Sunday, August 2, 2026
Homeಸೂರ್ಯಗಗನI ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರ I ಶಾಂತಾ ಶೆಟ್ಟಿ I

I ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರ I ಶಾಂತಾ ಶೆಟ್ಟಿ I

I ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರ I ಶಾಂತಾ ಶೆಟ್ಟಿ I

ಶಿವಮೊಗ್ಗ:  ಸಾಹಿತ್ಯ ಕ್ಷೇತ್ರಗಳಲ್ಲಿ ರಾಷ್ಟ್ರಕವಿ ಕುವೆಂಪು ರವರ  ಕೊಡುಗೆ ಅವಿಸ್ಮರಣೀಯ ಎಂದು  ಕರ್ನಾಟಕ ಸುಗಮ ಸಂಗೀತ ಪರಿಷತ್ತು ,  ಚಿರಂತನ ಯೋಗ ಹಾಗೂ ಸಂಗೀತ ಟ್ರಸ್ಟಿನ ಅಧ್ಯಕ್ಷೆ ಶಾಂತ ಎಸ್ ಶೆಟ್ಟಿ  ಹೇಳಿದರು.

ಅವರು  ಕುವೆಂಪುರಂಗ ಮಂದಿರದ ಆವರಣದಲ್ಲಿ ರಾಷ್ಟ್ರಕವಿ ರಸ ಋಷಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ಹಾಗೂ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಗೀತಾ ಹಾಗೂ ಕವಿತೆ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುವೆಂಪು ಅವರ ಕ್ರಾಂತಿಕಾರಿ ಗೀತೆಗಳು ಹಾಗೂ  ನಾಡಗೀತೆ ಇಂದಿಗೂ ಸಹ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಯಶಸ್ವಿಯಾಗಿವೆ ಹಾಗೆ ಅವರ ಒಂದೊಂದು ಗೀತೆಗಳು ಸಹ ಇಂದು ಅತ್ಯಂತ ಪ್ರಸ್ತುತವಾಗಿದೆ ಎಂದರು. ಹಾಗೆಯೇ  ಈ ನಾಡು ಕಂಡ ಒಬ್ಬ ಶ್ರೇಷ್ಠ ಗಾಯಕ ಸಿ ಅಶ್ವಥ್ ಅವರ ಜನ್ಮದಿನವೂ ಕೂಡ. ಅವರ ಕನ್ನಡವೇ ಸತ್ಯ ಹಾಗೂ ಭಾವಗೀತೆ ಅನೇಕ ಗೀತೆಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿವೆ ಎಂದರು.

ಕನ್ನಡ ಸಾರಸ್ವತ  ಲೋಕದ ಮೇರು ಸಾಹಿತಿ ಹಾಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲಗಟ್ಟಿನ ಚಿಂತನೆಗಳನ್ನು ಕಡೆಗಣಿಸದ ವಿಶ್ವ ಮಾನವ ಎಂದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಧೀಮಂತ ಸಾಹಿತಿ ,ಕನ್ನಡದ ಎರಡನೇ ರಾಷ್ಟ್ರಕವಿ, ಪಂಪ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಇಂತಹ ಮೇರು ವ್ಯಕ್ತಿತ್ವ ಇರುವ ಕುವೆಂಪು ಅವರು ನಮ್ಮ ಜಿಲ್ಲೆಯವರೇ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತದೆ, ಕುವೆಂಪು ಅವರ ಗೀತೆಗಳು ಒಂದೊಂದು ಸಾಲುಗಳು ಸಹ ತುಂಬಾ ಅರ್ಥಪೂರ್ಣ  ಎಂದರು.

ಕುವೆಂಪು ಅವರು ಕೇವಲ ಕವಿ ಸಾಹಿತಿಯಾಗಿ ಅಷ್ಟೇ ಅಲ್ಲದೆ ಸಾಮಾಜಿಕ ಧಾರ್ಮಿಕ ರಾಜಕೀಯ ಗುರು ಆಗಿ ಪರಿಸರದ ಪ್ರೇಮಿಯಾಗಿ ಮಾರ್ಗದರ್ಶಕರು ಚಿಂತಕರು ಆಗಿ ಸಾಹಿತ್ಯ ಕೃಷಿ ನಡೆಸಿದವರು ಅವರು ಹಾಕಿಕೊಟ್ಟ ಮಂತ್ರ ಮಾಂಗಲ್ಯ ಇಂದಿಗೂ ಸಹ ಜನಪ್ರಿಯತೆ ಪಡೆಯುವುದರ ಜೊತೆಗೆ ಪ್ರಸ್ತುತವಾಗಿದೆ
ಹಾಗೆ ಅವರ ತತ್ವ ಸಿದ್ಧಾಂತ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದರು.
ಇದೇ ಸಂದರ್ಭದಲ್ಲಿ  ಕವಿ ಹಾಗೂ ಪರಿಷತ್ತಿನ ಸಂಚಾರಕರಾದ ಶೋಭಾ ಸತೀಶ್ ಅವರು ತಾವೇ ರಚಿಸಿದ ಕುವೆಂಪು ಕವನವನ್ನು ವಾಚಿಸಿದರು.

ಈ ಸಂದರ್ಭದಲ್ಲಿ  ಸದಸ್ಯರು ಪದಾಧಿಕಾರಿಗಳು ಕುವೆಂಪು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು. ಕಾರ್ಯಕ್ರಮದಲ್ಲಿ  ಬಿಂದು ವಿಜಯಕುಮಾರ್., ದಾಕ್ಷಾಯಿಣಿ, ರಾಜಕುಮಾರ್ ,
ರಮಾ ಸುಬ್ರಹ್ಮಣ್ಯ, ನಳಿನಾಕ್ಷಿ  ರುದ್ರಪ್ಪ ಚೀಲೂರ್. ಸುಶೀಲ ಷಣ್ಮುಗಂ, ಲೀಲಾವತಿ, ಮಂಜು ನಾಯಕ್, ಹಾಗೂ ಗಾಯಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I