Sunday, August 2, 2026
HomeಅಂಕಣI ಸೌತ್ ಇಂಡಿಯಾದಲ್ಲೂ ಇದೆ I ಲಾರೆನ್ಸ್ ಬಿಷ್ಣೋಯ್ I ನೆರಳು.?! I

I ಸೌತ್ ಇಂಡಿಯಾದಲ್ಲೂ ಇದೆ I ಲಾರೆನ್ಸ್ ಬಿಷ್ಣೋಯ್ I ನೆರಳು.?! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಸೌತ್ ಇಂಡಿಯಾದಲ್ಲೂ ಇದೆ I ಲಾರೆನ್ಸ್ ಬಿಷ್ಣೋಯ್ I ನೆರಳು.?! I

ಲಾರೆನ್ಸ್ ಬಿಷ್ಣೋಯ್ ಎಂಬುವ ಹೆಸರು ಇದೀಗ ಭಾರದತಲ್ಲಿ ಮಾತ್ರವಲ್ಲದೆ. ಇಡೀ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಕೇವಲ ೩೩ ವರ್ಷದ ಪ್ರಾಯದವನೀತ ದೂರ ದೇಶದ ಡೆನ್ಮಾರ್ಕ್, ಯುಎಇ, ಕೆನಡಾ, ಬ್ರಿಟನ್ ಇನ್ನೂ ಮುಂತಾದ ದೇಶಗಳಲ್ಲಿಯು ಹರಡಿಕೊಂಡಿದ್ದಾನೆ, ಪಾಕಿಸ್ಥಾನದಲ್ಲಿರುವ ಭಾರತದ ವಿರೋಧಿ ಭಯೋತ್ಪಾದಕರಿಗೂ ಬೆದರಿಕೆಯಿಟ್ಟಿರುವ ಲಾರೆನ್ಸ್ ಬಿಷ್ಣೋಯ್ ಓದುವ ಆಸು-ಪಾಸಿನಲ್ಲಿಯೇ ಬಲಪಂಥೀಯ ವಾದಗಳನ್ನು ಮೇಳೈಸಿಕೊಂಡು ಭಾರತದಲ್ಲಿರುವ ಮಂದಗಾಮಿಗಳ ಮೇಲೆ ನಿಗಾ ಮಡಗಿದ್ದು, ಈ ನೆಲದ ಪರಂಪರೆ, ಧಾರ್ಮಿಕತೆ ವಿರುದ್ದ ಚಟುವಟಕೆ ಮಾಡುವವರಿಗೆ ಹಾಗೂ ಸಮಾಜವಿದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದಕ್ಕಾಗಿ ತನ್ನ ಬಳಿ ಸಾವಿರಕ್ಕೂ ಹೆಚ್ಚು ತರಬೇತಿ ಹೊಂದಿದ ಶಾರ್ಪ್‌ಶೂಟರ್‍ಸ್‌ಗಳಿದ್ದಾರೆ, ಎನ್ನುವ ನಿಖರ ಮಾಹಿತಿಗಳನ್ನು ಗುಜರಾತಿನ ಸಬರಮತಿ ಜೈಲಿನಿಂದಲೇ ರವಾನಿಸಿ ಹಿಂದೂ ಟೆರರ್ ಎಂದೇ ಬಿಂಬಿತವಾಗಿದ್ದಾನೆ,

ಅಸಲಿಗೆ ಯಾವಾಗ ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಹತ್ಯೆ, ಮುಂಬಯಿ ಪೊಲಿಟಿಕಲ್‌ನಲ್ಲಿದ್ದ ಬಾಬಾ ಸಿದ್ದಕಿ ಹತ್ಯೆಯ ಹೊಣೆ ಹೊತ್ತಿದ್ದಾಗಲೇ ಈತನೋರ್ವ ಡೇಂಜರಸ್ ಎಂದು ರಾಷ್ಟ್ರೀಯ ಗುಪ್ತದಳದವರು ಗೊತ್ತು ಮಾಡಿಕೊಂಡಿದ್ದು, ಈ ನಡುವೆ ಬಿಷ್ಣೋಯ್ ಸಮುದಾಯದವರು ಕೃಷ್ಣಮೃಗವನ್ನು ಪವಿತ್ರ ದೈವವೆಂದು ಭಾವಿಸಿದ್ದು ಅಲ್ಲದೆ ಮರಿ ಕೃಷ್ಣಮೃಗಗಳಿಗೆ ಇಲ್ಲಿನ ತಾಯಂದಿರು ತಮ್ಮ ಮೊಲೆಯ ಹಾಲುಣಿಸಿ, ಆರೈಕೆ ಮಾಡುತ್ತಿರುವ ತಲೆಮಾರಿನ ಜನತೆ ಆರಾಧಿಸುತ್ತಿ ರುವುದರಿಂದಲೇ ನಟ ಸಲ್ಮಾನ್ ಖಾನ್ ನಡೆಸಿದ ಬೇಟೆಯ ಪ್ರಕರಣ ಸಹಿಸಿಕೊಳ್ಳದೆ ಬಿಷ್ಣೋಯ್ ಸಮಾಜ ತಿರುಗಿ ಬಿದ್ದಿದೆ, ಹೀಗಾಗಿಯೇ ಲಾರೆನ್ಸ್ ಬಿಷ್ಣೋಯ್ ಈತನಿಗೆ ಬೆದರಿಕೆಯೊಡ್ಡುತ್ತಿದ್ದಾನೆ, ಎನ್ನುವ ವಾಸ್ತವ ಕಾರಣಗಳಿದೆ,

ಇನ್ನೂ ಭಾರತದ ವಿವಿದ ರಾಜ್ಯಗಳಲ್ಲಿ ವಿಸ್ತರಿಸಿಕೊಂಡಿರುವ ಈತನ ಸಿಂಡಿಕೇಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಕಾರ್ಪೋರೆಟ್ ಜಾಲವನ್ನು ಹೊಂದಿರುವ ಅಸಲು ಸತ್ಯಗಳು ಖಾಕಿಪಡೆಗೆ ಈಗಾಗಲೇ ತಿಳಿದಿರುವ ಸಂಗತಿಯಾದರೂ ದಕ್ಷಿಣ ಭಾರತದಲ್ಲಿ ತನ್ನದೇ ಆದ ಜಾಲದ ಶಾರ್ಪ್‌ಶೂಟರ್‌ಗಳು ಮೊಕ್ಕಾಂ ಹೂಡಿರುವುದು ಗೊತ್ತು ಮಾಡಿಕೊಳ್ಳಲು ಒಂದಿಷ್ಟು ಪ್ರಕರಣಗಳಿಂದ ಧೃಡಪಟ್ಟಿದ್ದರೂ ಇದು ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ನಡೆದಿರಬಹುದಾದ ಘಟನೆ ಎಂದು ಅಂತಿಮ ತಿರ್ಮಾನಕ್ಕೆ ಬಂದಿದ್ದರೂ ಒಂದು ಚಿತ್ತ ಆತನ ಗ್ಯಾಂಗ್ ಚಲನ-ವಲನಗಳ ಮೇಲೆ ನಿಗಾ ಮಡಗಿರುವುದು ಗುಟ್ಟಾಗೇನು ಉಳಿದಿಲ್ಲ,

ನೆರೆಯ ಪ್ರವಾಸಿ ರಾಜ್ಯ ಗೋವಾದಲ್ಲಿ ಈ ಕುರಿತಂತೆ ಬಿಷ್ಣೋಯ್ ಸಿಂಡಿಕೇಟ್‌ನ ವಿಷ್ಣು ಬಿಷ್ಣೋಯ್ ಹಾಗೂ ಈತನೊಂದಿಗೆ ಇದ್ದ ಆರು ಜನರನ್ನು ಗೋವಾದ ಅಂಜುನಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು ಕಳೆದ ವರುಷದ ಎಂಡಿಂಗ್‌ನಲ್ಲಿ ಜರುಗಿತ್ತು, ಹೀಗೆ ಕರ್ನಾಟಕದಲ್ಲಿ ದತ್ತಪೀಠ ಹಾಗೂ ಅಂಜನಾದ್ರಿಯಲ್ಲಿ ಮಾಲಾಧಾರಿಗಳಲ್ಲಿ ಇಬ್ಬರು ಲಾರೆನ್ಸ್ ಬಿಷ್ಣೋಯ್ ಭಾವಚಿತ್ರವಿಡಿದು ಪ್ರದರ್ಶಿಸಿ ಘೋಷಣೆ ಹಾಕಿದ್ದರು ಇದರಲ್ಲಿ ಕೊಪ್ಪಳದ ಯುವಕ ಹಾಗೂ ಹೊನ್ನಾಳಿಯ ಯುವಕನ ಹೆಸರು ಕೇಳಿ ಬಂದಿತ್ತು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಂಧಿಸಿ ಮೂಲ ವಿಚಾರಣೆ ನಡೆಸಿದ್ದ ಪ್ರಕರಣಗಳಿದೆ. ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಬಿಷ್ಣೋಯ್ ಹೆಸರಿನಲ್ಲಿ ಬೆದರಿಕೆಯಿತ್ತು ಎಂದು ಪೊಲೀಸರು ತನಿಖಿಸಿದಾಗಲೇ ಬಿಷ್ಣೋಯ್ ಪ್ರಭಾವವನ್ನು ಬಳಸಿಕೊಳ್ಳಲು ಯತ್ನಿಸಿರುವ ಕಿಡಿಗೇಡಿಗಳು ಎಂದು ಖಾಕಿ ಕಡತದಲ್ಲಿ ನಮೂದಿತವಾಗಿದ್ದರು, ಮೇಲಿಂದ ಮೇಲೆ ಬಿಷ್ಣೋಯ್ ನೆರಳು ದಕ್ಷಿಣ ಭಾರತದಲ್ಲಿ ಮೆಲ್ಲನೆ ಹರಿದಾಡಿಕೊಂಡಿದೆ, ಅಚ್ಚರಿ ಎಂದರೆ ಕರ್ನಾಟಕದಲ್ಲಿಯೂ ಕೆಲ ಹಿಂದೂ ಪ್ರಖರ ಮುಖಂಡರ ಅಣತಿಯಂತೆಯೇ ಲ್ಯಾಂಡ್ ಜಿಹಾದ್ ಎನ್ನುವ ಹೊಸ ಪ್ರಕರಣದ ಮೇಲೆ ದಾಳಿ ನಡೆಸುವ ಪೂರ್ವ ಸಿದ್ದತೆಗಳಿದೆ, ಇದಕ್ಕಾಗಿ ಹಿಂದೂಗಳನ್ನು ಒಕ್ಕಲೆಬ್ಬಿಸಿರುವ ಪ್ರಕರಣಗಳು ಹಾಗೂ ಗೋವುಗಳಿಗೆ ಹಾಗೂ ಅದಕ್ಕೆ ಕುಡಿಯುವುದಕ್ಕೆ ಮೀಸಲಿರುವ ಭೂಮಿಗಳನ್ನು ಕಬ್ಜಾ ಮಾಡಿಕೊಂಡಿರುವ ಲ್ಯಾಂಡ್ ಮಾಫಿಯಾದ ಪಟ್ಟಿ ಮಾಡಿರುವುದು ಗುಪ್ತ ಮಾಹಿತಿಗಳು ಇದೀಗ ಪಿಸುಗುಡುತ್ತಿದೆ,

ಲ್ಯಾಂಡ್ ಮಾಫಿಯಾ ನಡೆಸುತ್ತಿರುವವರು ಹಿಂದೂಗಳಾಗಿದ್ದರೂ ‘ಲ್ಯಾಂಡ್ ಜಿಹಾದ್ಗೆ’ ಪರೋಕ್ಷ ಬೆಂಬಲಿತರೆಂದೇ ಭಾವಿಸಿ ಶಾರ್ಪ್‌ಶೂಟರ್‌ಗಳ ಮೂಲಕ ದಾಳಿ ನಡೆಸಲು ಮಹೂರ್ತ ಫಿಕ್ಸ್ ಆಗಬೇಕಿದೆ ಎನ್ನುವುದು ಮೂಲಗಳಿಂದ ಮೊಹರೊತ್ತಿದೆಯಾದರೂ ಪೊಲೀಸರು ಹಾಗೂ ಗುಪ್ತದಳದ ಮಾಹಿತಿಯಾನುಸಾರವೇ ಕ್ರಾಸ್ ಚೆಕ್ ಮಾಡಿಕೊಂಡು ಗುಂಡಿನ ಸದ್ದು ಕೇಳುವ ಮೊದಲೇ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಗಳಿದೆ, ಇನ್ನೂ ದಕ್ಷಿಣ ಭಾರತದ ಹಿಡಿತ ಸಾಧಿಸುವುದಕ್ಕಾಗಿಯೇ ಮುಂದಿನ ೨೦೨೮ರ ಕರ್ನಾಟಕದ ಚುನಾವಣೆಯ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ ಹಿಂದೂ ಬೆಂಬಲಿತ ಪಕ್ಷಕ್ಕೆ ಪರ್ಯಾಯವಾಗಿ ಕೆಲಸ ಮಾಡುವುದಾಗಿ ಈ ಸಿಂಡಿಕೇಟ್ ತಿಳಿಸಿದೆ ಎನ್ನುವ ಮಾಹಿತಿಗಳಿದೆ, ಇಂತಿವುಗಳೆಲ್ಲಾ ಕಪೋಲಕಲ್ಪಿತ ಎಂದು ಉವಾಚಿಸಿಕೊಂಡರು ಲಾರೆನ್ಸ್ ಬಿಷ್ಣೋಯ್ ಸಿಂಡಿಕೇಟ್ ಈಗಾಗಲೇ ಕರ್ನಾಟಕದಲ್ಲಿ ತಳವೂರಿದೆ ಎನ್ನುವುದು ಅದಷ್ಟೆ ನಿಖರತೆಗಳಿದೆ ಎಂದು ಗೊತ್ತು ಮಾಡಿಕೊಳ್ಳಬಹುದು,

ಆದರೆ ಅಚ್ಚರಿಯ ಸಂಗತಿ ಎನ್ನುವುದಾದರೆ ಏನೀದು, ಲವ್ ಜಿಹಾದ್ ಕೇಳಬರುವ ಪ್ರಕರಣಗಳು, ಪರ-ವಿರೋಧತೆಗಳು ಭಾರತದಲ್ಲಿ ಕಂಡು ಬಂದಿರುವ ಸಾಮಾನ್ಯ ವಿಷಯವಾದ ಬೆನ್ನಲ್ಲೇ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹೊಸದಾಗಿ ನಾಮಾಂಕಿತಗೊಂಡಿರುವ ಲ್ಯಾಂಡ್ ಜಿಹಾದ್ ಎನ್ನುವುದು ಮುಂದಿನ ಅಪಾಯಕಾರಿಯಾಗದೆ ಇರಲಾರದು, ಇದೊಂದು ಪಕ್ಷದ ಪ್ರಣಾಳಿಕೆಯ ಅಸ್ತ್ರವೂ ಆಗುವುದರಲ್ಲಿ ಯಾವುದೇ ನಿಸ್ಸಂದೇಹವಿಲ್ಲವಾಗಿದೆ, ಒಟ್ಟು ಲ್ಯಾಂಡ್ ಜಿಹಾದ್ ಕುರಿತಾದ ವಿವರಗಳು ಸಧ್ಯಕ್ಕೆ ಲಭ್ಯವಿಲ್ಲದಿದ್ದರೂ ಈ ಮೂಲಕ ಭೂ ಮಾಫಿಯಾದ ಎದೆ ನಡುಗಿಸದೆ ಈ ಗ್ಯಾಂಗ್ ಬಿಡಲಾರದು ಎಂಬುದು ಅದಷ್ಟೆ ಖಚಿತವಾದ ಸಂಗತಿಯಾಗಿದೆ.

ಒಟ್ಟಿನಲ್ಲಿ ಲಾರೆನ್ಸ್ ಬಿಷ್ಣೋಯ್ ಹೆಸರು ಮುಗಿಯದ ಅಧ್ಯಾಯದ ಹೆಸರಾಗಿದ್ದು, ಇಂತಿವುಗಳೆಲ್ಲಾ ಸಂಗತಿಗಳನ್ನು ಹೆಕ್ಕಿ ಸಾಂವಿಧಾನಿಕ ಅಭಿವ್ಯಕ್ತಿಯಡಿ ಉಲ್ಲೇಖಿಸುವ ಹಾಗೂ ಜಾಗೃತಗೊಳಿಸುವ ಇರಾದೆ ಪತ್ರಕರ್ತ ಹಾಗೂ ಲೇಖಕನದ್ದಾಗಿರುತ್ತದೆ, ಈ ಲಗತ್ತಿನೊಂದಿಗೆ ಒಂದಷ್ಟು ಸುಳಿದು ಸರಿಯುತ್ತಿರುವ ಅಸಲಿ ಕಹಾನಿಗಳನ್ನು ತಮ್ಮ ಮುಂದಡಿ ಅಂಬೋಣಿಸಿದ್ದೇನೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I