Monday, August 3, 2026
Homeಸೂರ್ಯಗಗನI ಮಾ. 20 ಕ್ಕೆ ತೀರ್ಥಹಳ್ಳಿಯಲ್ಲಿ I ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ I

I ಮಾ. 20 ಕ್ಕೆ ತೀರ್ಥಹಳ್ಳಿಯಲ್ಲಿ I ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ I

I ಮಾ. ೨೦ ಕ್ಕೆ ತೀರ್ಥಹಳ್ಳಿಯಲ್ಲಿ I ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ I

ತೀರ್ಥಹಳ್ಳಿ : ಗ್ಯಾಸ್ ಸಿಲಿಂಡರ್ ಸಮಸ್ಯೆ ಏನಾಗ್ತಿದೆ ಇದೆ ರೀತಿ ಕಾಂಗ್ರೆಸ್ ಆಡಳಿತದಲ್ಲಿ ಆಗಿದ್ದರೆ ಬಿಜೆಪಿ ಭಾರತ್ ಬಂದ್ ಕರೆಯುತ್ತಿದ್ದರು. ಭಾರತವನ್ನು ಭಾರತಾಂಬೆ ಅಂತ ಕರೆಯುತ್ತೀವಿ ಇಸ್ರೇಲ್ ನ ತಂದೆ ಎಂದು ಕರೆಯೋಕೆ ಆಗುತ್ತಾ? ಇಸ್ರೇಲ್ ದೇಶವನ್ನು ಫಾದರ್ ಆಫ್ ಲ್ಯಾಂಡ್ ಎಂದು ನಮ್ಮ ಪ್ರಧಾನಿ ಹೇಳುತ್ತಾರೆ, ಇವರಿಗೆ ಏನು ಹೇಳಬೇಕು ಗೊತ್ತಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು,

ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ದೇಶವನ್ನು ಆಡಳಿತ ಮಾಡುತ್ತಿರುವುದು ಮೋದಿಯೋ? ಅಥವಾ ಟ್ರಂಪ್? ಗೊತ್ತಾಗುತ್ತಿಲ್ಲ.. ಮೂರು ತಿಂಗಳಿಗೆ ಆಗುವಷ್ಟು ಸ್ಟಾಕ್ ನಮ್ಮ ಬಳಿ ಆಯಿಲ್ ಇದೆ ಎಂದು ಹೇಳಿದ್ದರು. ಈಗ ಅದಕ್ಕೆ ಹಣವನ್ನು ಜಾಸ್ತಿ ಮಾಡಿದ್ದಾರೆ. ಇವರು ಬಿಸಿನೆಸ್ ಮಾಡ್ತಾ ಇದ್ದಾರಾ? ಇರುವ ಸ್ಟಾಕ್ ಗೆ ಜನರ ಮೇಲೆ ಹೊರೆ ಹಾಕುತ್ತಿರುವುದು ಸರಿಯೇ? ಇನ್ನು ಎಂಟು ದಿನ ಯುದ್ಧ ನಡೆದರೆ ಹಲವರು ಮನೆ ಸೇರಬೇಕಾಗುತ್ತದೆ ಎಂದರು,

ಜ್ಞಾನೇಂದ್ರ ಅಸೆಂಬ್ಲಿಯಲ್ಲಿ ಹೀರೊ, ಇಲ್ಲಿ ಮರಳು ಹೊಡೆಯುತ್ತಿದ್ದರು ಕೇಳುವುದಿಲ್ಲ ಆದರೆ ಅಲ್ಲಿ ಜ್ಞಾನೇಂದ್ರ ಮಾತನಾಡುವುದು ನೋಡಿದರೆ ಇವರಷ್ಟು ಪ್ರಾಮಾಣಿಕರು ಯಾರು ಇಲ್ಲ ಎಂದು ತಿಳಿಯಬೇಕು.. ಜ್ಞಾನೇಂದ್ರ ಅವರು ಒಳ್ಳೆಯ ವ್ಯಾಪಾರಸ್ಥ.. ಅಡಿಕೆ ವ್ಯಾಪಾರ, ಸೇರಿ ಹಲವು ವ್ಯಾಪಾರ ಮಾಡಿದ್ದಾರೆ.. ನಾನು ಅಸೆಂಬ್ಲಿಯಲ್ಲಿ ಮೊದಲ ಬಾರಿ ಹೋದಾಗ ಇವರ ಕಾರು ನೋಡಿ ಒಳ್ಳೆ ಸಂಬಳ ಎಂದು ಕೊಂಡಿದ್ದೆ ಆದರೆ ಅಲ್ಲಿ ಸಿಕ್ಕಿದ್ದು ೨೧ ಸಾವಿರ.. ಇವರಿಗೆ ಅಷ್ಟೊಂದು ದುಡ್ಡು ಹೇಗೆ ಬಂತು ಅದನ್ನು ಹೇಳಬೇಕು ಎಂದರು,

ದ್ವೇಷ ಮಾಡಲು ಒಂದು ಮಿತಿ ಇರಬೇಕು.. ಧರ್ಮೇಶ್ ಅವರು ಚುನಾವಣೆ ನಿಲ್ತಾರೆ ಎನ್ನುವ ಸುದ್ದಿ ಬಂತು. ಆಗ ಅವರನ್ನು ಮಟ್ಟ ಹಾಕಬೇಕು ಎಂದು ಅಲ್ಲಿಗೆ ಹೋಗಿ ಪ್ರತಿಭಟನೆ ಮಾಡಿದರು.. ಇವರ ಮನೆ ಹತ್ತಿರ ಕೊಲೆ ನಡೆದರು ಏನು ಮಾಡಿಲ್ಲ.. ಆಗ ಗೃಹಸಚಿವರಾಗಿದ್ದರು.. ಇವರಿಗೆ ಚುನಾವಣೆ ಗೆಲ್ಲುವುದು, ಹಣ ಮಾಡುವುದು ಬಿಟ್ಟರೆ ಜನರಿಗಾಗಿ ಕೆಲಸ ಮಾಡಬೇಕು ಎಂಬುದು ಇಲ್ಲ.. ಜನರ ದುಡ್ಡಿನಲ್ಲಿ ಬದುಕಿದ ವ್ಯಕ್ತಿ ಎಂದರೆ ಅದು ಜ್ಞಾನೇಂದ್ರ ಮಾತ್ರ.. ಆದರೆ ಜನರಿಗೆ ಅವರು ಏನು ಮಾಡಿದ್ದಾರೆ? ತಿಳಿಸಲಿ ಎಂದರು,

ಜ್ಞಾನೇಂದ್ರ ಅವರು ಸುಳ್ಳು ಹೇಳುವುದು ಕಡಿಮೆ ಮಾಡಬೇಕು, ಅವರು ಇರುವ ಮೂರು ಅಡಿಯನ್ನು ಐವತ್ತಾರು ಅಡಿಯಷ್ಟು ಮಾಡಿಕೊಳ್ಳುವುದು ಸರಿಯಲ್ಲ, ರಾಮೇಶ್ವರ ದೇವರ ರಥ ಮಾಡುವಾಗ ಜ್ಞಾನೇಂದ್ರ ಇರಲಿಲ್ವಾ? ನನಗೆ ಮಾತ್ರ ದೇವರಾ? ರಥ ಮಾಡದಿದ್ದರೆ ಕಾಂಗ್ರೆಸ್ ಮೇಲೆ ಹಾಕಬಹುದು ಎಂದು ಅಂದುಕೊಂಡಿದ್ದರು ಎನಿಸುತ್ತದೆ. ರಾಮೇಶ್ವರ ದೇವಸ್ಥಾನಕ್ಕೆ ಜ್ಞಾನೇಂದ್ರ ಮಾಡಿದ್ದೇನು? ಈಗಾಗಲೇ ಮಾರಿಕಾಂಬಾ ದೇವಸ್ಥಾನ ಬಿಜೆಪಿ ಕಚೇರಿ ಆಗಿದೆ, ಮ್ಯಾಮ್ಕೋಸ್ ಬಿಜೆಪಿ ಕಚೇರಿ ಆಗಿದೆ. ಇದಕ್ಕೆಲ್ಲಾ ಜ್ಞಾನೇಂದ್ರ ಅಧ್ಯಕ್ಷ.. ಈಗ ರಾಮೇಶ್ವರ ದೇವಸ್ಥಾನ ಕೂಡ ಬಿಜೆಪಿ ಕಚೇರಿ ಮಾಡಿಕೊಳ್ಳಬೇಕು ಎಂದು ಕೊಂಡಿದ್ದಾರೆ. ದೇಶಕ್ಕೆ ಮೋದಿ ಹೇಗೆ ಅಪಶಕುನನೋ ಹಾಗೆ ತೀರ್ಥಹಳ್ಳಿಗೆ ಜ್ಞಾನೇಂದ್ರ ಅಪಶಕುನ ಎಂದು ವಾಗ್ದಾಳಿ ನಡೆಸಿದರು,

  ಕೇಂದ್ರದ ಬಿಜೆಪಿ ಹಾಗೂ ತೀರ್ಥಹಳ್ಳಿ ಬಿಜೆಪಿಯ ಕೆಲವು ಸಮಸ್ಯೆಗಳ ವಿರುದ್ಧವಾಗಿ ಮಾ. ೨೦ ಕ್ಕೆ ತೀರ್ಥಹಳ್ಳಿಯಲ್ಲಿ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಕೆಸ್ತೂರು ಮಂಜುನಾಥ್, ರಾಘವೇಂದ್ರ ಶೆಟ್ಟಿ, ಆದರ್ಶ ಹುಂಚದಕಟ್ಟೆ, ಅಮರನಾಥ್ ಶೆಟ್ಟಿ, ಪೂರ್ಣೇಶ್ ಕೆಳಕೆರೆ, ಅಶ್ವಲ್ ಗೌಡ, ಶ್ರೇಯಸ್, ಮೈತ್ರಿ, ಗೀತಾ ರಮೇಶ್, ಶಬನಮ್, ಸುಶೀಲ ಶೆಟ್ಟಿ, ಗೀತಾ ರಾಘವೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I