Sunday, August 2, 2026
HomeಅಂಕಣI ಅದ್ಯಾಕೆ ಕೆ.ಎಸ್ ಈಶ್ವರಪ್ಪ I ಬಿಜೆಪಿಗೆ ಬೇಡವಾದ್ರೂ I ಗೊತ್ತಿದಿಯಾ..?! I

I ಅದ್ಯಾಕೆ ಕೆ.ಎಸ್ ಈಶ್ವರಪ್ಪ I ಬಿಜೆಪಿಗೆ ಬೇಡವಾದ್ರೂ I ಗೊತ್ತಿದಿಯಾ..?! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಅದ್ಯಾಕೆ ಕೆ.ಎಸ್ ಈಶ್ವರಪ್ಪ I ಬಿಜೆಪಿಗೆ ಬೇಡವಾದ್ರೂ I ಗೊತ್ತಿದಿಯಾ..?! I

ಶಿವಮೊಗ್ಗದ ಬಿಜೆಪಿ ಎಂದೊಡೆ ಅಲ್ಲಿ ಕೆ.ಎಸ್ ಈಶ್ವರಪ್ಪ ಅಲ್ಲದೆ ಮತ್ತಾರ ಹೆಸರು ಬಿತ್ತುವುದಕ್ಕೆ ಸಾಧ್ಯವೆ ಇಲ್ಲದಷ್ಟು ರಾಜಕೀಯ ಕೃಷಿ ಕೈಂಕರ್ಯ ಮಾಡಿದವರು ಇಂತಿವರು, ಬಿಜೆಪಿಯ ಅಜೆಂಡಾವಿಡಿದು ರಾಜಕೀಯ ಹೋರಾಟಕ್ಕಿಳಿದು ಹಿಂದೂಳಿದ ವರ್ಗದ ವಲಯದಲ್ಲಿ ಅಗ್ರಮುಖಿಯಾಗಿ ದರ್ಶಿಸಿಕೊಂಡು ಒಟ್ಟು ಜನಮಾನಸದಲ್ಲಿ ತಮ್ಮದೊಂದು ಎಂದಿಗೂ ಮರೆಯಲಾಗದ ಭರವಸೆಯ ನಾಯಕತ್ವ ಇಂದಿಗೂ ಅಳಿಸಲು ಆಗಲಿಲ್ಲ ಎಂದರೆ ಕೆ.ಎಸ್ ಈಶ್ವರಪ್ಪ ಎಂದಿಗೂ ಒಂದೇ ಜಾತಿ ಸಮುದಾಯಕ್ಕೆ ಮೀಸಲಾಗಿರದೆ ಹಿಂದುತ್ವ ಅಜೆಂಡಾದ ಪ್ರತಿಪಾದಕರಾಗಿ ದನಿಯಾಗಿದ್ದವರು, ಅವರ ವಾಕ್‌ಚಾತುರ್ಯ, ಸಂಘಟಿತ ಹೆಜ್ಜೆಗಳು, ಜನರೊಂದಿಗಿನ ಬೆಸೆದ ಅವಿನಾಭಾವ ಸಾಂಗತ್ಯಗಳಿಂದಾಗಿಯೇ ನೋಡು ನೋಡುತ್ತಿದ್ದಂತೆ, ಇಡೀ ರಾಜ್ಯದ ಗಮನ ಸೆಳೆದಿದ್ದರು, ಎರಡು ದಶಕಗಳ ಕಾಲ ಶಿವಮೊಗ್ಗದ ಶಾಸಕರಾಗಿ ಒಂದಷ್ಟು ಬದಲಾವಣೆಯ ಬೀಸಿದ್ದವರು ರಾಜ್ಯ ಬಿಜೆಪಿ ಸಂಘಟನೆಗೆ ಬಲವರ್ಧನೆಯ ಛಾಪು ಹೊತ್ತಿದ್ದರು, ಶಿವಮೊಗ್ಗದ ಕೆ.ಎಸ್ ಈಶ್ವರಪ್ಪನವರು ರಾಜ್ಯ ಬಿಜೆಪಿಯ ಜೀವಾಳು ಎಂದೇ ಬಿಂಬಿತವಾಗಿದ್ದರು ಇಂದ್ಯಾಕೆ ರಾಜ್ಯ ಬಿಜೆಪಿಗೆ ಕೆ.ಎಸ್ ಈಶ್ವರಪ್ಪನವರು ಬೇಡವಾಗಿದ್ದಾರೆ, ಎನ್ನುವುದು ಪ್ರಶ್ನೆಯಾಗಿದೆ.
ಹೌದು ಅವರಿಗಿರುವ ರಾಜಕೀಯ ಸಾಮರ್ಥ್ಯದಿಂದಲೇ ಉತ್ತಮ ಕಲಾಪದ ಪಟುವಾಗಿ, ವಿಪಕ್ಷಗಳ ಎಲ್ಲಾ ಕಾರ್ಯತಂತ್ರಗಳನ್ನು ಹಿಮ್ಮೆಟ್ಟಿಸಿ ರಾಜ್ಯ ಬಿಜೆಪಿಯ ಸಂಘಟನೆಯನ್ನು ಕಾಪಿಟ್ಟುಕೊಂಡು ವಿಹಿಂಪ ಹಾಗೂ ಬಿಜೆಪಿಯ ನಡುವಿನ ಸೇತುವೆ ನಿರ್ಮಿಸಿದ್ದ ಓರ್ವ ಆರೆಸ್ಸಿಸ್ಸಿನ ಕಟ್ಟಾಳು ಕೆ.ಎಸ್ ಈಶ್ವರಪ್ಪನವರು ಇಂದ್ಯಾಕೆ ಬಿಜೆಪಿಗೆ ಬೇಡವಾದರು..?

ಒಂದಷ್ಟು ಮುನಿಸು, ಸುಪುತ್ರ ಕೆ.ಇ ಕಾಂತೇಶನಿಗೆ ಟಿಕೆಟ್ ಬಯಸಿದ್ದರು, ಅದಕ್ಕೊಪ್ಪದ ಕಾರಣಕ್ಕೆ ಹಾಗೂ ಸಚಿವ ಸ್ಥಾನ-ಮಾನಗಳಿಂದ ದೂರು ಉಳಿಸಿದ್ದರು ಎನ್ನುವ ಬೆಳವಣಿಗೆಯಿಂದ ಬೇಸತ್ತು, ಬಿಜೆಪಿಯಿಂದ ಅನಿವಾರ್ಯವಾಗಿ ನಿರ್ಗಮಿಸಿದ್ದರು, ಈ ರೀತಿ ನಿರ್ಗಮಿಸಿದ್ದರು ಕೆ.ಎಸ್ ಈಶ್ವರಪ್ಪ ಹಿಂದುತ್ವದ ಅಜೆಂಡಾದಿಂದ ದೂರವಿರದೆ ರಾಷ್ಟ್ರ ಭಕ್ತರ ಬಳಗ ಕಟ್ಟಿಕೊಂಡು ರಾಜ್ಯದಲ್ಲಿ ದನಿಯಾಗಿದ್ದಾರೆ, ಇಂತಹುದೇ ಸಂದರ್ಭದಲ್ಲಿ ಬಿ.ಎಸ್ ಯಡಿಯೂರಪ್ಪನವರು ಪಕ್ಷ ತೊರೆದ ಸಂದರ್ಭದಲ್ಲಿ ಹೊಸ ಪಕ್ಷ ಕೆಜೆಪಿ ಕಟ್ಟಿದ್ದರು, ಇಲ್ಲಿ ವ್ಯತ್ಯಾಸ ಏನೆಂದರೆ ಬಿಎಸ್‌ವೈ ಬಿಜೆಪಿಯ ಅಜೆಂಡವಾದ ಹಿಂದುತ್ವದ ಭಾವುಟವನ್ನು ಮರೆತಿದ್ದರು, ಕೇವಲ ರಾಜಕೀಯ ಸ್ಥಾನ-ಮಾನಗಳಿಗೆ ಅಣಿಯಾಗಿದ್ದರು, ಹೀಗೆ ನೋಡಿದರೆ ಕೆ.ಎಸ್ ಈಶ್ವರಪ್ಪನವರು ಇದೀಗಲೂ ಅಜೆಂಡಾದ ತಳಹದಿಯಲ್ಲಿಯೇ ಇದ್ದು ಯಾರು ಕೇಳಲಾಗದ ಒತ್ತಾಯವನ್ನು ಅವರೇನು ಮಾಡಿಲ್ಲವಾಗಿದೆ,
ಬಿ.ಎಸ್ ಯಡಿಯೂರಪ್ಪನವರ ಮಕ್ಕಳು ಓರ್ವ ಬಿಜೆಪಿಯ ಸಂಸದರಾಗಿಲ್ಲವೇ..? ಮತ್ತೋರ್ವರು ಶಾಸಕರಾಗಿಲ್ಲವೇ..? ಇದೀಗ ಮೂರನೆಯ ತಲೆಮಾರು ಬಿ.ವೈ ರಾಘವೇಂದ್ರರವರ ಪುತ್ರನಿಗೆ ಶಿವಮೊಗ್ಗದ ಡಿ-ಲಿಮಿಟ್ಸ್ ಬದಲಾವಣೆಯ ದಿಸೆಯಲ್ಲಿ ಶಿವಮೊಗ್ಗದ ಉತ್ತರ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಎಲ್ಲಾ ಪೂರ್ವ ತಾಲೀಮುಗಳು ನಡೆಸುತ್ತಿಲ್ಲವೇ..? ಇದಕ್ಕೆ ಪೂರಕವಾಗಿ ಮೊನ್ನೆಯ ಟಗರು ಕಾಳಗದ ವೇದಿಕೆಯಲ್ಲಿ ಮೊದಲನೇ ಭಾರಿಗೆ ಜನಸ್ತೋಮವನ್ನು ಕುರಿತು ಮಾತಾಡಿಸಲ್ಲವೇ..?! ಇದು ಮೊದಲ ಭಾಷಣ ಎಂದು ಅವರೇ ಬಹಿರಂಗಪಡಿಸಿ ಮೂರನೆಯ ತಲೆಮಾರಿಗೂ ಈ ಕ್ಷೇತ್ರವನ್ನು ಹತೋಟಿಯಲ್ಲಿಟ್ಟುಕೊಳ್ಳುವ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ.. ಇಂತಹ ರಾಜಕೀಯ ವಿದ್ಯಮಾನಗಳಲ್ಲಿ ಬಿಜೆಪಿಗೆ ಕೆ,ಎಸ್ ಈಶ್ವರಪ್ಪನವರು ಪುತ್ರ ಕೆ.ಇ ಕಾಂತೇಶನಿಗೆ ನಗರ ವಿಧಾನಸಭಾ ಕ್ಷೇತ್ರ ಕೇಳುವುದರಲ್ಲಿ ನೈತಿಕತೆ ಇದೆ, ಬಲವಿಲ್ಲದ ಸಂದರ್ಭದಲ್ಲಿ ರಾಜಕೀಯ ಬಲ ತುಂಬಿದ ಕೆ.ಎಸ್ ಈಶ್ವರಪ್ಪನವರ ಬೇಡಿಕೆ ಅಕ್ಷರಶಃ ಒಪ್ಪುವಂತಹದ್ದಾಗಿದೆ, ಮುಂದೆಯು ಅವರಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುವುದಕ್ಕೆ ಅಡ್ಡಿ ಮಾಡದೆ ಮುಕ್ತವಾಗಿ ಆಹ್ವಾನಿಸಿ, ಕೆ.ಇ ಕಾಂತೇಶನಿಗೆ ಬಿಜೆಪಿಯ ಅಸೆಂಬ್ಲಿ ಅಕಾಂಕ್ಷಿಯಾಗಿಸಲಿ ಹಾಗೂ ಈ ಮೂಲಕ ಹಿಂದೂಳಿದ ವರ್ಗದ ಯುವ ನಾಯಕನನ್ನು ಗುರುತಿಸಿವಂತಾಗಲಿ ಎನ್ನುವುದಾಗಿದೆ.

ಇದಾಗದಿದ್ದೊಡೆ ಹಿಂದೂ ಎನ್ನುವ ಕಾರಣಕ್ಕೆ ಅನ್ಯಧರ್ಮಿಯರ ಮೇಲೆ ಧ್ವೇಷಕ್ಕೆ, ಅಸೂಯೇಗಳಿಗೆ ದಾರಿಗೊಡಬಾರದು ಹಾಗೇಯೇ ಮುಸ್ಲಿಂ ಕ್ರಿಶ್ಚಿಯನ್ ಧರ್ಮಗಳೂ ಕೂಡ ಸಹಬಾಳ್ವೆಗೆ ಪ್ರಯತ್ನಿಸಬೇಕು. ಯಾವ ಧರ್ಮದವರಾದರು ಸರಿ ಕಿಡಿಗೇಡಿತನ ರಾಷ್ಟ್ರದ್ರೋಹ ಬಗೆದರೆ ಅಂತಹವರ ಮೇಲೆ ಯಾವುದೇ ಮುಲಾಜಿಲ್ಲದೆ ಕಾನೂನಿನ ಬತ್ತಳಿಕೆಯನ್ನು ಪ್ರಯೋಗಿಸುವುದು ಆರೋಗ್ಯಕರ ಸಂಗತಿ ಆದರೆ ಇಲ್ಲಿ ಆದದ್ದೇ ಬೇರೆ. ಧಾರ್ಮಿಕ ಉಳಿವು ಎನ್ನುವ ಪ್ರಸ್ತುತ ರಾಜಕೀಯ ಹಿಡಿತದ ನಾಯಕರಿಗೂ ಮೂಲ ಆರೆಸ್ಸಿಸ್ಸಿಗರಿಗೂ ಭಾರಿ ಅಂತರವಿದೆ ,ಮೂಲ ಅರೆಸ್ಸಿಸ್ಸಿಗರು ದೇಶ ಭಕ್ತಿಯ ಸಾರವನ್ನು ಹೊಂದಿದ್ದರು ಆದರೆ ರಾಜ್ಯದ ಬಹುತೇಕ ಬಿಜೆಪಿ ನಾಯಕರು ತಮ್ಮದೇ ನಾಟಕೀಯ ಹಿಂದುತ್ವದಡಿಯಲ್ಲಿ ರಾಜ್ಯ ಬಾಜಪದ ಭ್ರಷ್ಠ ಪಿಪಾಸುಗಳನ್ನು, ಹನಿಟ್ರ್ಯಾಪ್‌ಗಳಿಗೆ ಒಳಗಾಗುತ್ತಿರುವವರನ್ನು ಫೋಷಿಸಿಸುವುದರಲ್ಲೇ ಹೇಣಗಾಡುತ್ತಿದೆ. ಇದೇ ಅಸಲಿಯತ್ತಿನ ಪ್ರಸ್ತಕ ರಾಜಕೀಯ ಬೆಳವಣಿಗೆಯ ಪರಮಾವಧಿಯಾಗಿದೆ. ಹೀಗಾಗಿಯೇ ಬಜರಂಗದಳ ಎನ್ನುವ ಮೂಲ ಬೇರು ತೊರೆದು ಪರ್ಯಾಯ ಹಿಂದುತ್ವದ ರಣಕಹಳೆ ಉದಿರುವ ಪ್ರಮೋದ್ ಮುತಾಲಿಕ್‌ರ ಮೇಲೆ ಹಲವಾರು ಪ್ರಕರಣಗಳ ಸುರಿಮಳೆಗೈದು. ಖಾಸಗಿ ಟಿವಿ ವಾಹಿನಿಯ ಡಿಬೇಟಿನ ಮೂಲಕ ಕೃಪಾ ಫೋಷಿತ ಮಸಿಬಳಿದರೂ ಪ್ರಮೋದ್ ಮುತಾಲಿಕ್‌ರ ಪ್ರಚಂಡ ಹಿಂದುತ್ವ ರಾಜ್ಯದ ನೆಲದಲ್ಲಿ ಬಿತ್ತುತ್ತಲೇ ಇದೆ,

ಒಂದೆಡೆ ಮುತಾಲಿಕರನ್ನು ಆಗಾಗ್ಗೆ ಕಟ್ಟಿ ಹಾಕುವ ಯತ್ನದಲ್ಲಿ ವಿಫಲವಾಗಿರುವ ನಾಟಕೀಯ ಹಿಂದೂತ್ವದ ಬಿಜೆಪಿಯ ಬಹುತೇಕರು ತಮ್ಮದೇ ಅಸ್ತಿತ್ವವನ್ನು ರಾಜ್ಯದಲ್ಲಿ ಉಳಿಸಿಕೊಳ್ಳಲು ಇಂದಿಗೂ ಮುಲು- ಮುಲು ಎನ್ನುತ್ತಿರುವುದು ಸಾಕ್ಷ್ಯಕರಿಸಿದೆ, ಅಂದು ರಾಜಕೀಯ ಲೇಪನ ಕೊಟ್ಟು ಈ ಮೂಲಕ ಹಿಂದೂತ್ವದ ರಣಕಹಳೆ ಊದಲು ನಿರ್ಧರಿಸಿದ್ದ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕರ ಇಚ್ಚೆಯಂತೆ ಬಿಜೆಪಿ ಬರಮಾಡಿಕೊಂಡಿದ್ದ ಬೆನ್ನಲ್ಲೆ ರಾಜ್ಯ ಬಿಜೆಪಿ ವಲಯ ಅವರನ್ನು ಬಿಜೆಪಿಯಿಂದ ಹೊರಕಳುಹಿಸಿತ್ತು, ಇದರಿಂದ ರಾಜ್ಯದ ಮುಕ್ಕಾಲು ಭಾಗದ ಯುವ ಪಡೆಗಳನ್ನು ರೊಚ್ಚಿಗೆಬ್ಬಿಸುವಂತೆ ಮಾಡಿತ್ತು,

ಇದೀಗ ಸರದಿ ಬಸವನಗೌಡ ಪಾಟೀಲ್ ಯತ್ನಾಳರದ್ದಾಗಿದೆ, ಹೌದು ಬಿಜೆಪಿಯಲ್ಲಿ ಕೆ.ಎಸ್ ಈಶ್ವರಪ್ಪನವರಂತೆ ಹಿಂದುತ್ವ ಅಜೆಂಡಾ ಕುರಿತಾಗಿ ಪ್ರತಿಪಾದಿಸುತ್ತಿದ್ದ ಯತ್ನಾಳ್‌ರವರನ್ನು ಕೇಂದ್ರ ಶಿಸ್ತು ಪಾಲನಾ ಸಮಿತಿ ಬಿಜೆಪಿ ಕಛೇರಿಯಿಂದ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಪಕ್ಷ ಸಂಘಟನೆಗೆ ಹಿನ್ನಡೆ ಆಗಬಹುದೇ..? ಅಥವಾ ಬಸವನಗೌಡ ಪಾಟೀಲ್ ಯತ್ನಾಳ್ ಅಂತಹ ವಿವಾದಿತ ಹೇಳಿಕೆಗಳನ್ನು ನೀಡುವ ನಾಯಕರು ಬಿಜೆಪಿಗೆ ಅಗತ್ಯವಿಲ್ಲ ಎಂದು ಬಾಗಿಲು ಹಾಕಿಕೊಳ್ಳುವ ಯತ್ನದಡಿ ಎಡವಟ್ಟು ನಿರ್ಧಾರ ಮಾಡಿಕೊಂಡರೇ ಎನ್ನುವಂತಹ ಚರ್ಚೆಗೆ ಇದೀಗ ರಾಜ್ಯ ರಾಜಕೀಯ ವಲಯ ಬಂದು ಬಿಟ್ಟಿದೆ,

ಉತ್ತರ ಕರ್ನಾಟಕದಲ್ಲಿ ಹಿಂದುತ್ವದ ತಳಹದಿಯಲ್ಲಿ ಕೇಸರಿ ನಾಯಕನಾಗಿಯೇ ಗುರುತಿಸಿಕೊಂಡಿದ್ದ ಸರದಿ ಬಸವನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿ.ಎಸ್ ಯಡಿಯೂರಪ್ಪನವರಿಗೂ ಹಾಗೂ ಬಿ.ವೈ ವಿಜಯೇಂದ್ರರವರಿಗೂ ತುಸು ನೆಮ್ಮದಿ ಸಿಕ್ಕಿದಂತಾಗಿರುವುದು ದಿಟವಾಗಿದೆ. ಏಕೆಂದರೆ ಕೇಂದ್ರ ಶಿಸ್ತು ಸಮಿತಿಯ ಎರಡು ಭಾರಿ ನೀಡಿದ ನೋಟಿಸ್‌ಗಳಿಗೂ ತಲೆಗೆಡಿಸಿಕೊಳ್ಳದೆ ಭಾಜಪ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರರವರನ್ನು ಬೊಟ್ಟು ಮಾಡಿ ತೋರಿಸಿಯೇ ವಿರುದ್ದವಾದ ಹೇಳಿಕೆಗಳನ್ನು ನೀಡುವುದು ಪಕ್ಷದ ನಿಯಮಗಳನ್ನು ಉಲ್ಲಂಘಿಸಿ ಪ್ರತ್ಯೇಕತೆಯ ಸಂಘಟನೆ, ನಿರ್ಧಾರಗಳಿಗೆ ಕರೆಕೊಡುವುದು ಇದು ನಿರಂತರವಾಗಿತ್ತು ಎನ್ನುವ ಹಿನ್ನಲೆಯಲ್ಲಿ ಬಿಜೆಪಿ ಈ ನಿರ್ಧಾರ ತಳೆದು ಮೂರನೆಯ ನೋಟಿಸ್‌ನಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್‌ರವರ ಸಂಗತಿಯಲ್ಲಿ ರಾಜ್ಯ ಬಿಜೆಪಿ ಮಹಾಮನೆಯ ಬಾಗಿಲು ಮುಚ್ಚುವಂತೆ ಮಾಡಿದೆ,

ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ರಾಜ್ಯ ಸರ್ಕಾರವೇ ಪದಚ್ಯುತಿಗೊಳ್ಳುವ ಸಾಧ್ಯತೆಗಳ ನಡುವೆ ಹೀಗೊಂದು ಬೆಳವಣಿಗೆಯಿಂದ ರಾಜ್ಯ ಬಿಜೆಪಿ ಸಂಘಟನೆಗೆ ಅತೀವ ಹಿನ್ನಡೆಯಾಗುವುದಂತು ಖಾತ್ರಿಯಾಗಿದೆ, ಇನ್ನೊಂದೆಡೆ ರಾಜ್ಯದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕೆ.ಎಸ್ ಈಶ್ವರಪ್ಪ ಸಂಘಪರಿವಾರದ ಮುಖ್ಯ ಮಜಲು ಆಗಿದ್ದರು, ಆದರೆ ಸುಪುತ್ರನಿಗೆ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಹಾಗೂ ಇದೇ ಬಿವೈ ವಿಜಯೇಂದ್ರನ ವಿರುದ್ದ ಸೆಟೆದು ನಿಂತ ಮಾತ್ರದಿ, ಬಿಜೆಪಿಯಿಂದ ದೂರ ಉಳಿಯಬೇಕಾದ ಸಾಂದರ್ಭಿಕತೆಗಳು ಎದುರಾಗಿದ್ದವು, ಒಲ್ಲದ ಮನಸಿನಿಂದಲೇ ರಾಷ್ಟ್ರ ಭಕ್ತರ ಬಳಗ ಎಂದು ಮತ್ತೊಂದು ಜಗಲಿ ಸೃಷ್ಠಿಸಿದ ಕೆ.ಎಸ್ ಈಶ್ವರಪ್ಪನವರ ಅಂಗಳದಲ್ಲಿ ಉಡುಪಿಯ ರಘುಪತಿ ಭಟ್ ಕೂಡ ಜತೆಯಾಗಿದ್ದು ಇತಿಹಾಸ, ಹೀಗೆ ಒಬ್ಬೊಬ್ಬರಾಗಿ ಹಿಂದುತ್ವದ ನಾಯಕರು ಖಾಲಿಯಾಗಿ ಪತನಗೊಳ್ಳುತ್ತಿರುವ ಬಿಜೆಪಿನಲ್ಲಿ ಇದೀಗ ಉಳಿದಿರುವುದು ಬ್ಯಾಲೆನ್ಸ್ ಹಿಂದು ಅಜೆಂಡಾವೇ ಎನ್ನುವಂತ ಮಾತು ಕೇಳಿ ಬಂದಿದೆ,

ಇಂತಿವ ಕಾರಣಗಳಿಂದಾಗಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಈ ಸಂದರ್ಭದಲ್ಲಿ ಜರುಗಿದರು ಬಿಜೆಪಿಗೆ ಭಾರಿ ನಷ್ಠವಾಗುವುದರಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿದೆ, ಬಿಜೆಪಿಗೆ ಕರೆಯಿಸಿಕೊಂಡು ನಂತರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದ ಸ್ಥಾನದಿಂದಲೇ ವಜಾಗೊಳಿಸಲಾಗಿದೆ ಎಂದು ಅಪಮಾನಗೊಳಿಸಿದ ಪರಿಣಾಮದಿಂದ ಇಂದಿಗೂ ನೋವಿನಲ್ಲಿ ಇರುವ ಹಿಂದುತ್ವದ ನಾಯಕ ಪ್ರಮೋದ್ ಮುತಾಲಿಕ್ ಹಾಗೂ ಇದೀಗ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ಬಸವನಗೌಡ ಪಾಟೀಲ್ ಯತ್ನಾಳ್, ಉಡುಪಿಯ ರಘುಪತಿ ಭಟ್ ಸೇರಿದಂತೆ ಮತ್ತಲವರೊಂದಿಗೆ ಕೆ.ಎಸ್ ಈಶ್ವರಪ್ಪ ಪರ್ಯಾಯ ರಾಷ್ಟ್ರ ಭಕ್ತರ ಬಳಗದಿಂದಲೇ ರಾಜಕೀಯ ಕಣಕ್ಕೆ ಬಿರುಸಿನಿಂದಲೇ ಇಳಿದರೆ ರಾಜ್ಯದಲ್ಲಿ ಸಂಪೂರ್ಣವಾಗಿ ಭಾಜಪ ಸಂಘಟನೆ ನೆಲ ಕಚ್ಚುವುದರಲ್ಲಿ ಅನುಮಾನಗಳಿಲ್ಲವಾಗಿದೆ, ಇದು ಅನ್ಯ ಪಕ್ಷಗಳಿಗೆ ರಾಜಕೀಯ ಲಾಭವೂ ಆಗುವುದರಲ್ಲಿ ದೂರ ತಳ್ಳುವಂತಿಲ್ಲವಾಗಿದೆ, ಇಂತಹದೊಂದು ಬಲು ಗಂಭೀರತೆಯ ವಿದ್ಯಮಾನಗಳು ಭಾಜಪಕ್ಕೆ ದೊಡ್ಡದೊಂದು ಸವಾಲನ್ನು ತಂದೊಡ್ಡದೆ ಇರಲಾರದು,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I