I ಕನ್ನಡಿಗರ ರಕ್ಷಿಸಿ I ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ I ಮನವಿ I
ಶಿವಮೊಗ್ಗ: ಮಧ್ಯಪ್ರಚ್ಯಾ ಯುದ್ಧದ ಪರಿಣಾಮ ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯದ ಲಕ್ಷಾಂತರ ಜನರು ತಮ್ಮ ಕುಟುಂಬ ನಿರ್ವಹಣೆಗಾಗಿ ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಆದರೆ ಅಮೇರಿಕ, ಇಸ್ರೇಲ್, ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್ ಬೆಹರೈನ್, ಇರಾಕ್, ಜೋರ್ಡನ್, ಮೊದಲಾದ ಮಧ್ಯಪ್ರಚ್ಯಾ ದೇಶಗಳು ಈ ಯುದ್ಧದ ಭೀಕರ ಪರಿಣಾಮ ಎದುರಿಸುತ್ತಿದ್ದು, ಉದ್ಯೋಗ ಅರಸಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರು ಜೀವದ ಸುರಕ್ಷತೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಾಗೂ ಕರ್ನಾಟಕದಲ್ಲಿರುವ ಇವರ ಕುಟುಂಬಗಳು ತಮ್ಮವರ ಭದ್ರತೆಬಗ್ಗೆ, ಆತಂಕದ ಪರಿಸ್ಥಿತಿಯಲ್ಲಿದ್ದಾರೆ.ಹಾಗಾಗಿ ತಾವುಗಳು ತಕ್ಷಣವೇ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ಸುರಕ್ಷತೆಯನ್ನು ನೀಡಿ ಸುರಕ್ಷಿತವಾಗಿ ತಾಯ್ತಾಡಿಗೆ ಕರೆತರಬೇಕಾಗಿ ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎಸ್.ಕಿರಣ್ ಕುಮಾರ್, ಉಪಾಧ್ಯಕ್ಷ ಸೈಯದ್ ಮುಜಿಬುಲ್ಲಾ, ಮಹಮ್ಮದ್ ಶಫಿ, ಪ್ರವೀಣ್ ಕುಮಾರ್, ಮಂಜುನಾಥ, ಗಣೇಶ ಸೇರಿದಂತೆ ಕಾರ್ಯಕರ್ತರು ಇದ್ದರು.


