ಅಭಿವ್ಯಕ್ತಿಯನ್ನು, ಅಭಿವ್ಯಕ್ತಿಸಿದ್ದಕ್ಕಾಗಿ ಅನಾಹುತಕಾರಿ ಟಾರ್ಗೆಟ್ ಮಾಡಿದ ವೈಟ್ ಕಾಲರ್‍ಸ್ ಯಾರು ಗೊತ್ತೆ..?
ದ್ವೆಷದ ಪಡಸಾಲೆಯಲ್ಲಿ ಅಸೂಯೇ, ಅಸಹನೀಯತೆ, ಜಿಜ್ಞಾಸೆ, ಕುತಂತ್ರ ಹಾಗೂ ಕೀಳಿರಿಮೆಗಳ ದಾಖಲೆಗಳು ಶಾಶ್ವತೀಕರಿಸಿರುವಾಗ ಅದ್ಯಾಗೆ ಅನ್ಯರ ಕ್ರಿಯಾಶೀಲತೆ, ರಚನಾತ್ಮಕತೆಯನ್ನು ಸಹಿಸಿಕೊಳ್ಳುತ್ತಾರೆ..? ಅದೊಂದು ಅಸಾಧ್ಯದ ಪರಮಾವಧಿ ಎನ್ನಬಹುದು ಅಲ್ಲವೇ..? ಹೌದು ಪ್ರತಿ ಬರಹಗಳು ಅನುಭವಿತ ಪ್ರತೀಕಗಳಾಗಿರುವುದಿಲ್ಲ, ಸಮಾಜದ ನಡುವೆ ನಡೆವ ಸಾಮಾಜಿಕ ಸಮರ, ಅಥವಾ ದುರಾಸೆ ಮತ್ತಾಸೆಗಳಂದಣದ ವಿರುದ್ದ ಸೆಣಸಾಟ, ತನ್ನ ಅಭಿವ್ಯಕ್ತಿಯನ್ನು ಯಾವುದೇ ಮುಲಾಜಿಲ್ಲದೆ ಅದಕ್ಕೊಂದು ಆತ್ಮತೃಪ್ತಿ ಸಾರುವ ತುಡಿತವೂ ಆಗಿರುತ್ತದೆ. ಹೀಗಾಗಿ ಬರಹಗಳು ಯಾರ ವಿರುದ್ದವೂ ಅಲ್ಲ, ಯಾರ ಪರವೂ ಅಲ್ಲವಾಗಿದೆ.
ಬರಹಗಳು ವ್ಯಕ್ತಿಗತ ವಿರುದ್ದವಾಗಿರದೇ ಆ ವ್ಯಕ್ತಿಯ ದುರಾಲೋಚನೆಗಳನ್ನು, ಕ್ರೌರ್ಯಗಳನ್ನು, ವಂಚನೆಗಳ ಅತಿಗಳನ್ನು ಸಾರ್ವಜನಿಕವಾಗಿ ಪ್ರಚುರಗೊಳಿಸುವ ಸಾಂವಿಧಾನಿಕ ಅಭಿವ್ಯಕ್ತಿ ಎನ್ನುವುದನ್ನು ಅದೆಷ್ಟು ಮಂದಿಗಳು ಒಪ್ಪುತ್ತಾರೆ. ನಾನು ಕೂಡ ಬಹಳಷ್ಟು ಗಮನಿಸಿದ್ದೇನೆ ಅದೆಷ್ಟೋ ವೇದಿಕೆಗಳಲ್ಲಿ ರಾಜಕೀಯ ನಾಯಕರಾಗಲಿ, ಅಥವಾ ಸಾಮಾಜಿಕ ಸೋಗಿನ ಆಸಾಮಿಗಳೇ ಆಗಲಿ ಬರಹಗಳ ಅಭಿವ್ಯಕ್ತಿಯನ್ನು ಗೌರವಿಸುತ್ತೇವೆ. ಟೀಕೆಗಳು ನಮ್ಮನ್ನು ತಿದ್ದಿ ಎಚ್ಚರಿಸುತ್ತದೆ, ಹೀಗಾಗಿ ಟೀಕೆಗಳನ್ನು ಸ್ವೀಕರಿಸುತ್ತೇವೆ, ಎನ್ನುವ ಬಹುತೇಕರೇ… ಬರಹಗಳ ಗಾಢತೆಗೆ ಬೆಸ್ತು ಬಿದ್ದು ಬರಹಗಾರರ ಮೇಲೆ ಅಪನಿಂದನೆಗಳನ್ನು ಹುಟ್ಟುಹಾಕಿ, ತೇಜೋವಧೆ ಮಾಡುವುದಲ್ಲದೆ ವಾಮಮಾರ್ಗದಿ ಅಭಿವ್ಯಕ್ತಿಗಳನ್ನು ಕೊಲೆ ಮಾಡುತ್ತಾರೆ ಇದೇ ಈ ಹೊತ್ತಿನ ವಾಸ್ತವ.

ಇಂತಹ ಅನೇಕತೆಗಳ ನಡುವೆ ನೈಜ ಸಾಮಾಜಿಕ ಬರಹಗಾರರ ಮೇಲೆ ನಡೆವ ಶೋಷಣೆಗಳು ಇನ್ನೂ ನಿಂತಿಲ್ಲ,* ಅಪರಾಧಿ ಸ್ಥಾನದಲ್ಲಿ ನಿಂತವರ ಕೊನೆ ಅಸ್ತ್ರವೇ ಅಪನಿಂದನೆಗಳು ಎನ್ನುವ ಹಾಗೇ ಬರಹಗಳ ತೀಕ್ಷ್ಣತೆಗೆ ಬೆದರಿ ಕಾನೂನು ಬಾಹಿರವಾಗಿ ದಾಳಿ ನಡೆಸಿರುವ ಹಾಗೂ ಪ್ರಾಣಬೆದರಿಕೆಗಳೊಡ್ಡಿರುವ ಜೀವಂತ ಉದಾಹರಣೆಗಳು ಹೆಚ್ಚಾಗಿ ಪತ್ರಿಕಾ ವಲಯದಲ್ಲಿ ಹಾಗೂ ಲೇಖಕರ ವಲಯದಲ್ಲಿ ಧರ್ಶಿಸಬಹುದಾಗಿದೆ ಪ್ರಾಣ ಬೆದರಿಕೆಗಳು, ಹಲ್ಲೆಗಳು, ಗುಂಡಿಕ್ಕಿ ಕೊಲೆಗೈಯುತ್ತೇವೆ ಎನ್ನುವ ಪೋನ್-ಇನ್ ಕರೆಗಳು ಸಾಮಾನ್ಯವಾಗಿ ರಾಜ್ಯದ ಬಹುತೇಕ ಕಡೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ, ಒಂದಿಷ್ಟು ಕೇಸುಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಇಂತಿವುಗಳಿಂದ ಬರಹಗಾರರಿಗೆ ತಡೆಯೊಡ್ಡುವ ಮಾರ್ಗಗಳನ್ನು ಕೊಳೆತ ಮನಸುಗಳು, ಕ್ರೌರ್ಯ ಕೂಪವನ್ನು ಆಯ್ದುಕೊಂಡರೆ ನಿಜಕ್ಕೂ ಇದುವರೆಗೂ ಯಾವ ಬರಹಗಾರನಿಗೂ ಸಾಂವಿಧಾನಿಕವಾದ ರಕ್ಷಣೆ ಸಿಗುತ್ತಿಲ್ಲ, ಬದಲಿಗೆ ಪೊಲೀಸ್ ಠಾಣೆಗಳಲ್ಲಿ ಒತ್ತಡಕ್ಕೆ ಮಣಿದು “ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ” ಕೇಸುಗಳನ್ನು ಮುಗಿಸಿ ಬಿಡುತ್ತಾರೆ.
ಇಂತಹ ಅಸಲಿಯತ್ತಿನ ಕಾರಣಗಳಿಂದಾಗಿಯೇ ಮತ್ತೊಂದು ಹೆಜ್ಜೆ ಈ ಜೀವಬೆದರಿಕೆಯ ಯತ್ನಗಳು ಪರಿವರ್ತಿತಗೊಂಡಿದೆ, ಅದು “ಸಾಮಾಜಿಕ ಕೊಲೆ” ಮಾಡುವ ಎಲ್ಲಾ ರೀತಿಯ ತಾಲೀಮುಗಳನ್ನು ನಡೆಸುತ್ತಾರೆ..! ಪ್ರತಿ ಘಟಿತ ಘಟನೆಗಳು ಹೇಗಿರಬೇಕೆಂದರೆ ಅದು ಸೃಷ್ಠಿಯಾಗಿದ್ದರು ಅಸಲಿಗೆ ಹೋಲುವುಂತಿರಬೇಕು, ರಾಜಕೀಯ ಪ್ರೇರಿತ ಇಲಾಖಾಧಿಕಾರಿಗಳು, ವೃತ್ತಿ ಧ್ವೇಷಿಗಳನ್ನು ಕ್ರೂಡಿಕರಿಸಿಕೊಂಡು, ಸಾಮಾಜಿಕ ವಲಯದಲ್ಲಿ ನಿರಾಪರಾಧಿ ಬರಹಗಾರರನ್ನು ಅಪರಾಧಿ ಸ್ಥಾನದಲ್ಲಿ ಏಕಾಎಕಿ ನಿಲ್ಲಿಸಿ ಬಿಟ್ಟರೆ, ಇದಕ್ಕೆ ಪೂರಕವಾಗಿ ಒಂದಿಷ್ಟು “ಕಾಲಂ ಸುದ್ದಿ” ರಾಚಿಸಿ ಬರಹಗಾರರನ್ನು ಅಭಿವ್ಯಕ್ತಿ ಹಾಗೂ ಆತನ ಜೀವಮಾನದ ವ್ಯವಸ್ಥೆಯನ್ನು ಕೊಲೆಗೈದು, ದುಂಡು ಮೇಜಿನ ಮೇಲೆ ಕವರ್ ಸ್ವೀಕರಿಸಿ ಗುಂಡು ಪಾರ್ಟಿ ಮಾಡಿಕೊಳ್ಳುತ್ತಿರುವ ಸನ್ನಿವೇಶಗಳು ಇಂದಿಗೂ ಜೀವಂತವಾಗಿಸಿಕೊಂಡಿದೆ.
ಇಂತಹ ಅನೇಕತೆಗಳಲ್ಲಿ ಪ್ರತಿ ಬರಹಗಾರರು ತಮ್ಮ ಬರಹದ ಹಾದಿಯಲ್ಲಿ ಅನುಭವಿಸಿದ ಸಾಂದರ್ಭಿಕತೆಗಳ ಅನುಭವಗಳು ವಿಭಿನ್ನತೆಯ ಸ್ವಾದವನ್ನು ರುಚಿಸುವಂತೆ ಮಾಡಿದೆ, ಒಂದಿಷ್ಟು ಬರಹದ ಮನಸುಗಳಿಗೆ ಕಹಿ ಸ್ವಾದ ಎದುರಾದರೆ, ಮತ್ತೊಂದಿಷ್ಟು ಮನಸುಗಳಿಗೆ ಭ್ರಮನಿರಸನ ಹುಟ್ಟು ಹಾಕಿದೆ, ಇನ್ನು ಕೆಲವರಿಗೆ ಪ್ರೇರಣೆಯಾಗಿ ಬರಹದ ತೀಕ್ಷ್ಣತೆಯನ್ನು ಹೆಚ್ಚಿಸಿಕೊಂಡಿದೆ,, ಶೇಕಡ ೨೦% ಬರಹಗಾರರು ಸಮರ್ಥವಾಗಿ ಎದುರಿಸಲಾಗದೇ ಎರಗಿ ಬರುವ ಕ್ರೌರ್ಯ, ವಾಮಮಾರ್ಗದಿ ಕೊನೆಯುಸಿರೆಳೆದಿದ್ದಾರೆ. ಹೀಗಿದ್ದರೂ ಸಂಘಟಿತ ಶಕ್ತಿಗಳು “ಬರಹಗಾರರಿಗೆ” ವ್ಯಾಪಕ ರಕ್ಷಣೆ, ಬೆಂಬಲ ನೀಡುವಲ್ಲಿ ವಿಫಲವೂ ಆಗಿದೆ, ಯಾರಿಗೂ ಎದುರಿಸಿಕೊಳ್ಳುವ ಸಾಮರ್ಥ್ಯವಿರುತ್ತದೋ.. ಆ ಬರಹಗಾರ ಯಾವುದೇ ಬೆದರಿಕೆಗಳಿಗೆ ಬೆಂಡಾಗದೇ ತನ್ನ ಅಭಿವ್ಯಕ್ತಿಯನ್ನು ಸಾರುತ್ತಾನೆ, ಅಲ್ಲದೆ ಕಾನೂನಾತ್ಮಕವಾದ ರಕ್ಷಣೆ ಪಡೆಯುವಲ್ಲಿ ಸಫಲವೂ ಆಗುತ್ತಾನೆ.
ಇಂತಹ ಎಲ್ಲಾ ಘಟನೆಗಳ, ವಾಸ್ತವ ವಿದ್ಯಮಾನಗಳ ಅಧ್ಯಯನ ಪ್ರಸ್ತುತ ದಿನಮಾನದಲ್ಲಿ ಬರಹಗಾರನಿಗಿರಲೇ ಬೇಕಾಗಿದೆ. ಬರಹಗಾರನುಳಿದು ಅರಳಿದರೆ ಮಾತ್ರ ಕನ್ನಡದ ಸಾಕ್ಷರತೆ ಸಾಧ್ಯ ಹಾಗೂ ಕನ್ನಡದ ಉಳಿವು ಸಾಧ್ಯವಾಗಿದೆ, ಇಂತಹ ಅತೀ ಸೂಕ್ಷ್ಮತೆಗಳತ್ತ ಸಂಘಟಿತ ಶಕ್ತಿಗಳು ಚಿತ್ತವರಿಸಬೇಕಾದ ಜರೂರತ್ತಿದೆ, ಅಲ್ಲದೆ ಯಾವ ಸಂದರ್ಭದಲ್ಲಿಯೂ ಪಂಥಿಯ ವಾದಗಳು, ಸ್ವಜನ ಪಕ್ಷಪಾತದ ಧೋರಣೆಗಳು, ಜಾತಿಯತೆಯ ವಿಷವರ್ತುಲಗಳು, ಆವರಿಸಿಕೊಳ್ಳಬಾರದಷ್ಟೆ, ಹೀಗೆನಾದರು ಧರ್ಮಾತೀತವಾಗಿ, ಪಕ್ಷಾತೀತವಾಗಿ ಕನ್ನಡದ ಸಂಘಟಿತ ಮನಸುಗಳು ಬೇಷರತ್ ಬೆಂಬಲಕ್ಕೆ ನಿಂತಿದ್ದಾದರೆ ಮಾತ್ರ ಅದು ಓರ್ವ ಬರಹಗಾರನಿಗೆ ಕೊಡುವ ನೈತಿಕ ಬೆಂಬಲವಾಗಿದೆ.
ಈ ಎಲ್ಲಾ ಸಂಗತಿಗಳ ನಡುವೆ ನನ್ನ ಬದುಕಿನಲ್ಲಿಯೂ ಜೀವಬೆದರಿಕೆಗಳು, “ಕವಿತೆಗೊಂದು ಕೇಸು” ಎಲ್ಲವೂ ನಡೆದಿದೆ, ಅಂದು ಶಿವಮೊಗ್ಗದ ವಿದ್ಯಾನಗರದ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಗೆದ್ದು ಬೀಗಿದ್ದ ಮಹಿಳಾ ಕಾರ್ಪೋರೇಟರ್ ಪತಿ ಬರಹದ ಸಾಲು ಕುರಿತಾಗಿ ಪೋನಾಯಿಸಿ ಜೀವ ಬೆದರಿಕೆಯೊಡ್ಡಿದ ಮೊದಲ ಘಟನೆಯದು, ಬೈ-ಪಾಸ್ ರಸ್ತೆಯಲ್ಲಿದ್ದ ಢಾಬಾದಲ್ಲಿ ಕುಳಿತು ಸಮಪಾನಮತ್ತನಾಗಿ ತನ್ನ ಬೆಂಬಲಿಗರೊಂದಿಗೆ ಸೇರಿ ಅನುಚಿತವಾಗಿ ಕರೆ ಮಾಡಿ “ಮಚ್ಚಿನಿಂದ ಕೊಚ್ಚಿ ಹಾಕುವುದಾಗಿ” ಹೇಳಿದ್ದಲ್ಲದೆ ನನ್ನ ಪತ್ರಿಕೆಯನ್ನು ಸುಟ್ಟು ವಿಕೃತವಾಗಿ ನಡೆದುಕೊಂಡಿದ್ದನು.ತೀರ್ಥಹಳ್ಳಿಯ ಕನ್ನಂಗಿ ಗ್ರಾಮದವನೋರ್ವ ಕೋವಿಯಲ್ಲಿ ಸುಟ್ಟು ಹಾಕುವೆ ಎಂದು ಘರ್ಜಿಸಿ ನಂತರ ಮೂಲೆಗೆ ಮುದುಡಿಕೊಂಡಿದ್ದನು. ಬೆಂಗಳೂರಿನ ಭೂಗತ ಲೋಕದ “ಡಾನ್” ಗಳ ಬಗ್ಗೆ ಲೈಪ್ ಇಸ್ಟರಿ ಬರೆಯುವಾಗಲು ಇಂತಹುದೇ ಬೆದರಿಕೆಗಳು ಸಾಮಾನ್ಯವಾಗಿತ್ತು, ಮುಂದುವರೆದಂತೆ ನನ್ನ ಪತ್ರಿಕಾ ಕಚೇರಿಗೆ ಕವಿತೆಯ ರೂಪದಲ್ಲಿ ಬೆದರಿಕೆ ಪತ್ರಗಳು ಬಂದಿವೆ, ಶಿವಮೊಗ್ಗದ ನಟೋರಿಯಸ್ ಬ್ರದರ್ಸ್ ನವರತ್ನ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಕರೆಯಿಸಿ ನನ್ನ “ಗೋಡಾ”ಕ್ಕೆ ಕೆಲಸ ಕೊಡಬ್ಯಾಡ ಎಂದಿದ್ದರು, ಲ್ಯಾಂಡ್ ಮಾಫಿಯಾದ ಅಸಾಮಿಯೋರ್ವ ಕೂಡ ಹಲ್ಲೆ ಮಾಡುವುದಾಗಿ ಹೇಳಿ ಕಳುಹಿಸಿದ್ದನು, ಹೀಗೆ ಸಾಕಷ್ಟು ಬೆದರಿಕೆಗಳು, ಕರೆಗಳು ಬಂದಿವೆ, ಯಾವುದೇ ಕ್ಷಣದಲ್ಲಿಯೂ ಯಾವ ಕರೆಗಳಿಗೂ ಜಗ್ಗಲಿಲ್ಲ-ಕುಗ್ಗಲಿಲ್ಲ, ಆಗಾಗ್ಗೆ ನಾನೋರ್ವ ಕ್ರಿಮಿನಲ್ ಜರ್ನಲಿಸ್ಟ್ ಎಂದು ನನ್ನನ್ನು ಸಂಭೋದಿಸುತ್ತಿದ್ದ ಒಂದಿಷ್ಟು ಪತ್ರಿಕಾ ಮಿತ್ರರ ನಾಮಾಂಕಿತವೂ ವರದಾನವೇ ಆಗಿತ್ತು, ಕ್ರಿಮಿನಲ್ ಜರ್ನಲಿಸ್ಟ್ ಅಲ್ಲದಿದ್ದರೂ ಉವಾಚಿಸಿಕೊಂಡು ಕ್ರಿಮಿನಲ್ ಅಂದ ಮ್ಯಾಲೆ ಅಸಲಿ ಕ್ರಿಮಿನಲ್ ಗಳಿಗೇನು ಕಿಮ್ಮತಿತ್ತು ಹೇಳಿ..?
ಏನೇ ಆಗಲಿ ಸಂಘಟನೆಯ ಮೂಲ ಹಾದಿಯಲ್ಲಿ ಪತ್ರಕರ್ತನಾಗಿ ಬಂದ ಹೊಸದರಲ್ಲಿಯೇ ಕೊಳೆತು ಹೋದ ಜೀವಂತ ಶವಗಳಿವೆ ಈ ರಂಗದಲ್ಲಿ ಎಂದೆನಿಸಿತ್ತು, ಸಾಮಾಜಿಕವಾದ ಬಹಿಷ್ಕಾರ, ನಿರಂತರವಾದ ತೇಜೋವಧೆ, ಸಾಮಾಜಿಕವಾಗಿ ನಡೆಸಬಹುದಾಗಿದ್ದ ಕೊಲೆ ಯತ್ನಗಳು, ಕ್ರಿಮಿನಲ್ ಎನ್ನುವ ತಳಹದಿಯಲ್ಲಿಯೇ ಎಲ್ಲವನ್ನು ಸ್ವೀಕರಿಸಿ “ಕ್ರಿಯಾಶೀಲತೆಗೆ, ತನ್ನಲ್ಲಿರುವ ರಚನಾತ್ಮಕತೆಯ ಬೆಳಕಿನ ಪ್ರಜ್ವಲಿಸುವಿಕೆಯನ್ನು ಎಂದಿಗೂ ನಂದುವುದಕ್ಕೆ ಬಿಡಲಿಲ್ಲ,
ಬಹುವ್ಯಾಪಿ ಚೆತಾವಣೆಗಳು ಈ ಬೆಳಕಿನಲ್ಲಿ ಕ್ರಿಮಿಕೀಟಗಳಂತೆ ಸುಟ್ಟು ಹೋದವು ಎಂದರೆ ಅದು “ಬರಹಕ್ಕೆ” ಇರುವ ವಿಶೇಷ ತಾಕತ್ತು ಎಂದುಕೊಂಡೆ, ಬರಹದ ಹಾದಿಯನ್ನು ಸುದ್ದಿಗಷ್ಟೆ ಸೀಮಿತಗೊಳಿಸದೆ “ಸಾಹಿತ್ಯ” ಸಮಾಜಮುಖಿ”ಯ ಚಿಂತನೆಗಳತ್ತ ದೌಡಾಯಿಸಿಕೊಂಡು ಅವೆಲ್ಲವನ್ನು ಶಾಶ್ವತೀರಣಗೊಳಿಸುವತ್ತ ಬಹುರೂಪಿಯಂತೆ “ಅಕ್ಷರ ಸೇನಾನಿ’iiಗಿದ್ದೇನೆ, ಇದಕ್ಕೆ ಸಾಕ್ಷೀ ಎಂಬತೆ ಹತ್ತಾರು ಕೃತಿಗಳು ಸಾರಸ್ವತಾ ಲೋಕದಲ್ಲಿ ಚರ್ಚಿತಗೊಳ್ಳುತ್ತಿವೆ,
“ಅಕ್ಷರವೇ ಉಸಿರು” ಎನ್ನುವ ಎದೆವಾಕ್ಯ ಶಿಲೆಯಂತೆ ಸ್ಥಾಪಿತಗೊಂಡಿದೆ, ನಿತ್ಯವೂ ಅದನ್ನು ಆರಾಧಿಸುತ್ತೇನೆ, ದಿನೇ..ದಿನೇ ಅಧ್ಯಯಿಸುವುದಕ್ಕೆ, ಕಲಿಯುವುದಕ್ಕೆ ಮನಸೊಡ್ಡಿದ್ದೇನೆ, ಕನ್ನಡದ ಮಾತೆ ಎದುರು ನಾನು ಖಾಯಂ ವಿದ್ಯಾರ್ಥಿಯಾಗಿ ಕರೆಗಳ ಮುಗಿದು ನಿಂದಿದ್ದೇನೆ, ಆಕೆಯ ಮಡಿಲಿನ ಮಗುವಾಗಿದ್ದೇನೆ ಎಂದು ಈ ಸಂದರ್ಭದಲ್ಲಿ ಇಲ್ಲಿ ಲಗತ್ತಿಸಲು ಇಚ್ಚಿಸುತ್ತೇನೆ. ಸಮಾಜದಲ್ಲಿ ಬರಹಗಳು ಎಲ್ಲವನ್ನು ಪರಿಚಯಿಸುತ್ತದೆ ಆದರೆ ಕೆಲವೊಂದಕ್ಕೆ ಪರಿಚಯವಿದ್ದರೂ ಕೊಂಡಿಯಾಗಿ ಬೆಸೆದುಕೊಳ್ಳಬಾರದಷ್ಟೆ ಎಂದು ತಮ್ಮ ಮುಂದಡಿ ಅನುಭವಿತ ಘಟನೆಗಳನ್ನು ಬಹಳವಾಗಿ ವೈಭವಿಕರಿಸಿಕೊಳ್ಳದೆ ಹೇಳಿದ್ದೇನೆ, ಇಂತಹುದೇ ಮತ್ತೊಂದು ಘಟನೆಯನ್ನು ತಿಳಿಸಿ ಈ ಲೇಖನದ ಅಂತಿಮ ವಾಕ್ಯಕ್ಕೆ ಬರುತ್ತೇನೆ.
ಹೀಗೆ ಅಂದು ೨೮ ಜೂನ್ ೨೦೦೯ರ ಹೊತ್ತು ಸಚಿವರೊಬ್ಬರು ಬೆಳಗ್ಗೆ ೭.೪೫ರ ಸಮಯದಲ್ಲಿ ಮೀನಾಕ್ಷಿ ಭವನದ ಹತ್ತಿರದಲ್ಲಿರುವ “ಫ್ರೆಂಡ್ಸ್ ಬ್ಯಾಡ್ಮಿಂಟನ್” ಕ್ಲಬ್‌ಗೆ ಕರೆಸಿಕೊಂಡರು ನನಗೆ ಅಲ್ಲಿ ನೋಡಿ ಒಂದೇ ಸಮನೆ ಬೈಯುವುದಕ್ಕೆ ಶುರು ಮಾಡಿದರು. “ನಿನ್ನ ಪೆನ್ನು ಇರೋದು ನನ್ನ ಮೇಲೆ ಬರೆಯುವುದಕ್ಕಲ್ಲ ಹುಷಾರ್ ನಿನ್ನ ಮೇಲೆ ಪೋಲಿಸರನ್ನು ಬೇಟೆ ನಾಯಿಗಳಂತೆ ಬಿಟ್ಟು ಬೇಟೆ ಮಾಡಿಸುತ್ತಿದ್ದೆ. ಆದ್ರೆ ನಮ್ ಹುಡ್ಗ ಏನ್ನೋ ಕಾರಣಕ್ಕೆ ಬಿಟ್ಟಿದ್ದೇನೆ. ಹೋಗಿ ಬದ್ಕೋ.. ಎಂಬುದಾಗಿ ಜೀವಬೆದರಿಯೊಡ್ಡಿದ್ದರು.( ಓoಣhiಟಿg ಃuಣ ಇಟಿಛಿouಟಿಣeಡಿ ) ನನಗೆ ನಗುವುದಷ್ಟೆ ಉಳಿದಿತ್ತು, ಎನ್ಕೌಂಟರ್ ಮಾಡುವುದಕ್ಕೆ ನಾನು ಯಾವ ಸೀಮೆ ಕ್ರಿಮಿನಲ್, ನಾನೋರ್ವ ಪುಟ್ಪಾತಿನಲ್ಲಿ ನಿಂತಿರುವ ಸಾಮಾನ್ಯ ಬರಹಗಾರ, ಪಾಪ ಅವರು ಬಹಳ ಕೋಪಾಧ್ರಿಕ್ತರಾಗಿದ್ದರು, ಈ ಸಮಯದಲ್ಲಿ ಬಂದ ಮಾತಾಗಿತ್ತು, ಆದರೆ ನಾನು ಈ ಕುರಿತಾಗಿ ದೂರು ಕೂಡ ನೀಡಿದ್ದು ನೆನಪಿದೆ. ಹೀಗೆ ವೃತ್ತಿ ಧ್ವೆಷಕ್ಕೆ, ಅಸಹಿಸುವಿಕೆಯ ಕೂಪಕ್ಕೆ ಬರಹಗಾರ ಸಿಲುಕಿ ನಲುಗಿ ಬಿಡುತ್ತಾನೆ ಇದರಿಂದ ತನ್ನ ಸ್ವಂತದ ಬದುಕಿನಲ್ಲಿ ನಡೆದು ಹೋದ ಸಾವು-ಸಂಕಟಗಳ ಕುರಿತಾಗಿಯೂ ಅರಿವು ಅನೈತಿಕವಾದ ದಾಳಿಗಳು ನಡೆಸುವವರಿಗೆ ಇರುವುದಿಲ್ಲ, ಅವರಿಗೆ ನೋವುಗಳ ಬವಣೆಗಳ ಬಣವೆಗೆ ದೂಡಿ ಸಂತೋಷಿಸಿಕೊಳ್ಳುವುದಷ್ಟೆ ಬೇಕಾಗಿರುತ್ತದೆ.
ಇಂತಹ ನೂರಾರು ಕಥಾನಕಗಳ ನಡುವೆಯೂ ಬರಹಗಾರರು ಎಂದಿಗೂ ಎದೆಗುಂದದಿರಲಿ, ಸಾಂವಿಧಾನಿಕವಾದ ಬೆಂಬಲ ಇದ್ದೇ ಇರುತ್ತದೆ ಎಲ್ಲಿ ಅಭಿವ್ಯಕ್ತಿಗಳು ಉತ್ತಮ ಸಮಾಜದ ನಿರ್ಮಾಣದಲ್ಲಿ ತೊಡಗಿರುತ್ತದೋ ಅಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿಯೇ ಬಂದು ಅಣುಕಿಸುತ್ತದೆ, ಇದನ್ನು ಸಮರ್ಥವಾಗಿ ಸೋಲಿಸುವ ಹೋರಾಟದ ಧೃತಿ ಬರಹಗಾರನಿಗಿದ್ದರೆ ಆ ಬರಹವೇ ರಕ್ಷಣೆಗೆ ನಿಂತಿರುತ್ತದೆ ಎನ್ನುವುದು ನಾವುಗಳು ಮರೆಯಬಾರದು ಎಂದು ಈ ಸಂದರ್ಭದಲ್ಲಿ ಅಂಬೋಣಿಸುತ್ತೇನೆ.

