ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಪರಪ್ಪನ ಅಗ್ರಹಾರದಲ್ಲಿ I ಬಲರಾಮನ ಮರ್ಡರ್ I
ಭೂಗತ ಲೋಕದ ಬಹು ನಿರೀಕ್ಷಿತ ಚಿತ್ರ, “ಬಲರಾಮನ ದಿನಗಳು” ಶೂಟಿಂಗ್ ಭರ್ಜರಿಯಾಗಿ ನಡಿಯುತ್ತಿದೆ, ಈ ಚಿತ್ರದ ಕಥಾಹಂದರ ಏನೀರಬಹುದು ಎನ್ನುವುದು ಚಿತ್ರ ಬೆಳ್ಳಿತೆರೆಯ ಮ್ಯಾಲೆ ಬಂದಾಗಲೇ ಗೊತ್ತಾಗುತ್ತದೆ,
ಆದರೆ ಯಾರು ಆ ಹೊತ್ತಿನ ಭೂಗತ ಜಗತ್ತಿನ ಬಲರಾಮ, ನನಗೊತ್ತಿರುವಂತೆ ಬೆಂಗಳೂರಿನ ಶಿವನಳ್ಳಿ ಇಂದಿನ ಶಿವನಗರದ ಆ ಮನೆಗೆ ಹೋಗಿದ್ದೆ, ಮಾತಾಡಿ ತಿಳಿದು ಕೊಂಡೆ, ಆ ಮನೆ ಕೆಲ ಭೂಗತರಿಗೆ ನೆರಳು, ಅದೇ ರೀತಿ ಬಲರಾಮನಿಗೂ ಇತ್ತು, ಅಂದು ಆತನಿಗಾಗಿ ಪೊಲೀಸರು ಬೆನ್ನತ್ತಿ ಬಂದಿದ್ದರು, ಪೊಲೀಸರಿಗೆ ಹೇಳಿ, ಆ ಮಹಾತಾಯಿ ಮಾಡಿದ್ದ ರಾಗಿಮುದ್ದೆ ಬಸ್ಸಾರು ಊಟ ಮಾಡಿ ಹೇಳಿದ್ದ ಅಮ್ಮ ಇದೇ ಲಾಸ್ಟ್ ಊಟ ಅನಿಸುತ್ತೇ, ಜೈಲಿಗೆ ಹೋಗುತ್ತೇನೆ, ವಾಪಾಸ್ಸು ಬರುತ್ತೇನೋ ಇಲ್ವೋ.. ಗೊತ್ತಿಲ್ಲ..! ಎಂದು ಹೇಳಿ ಪರಪ್ಪನ ಅಗ್ರಹಾರಕ್ಕೆ ಹೋದವನು, ಬಲರಾಮನಿಗೆ ಇದ್ದ ಅನುಮಾನಗಳೇ ಅಂದು ಸತ್ಯವಾಗುತ್ತದೆ, ಅಲ್ಲದೆ ಬಲರಾಮನ ಮೇಲೆ ಅಟ್ಯಾಕ್ ಆಗಿಯೇ ಹೋಗುತ್ತದೆ ಜೈಲಿನಲ್ಲಿಯೇ ಆತನ ಮರ್ಡರ್ ಆಗುತ್ತದೆ,
ಈ ಅಟ್ಯಾಕ್ ನಲ್ಲಿ ಸಾಕಷ್ಟು ರೌಡಿಗಳಿದ್ದರು, ಅದರಲ್ಲಿ ಶಿವಮೊಗ್ಗದವನೊಬ್ಬ ಇದ್ದ, ಈತನ ಹೆಸರು ಅಂದಿನ ಮರ್ಡರ್ ಕೇಸಿನಲ್ಲಿ ಸೇರಿತ್ತು, ಅಸಲಿಗೆ ಬಲರಾಮ ಎನ್ನುವ ಧೈತ್ಯ ಭೂಗತ ಡಾನ್ ಮುಗಿಸಲೇ ಬೇಕು ಎನ್ನುವ ಸ್ಕೆಚ್ ಯಾಕಿತ್ತು..? ಎನ್ನುವುದು ಇತ್ಯಾದಿ ಪಾಕ್ಷಿಕದಲ್ಲಿ ಬರೆಯುತ್ತೇನೆ..

