I ಮಾರ್ಷಲ್ ಆರ್ಟ್ಸ್ I ವಿದ್ಯಾರ್ಥಿಗಳಿಗೆ ಶುಭ ಹಾರೈಕೆ I
ಶಿವಮೊಗ್ಗ: ಬೆಂಗಳೂರು ಕಿಂಗ್ ಕಿಕ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ಶಿವಮೊಗ್ಗದ ಸ್ಕಂದ ಅಕಾಡೆಮಿ ಅಧ್ಯಕ್ಷ ಮೋಹನ್ ಮತ್ತು ಸಹ ಅಧ್ಯಕ್ಷ ಮತ್ತು ಕರಾಟೆ ತರಬೇತರಾದ ಜ್ಯೋತಿ ಲಕ್ಷ್ಮಿ ಹಾಗೂ ಮುಖ್ಯ ತರಬೇತಿದಾರ ಶಬರೀಶ್ ಇವರ ನೇತೃತ್ವದಲ್ಲಿ ಸುಮಾರು ೯ ಜನ ವಿದ್ಯಾರ್ಥಿಗಳು ಜಿಲ್ಲೆಯಿಂದ ಸ್ಪರ್ದಿಸಿದ್ದರು.
ಈ ಸ್ಪರ್ಧೆಯಲ್ಲಿ ಭಾಗಿಯಾದಂತಹ ೯ ವಿದ್ಯಾರ್ಥಿಗಳಲ್ಲಿ ಮೊದಲನೇ ಬಹುಮಾನ ಒಬ್ಬರು ಎರಡನೆಯ ಬಹುಮಾನವನ್ನು ಐವರು ಮತ್ತು ಮೂರನೇ ಬಹುಮಾನವನ್ನು ಇಬ್ಬರು ಗೆದ್ದು ಶಿವಮೊಗ್ಗದ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರೊಂದಿಗೆ ಕಿಂಗ್ ಕಿಕ್ ಮಾರ್ಷಲ್ ಆರ್ಟ್ಸ್ನ ಮುಖ್ಯ ಗುರು ಆರುಮುಗಂ ಮತ್ತು ಸಹ ಗುರು ದೇವರಾಜ್ ಅವರು ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.

