Saturday, August 1, 2026
Homeಸೂರ್ಯಗಗನI ಕನ್ನಡ ಭಾಷೆಯನ್ನು ವ್ಯವಸ್ತಿತವಾಗಿ ಅಳಿಸುವ ಪಿತೂರಿ I ಪಾಲಿಕೆ ಮಾಜಿ ಸದಸ್ಯ ಈ.ವಿಶ್ವಾಸ್ I

I ಕನ್ನಡ ಭಾಷೆಯನ್ನು ವ್ಯವಸ್ತಿತವಾಗಿ ಅಳಿಸುವ ಪಿತೂರಿ I ಪಾಲಿಕೆ ಮಾಜಿ ಸದಸ್ಯ ಈ.ವಿಶ್ವಾಸ್ I

I ಕನ್ನಡ ಭಾಷೆಯನ್ನು ವ್ಯವಸ್ತಿತವಾಗಿ ಅಳಿಸುವ ಪಿತೂರಿ I ಪಾಲಿಕೆ ಮಾಜಿ ಸದಸ್ಯ ಈ.ವಿಶ್ವಾಸ್ I

ಶಿವಮೊಗ್ಗ: ಕಮ್ಯುನಿಸ್ಟ್‌ ಕೇರಳ ಸರಕಾರದಿಂದ ಭಾಷಾ ಹೇರಿಕೆ ಸಂವಿಧಾನ ವಿರೋಧಿ ಮತ್ತು ಕನ್ನಡ ಭಾಷೆಯನ್ನು ವ್ಯವಸ್ತಿತವಾಗಿ ಅಳಿಸುವ ಪಿತೂರಿಯಾಗಿದೆ, ಮತ್ತು ಗಡಿನಾಡಿನಲ್ಲಿ ಇರುವ ಕನ್ನಡಿಗರನ್ನು ಭಾಷೆ ಹೆರಿಕೆ ಮೂಲಕ ಒಕ್ಕಲೆಬ್ಬಿಸುವ ವ್ಯವಸ್ಥಿತ ಷಡ್ಯಂತ್ರವಾಗಿದೆ ಕೇರಳ ಸರಕಾರ ಬಲವಂತವಾಗಿ ಮಲೆಯಾಳಂ ಭಾಷೆಯನ್ನು ನಮ್ಮ ಕಾಸರಗೋಡು ಕನ್ನಡಿಗರ ಮೇಲೆ ಹೇರಲು ಹೊರಟಿದೆ. ರಾಜಕೀಯ ಕಾರಣಕ್ಕಾಗಿ ಇಂತಹ ನಿರ್ಧಾರ ಮಾಡಿರುವ ಕೇರಳ ಸರಕಾರ ಇದನ್ನು ಕೂಡಲೆ ನಿಲ್ಲಿಸಬೇಕು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಈ.ವಿಶ್ವಾಸ್ ತಿಳಿಸಿದ್ದಾರೆ.

ಭಾರತವು ಬಹುಭಾಷಾ ಸಂಸ್ಕೃತಿಯ ದೇಶವಾಗಿದ್ದು ನೆರೆಯ ಕೇರಳ ಜಾರಿಗೊಳಿಸಲು ಹೊರಟಿರುವ ಮಾಲೆಯಾಳಂ ಭಾಷ ವೀದೇಯಕ-2025ಕ್ಕೆ ಕರ್ನಾಟಕ ಜನರ ತೀವ್ರ ಅಸಮಧಾನವಿದ್ದು ಈ ಕುರಿತು ಕರ್ನಾಟಕದ ಸರಕಾರವು ಈ ವೀದೇಯಕವನ್ನು ಹಿಂಪಡೆಯುವಂತೆ ಕೇರಳ ಸರಕಾರಕ್ಕೆ ಒತ್ತಾಯಿಸುವಂತೆ ಕನ್ನಡಿಗರ ಪರವಾಗಿ ಆಗ್ರಹಿಸುತ್ತೇವೆ.

ಕೇರಳ ರಾಜ್ಯದ ಸರಕಾರಿ ಹಾಗೂ ಖಾಸಗಿ ಶಾಲೆಗಳ ಜೋತೆ ಕನ್ನಡ ಶಾಲೆಗಳಲ್ಲೂ ಕೂಡ ಮಲೆಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಭೋಧಿಸಲು ಹೊರಟಿರುವ ಕೇರಳಿದ ನಡೆಗೆ ಧಿಕ್ಕಾರವಿರಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ 70 ರಷ್ಟು ವಿದ್ಯಾರ್ಥಿಗಳು ಕನ್ನಡ ಭಾಷೆ ಮತ್ತು ಮಾಧ್ಯಮದಲ್ಲಿಯೇ ಕಲಿಯಲು ಬಯಸುತ್ತಾರೆ ಆ ಜಿಲ್ಲೆಯ ಆಡಳಿತಾತಕವಾಗಿ ಕೇರಳಕ್ಕೆ ಸೇರಿದ್ದರೂ ಕನ್ನಡದ ಗಡಿಭಾಗವನ್ನು ಹಂಚಿಕೊಂಡಿರುವುದರಿಂದ ಅಲ್ಲಿಯ ಜನರು ಭಾವನಾತ್ಮಕವಾಗಿ ಕರ್ನಾಟಕದ ಕನ್ನಡಿಗರೊಂದಿಗೆ ಸೇರಿದ್ದಾರೆ. ಅವರ ಹಿತ ಕಾಪಾಡುವುದು ನಮ್ಮ ಕರ್ನಾಟಕ ಸರಕಾರದ ಕರ್ತವ್ಯವಾಗಿದೆ.

ಕೇರಳದ ಕಮ್ಯುನಿಸ್ಟ್ ಸರಕಾರ ತಂದಿರುವ ಈ ಭಾಷಾ ವಿಧೇಯಕದಿಂದ ಭಾಷಿಗರ ನಡುವೆ ಭಿನ್ನಾಭಿಪ್ರಾಯ ಹಾಗೂ ಘರ್ಷಣೆಗಳಿಗೂ ಅವಕಾಶ ಮಾಡಿಕೊಟ್ಟಂತಾಗಿದೆ ಆದ್ದರಿಂದ ಸಮಸ್ತ ಕನ್ನಡಿಗರ ಪರವಾಗಿ ಈ ಭಾಷಾ ವೀದೇಯಕವನ್ನು ತಕ್ಷಣಕ್ಕೆ ಹಿಂಪಡೆಯುವಂತೆ ಖಂಡನೆಯೊಂದಿಗೆ ಅಗ್ರಹಿಸುತ್ತೇನೆ ಹಾಗೂ ಕರ್ನಾಟಕ ಸರ್ಕಾರ ಹಾಗೂ ರಾಜ್ಯದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಬೇದ ಮರೆತು ಈ ವೀದೇಯಕವನ್ನು ಖಂಡಿಸುವ ಮೂಲಕ ಎಲ್ಲರು ಕೂಡ ಕನ್ನಡಿಗರ ಹಿತ ಕಾಪಾಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I