I ಕೌಶಲಾಭಿವೃದ್ಧಿ ಕಾರ್ಯಗಾರ I ತರಬೇತಿ I ಜೆಸಿಐ ವಲಯ ತರಬೇತುದಾರ ಶ್ರೀಧರ ಹೆಗ್ಡೆ I
ಶಿವಮೊಗ್ಗ: ಶುಭಂ ಸಂಸ್ಥೆಯಿಂದ ಇಲ್ಲಿನ ಶುಭಂ ಹೋಟೆಲ್ ಆದಿಗ್ರ್ಯಾಂಡ್ ಸಭಾಂಗಣದಲ್ಲಿ ಆಗಸ್ಟ್ 12 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ವ್ಯಾಪ್ತಿಯ ಯುವಕ, ಯುವತಿ, ಮಂಡಲಗಳಿಗೆ ಕೌಶಲಾಭಿವೃದ್ಧಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
ಜೆಸಿಐ ವಲಯ ತರಬೇತುದಾರ ಶ್ರೀಧರ ಹೆಗ್ಡೆ ತರಬೇತಿ ನೀಡುವರು. ತರಬೇತಿಯಲ್ಲಿ ಪಾಲ್ಗೊಂಡ ಸದಸ್ಯರಿಗೆ ಪ್ರಮಾಣ ಪತ್ರ ಹಾಗೂ ರೂ.2,000 ಮೌಲ್ಯದ ಮೆಡಿಕಲ್ ಕಿಟ್ ಉಚಿತವಾಗಿ ನೀಡಲಾಗುವುದು. ( 50 ಮಂದಿ ಸದಸ್ಯರಿಗೆ ಮಾತ್ರ ಅವಕಾಶ) ನೋಂದಣಿಗೆ ಆಗಸ್ಟ್ 8 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08182-276299, 9611693979 ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

