Sunday, August 2, 2026
Homeಸೂರ್ಯಗಗನ I ಪ್ರಪುಲ್ಲಚೆಂದ್ರರವರ ಹುಟ್ಟು ಹಬ್ಬ I ಸಾಮಾಜಿಕ ಕಾರ್ಯಕ್ರಮ ಆಯೋಜನೆ I

 I ಪ್ರಪುಲ್ಲಚೆಂದ್ರರವರ ಹುಟ್ಟು ಹಬ್ಬ I ಸಾಮಾಜಿಕ ಕಾರ್ಯಕ್ರಮ ಆಯೋಜನೆ I

 I ಪ್ರಪುಲ್ಲಚೆಂದ್ರರವರ ಹುಟ್ಟು ಹಬ್ಬ I ಸಾಮಾಜಿಕ ಕಾರ್ಯಕ್ರಮ ಆಯೋಜನೆ I

ಶಿವಮೊಗ್ಗ : ನಿರಂತರವಾದ ಹೋರಾಟದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವಂತಹ ಹೋರಾಟಗಾರರು ಎಂದೆ ಪ್ರಸಿದ್ಧಿ ಪಡೆಯುತ್ತಿರುವ ಪ್ರಫುಲ್ಲ ಚಂದ್ರ ಎಚ್ ರವರ 48ನೇ ವರ್ಷದ ಹುಟ್ಟುಹಬ್ಬವನ್ನು ಈ ದಿನ ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಸಾಗರ ರಸ್ತೆ ಎಪಿಎಂಸಿ ಮುಂಭಾಗದಲ್ಲಿರುವ ದೇವಸ್ಥಾನದಲ್ಲಿ ಪೂಜೆ ಹಾಗೂ ಅಭಿಷೇಕದೊಂದಿಗೆ ಸಾರ್ವಜನಿಕರಿಗೆ ಭಕ್ತರಿಗೆ ಹಾಗೂ ಆಟೋ ಚಾಲಕರಿಗೆ ಪ್ರಸಾದ ಪುಳಿಯೋಗರೆ ಹಾಗೂ ಕೇಸರಿಬಾತ್ ಹಂಚುವ ಮೂಲಕ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಾಗೂ ಸಂಜೆ ಅದೇ ಸನ್ನಿಧಿಯಲ್ಲಿ ಗೋಪಾಳದಲ್ಲಿರುವ ರಂಗನಾಥ್ ತಂಡದವರಿಂದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಹಾಗೂ ಸುಮಾರು ವರ್ಷದಿಂದ ತಮ್ಮ ಹುಟ್ಟುಹಬ್ಬವನ್ನು ಶ್ರೀ ಶಾರದ ದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಅಂಧ (ಕುರುಡು) ಮಕ್ಕಳಿಗೆ ಹಾಗೂ ಶಿಕ್ಷಕ ವೃಂದದವರಿಗೆ ಮಧ್ಯಾಹ್ನದ ಊಟ ಹಾಗೂ ಸಿಹಿ ಹಂಚುವ ಮೂಲಕ ಆಚರಣೆ ಮಾಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಾಲ್ತೇಶ್. ಎನ್ ಹಾಗೂ ಹೋರಾಟಗಾರರಾದ ಜೀವನ್. ಡಿ ಹಾಗೂ ಪ್ರಮುಖರಾದ ನಾಗರಾಜ್. ವಸಂತಣ್ಣ ಮಂಜುನಾಥ ಬಸ್ ಮಾಲೀಕರು. ಮಂಜಣ್ಣ ಹೋಟೆಲ್ ಮಾಲೀಕರು ಹಾಗು ಮುಖಂಡರುಗಳಾದ ಚಂದ್ರಪ್ಪ. ಪ್ರಕಾಶ್. ಭಾಷಾ. ಆಕಾಶ್. ಪ್ರೇಮ್ ಕುಮಾರ್. ಪರಶುರಾಮ್, HH.ಮಂಜುನಾಥ್ ಗೌಡ, ರಿಜ್ವಾನ್, ಹೊನ್ನಪ್ಪ, ಕುಮಾರ್ ಚೆಂದನಕೆರೆ ಇನ್ನು ಹಲವಾರು ಭಕ್ತಾದಿಗಳು ಹಾಗೂ ಆಟೋ ಚಾಲಕರು ಈ ಒಂದು ಶುಭ ಕಾರ್ಯದಲ್ಲಿ ಪಾಲ್ಗೊಂಡು ಶಿವಮೊಗ್ಗ ಜಿಲ್ಲಾ ಪತ್ರಿಕಾ ಒಕ್ಕೂಟದ ಜಿಲ್ಲಾಧ್ಯಕ್ಷರು ಹಾಗೂ ಜೀವನ್ ನಾಗರಾಜ್ ರವರು ಪ್ರಫುಲ್ಲ ಚಂದ್ರ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪ್ರಫುಲ್ಲಚಂದ್ರ ರವರು ಮಲೆನಾಡು ಆರ್ ಎಂ ಸಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರು. ಹಿಂದೂ ಜನಜಾಗೃತಿ ವೇದಿಕೆ ಸದಸ್ಯರು. ಹಿಂದೂ ಸಮನ್ವಯ ಸಮಿತಿ ಸದಸ್ಯರು. ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಇವರು ಸಕ್ರಿಯವಾಗಿ ಕೆಲ ಹೋರಾಟಗಳಲ್ಲಿ ಭಾಗವಹಿಸಿ ನಗರದಲ್ಲಿಡೆ ಚಿರಪರಿಚಿತರಾಗಿದ್ದು ಇವರ ಈ ಸೇವೆ ಹೀಗೆ ಸದಾ ಮುಂದುವರೆಯಲಿ ಎಂದು ಸನ್ಮಾನಿಸಿ ಹಾರೈಸಲಾಯಿತು..

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I