Saturday, August 1, 2026
HomeಅಂಕಣI ಶಿವಮೊಗ್ಗದ ಟೆರರ್ ಭೂಪಟದ I ಎಚ್.ಎಂ ಫೈಲ್ಸ್ I

I ಶಿವಮೊಗ್ಗದ ಟೆರರ್ ಭೂಪಟದ I ಎಚ್.ಎಂ ಫೈಲ್ಸ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಶಿವಮೊಗ್ಗದ ಟೆರರ್ ಭೂಪಟದ I ಎಚ್.ಎಂ ಫೈಲ್ಸ್ I

ಕಳೆದ ಎರಡು ಸಂಚಿಕೆಯಿಂದ ಮುಂದುವರೆದಂತೆ,  ‘ಶಿವಮೊಗ್ಗದ ಟೆರರ್ ಭೂಪಟದ ಎಚ್.ಎಂ ಫೈಲ್ಸ್’ ಎನ್ನುವ ತಲೆಬರಹದ ವಾಸ್ತವದ ಸ್ಟೋರಿಯ ಹಿಂದೆ, ಶಿವಮೊಗ್ಗದ ವೈಟ್ ಕಾಲರ್ ರಾಜಕಾರಣಿಯ ರಾಜಕೀಯ ಸಾಮ್ರಾಜ್ಯ ನಿರ್ಮಾಣ, ‘ಭೂ ಮಾಫಿಯಾ’ ಸೇರಿದಂತೆ ಕ್ರೈಂ ಲೋಕದ ಸಗಟುಗಳನ್ನು ತನ್ನ ಹಿಡಿತದಲ್ಲಿದಟ್ಟುಕೊಳ್ಳುವ ಹಪಾಹಪಿತನದಿ, ಜೀವಭಯದಿ ಸರಣಿ ಕೊಲೆಗಳು ನಡೆದಿರಬಹುದಾದ ಅಸಲಿ ಕಥಾನಕಗಳ ಒಳಹೂರಣವಿದು, ಕೋಟಿ ಕಂತೆಗಳಲ್ಲಿ ತೂಗಿಕೊಳ್ಳುವ ಈ ವೈಟ್ ಕಾಲರ್‌ನ ಕಪ್ಪು ಹೆಜ್ಜೆಗಳು, ಶಿವಮೊಗ್ಗದಲ್ಲಷ್ಟೆ ಅಲ್ಲದೆ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಾಸುಹೊಕ್ಕಾಗಿದೆ, ಈ ನಡುವೆ ಪಕ್ಕದ ರಾಜ್ಯ ಗೋವಾ, ಮುಂಬೈ ಅಂತಹ ಮಹಾನಗರಿಗಳಲ್ಲಿ ಈತನ ಜುಗಾರಿ ದಂಧೆಗಳಿವೆ, ಇಂತಹ ಅಪಾಯಕಾರಿ ವೈಟ್ ಕಾಲರ್ ಮೇಲೆ ಸುಫಾರಿ ಹತ್ಯೆಗಳಂತಹ ಬೀಕರತೆಗಳ ಆರೋಪಗಳಿವೆ, ಭೂಗತ ಲೋಕದಲ್ಲಿ ಇಂತಹದೊಂದು ಚರ್ಚೆ ಮಡುಗಟ್ಟಿದೆ, ಶಿವಮೊಗ್ಗದಲ್ಲಿಯು ಈ ಪರಿ ರೌಡಿಗಳು ಹೊಡೆದಾಡಿಕೊಂಡು ಬೀದಿ ಹೆಣವಾಗಲು ಈತನದ್ದೇ ಪಿತೂರಿಗಳಿವೆ ಎನ್ನುವ ಅಸಲಿ ಮಾಹಿತಿಗಳು ಪತ್ರಿಕಾ ಕಛೇರಿಗೆ ಲಿಖಿತವಾಗಿ ವಿಸ್ತೃತಗೊಳ್ಳುತ್ತಿದೆ, ಇಂತಹ ಅನೇಕತೆಗಳ ವರಾತಗಳ ಮುನ್ನದಿ, ಶಿವಮೊಗ್ಗದ ಹೆಚ್.ಎಂ ಫೈಲ್ಸ್ ಕುರಿತಾಗಿ ತಿಳಿದುಕೊಳ್ಳಬೇಕಾದ ಅತೀ ಜರೂರತ್ತಿದೆ ಎನ್ನುವ ಟಿಪ್ಪಣಿಯೊಂದಿಗೆ ಕಳೆದ ಸಂಚಿಕೆಯಿಂದ ಇನ್ನೊಂದು ಸಂಚಿಕೆಗೆ ವಿಸ್ತೃತಗೊಳಿಸಲಾಗುತ್ತಿದೆ,

‘ಶಿವಮೊಗ್ಗದಲ್ಲಿ ಹೆಬ್ಬೆಟ್ಟು ಮಂಜನ ಫೀಲ್ಡ್’
ಹೆಬ್ಬೆಟ್ಟು ಮಂಜನ ಫೀಲ್ಡ್ ನಲ್ಲಿ ಕೊಲೆ, ಸುಲಿಗೆ, ಬೆದರಿಕೆಗಳು ಸೇರಿದ್ದವು , ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಮೂರು ಕೇಸು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೧ ಪ್ರಕರಣ, ಜಯನಗರ ಪೊಲೀಸ್ ಠಾಣೆಯಲ್ಲಿ ೩ ಪ್ರಕರಣ, ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ೪ ಪ್ರಕರಣ, ಬೆಂಗಳೂರಿನಲ್ಲಿ ಒಟ್ಟು ೬ ಪ್ರಕರಣ ಗಳು, ಹಿರಿಯೂರಿನಲ್ಲಿ ನಡೆದ ೨ ಪ್ರಕರಣ ಸೇರಿದಂತೆ ೧೮ ಪ್ರಕರಣಗಳು ದಾಖಲಾಗಿವೆ, ಶಿವಮೊಗ್ಗದಲ್ಲಿ ಈ ಹಿಂದೆಯೇ ಆತನ ಮೇಲೆ ರೌಡಿ ಶೀಟರ್ ಪಟ್ಟಿ ತೆರೆಯಲಾಗಿತ್ತು, ರೌಡಿ ಶೀಟರ್ ಪಟ್ಟಿಯಲ್ಲಿ ಕಾಣಿಸಿಕೊಂಡೇ ಬೆಂಗಳೂರಿಗೆ ಹೋದ ಹೆಬ್ಬೆಟ್ಟು ಮಂಜ ಹಿರಿಯೂರಿನಲ್ಲಿ ಕೊರಂಗು ಕೃಷ್ಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹೆಸರು ಮಾಡಿಕೊಡಿದ್ದ ಹೆಬ್ಬೆಟ್ಟು ಮಂಜ ಉದ್ಯಮಿ ದಯಾನಂದ್ ಪೈ, ಮೇಲೆ ತನ್ನ ಸಹಚರನ ಮೂಲಕ ಬುಲೆಟ್ ಹಾರಿಸಿ ಮಲೇಷಿಯಾಕ್ಕೆ ಹಾರಿ ಹೋದ ಅಷ್ಠೇ ರೋಚಕತೆಯನ್ನು ಸಾರುತ್ತದೆ.

‘ಹೆಬ್ಬೆಟ್ಟು ಮಂಜನ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಸಿಸಿಬಿ ಪೊಲೀಸರು’
ಶಿವಮೊಗ್ಗದಲ್ಲಿ ರೌಡಿಶೀಟರ್ ಆಗಿ ಗುರುತಿಸಿ ಕೊಂಡ ಹೆಬ್ಬೆಟ್ಟು ಮಂಜ ಬೆಂಗಳೂರು ಸೇರಿದಂತೆ ವಿವಿದೆಡೆ ಪಾತಕಗಳ ನಡೆಸಿ ಕರ್ನಾಟಕದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಬಂದು ನಿಂತಾಗಲೇ ಹೆಬ್ಬೆಟ್ಟು ಮಂಜನ ಅಂಡರ್ ವರ್ಲ್ಡ್ ಡಾನ್ ಆಗುವ ಅಮಲು ಮತ್ತಷ್ಟು ನೆತ್ತಿಗೇರಿಸುವಂತೆ ಮಾಡಿತ್ತು, ಹೀಗಿದ್ದಾಗಲೇ ಉಧ್ಯಮಿ ದಯಾನಂದ್ ಪೈ ಕುಳಿತಿದ್ದ ಕಾರಿನ ಮೇಲೆ ಹೆಬ್ಬೆಟ್ಟು ಮಂಜ ಗುಂಡು ಹಾರಿಸಲು ತನ್ನ ಸಹಚರನಿಗೆ ತಿಳಿಸಿದ್ದ ಹೌದು ಅಂದು ೨೦೧೨ ನೇ ಇಸವಿ ಅಕ್ಟೊಬರ್ ೧೬ ನೇ ತಾರೀಖಿನ ದಿನ ಸಂಜೆ ೫:೩೦ ರ ಹೊತ್ತಿಗೆ ಬೆಂಗಳೂರಿನ ಬಸವನಗುಡಿಯ ಆಶ್ರಯ ವೃತ್ತದ ನ್ಯಾಷನಲ್ ಕಾಲೇಜು ಬಳಿ ಕಾರೊಂದರಲ್ಲಿ ಬಂದಿದ್ದ ಉದ್ಯಮಿ ದಯಾನಂದ್ ಪೈ ಮೇಲೆ ಗುಂಡು ಹಾರಿಸಿದ ಸಹಚರರು ಪೇರಿ ಕೀಳುತ್ತಾರೆ,

ಆದರೆ ದಯಾನಂದ್ ಪೈ ಅದರ ಅರಿವೆ ಆಗದೇ ಕುಳಿತಿರುತ್ತಾನೆ ಆ ಕಾರು ಬುಲೆಟ್ ಪ್ರೂಫ್ ಕಾರು ಎಂದು ಹೆಬ್ಬೆಟ್ಟು ಮಂಜ ಕಳುಹಿಸಿದ್ದ ಸಹಚರರಿಗೆ ಗೊತ್ತಾಗಿರಲಿಲ್ಲ, ಶುರುವಿನ ಗುಂಡಿನ ದಾಳಿಯಲ್ಲಿ ಗೊತ್ತು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದೆನಿಸುತ್ತದೆ, ಘಟಿತ ಘಟನೆ ಮುಗಿದ ತರುವಾಯ ಕಾರಿನಿಂದಿಳಿದ ದಯಾನಂದ್ ಪೈ ನೋಡಿದಾಗಲೇ ಇಲ್ಲೊಂದು ಬುಲೆಟ್ ದಾಳಿ ನಡೆದಿದೆ ಎಂದು ಗೊತ್ತಾಗುತ್ತದೆ, ಅಷ್ಟಕ್ಕೂ ಹೆಬ್ಬೆಟ್ಟು ಮಂಜ ಖಾಸಗಿ ಟಿವಿ ವಾಹಿನಿಯೊಂದಕ್ಕೆ ಪೋನಾಯಿಸಿ ದಯಾನಂದ್ ಪೈ ಹಾಗೂ ಸತೀಶ್ ಪೈ ಎಂಬುವ ಸಹೋದರರು ದೇವನಹಳ್ಳಿಯ ಲ್ಯಾಂಡ್ ಸಂಗತಿಯಲ್ಲಿದ್ದಾರೆ, ತಾನು ಅದೆಷ್ಟು ವಾರ್ನಿಂಗ್ ಕೊಟ್ರು ಕೇಳಿರಲಿಲ್ಲ ಆಟ ಆಡಿದ್ದರು, ತಾನೇ ಪೋನಾಯಿಸಿ ಹೇಳಿದಾಗಲೂ ತನಗೆ ಅವರು ಗೊತ್ತು.. ಇವರು ಗೊತ್ತು ಎಂದು ಮಾತನಾಡಿದ್ದರು ಅದಕ್ಕಾಗಿ ಮುಗಿಸುವುದಕ್ಕೆ ಗುಂಡು ಹಾರಿಸಿದ್ದು ಅವರು ನನ್ನ ಕಡೆಯ ಹುಡುಗರೇ, ಎಂದು ದೂರದ ಮಲೇಶಿಯಾದಿಂದ ಪೋನಾಯಿಸಿದಾಗಲೇ ತಿಳಿದಿದ್ದು ಹೆಬ್ಬೆಟ್ಟು ಮಂಜ ದೇಶ ಬಿಟ್ಟು ವಿದೇಶಕ್ಕೆ ಹಾರಿದ್ದಾನೆ ಎಂದು ಎಂಟ್ರಿಯಾದವರೇ ಅಂದಿನ ಸಿಸಿಬಿ-ಡಿಸಿಪಿ ದೇವರಾಜ್, ತಕ್ಷಣವೇ ಹೆಬ್ಬೆಟ್ಟು ಮಂಜನ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿ ಇದರ ತನಿಖೆಗೆ ಇನ್ಸ್‌ಪೆಕ್ಟರ್ ಕಾರ್ಯಪ್ಪನವರನ್ನು ನೇಮಿಸುತ್ತಾರೆ ಅದಾಗ ಗೊತಾಗಿದ್ದೇ ಪಾಸ್ ಪೋರ್ಟ್ ಹಂಗಾಮ,

‘ಹೆಬ್ಬೆಟ್ಟು ಮಂಜ ಮಾಡಿಸಿದ್ದ ನಕಲಿ ಪಾಸ್‌ಪೊರ್ಟ್’
ಹೆಬ್ಬೆಟ್ಟು ಮಂಜ ನಕಲಿ ದಾಖಲಾತಿ ಗಳನ್ನು ಕೊಟ್ಟು ಪಾಸ್ಪೋರ್ಟ್ ಮಾಡಿಸಿದ್ದಾನೆ ಎನ್ನುವ ಪ್ರಕರಣದ ತನಿಖೆ ಶುರುವಿಟ್ಟುಕೊಂಡ ಇನ್ಸ್‌ಪೆಕ್ಟರ್ ಕಾರ್ಯಪ್ಪ ಹಾಗೂ ಅವರ ತಂಡ ಮೊದಲು ಬಂಟ್ವಾಳದ ಆಡಗೋಡಿ ಪೊಲೀಸರ ನ್ನು ವಿಚಾರಿಸುತ್ತಾರೆ, Fake documentary ಗಳಿಂದ ಅಲ್ಲಿನ ವಿಜಯ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆ ಮಾಡಿಸಿ ಪಾಸ್ ಪೋರ್ಟ್‌ಗಾಗಿ ಬೆಂಗಳೂರಿನಲ್ಲಿ Apply ಮಾಡುತ್ತಾನೆ. ಆತ H-೯೯೩೨೩೧೦, ನಂಬರಿನ ಪಾಸ್‌ಪೋರ್ಟ್ ಕೂಡ ಪಡೆದು ದೂರದ ಮಲೇಷಿಯಾಕ್ಕೆ ಹಾರಿದ್ದಾನೆ. ಹೀಗೆ ಹಾರಲು ಬಳಸಿದ ದಾಖಲೆಗಳ ವರಾತಗಳಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಎನ್ನುವ ಅಂಶವೂ ಬೆಳಕಿಗೆ ಬರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪಾಸ್‌ಪೋರ್ಟ್‌ಗಾಗಿ March-೧೦-೨೦೧೦ ರಿಂದ ವಾಸವಾಗದ್ದೆನೆಂದು ನಿವಾಸ ಧೃಡಿಕರಣ ಪತ್ರಕ್ಕಾಗಿ ಮಂಜುನಾಥ್ ಬಿನ್ ದರ್ಕಪ್ಪ ನಂ-೨೧೩೮ ಲಕ್ಷ್ಮಣ ಕಟ್ಟೆ ಸಜೀಪನಡು ಪೋಸ್ಟ್ ಬಂಟ್ವಾಳ ಎಂದು ವಿಳಾಸ ಕೊಟ್ಟಿದ್ದಾನೆ, ವಯಸ್ಸಿನ ದಾಖಲೆಗಾಗಿ ನಾರಾಯಣ್‌ಗುರು ಹೈಸ್ಕೂಲ್ ಕಂದಕ, ಮಂಗಳೂರು ಇಲ್ಲಿ ವ್ಯಾಸಾಂಗ ಮಾಡಿದ್ದೆನೆಂದು SSLC ಮಾರ್ಕ್ಸ್‌ಕಾರ್ಡ್ ಕೊಟ್ಟಿದ್ದಾನೆ ಆದರೆ ಇದು ಅಸಲಿಗೆ ಈ ವಿಳಾಸ ಅಮೀಬ್ ಬ್ಯಾರಿ ಎನ್ನುವವನದ್ದಾಗಿರುತ್ತದೆ, SSLC ಮಾರ್ಕ್ಸ್ ಕಾರ್ಡ್ ಕೊಟ್ಟಿದ್ದ ನಾರಾಯಣಗುರು ಶಾಲೆ ವಿಳಾಸದಲ್ಲಿ ಆ ಶಾಲೆಯೇ ಇರಲಿಲ್ಲವಾಗಿರುತ್ತದೆ, ಹೀಗೆ ಪ್ರತಿ ದಾಖಲೆಗಳು ಬೇರೊಬ್ಬರದ್ದೇ ಆಗಿದ್ದು ಅದರಲ್ಲಿ ಹೆಬ್ಬೆಟ್ಟು ಮಂಜನ ಹೆಸರು ಸೇರ್ಪಡೆ ಮಾಡಿದಲ್ಲದೇ ಪಾಸ್‌ಪೊರ್ಟ್ ಕೊಡುವ ಹಂತಕ್ಕೆ ಬಂದು ತಲುಪಿದ್ದೇ ವಿಶೇಷವಾಗಿದೆ,

ರೇಷನ್ ಕಾರ್ಡ್‌ಸಂಖ್ಯೆ MNGO ೫೧೭೮೭೮೪ ಬಂಟ್ವಾಳ , ಜನನ ಪ್ರಮಾಣಪತ್ರ NO-೩೬೮, ಜನನ ನವೆಂಬರ್-೧೧-೧೯೮೦ ಬಂಟ್ವಾಳ ಮುನಿಸಿಪಲ್, ಸೇರಿದಂತೆ ಕಿನ್ನಿಗೋಳಿ ಬಂಟ್ವಾಳದ ವಿಜಯ ಬ್ಯಾಂಕ್ ಖಾತೆ ಸಂಖ್ಯೆ-೬೭೭೦ ಆಗಿದ್ದು ಇಂತಿಷ್ಟು ದಾಖಲೆಗಳು ನಕಲಿ ಎನ್ನುವುದು ತನಿಖಾಧಿಕಾರಿಗಳಿಗೆ ಮನದಟ್ಟಾಗುತ್ತದೆ. ಕೇವಲ ಒಂದು ವಾರದಲ್ಲಿ ಬೆಂಗಳೂರಿನ ರೀಜ್ಹನಲ್ ಪಾಸ್‌ಪೋರ್ಟ್ ಕಛೇರಿಯಿಂದ ಪಾಸ್‌ಪೋರ್ಟ್ ನೀಡಿಕೆಯಾಗಿರುವುದು ಕಂಡುಬಂದು ಮೊದಲ ಹಂತದಲ್ಲಿ ಆಡಗೋಡಿ ಪೊಲೀಸರ ಪರಿಶೀಲನೆಯಲ್ಲಿ ಶಾಮೀಲು ಆಗಿರುವುದನ್ನು ಮನಗಂಡು ಪರಿಶೀಲಿಸಿ ವರದಿ ನೀಡಿದ್ದ ಇಬ್ಬರು ಪೊಲೀಸರನ್ನು ತಕ್ಷಣವೇ ಅಮಾನತ್ತುಗೊಳಿಸಲಾಗುತ್ತದೆ,

ಇಂತಿಷ್ಟು ವರಾತಗಳ ನಡುವೆ ಸಿಸಿಬಿ ಪೊಲೀಸರು ಸಿಐಡಿಯ ಮೂಲಕ ರೆಡ್‌ಕಾರ್ನ್‌ರ್ ನೋಟಿಸ್ ಜಾರಿಗೊಳಿಸಿ Interpol ಪೊಲೀಸರ ಸಹಾಯದಿಂದ ಭಾರತಕ್ಕೆ ಹೆಬ್ಬೆಟ್ಟು ಮಂಜನ ಕರೆತರುವ ಯತ್ನ ಇದೀಗಲೂ ಜರೂರಿ ಸಾಗಿದ್ದರೇ ಒಂದು ಮೂಲದ ಪ್ರಕಾರ ಹೆಬ್ಬೆಟ್ಟು ಮಂಜ ಭಾರತದಲ್ಲಿಯೇ ಇದ್ದಾನೆ ಎನ್ನುವ ಪಿಸುಧ್ವನಿಗಳೂ ಇವೆ.
-ಮುಂದುವರೆಯುತ್ತದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I