ಉಲ್ಲೇಖಿಸಿಲ್ಲ, “ಕಲೆ” ಎಂಬುದು ಯಾರಿಗೆ, ಯಾವಾಗ..?! ಹೇಗೆ ಆಕರ್ಪಿತಗೊಳ್ಳುತ್ತದೆ ಗೊತ್ತಿಲ್ಲ, ಹೀಗೆ ಆಕರ್ಪಿತವಾದ “ಕಲೆ” ಗಳಲ್ಲಿ ಶ್ರದ್ದೆ, ಆಸಕ್ತಿ ಮೈದಳೆದರೆ ಅದೊಂದು ಪರಿಪೂರ್ಣ ಹಾದಿಯಲ್ಲಿ ಸಾಗುತ್ತಿದೆ ಎಂದು ಮನದಟ್ಡು ಮಾಡಿಕೊಂಡಿದ್ದು ಮಗ ನಿಶಾಂತನಿಂದಲೇ..!
ಇದೀಗ ಆತನಿಗೆ ಹದಿನೆಂಟು ವರುಷದ ಪ್ರಾಯ, LKG -UKG ನಿಂದಲೂ ವೇಷಭೂಷಣ ಸ್ಪರ್ಧೆ, ಮಾತು, ಪುಟಿದೇಳುವ ಕಲಾಸಕ್ತಿಗಳಿಂದಾಗಿ ನಿರಂತರ.. ಡಾನ್ಸ್ ತರಬೇತಿಗಾಗಿ ಅರುಣ್ ರಾಜ್ ಶೆಟ್ಟಿಯವರ “Step Holder Dance Studio” ಗರಡಿಯಲ್ಲಿ ತರಬೇತಿ ಪಡೆಯುತ್ತಿದ್ದಾನೆ, Pace movement class, ಗೆ ಹೋಗುತ್ತಿದ್ದಾನೆ, ಆಗಾಗ್ಗೆ ರೀಲ್ಸ್ ಮಾಡುವುದು, ಪೋಟೋ ಶೂಟ್ ಮಾಡಿಕೊಳ್ಳುವುದು, ಸಿನಿಮಾ ನಟರ ನಟನೆಗಳನ್ನು ಗಮನಿಸಿ ಮಾತಾಡುವುದು ಇದೀಗ ನಿತ್ಯದ ಹವ್ಯಾಸ ಆಗಿಬಿಟ್ಟಿದೆ,
ಹೀಗೆ ಆತನ ಈ ಪ್ರೋಪೈಲ್ ನೋಡಿ ಒಂದಿಷ್ಟು ಪ್ರೋಡಕ್ಷನ್ ಮ್ಯಾನೇಜ್ಮೆಂಟ್ ಆಹ್ವಾನಿಸಿದೆ, ಕಿರುಚಿತ್ರಗಳಲ್ಲಿಯು ನಟಿಸಿದ್ದಾನೆ, ಇಂತಿವುಗಳ ಹವ್ಯಾಸ ದಿಟ್ಟಿಸಿ ಎಂದಿಗೂ ನಿರುತ್ಸಾಹಕ್ಕೆ ತಳ್ಳದೆ ನಾವು ಕೂಡ ಪ್ರೋತ್ಸಾಹಿಸಿದ್ದೇವೆ, ಸ್ವಂತದ “ಸಿನಿಮಾ ಪ್ರೋಡಕ್ಷನ್ ಬ್ಯಾನರ್” ‘ಗಾರಾ ಫಿಲಮ್ಸ್‘ ಅಡಿಯಲ್ಲಿ ಸಿನಿಮಾ ನಿರ್ಮಾಣ, ಹಾಗೂ ಸುದ್ದಿ ಹಾಗೂ ಸಾಹಿತ್ಯದ ಹಾದಿಯಲ್ಲಿ ತಲ್ಲೀನತೆ ಹೊಂದಿದ್ದವನಿಗೆ ನನ್ನ ಮಗನ ಕಲಾ ಏಕಾಗ್ರತೆ ಸಿನಿಮಾ ಹಾದಿಗೂ ತಂದು ನಿಲ್ಲಿಸಿದೆ,
ನಾಲ್ಕು ಸಾಹಿತ್ಯ ಕೃತಿಗಳು ಬರೆದಿದ್ದ ನನಗೆ ಕಾದಂಬರಿ ಬರೆಯುವುದಕ್ಕೆ ಪ್ರೇರೆಪಿಸಿದೆ, ಈ ಮಾತ್ರದಿ, “ಮಾರ್ನಾಮಿಬೈಲು” ಹಾಗೂ “ಮೂಕರ್ಜಿ” ಎನ್ನುವ ಶೀರ್ಷಿಕೆಯಲ್ಲಿ ವಾಸ್ತವ ಘಟನೆಗಳಾಧರಿತ ಕತೆಯನ್ನು ಬರೆಯುತ್ತಿದ್ದೇನೆ, ಮುಂದಿನ ಮಾಹೇ ಒಳಗೆ ಇವೆರೆಡು ಕೃತಿಗಳು ಬಿಡುಗಡೆಯಾಗುತ್ತದೆ, ಇದೇ ಕತೆ ಆಧಾರಿತ ಸಿನಿಮಾ ಮಾಡುವುದಕ್ಕೆ ನಮ್ಮದೇ ಚಿತ್ರನಿರ್ಮಾಣ ಸಂಸ್ಥೆಯು ಮುಂದಾಗುತ್ತದೆ.
ಒಟ್ಟಿನಲ್ಲಿ ಮಗನ ಓದಿನೊಂದಿಗೆ ಆತನ ಕಲಾಸಕ್ತಿ, ಬೆಂಗಳೂರಿನೊಂದಿಗೆ ಬದುಕು ರೂಪಿಸಿದೆ, ಇದೀಗ ಕಾನೂನು ವಿದ್ಯಾರ್ಥಿಯಾಗಿ, ಕಲಾವಿದನಾಗಿ ಬೆಳ್ಳಿತೆರೆಯಲ್ಲಿ ದರ್ಶಿಸಿಕೊಳ್ಳುವ ಬಹದೊಡ್ಡ ಹೆಜ್ಜೆಗೆ ಕರುನಾಡಿನ ಕನ್ನಡಿಗರ ಹಾರೈಕೆ ಇರಲಿ,
ಕಲಾಲೋಕ ವಿಬಿನ್ನತೆಯ ಲೋಕ, ಅತಿರಂಜನೀಯವಾದ ಸ್ಟೇಜು, ಆದರೆ ಮಗನಿಗಾಗಿ ಸಿನಿಮಾಗೆ ಬಂದೇ ಅನ್ನುವುದಕ್ಕಿಂತ ಓರ್ವ ಪತ್ರಕರ್ತನಾಗಿ ಅನೇಕ ಕಲಾವಿದರನ್ನು ಕುರಿತಾಗಿ ಲೇಖನಗಳ ಬರೆದಿದ್ದೇನೆ, ಬೆಂಬಲಿಸಿದ್ದೇನೆ, ಇದು ಪ್ರತಿ ಕನ್ನಡಿಗನ ಕರ್ತವ್ಯ ಎಂದೇ ಭಾವಿಸಿದ್ದೇನೆ, “ನಮ್ಮ ನೆಲ ನಮ್ಮ ಚಿತ್ರ” ಎನ್ನುವ ಘೋಷಣೆಯು ಕೂಡ ಈ ನೆಲದವನದ್ದಾಗಿರಬೇಕು ಅಲ್ಲವೇ..!
ಈ ಮುಂದಿನ 2026 March, ನಲ್ಲಿ ನಮ್ಮ ಚಿತ್ರನಿರ್ಮಾಣ ಸಂಸ್ಥೆಯಿಂದ “ಮೊದಲ ಪೋಸ್ಟರ್” ಬಿಡುಗಡೆಗೊಳಿಸಿ ಸಿನಿಮಾ ನಿರ್ಮಾಣದ ಮುಂದಿನ ಕೆಲಸಗಳಿಗೆ ತ್ವರಿತವಾಗಿ ಮುಂದಡಿಯಾಗುತ್ತೇವೆ ಎನ್ನುವುದು ಸದ್ಯದ ಅಂಬೋಣ,



