Monday, August 3, 2026
Homeಸೂರ್ಯಗಗನI ಸತ್ತ ಮೇಲೆ ನೀಡುವ ಸೌಲಭ್ಯಗಳನ್ನು ಬದುಕಿದ್ದಾಗಲೇ ನೀಡಿ I  ಪತ್ರಿಕಾ ವಿತರಕರ ಒಕ್ಕೂಟ I

I ಸತ್ತ ಮೇಲೆ ನೀಡುವ ಸೌಲಭ್ಯಗಳನ್ನು ಬದುಕಿದ್ದಾಗಲೇ ನೀಡಿ I  ಪತ್ರಿಕಾ ವಿತರಕರ ಒಕ್ಕೂಟ I

I ಸತ್ತ ಮೇಲೆ ನೀಡುವ ಸೌಲಭ್ಯಗಳನ್ನು ಬದುಕಿದ್ದಾಗಲೇ ನೀಡಿ I  ಪತ್ರಿಕಾ ವಿತರಕರ ಒಕ್ಕೂಟ I

ಶಿವಮೊಗ್ಗ: ಪತ್ರಿಕಾ ವಿತರಕರಿಗೆ ಸತ್ತ ಮೇಲೆ ಅಪಘಾತ ವಿಮೆ ನೀಡುವ ಬದಲು ಇದ್ದಾಗ ಆರೋಗ್ಯ ಪರಿಹಾರ ಅಥವಾ ವಿಮೆಗಳನ್ನು ನೀಡಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ ಆಗ್ರಹಿಸಿತು.

ಒಕ್ಕೂಟದ ಅಧ್ಯಕ್ಷ ಮಾಲತೇಶ್ ಮಾತನಾಡಿ ಪ್ರತಿನಿತ್ಯ ಬೆಳಗಿನ ಜಾವ ಎಲ್ಲರೂ ಏಳುವ ಮುಂಚೆ ನಾವು ಸಮಾಜ ಮತ್ತು ಸರ್ಕಾರ, ರಾಜಕೀಯ ಗಣ್ಯರುಗಳ ಹಾಗೂ ರಾಜ್ಯ, ದೇಶ,ವಿದೇಶದ ಸುದ್ದಿಗಳನ್ನು ಹೊತ್ತು ತಂದು ಮನೆ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ ನಮ್ಮ ಜೀವನ ಶೋಚನೀಯವಾಗಿದೆ. ಅದೇ ರೀತಿ ನಮ್ಮ ರಾಜ್ಯಾಧ್ಯಕ್ಷ ಶಂಭುಲಿಂಗ ರವರಿಗೆ ಜಿ. ಬಿ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಕೂಡಲೆ ಸರ್ಕಾರ ಇತ್ತ ಪರಿಹಾರ ನೀಡಬೇಕು ಎಂದರು.

ಪತ್ರಿಕಾ ವಿತರಕ ಸಂಘದ ಗೌರವಾಧ್ಯಕ್ಷ ಹುಲಿಗಿ ಕೃಷ್ಣ ಮಾತನಾಡಿ, ಕನಿಷ್ಠ ಕಾರ್ಮಿಕ ಇಲಾಖೆ ಸೌಲಭ್ಯನೂ ಸಹ ನಮಗೆ ದೊರೆಯದೆ, ಅನ್ಯಾಯವಾಗಿದ್ದು ಎಲ್ಲಾ ಪತ್ರಿಕ ವಿತರಿಕರಿಗೂ ಆರೋಗ್ಯ ವಿಮೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ನೆರವಿನ ರೀತಿಯಲ್ಲಿ ಹೊಸ ಚಿಂತನೆ ಮಾಡಿ ಪತ್ರಿಕ ವಿತರಕರ ಜೀವನ ಸ್ಪೂರ್ತಿಯಾಗಿ ಎಂದರು.

ಜಯ ಕರ್ನಾಟಕ ಜನಪರ ವೇದಿಕೆ ಶಿಕಾರಿಪುರ ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ ಮಾತನಾಡಿ, ಪತ್ರಿಕಾ ವಿತರಕರ ಜೀವನ ಬಹಳಷ್ಟು ಕಷ್ಟದಲ್ಲಿದ್ದು ಸರ್ಕಾರ ವಿಶೇಷವಾದ ಅನುದಾನ ಮತ್ತು ಸೌಲಭ್ಯಗಳನ್ನು ನೀಡುವ ಮುಖಾಂತರ ಇಡೀ ದೇಶಕ್ಕೆ ಮಾದರಿಯಾಗಿ ಸಮಾಜದ ಹಾಗೂಹೋಗುಗಳ ವಿಷಯ ಮತ್ತು ಸುದ್ದಿಯನ್ನು ತಲುಪಿಸುವ ವಿತರಕರ ಬದುಕು ಕಟ್ಟಿಕೊಳ್ಳಲು ಹೊಸ ಕಾನೂನು ಜಾರಿಗೆ ತಂದ ಸಮಾಜಕ್ಕೆ ಸ್ಪೂರ್ತಿಯಾಗಿ ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ನಜೀರ್ ಅಹ್ಮದ್, ಪದಾಧಿಕಾರಿಗಳಾದ ಪರಶುರಾಮ್ ರಾವ್, ಮಲ್ಲಿಕಾರ್ಜುನ್ ಭದ್ರಾವತಿ , ಪಾರ್ಥಿಬನ್, ರಾಮು ಜಿ, ಚಂದ್ರಶೇಖರ್, ಪ್ರತಾಪ್, ಶರತ್, ಧನಂಜಯ್, ಅಜೀ ಉಲ್ಲಾ, ಪ್ರಾಣೇಶ್, ಸಂಗಮೇಶ್ವರ್, ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಕಾರ್ಯದರ್ಶಿ ಇಮ್ರಾನ್, ಕರವೇ ಜನಮನ ರಾಜ್ಯ ಸಂಘಟನೆ ಪದಾಧಿಕಾರಿಗಳು, ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I