Saturday, August 1, 2026
HomeಸಂಪಾದಕೀಯI ಎಂ.ಶ್ರೀಕಾಂತ್‌ರವರಿಗೆ ಶಿವಮೊಗ್ಗದಲ್ಲಿ I ರಾಜಕೀಯ ಭವಿಷ್ಯ ಇದಿಯಾ..?! I

I ಎಂ.ಶ್ರೀಕಾಂತ್‌ರವರಿಗೆ ಶಿವಮೊಗ್ಗದಲ್ಲಿ I ರಾಜಕೀಯ ಭವಿಷ್ಯ ಇದಿಯಾ..?! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಎಂ.ಶ್ರೀಕಾಂತ್‌ರವರಿಗೆ ಶಿವಮೊಗ್ಗದಲ್ಲಿ I ರಾಜಕೀಯ ಭವಿಷ್ಯ ಇದಿಯಾ..?! I

ಶಿವಮೊಗ್ಗದ ರಾಜಕೀಯ ಪಥಗಳು, ಹೇಗೆ ಬೇಕಾದರೂ ಪಲ್ಲಟಗೊಳ್ಳುತ್ತದೆ, ಅತೀ ಸೂಕ್ಷ್ಮ ಕ್ಷೇತ್ರವಾಗಿರುವ ನಗರ ವಿಧಾನಸಭಾ ಕ್ಷೇತ್ರ ಹೀಗೊಂದು ಕೋಮು ಸಂಘರ್ಷಗಳ ತುದಿಯಲ್ಲಿದೆ, ಇಂತಹ ಸಾಂದರ್ಭಿಕತೆಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅನುಕೂಲವಾಗಿದ್ದು ಹೆಚ್ಚು, ಎನ್ನುವುದು ಕಳೆದ ರಾಜಕೀಯ ವಿದ್ಯಮಾನಗಳಲ್ಲಿ ದರ್ಶಿಸಿಕೊಳ್ಳುತ್ತದೆ, ಈ ಮಾತ್ರದಿ ಕಾಂಗ್ರೆಸ್ ಪಕ್ಷದಿಂದ ಅಸೆಂಬ್ಲಿ ಅಕಾಂಕ್ಷಿಯಾಗಿದ್ದ ಕೆ.ಹೆಚ್ ಶ್ರೀನಿವಾಸ್, ಇಸ್ಮಾಯಿಲ್ ಖಾನ್, ವಿಜಯಮಲ್ಯ ಪಕ್ಷದಿಂದ ಸ್ಪರ್ಧಿಸಿದ್ದ ಮಾಜೀ ವಿಶ್ವಹಿಂದೂಪರಿಷತ್‌ನ ಮುಖಂಡರಾಗಿದ್ದ ಅನಂತರಾಮಯ್ಯ, ಸ್ವತಂತ್ರ ಅಭ್ಯರ್ಥಿಯಾಗಿದ್ದ ವೈ.ಹೆಚ್ ನಾಗರಾಜ್, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಿರಂಜನ್, ಇಂತಿವರುಗಳೆಲ್ಲರೂ ಠೇವಣಿ ಕಳೆದುಕೊಂಡು ಬಸವಳಿದಿದ್ದರು, ಹೀಗೆ ನೋಡಿದರೆ, ಇದೇ ಜೆಡಿಎಸ್ ಪಕ್ಷದಿಂದ ಮೊದಲ ಭಾರಿಗೆ ಸ್ಪರ್ಧಿಸಿದ್ದ ಎಂ.ಶ್ರೀಕಾಂತ್‌ರವರು ಹದಿನೆಂಟು ಸಾವಿರ ಮತಗಳ ಆಜು-ಬಾಜಿಗೆ ಮೀಸಲಾಗಿ ಪರಭಾವಗೊಂಡಿದ್ದರು, ಈ ನಿಟ್ಟಿನಲ್ಲಿ ಕಳೆದ ಭಾರಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಯೋಗೇಶ್‌ರವರು ತಮ್ಮ ರಾಜಕೀಯ ಸಾಮರ್ಥ್ಯ ಹಾಗೂ ನಿರಂತರ ಜನಸ್ನೇಹಿ ಸ್ಪಂದನೆಗಳಿಂದಾಗಿ ಗೆಲುವಿನ ಸಾಮಿಪ್ಯದಲ್ಲಿ ಪಯಣಿಸಿದ್ದರು, ಇನ್ನೂ ಹೆಚ್.ಎಂ ಚಂದ್ರಶೇಖರಪ್ಪನವರು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಲು ಬಡವರ ಬಾದಾಮಿ ಎಸ್.ಬಂಗಾರಪ್ಪನವರ ನೆರಳು ಕಾರಣವಾಗಿತ್ತು, ಕೆ.ಬಿ ಪ್ರಸನ್ನಕುಮಾರ್‌ರವರು ೨೭೦ ಮತಗಳಿಂದ ಗೆಲುವು ಸಾಧಿಸಿ ಶಾಸಕರಾಗಲು ಬಿಜೆಪಿಯಲ್ಲಿನ ಒಡಕುಗಳು ಹಾಗೂ ಕೆಜೆಪಿ ಹಾಗೂ ಬಿಜೆಪಿ ಕಾರಣವಾಗಿತ್ತು, ಈ ಟಿಪ್ಪಣಿಗಳೊಂದಿಗೆ ಒಟ್ಟಾರೆ ನೋಡುವುದರಾದರೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಬಹುತೇಕ ಕೋಮುಭಾವನೆಗಳ ಮೇಲೆಯೇ ಕೇಂದ್ರಿಕೃತವಾಗಿರುವುದು ವಾಸ್ತವವಾಗಿದೆ.

ಇನ್ನೂ ಈ ಕ್ಷೇತ್ರ ಇಡೀ ರಾಜ್ಯದ ಪವರ್ ಪಾಲಟಿಕ್ಸ್‌ನ್ನು ಪ್ರತಿನಿಧಿಸುತ್ತದೆ, ಈ ಮಾತ್ರದಿಂದಲೇ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಮಹತ್ವವಿದೆ, ಇಲ್ಲಿನ ನಾಗರೀಕ ವಲಯ ಕೂಡ ಸಾಮಾಜಿಕ ಹಿನ್ನೆಲೆಯನ್ನು ಕೂಡ ಗಣನೆಗೆ ತೆಗೆದುಕೊಳ್ಳುತ್ತದೆ, ಹೋರಾಟದ ಹಿನ್ನಲೆ, ಜನಸ್ಪಂದನೆಗಳು, ಮೂಲಭೂತ ಹಕ್ಕುಗಳಿಗಾಗಿ, ಜನನೆಮ್ಮದಿಗಾಗಿ, ಜನರ ಕ್ಲಿಷ್ಟಕರ ಸಂದರ್ಭಗಳಲ್ಲಿ ಯಾವ ಜನಪ್ರತಿನಿಧಿ ಜನಸ್ನೇಹಿಯಾಗಿರುತ್ತಾರೋ ಅಂತಹವರನ್ನು ಬಿಟ್ಟುಕೊಡುವ ಮಾತೇ ಇಲ್ಲ ಎನ್ನುವಂತೆ ಈ ನೆಲದ ಮಲೆನಾಡಿಗರು ನಿರ್ಧರಿಸಿ ಬೆಂಬಲಿಸಿದ್ದಾರೆ ಹೀಗಾಗಿಯೇ ಒಂದು ದಿನಮಾನದಲ್ಲಿ ಎಸ್.ಬಂಗಾರಪ್ಪನವರನ್ನು ಬಡವರ ಬಾದಾಮಿಯಾಗಿಯೇ ಅವಲತ್ತುಕೊಂಡಿದ್ದರು, ಇಂತಹ ಮನಸ್ಥಿತಿಯ ಹಿಡಿತವನ್ನು ಸಾಧಿಸುವಲ್ಲಿ ಜಾತ್ಯಾತೀತ ನಾಯಕರು ವಿಫಲಗೊಂಡಿರುವುದರಿಂದಲೇ ಸೋಲುಗಳಲ್ಲಿಯೇ ಮಿಂದು ಹೋಗಿದ್ದಾರೆ, ಅಲ್ಲದೆ ಭಾರತೀಯ ಜನತಾ ಪಕ್ಷದ ಪವರ್ ಕ್ಷೇತ್ರವನ್ನು ಇಂದಿಗೂ ಅಲುಗಾಡಿಸಲು ಸಾಧ್ಯವಿಲ್ಲವಾಗಿದೆ.

ಇಂತಹದೊಂದು ವಾಸ್ತವತೆಯ ತಳಹದಿಯಲ್ಲಿ ಎಂ.ಶ್ರೀಕಾಂತ್ ಶಿವಮೊಗ್ಗದಲ್ಲಿದ್ದು ಕಳೆದ ಎರಡು ದಶಕಗಳಿಂದ ರಾಜಕೀಯದಲ್ಲಿದ್ದು ಏನು ಸಾಧಿಸಿದ್ದಾರೆ, ಎನ್ನುವ ತುಲನೆಗೈಯುವ ಅವಸರಗಳ ಜರೂರತ್ತಿದೆ, ಏಕೆಂದರೆ ಕಳೆದ ಲೇಖನದಲ್ಲಿ ಎಂ.ಶ್ರೀಕಾಂತ್‌ರವರು ಸಾಮಾಜಿಕ ಹೋರಾಟಗಾರರಿಗಿಂತಲೂ ಭೂಗತ ಜಗತ್ತಿನ ನಂಟು ಬೆಸೆದುಕೊಂಡಿದ್ದಾರೆ, ಶಿವಮೊಗ್ಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಯಾವುದೇ, ಕೊಲೆ, ಸುಲಿಗೆ, ಬೇಲಿ ಸುತ್ತುವಿಕೆ, ಲ್ಯಾಂಡ್ ಲಿಟಿಗೇಶನ್, ಬೆಂಗಳೂರು ಭೂಗತ ಜಗತ್ತು ಶಿವಮೊಗ್ಗಕ್ಕೆ ದಾಂಗುಡಿಯಿಟ್ಟಿರುವ ಅವಸರಗಳು, ಜುಗಾರಿಗಳಂತಹ ಕ್ರೈಂ ಚಟುವಟಿಕೆ ನಿಯಂತ್ರಣಕ್ಕೆ ಎಂದಿಗೂ ಜನಹಿತ ಬಯಸಿ ಪತ್ರಿಕಾಗೋಷ್ಟಿಗಳನ್ನು ಈ ಎರಡು ದಶಕಗಳಿಂದ ಒಮ್ಮೆಯಾದರೂ ಮಾಡಲಿಲ್ಲ, ಬದಲಿಗೆ ಇಂತಹ ವಿಷಯಗಳಿಗೆ ತಕರಾರಿವಿಲ್ಲ ಎಂಬಂತೆ ಮೌನವಹಿಸಿ ಬಿಟ್ಟರು ಎನ್ನುವ ಸಾಲು ಉಲ್ಲೇಖಗೊಳಿಸಿದ್ದೆ, ಆದರೆ ಇದು ಸಾರ್ವಜನಿಕವಾಗಿ ಚರ್ಚೆಗೆ ಬರುತ್ತಿದ್ದಂತೆಯೇ ಎಂ.ಶ್ರೀಕಾಂತ್‌ರವರ ಪರವಾದ ಲೇಖನಗಳು ಕಾರ್ಪೋರೆಟ್ ಮಾಧ್ಯಮದಿಂದ ಹಿಡಿದು ಲೋಕಲ್ ಪತ್ರಿಕೆಗಳಲ್ಲಿ ಅರ್ಧಪುಟದಷ್ಟು ಕಾಣಿಸಿಕೊಂಡು ಬರಹದ ಮೊದಲ ಪ್ರಶ್ನೆಯನ್ನು ಮರೆಮಾಚುವಂತೆ ನೋಡಿಕೊಳ್ಳುವ ಮಡಿವಂತಿಕೆಗೆ ಸ್ವತಃ ಎಂ.ಶ್ರೀಕಾಂತ್‌ರವರು ತೆರಳಿರುವುದು ಹಾಸ್ಯಾಸ್ಪದವಾಗಿದೆ,

ಇಂತಿವರ ಕುರಿತಾಗಿ ಸೂರ್ಯಗಗನ ಪತ್ರಿಕೆ ನೂರಕ್ಕೂ ಹೆಚ್ಚು ಭಾರಿ ಅವರಲ್ಲಿರುವ ಸೇವಭಾವನೆಗಳು, ದೇಣಿಗೆಯಂತಹ ಸ್ಪಂದನೆಗಳ ಸಮಾಜಮುಖಿ ವ್ಯಕ್ತಿತ್ವವನ್ನು ಗುರುತಿಸಿ ಬರೆದು ಬಿತ್ತರಿಸಿದೆ, ಇಲ್ಲಿ ಯಾವುದೇ ಕಾರಣಕ್ಕೂ ಅವರಿಂದ ಪತ್ರಿಕೆ ಏನನ್ನು ಬಯಸಿಲ್ಲ ಇದೊಂದು ಅಭಿವ್ಯಕ್ತಿ ಎಂದೇ ಭಾವಿಸಿ ಬಿತ್ತರಗೊಳಿಸಲು ಮುಂದಾಗಿತ್ತು, ಆದರೆ ವ್ಯಕ್ತಿತ್ವದ ಹೊಗಳಿಕೆಯಷ್ಟೆ ಅಲ್ಲ, ಟೀಕೆಗಳ ಜರೂರತ್ತು ಎದುರಾದರೆ ಖಂಡಿತವಾಗಿ ಅದನ್ನು ಯಾವುದೇ ಮುಲಾಜಿಲ್ಲದೆ ಅಭಿವ್ಯಕ್ತಿಗೊಳಿಸಬೇಕು, ಹೀಗಾದೊಡೆ ಮಾತ್ರ ಅದೊಂದು ಮೌಲ್ಯವುಳ್ಳ ಬರಹವಾಗುತ್ತದೆ, ಇಂತಹ ನಿರ್ಧಿಷ್ಟ ದಿಕ್ಷೂಚಿ ಬರಹದ ಅಭಿವ್ಯಕ್ತಿಗಳಿಗಿದ್ದರೆ ವ್ಯಕ್ತಿತ್ವದ ಬದಲಾವಣೆಗಳಿಗೂ ಕಾರಣವಾಗಿ ವಿಕಸನಗಳಿಗೆ ಹಾದಿಮಾಡಿಕೊಟ್ಟಂತಾಗುತ್ತದೆ, ಎನ್ನುವ ಭಾವದಡಿ ಇಲ್ಲಿ ಲಗತ್ತಿಸಲಾಗಿದೆ.

ನಿಜಕ್ಕೂ ಎಲ್ಲಾ ಸರಿ, ಯಾಕೆ ಭೂಗತರ ನಂಟು..? ಎಂ.ಶ್ರೀಕಾಂತ್‌ರವರಿಗೆ ಎನ್ನುವ ಪ್ರಶ್ನೆಯನ್ನು ಮುಂದುವರೆಸಿ, ಶಿವಮೊಗ್ಗದಲ್ಲಿ ನಡೆಯುತ್ತಿರುವ ಎಲ್ಲಾ ಕ್ರೈಂ ಅನಾಹುತಗಳಿಗೆ ನಿಮ್ಮ ನೆರಳಿದಿಯಾ..? ಜುಗಾರಿಯಂತಹ ದಂಧೆಗಳಿಗೆ ನಿಮ್ಮ ಪಾಲುದಾರಿಕೆ ಇದಿಯಾ..?! ಶಿವಮೊಗ್ಗದ ಬಿಎಸ್‌ವೈ ಒಡೆತನದ ರಾಯಲ್ ಆರ್ಕಿಡ್‌ನಲ್ಲಿ ಕಳೆದ ಮೂರು ತಿಂಗಳೊಳಗೆ ಅಥವಾ ಅದರ ಆಜು-ಬಾಜಿನಲ್ಲಿ ಬೆಂಗಳೂರಿನ ಭೂಗತ ಡಾನ್ ಸೈಲೆಂಟ್ ಸುನೀಲ ಬಂದು ತಂಗಿದ್ದ ಆತನ ಅತಿಥ್ಯಕ್ಕೆ ನೀವ್ಯಾಕೆ ಮುಂದಾಗಿದ್ದೀರಿ, ಇನ್ನೂ ಹಳೆಯ ಜೊತೆಗಾರ ನಟೋರಿಯಸ್ ಮುದಿ ಮುಲಾಮನ ಎಂಟ್ರಿ ಕೂಡ ಆಗಿದೆ, ಆತನಿಗೂ ನಿಮ್ಮದೆ ಆತಿಥ್ಯವೇಕೆ..?! ಶಿವಮೊಗ್ಗವನ್ನು ಹೋರಾಟದ ನಗರಿ ಮಾಡುವುದಕ್ಕೆ ಹೊರಟಿದ್ದೀರೋ..? ಅಥವಾ ಇದೊಂದು ರಾಜ್ಯದ ನಟೋರಿಯಸ್‌ಗಳಿಗೆ ತಂಗುದಾಣವಾಗಿಸುವ ಇಚ್ಚೆಯೇ..?!, ಈ ಆತಿಥ್ಯ ಹಾಗೂ ಅವರುಗಳ ಮೊಕ್ಕಾಂ ಗಳಿಗೆ ಇಲ್ಲಿನ ಸಿಸಿ.ಟಿವಿ ಪುಟೇಜೆಸ್‌ಗಳು ಸತ್ಯಕರೀಸುತ್ತದೆ ಅಲ್ಲವೇ, ಇದೇ ಎಂ.ಶ್ರೀಕಾಂತ್ ಮೊದಲೆರೆಡು ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಜ್ಯುವೆಲ್‌ರಾಕ್‌ನಲ್ಲಿ ತಂಗಿದ್ದ ಬೆಂಗಳೂರಿನ ಕಾಲಪತ್ಥರ್, ಮುಲಾಮ, ಇನ್ನೀತರ ಎಲಿಮೆಂಟ್ಗಳಿಂದ ಮತದಾರರಿಗೆ ಅರಿವು ಮೂಡಿಸುವ ಪ್ರಯತ್ನವಾಗಿತ್ತೇ..?!,

ನಿಮಗೆ ಶಿವಮೊಗ್ಗ ಲಾಭಾದಾಯಕವಾಗಿದಿಯಾ..?! ನಾಲ್ಕೈದು ಅಸೆಂಬ್ಲಿ ಚುನಾವಣೆ, ನಗರಸಭೆ, ಮಹಾನಗರ ಪಾಲಿಕೆ, ಸಂಸದರ ಚುನಾವಣೆ, ವಿಧಾನಪರಿಷತ್ ಚುನಾವಣೆಗಳು ಜೆಡಿಎಸ್‌ನಲ್ಲಿರುವಾಗಲೇ ಎದುರಾದಗಲೆಲ್ಲಾ ನಿಮ್ಮ ಅಸಲಿ ಪಾತ್ರ ಏನಿತ್ತು..? ಈ ಕುರಿತಾಗಿ ಶಿವಮೊಗ್ಗದ ಜನತೆಗೆ, ಮುಖಂಡರಿಗೆ ಯಾವ ಮಾಹಿತಿಗಳು ಇಲ್ಲವೆನ್ನುತ್ತಿರಾ..? ಇಂತಹ ನೂರಾರು ಪ್ರಶ್ನೆಗಳಿಗೆ ಗ್ರಾಸವಾಗಿ ಬಿಡುವ ಎಂ.ಶ್ರೀಕಾಂತ್‌ರವರು ಜೆಡಿಎಸ್‌ನಲ್ಲಿ ಇದ್ದು ತಮ್ಮ ರಾಜಕೀಯ ಮುತ್ಸದ್ದಿತನ ಮೆರೆದು ಬದಲಾವಣೆಗಳ ಪಥದಲ್ಲಿ ಸಾಗಿ, ಜನಸ್ನೇಹಿ ಹೋರಾಟಗಳಲ್ಲಿ ಧುಮುಕಬೇಕಾಗಿತ್ತು, ಆದರೆ ಬ್ಯಾಲೆನ್ಸ್ ಪೊಲೀಟಿಕಲ್ ಮಾಡಲೊರಟಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ರಾಜಕೀಯ ಸ್ಥಿತ್ಯಂತರಗಳಲ್ಲಿ ಬಳಲುತ್ತಿರುವುದು ಬಲು ನೋವಿನ ಸಂಗತಿಯಾಗಿದೆ,

ಮುಂದಾದರೂ ಎಂ.ಶ್ರೀಕಾಂತ್‌ರವರು ಭೂಗತ ಜಗತ್ತಿನ ನಂಟುಗಳನ್ನು ಶಿವಮೊಗ್ಗದಲ್ಲಿ ಬೆಸೆಯುವುದು ಬಿಟ್ಟು, ಪೋರ್ಜರಿ ದಾಖಲಾತಿಗಳಿಂದ ಬೇಲಿ ಸುತ್ತುವ ಜಾಲಗಳನ್ನು ಪೋಷಿಸುತ್ತಿದ್ದಾರೆ ಎನ್ನುವ ಚರ್ಚೆಗಳಿಗೆ ಗ್ರಾಸವಾಗದೆ, ಕ್ರೈಂ ಎನ್ನುವ ಸುಫಾರಿ ದಂಧೆಕೋರರಿಂದ ದೂರವಿದ್ದು, ಸಾಮಾಜಿಕ ನ್ಯಾಯಗಳತ್ತ ಜನಸ್ನೇಹಿ ದನಿಯಾದೊಡೆ ಮಾತ್ರ, ಶಿವಮೊಗ್ಗದಲ್ಲಿ ರಾಜಕೀಯ ಭವಿಷ್ಯ ಇದೆ ಎನ್ನಬಹುದು, ಇದು ಬಿಟ್ಟರೆ ಕಾಂಗ್ರೆಸ್ ಎನ್ನುವ ಸಮುದ್ರದಂತಹ ರಾಷ್ಟ್ರೀಯ ಪಕ್ಷದಲ್ಲಿ ಯುವಕನೋರ್ವ ತನ್ನ ಹೋರಾಟಗಳಿಂದಲೇ ರಾಜ್ಯ ನಿಗಮ ಮಂಡಳಿಯ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಚೇತನ್ ಗೌಡ ಅಂತಹ ಯುವ ಮನಸಿನಂತಹವರಿಗೆ ಹೂವಿನ ಬೊಕ್ಕೆ ಕೊಟ್ಟು ಏಳನೇ ಕೆಳಸ್ತರದ ಸಾಲಿನಲ್ಲಿ ಕೂತು ಕೊಳ್ಳುವ ಸ್ಥಿತಿಯಿಂದಲೂ ಹೊರಬರಬಹುದು,

ಯಾವುದೇ ಕಾರಣಕ್ಕೂ ಶಿವಮೊಗ್ಗದ ಕೆಲ ಪತ್ರಕರ್ತರನ್ನು  ನಂಬಿ, ಎಂದಿಗೂ ನಮ್ಮೊಂದಿಗೆ ಇರುತ್ತಾರೆ ಎನ್ನುವ ಅವಸರಗಳಲ್ಲಿ ರಾಜಕೀಯ ವಿದ್ಯಮಾನಗಳು ಬದಲಾದೊಡೆ ಹಾಗೆಯೇ ನಿಮ್ಮ ವಿರುದ್ದ ಸಂಭವಿಸಬಹುದಾದ ಘಟಿತ ಘಟನೆಗಳನ್ನು ಪುಂಕಾನು ಪುಂಕವಾಗಿ ಬರೆದು ಪ್ರಕಟಿಸಿ ಮೊಹರೊತ್ತುತ್ತಾರೆ, ಇದಕ್ಕೆ ಹಸಿ ಜೀವಂತ ಉದಾಹರಣೆ ಎಂದರೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಆರ್.ಎಂ ಮಂಜುನಾಥ್ ಗೌಡ ಎನ್ನುವುದು ಎಂ.ಶ್ರೀಕಾಂತ್‌ರವರಿಗೆ ಗೊತ್ತು ಮಾಡಿಕೊಳ್ಳಬೇಕಾಗಿದೆ, ಇಲ್ಲದಿದ್ದೊಡೆ ಶಿವಮೊಗ್ಗದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಭವಿಷ್ಯವಿಲ್ಲ ಎಂದೇಳಬಹುದು, ಪ್ರಾಕೃತಿಕ ನಿಯಮದಂತೆ ಬದಲಾವಣೆ ಮುಖ್ಯ, ಎಲ್ಲರಿಗೂ ಅವಕಾಶ ಇರುತ್ತದೆ, ಬದಲಾಗದಿದ್ದರೆ ಪ್ರಕೃತಿಯೇ ನಿರ್ಧರಿಸುತ್ತದೆ ಎಂದು ಈ ಸಂದರ್ಭದ ಉವಾಚವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I