Monday, August 3, 2026
Homeಸೂರ್ಯಗಗನI ಪ್ರಾಣಿಗಳ ಆರೈಕೆ ಕಾರ್ಯ ಶ್ಲಾಘನೀಯ I ಶಾಸಕ ಆರಗ ಜ್ಞಾನೇಂದ್ರ I

I ಪ್ರಾಣಿಗಳ ಆರೈಕೆ ಕಾರ್ಯ ಶ್ಲಾಘನೀಯ I ಶಾಸಕ ಆರಗ ಜ್ಞಾನೇಂದ್ರ I

I ಪ್ರಾಣಿಗಳ ಆರೈಕೆ ಕಾರ್ಯ ಶ್ಲಾಘನೀಯ I ಶಾಸಕ ಆರಗ ಜ್ಞಾನೇಂದ್ರ I

ಶಿವಮೊಗ್ಗ: ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಜೆಸಿಐ ತೀರ್ಥಹಳ್ಳಿ, ಕಾಳಿಕಾಂಬ ಮಾರುತಿ ಸರ್ವಿಸ್ ಸೆಂಟರ್, ಅನಂತ ಆಯುರ್ವೇದ ಟ್ರಸ್ಟ್ ಹಿರೇಸರ ಹಾಗೂ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ತೀರ್ಥಹಳ್ಳಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಾನುವಾರು ಕುಡಿಯುವ ನೀರಿನ ಟ್ಯಾಂಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇಸಿಗೆ ಕಾಲಕ್ಕೆ ಪಶುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಬಹಳ ಪ್ರಶಂಸನೀಯ ಕಾರ್ಯವಾಗಿದೆ. ಗೋವುಗಳ ಆಶೀರ್ವಾದ ಸಂಘ ಸಂಸ್ಥೆಗಳ ಮೇಲೆ ಸದಾ ಇರುತ್ತದೆ ಎಂದು ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್ ನಾರಾಯಣ್ ರಾವ್ ಮಾತನಾಡಿ, ಜೆಸಿಐ ತೀರ್ಥಹಳ್ಳಿ ಸಂಸ್ಥೆಯು ಯುವಜನರಲ್ಲಿ ಹಾಗೂ ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರುವುದರಲ್ಲಿ ಯಶಸ್ವಿಯಾಗಿದೆ. ಕಾರ್ಯಕ್ರಮದ ನಿರ್ದೇಶಕ ರಾಜೇಂದ್ರ ಆಚಾರ್ಯ ಉತ್ತಮ ಕೆಲಸ ಮಾಡುತ್ತಿದ್ದು, ಸಮಾಜಕ್ಕೆ ನಿರಂತರವಾಗಿ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು.

ಅನಂತ ಆಯುರ್ವೇದ ಟ್ರಸ್ಟ್ ಸಂಸ್ಥಾಪಕ ಡಾ. ಸಮೇಧ ಕಟ್ಟೆ ಮಾತನಾಡಿ, ಜನರಿಗೆ ಆಯುರ್ವೇದ ಎಂದರೆ ಕೇವಲ ಗಿಡಮೂಲಿಕೆ ಎಂದು ಭಾವಿಸಿದ್ದಾರೆ. ಆದರೆ ಆಯುರ್ವೇದದಲ್ಲಿ ಹಲವು ಖನಿಜ ಸಂಪತ್ತುಗಳನ್ನು ಸಹ ಸಂಸ್ಕರಿಸಿ ಉಪಯೋಗಿಸುತ್ತೇವೆ ಎಂದು ತಿಳಿಸಿದರು.

ಜೆಸಿಐ ತೀರ್ಥಹಳ್ಳಿ ಸಂಸ್ಥೆ ಅಧ್ಯಕ್ಷ ನಟೇಶ್ ಕಾಮತ್, ಕೃಷ್ಣಮೂರ್ತಿ ಸರ್ಜಾ, ಕೈಲಾಸ ಸರ್ಜಾ, ವಲಯದ ಉಪಾಧ್ಯಕ್ಷ ಅಭಿಜಿತ್, ಪೂರ್ವಾಧ್ಯಕ್ಷ ಹರೀಶ್ ಸರ್ಜಾ, ಅರುಣ್ ಕುಮಾರ್, ಪುಷ್ಪ ಸರ್ಜಾ, ಅನ್ವಿತಾ ಹರೀಶ್, ಸ್ವಾಗತ್, ರವಿ ಆಚಾರ್ಯ, ಮನೋಜ್, ನವೀನ್, ಅನುಷಾ, ವೈದ್ಯರಾದ ಡಾ. ಧನುಷ್, ಡಾ. ಸನತ್, ಸುರೇಶ್, ಮಂಜುನಾಥ್, ಸೂರಜ್ ಆಚಾರ್ಯ, ಆತ್ರೇಯ ಸರ್ಜಾ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I