ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಶಿವಮೊಗ್ಗದ ಕೆಲ ರಾಜಕಾರಣಿಗಳನ್ನು I ಬೆಂಬಲಿಸದಿರಿ ಟಾರ್ಗೆಟ್ I ಮಾಡಿ ಬಿಡ್ತಾರೆ ಹುಷಾರ್..!!
ಎದ್ದು ನಿಲ್ಲು ವೀರ ದೇಶ ಕರೆದಿದೆ, ಪಡೆಯ ಕಟ್ಟು ಧೀರ ಸಮರ ಕಾದಿದೆ ಎನ್ನುವ ಅಂದಿನ ಹಾಡು ಪಾಡುಗಳೇ ಈ ಹೊತ್ತಿನ ಬದಲಾದ ಅಕ್ಷರ ಜೀವನದ ಎರಡು ದಶಕಗಳ ಅನುಭವಗಳು ಹೊಸತೊಂದು ಅನುಭವ ಕಟ್ಟಿಕೊಟ್ಟಿದೆ, ನಿಜಕ್ಕೂ ಅಕ್ಷರ ಜೀವನಕ್ಕೆ ಖುದ್ದು ಕೃತಜ್ಞತೆಗಳ ಸಲ್ಲಿಸುಕೊಳ್ಳುತ್ತೇನೆ, ಹದಿನೈದು ವರುಷಗಳ ಕಾಲದ ಬಜರಂಗದಳ ಸಂಘಟನೆಗೆ ವಿದಾಯ ತಿಳಿಸಿ ೨೦೦೫ ರ ಡಿಸೆಂಬರ್ ಮಾಹೆಯಲ್ಲಿ ಈ ನೆಲದ ಎಲ್ಲರೊಳಗಿನ ಬದುಕಿನ ನಡುವೆ ತನ್ನದೊಂದು ಅಕ್ಷರ ಬದುಕು ಸಾಗಿಸಬೇಕೆಂದು ನಿರ್ಧರಿಸಿ ಪತ್ರಕರ್ತನಾದವನು ಎಂದಿಗೂ ಮೂಲ ತತ್ವ-ಸಿದ್ದಾಂತಗಳಿಗೆ ಹಿಂತಿರುಗಲೇ ಇಲ್ಲ, ಆದರೆ ಅಲ್ಲಿ ಸಿಕ್ಕಿದ ಶಿಕ್ಷಣವನ್ನು ಸಾಮಾಜಿಕವಾಗಿ ಎಲ್ಲರೊಳಂದಾಗಿ ಅಕ್ಷರಶಃ ಮೈಗೂಡಿಸಿಕೊಂಡಿದ್ದೇನೆ, ಈ ಕಾರಣ ಮಾತ್ರದಿ ಅನುಭವಿಸಿದ ವಾಮಮಾರ್ಗದ ದಾಳಿಗಳ ಅನುಭವಗಳು ಇಂದಿಗೂ ಅನೇಕತೆಯನ್ನು ಕಾಪಿಟ್ಟುಕೊಂಡಿದೆ, ಇಂತಹ ಟಿಪ್ಪಣಿಗಳೊಂದಿಗೆ ತಮ್ಮ ಮುಂದಡಿ ಈ ಹೊತ್ತಿನ ನಾಗರೀಕ ವಲಯದಲ್ಲಿ ರಾಜಕೀಯ ಬದಲಾವಣೆ, ಟಾರ್ಗೆಟ್‌ಗಳು ತಮ್ಮ ಮುಂದಡಿ ವಾಸ್ತವವನ್ನು ಪ್ರಸ್ತುತಗೊಳಿಸುತ್ತಿದ್ದೇನೆ.
ಶಿವಮೊಗ್ಗದ ರಾಜಕೀಯ ವ್ಯವಸ್ಥೆಗಳು ಯಾವ ಸಿದ್ದಾಂತಗಳಿಗೂ ಒಳಗೊಂಡಿಲ್ಲ, ಆಯಾ ಪಕ್ಷದ ಅಜೆಂಡಾಗಳನ್ನು, ಪ್ರಣಾಳಿಕೆಗಳನ್ನು ಯಾವ ನಾಯಕರು ಪಾಲಿಸುತ್ತಿಲ್ಲ, ಅದರೆ ಸಾಂದರ್ಭಿಕವಾಗಿ ಬಳಸಿಕೊಳ್ಳುತ್ತಿದ್ದಾರೆ, ಆಚ್ಚರಿ ಎಂದರೆ ಇದನ್ನು ನಿಚ್ಚಳವಾಗಿ ಪಾಲನೆ ಮಾಡುತ್ತಿರುವುದು ಏನು ಗೊತ್ತಿಲ್ಲದ ಸಾಮಾನ್ಯ ಕಾರ್ಯಕರ್ತರು ಮಾತ್ರವೇ ಎನ್ನುವುದು ಇಂದಿಗೂ ಅರಿವಿಗೆ ಬರದಿರುವುದು ದುರಂತದ ಪರಮಾಧಿಯಾಗಿದೆ,
ಇದಕ್ಕೆ ನೂರು ಜೀವಂತ ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿತಗೊಳಿಸಬಹುದು, ಸಾಮಾನ್ಯವಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಪಕ್ಷಗಳಲ್ಲಿ ಇಂತಹ ಧೋರಣೆಗಳಿದೆ, ಇದೀಗ ಜೆಡಿಎಸ್ ಪಕ್ಷ ಇಂತಹ ಸ್ಥಿತಿಯಿಂದ ನಿರುಮ್ಮಳವಾಗಿದೆ, ಉಳಿದೆರೆಡು ಪಕ್ಷಗಳಲ್ಲಿ ಟಾರ್ಗೆಟ್ ರಾಜಕೀಯ ಕಮಟು ವಾಸನೆಗಳಿವೆ, ಹೇಗೆ ಎಂಬುದನ್ನು ವಿಸ್ತ್ರತಗೊಳಿಸುತ್ತೇನೆ, ಬಿಜೆಪಿನಲ್ಲಿ ಅಗ್ರಮುಖಿಯಾಗಿ ದರ್ಶಿಸಿಕೊಂಡು ಸಮಗ್ರ ನಾಯಕತ್ವದ ಜೀವಾಳುವಾಗಿದ್ದು ಕೆ.ಎಸ್ ಈಶ್ವರಪ್ಪನವರು ಎಲ್ಲಾ ರೀತಿಯ ಪದವಿಗಳನ್ನು ಅನುಭವಿಸಿದ ಅನುಭವಿ ಮುತ್ಸದ್ದಿ, ಆದರೆ ಪುತ್ರ ವ್ಯಾಮೋಹದಿಂದ ಎಡವಿಕೊಂಡರು ಅನಿಸುತ್ತದೆ, ಹೀಗಾಗಿ ಪ್ರತಿಸ್ಪರ್ಧಿಯಾಗುವುದಕ್ಕೆ ಮನಸು ಮಾಡಿಬಿಟ್ಟಿದ್ದರು, ಇಂತಹದೊಂದು ಸಾಂದರ್ಭಿಕತೆಯನ್ನು ಬಳಸಿಕೊಂಡಿದ್ದು ಬಿಎಸ್‌ವೈ ಸಿಂಡಿಕೇಟ್, ಇದನ್ನು ಖಾಯಂಗೊಳಿಸಿ ಕೆ.ಎಸ್.ಈ ಅವರನ್ನು ಅನಾಯಾಸವಾಗಿ ಹೊರಗೆ ಕಳುಹಿಸುವುದಕ್ಕೆ ಯಶಸ್ವಿಯಾಗಿದ್ದರು, ಈ ಬೆಳವಣಿಗೆಯಿಂದ ಆಗಿದ್ದಾದರು ಏನು ಗೊತ್ತೆ..?! ಕೆ.ಎಸ್.ಈ ಬೆಂಬಲಿಗರನ್ನು ಗುರಿ ಮಾಡಿಕೊಂಡಿದ್ದರು, ಅಲ್ಲದೆ ಅವರಿಗೆ ನೇರವಾಗಿ ಪೋನಾಯಿಸಿ ಕೆ.ಎಸ್‌ಈ ಗೆ ಬೆಂಬಲಿಸದಿರಿ ಎಂದೆಲ್ಲಾ ಅವಾಜ್ ಹಾಕಿದ್ದರು, ಈ ನಡುವೆ ಕೆಲವರ ದಾಖಲಾತಿಗಳನ್ನು ಕೂಡ ತೋರಿಸಲಾಗಿತ್ತು, ಇದರಿಂದ ಬೇಸತ್ತ ಕೆ.ಎಸ್.ಈ ಅವರು ಬಿ.ಎಸ್.ವೈ ಸಿಂಡಿಕೇಟ್‌ನಲ್ಲಿದ್ದ ಆಯಕಟ್ಟಿನವರ ವಿರುದ್ದವು ತಿರುಗಿ ಬಿದ್ದಿದ್ದರೂ ಬಿ.ವೈ ರಾಘವೇಂದ್ರ ಹಾಗೂ ಬಿ.ವೈ ವಿಜಯೇಂದ್ರರವರುಗಳ ವಿರುದ್ದವು ತಿರುಗಿ ಬಿದ್ದಿದ್ದರೂ ಹಿಂದೂ ಅಜೆಂಡಾವನ್ನು ಎತ್ತಿ ಹಿಡಿಯುತ್ತಲೇ ರಾಷ್ಟ್ರ ಭಕ್ತರ ಬಳಗ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಕಟ್ಟಿ ಹೋರಾಟಗಳನ್ನು ಮುಂದುವರೆಸಿರುವುದು ಬಹುಷ್ಯಃ ಇಂದಿಗೂ ಬಿಎಸ್‌ವೈ ಸಿಂಡಿಕೇಟ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ,
ಮತ್ತದೆ ಬಿಜೆಪಿ ಜೊತೆಗೆ ಸಖ್ಯಕ್ಕೆ ಮುಂದಾಗಿರುವ ಕೆಎಸ್‌ಈ ಗೆ ಅಡ್ಡಗಾಲಾಕಿರುವ ಬಿಎಸ್‌ವೈ ಸಿಂಡಿಕೇಟ್ ಬಹುತೇಕರಿಗೆ ಟಾರ್ಗೆಟ್ ಮಾಡಿಕೊಂಡಿದೆ, ಇನ್ನೂ ಸಿ.ಎಸ್ ಷಡಾಕ್ಷರಿ ಅವರು ಬಿಎಸ್‌ವೈ ರಾಜಕೀಯ ಪಾಲುದಾರಿಕೆಯಲ್ಲಿದ್ದವರೇ ಆಗಿದ್ದಾರೆ, ಇದೀಗ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಇಂತಿವರು ಬಿಜೆಪಿಯ ಸಹಭಾಗಿತ್ವದಿಂದ ಹೊರಗುಳಿವ ಡ್ರಾಮವಿಟ್ಟುಕೊಂಡು, ಇಲ್ಲಿ ಭ್ರಮನಿರಸನವಾಗಿದೆ ಹೀಗಾಗಿ ಮುಂದಿನ ಅಸೆಂಬ್ಲಿ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವುದಕ್ಕೆ ಟಿಕೆಟ್ ಅವಕಾಶ ದೊರಕಿಸಿಕೊಡಿ ಎಂದು ಉನ್ನತಮಟ್ಟದಲ್ಲಿ ಮಾತುಕತೆ ಆಗಿದೆ ಎನ್ನುವ ಸುದ್ದಿಯ ಸದ್ದುಗಳು ಶಿವಮೊಗ್ಗದಲ್ಲಿದೆ, ಹಾಗೂ ಕಾಂಗ್ರೆಸ್ ಮೊಗಸಾಲೆಗಳಲ್ಲಿಯು ಇದೆ, ಇಂತಹದೊಂದು ಸುದ್ದಿ ತಾತ್ವಿಕ ರಾಜಕೀಯ ಒಡೆತಗಳಿಂದ ತಪ್ಪಿಸಿಕೊಳ್ಳುವ ಮಾರ್ಗವೆಂದು ಅರಿಯದ ಕಾಂಗ್ರೆಸ್ ಪಕ್ಷದ ಕಳೆದ ಶಿವಮೊಗ್ಗ ನಗರ ಅಸೆಂಬ್ಲಿ ಅಭ್ಯರ್ಥಿ ಹೆಚ್.ಸಿ ಯೋಗೇಶ್‌ರವರು ಮನಸು ಮುರಿದುಕೊಂಡು ಮೇಲೆರಗಿದ್ದಾರೆ,
ಹೀಗಾಗಿಯೇ ಸಿ.ಎಸ್ ಷಡಾಕ್ಷರಿ ಹಾಗೂ ಅವರ ಸಿಂಡಿಕೇಟ್ ಮೇಲೆ ಹೆಚ್.ಸಿ ಯೋಗೇಶ್ ಇಂತಿವರ ಮೇಲೆ ಅವರು ತಿರುಗಿ ಬಿದ್ದಿರುವ ಘಟಿತ ಘಟನಾವಳಿಗಳಿವೆ. ಸಾಲದಕ್ಕೆ ಪರಸ್ಪರ ಪತ್ರಿಕಾಗೋಷ್ಠಿಗಳು, ಹೇಳಿಕೆಗಳು ವಾಮಮಾರ್ಗಗಳ ಪೈಪೋಟಿಗಳ ಅಖಾಡದ ಬಗ್ಗೆ ನಾಗರೀಕ ವಲಯದಲ್ಲಿ ಚರ್ಚಿತಗೊಂಡಿರುವ ವಿಷಯವಾರು ವಾಸ್ತವವಗಳಿದೆ, ಇದರೊಂದಿಗೆ ಕಾಂಗ್ರೆಸ್‌ನಲ್ಲಿ ಮತ್ತಿಬ್ಬರ ಪೈಪೋಟಿಗಳು ಸಾಗಿದೆ, ಜೆಡಿಎಸ್ ಪಕ್ಷದಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಕೈ ಹಿಡಿದಿರುವ ಎಂ.ಶ್ರೀಕಾಂತ್ ಸಿಂಡಿಕೇಟ್ ಮೇಲೂ ಇನ್ನೀತರರ ಕಂಗೆಣ್ಣಿದೆ, ಏಕೆಂದರೆ ಶಿವಮೊಗ್ಗದ ಎಲ್ಲಾ ರೀತಿಯ ಹಿಡಿತಗಳನ್ನು ಸಾಧಿಸಿರುವ ಎಂ.ಶ್ರೀಕಾಂತ್‌ರವರೊಂದಿಗೆ ಸಾರ್ವಜನಿಕವಾದ ಹೋರಾಟಗಾರರಿಗಿಂತಲೂ ಭೂಗತ ಜಗತ್ತಿನ ನಂಟಿದೆ, ಕೆಲ ಪತ್ರಕರ್ತರೊಂದಿಗೆ ಇನ್ವೆಷ್ಟುಮೆಂಟ್‌ಗಳಿದೆ, ಮುಟ್ಟಿದರೆ ಮುನಿಯ ಎನ್ನುವ ಮಾತು ಎಂ.ಶ್ರೀಕಾಂತ್‌ರವರಿಗೆ ಲಗತ್ತಿಸಿದ್ದಾರೆ, ಇಂತಿವರು ಕೂಡ ಎಲ್ಲಾ ವಾಮಮಾರ್ಗಗಳಲ್ಲಿಯು ತಮ್ಮ ವಿರೋಧ ಬಣಗಳನ್ನು ಸದ್ದಿಲ್ಲದೆ ಗುರಿ ಮಾಡಿಕೊಂಡಿದ್ದಾರೆ, ಇಂತಹದೊಂದು ಹಲವು ಉದಾಹರಣೆಗಳು ಇವೆ,
ಇನ್ನೂ ಹೆಚ್.ಎಸ್ ಸುಂದರೇಶ್ ಅವರ ಜನನೀತಿಗಳು ಇಲ್ಲಿ ವರ್ಕೌಟ್ ಆಗಿದೆ, ಕಳೆದ ಭಾರಿ ಅವರ ಜನುಮ ದಿನವನ್ನು ಊರು ತುಂಬೆಲ್ಲಾ ಹಬ್ಬದ ರೀತಿ ಅವರ ಬೆಂಬಲಿಗರು ಆಚರಿಸಿ ಸಂಭ್ರಮಿಸಿರುವುದು ಕೂಡ ರಾಜಕೀಯ ಲೆಕ್ಕ-ಪಟ್ಟಿಗಳಲ್ಲಿದೆ, ಆಗಾಗ್ಗೆ ಇವರ ವರ್ಚಸ್ಸು ಕುಗ್ಗಿಸಲು ಇನ್ನಿಲ್ಲದ ಕಸರತ್ತು ನಡೆಯುತ್ತಿದ್ದರು ಬೆಂಬಲಿಗರ ಕಟಿಬದ್ದತೆಯಿಂದಲೇ ಇಂತಿವರ ಸಾತ್ ಕೊಟ್ಟಿರುವುದು ಇವರು ವಿದ್ಯಾರ್ಥಿ ದಿಸೆಯಿಂದಲೇ ಹೋರಾಟವನ್ನು ರೂಪಿಸಿಕೊಂಡು ಅನೇಕ ಯುವ ನಾಯಕರನ್ನು ಸಮಾಜಮುಖಿಯಾಗಿ ಅರಳಿಸಿದ ಕೀರ್ತಿಯು ಇದೆ, ಈ ಕಾರಣಕ್ಕಾಗಿ ಸುಂದರೇಶ್ ಬಳಗಕ್ಕೆ ಮುಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲವಾಗಿದೆ,
ಇನ್ನುಳಿದವರ ಪಾಡು, ರಾಜಕೀಯದಂದಣದ ಹಪಾಹಪಿತನಕೆ ಇವರು ಗುರಿಗಳಾಗುತ್ತಿದ್ದಾರೆ, ಬೆಂಬಲಿಗರು ಕೂಡ ಗುರಿಯಾಗುತ್ತಿರುವುದು ಅಕ್ಷರಶಃ ವಾಸ್ತವವಾಗಿರುವುದರಿಂದ ಯಾರು, ಯಾರೊಂದಿಗೆ ಇರಬೇಕು ಗುರುತಿಸಿಕೊಳ್ಳಬೇಕೆ ಬೇಡವೇ..? ಎನ್ನುವ ನಿರ್ಧಾರಿತ ಸಂಗತಿಗಳಲ್ಲಿದ್ದರೆ ಮಾತ್ರವೇ ವಾಮಮಾರ್ಗದ ದಾಳಿಗಳಿಂದ ಬಚಾವ್ ಮಾಡಿಕೊಳ್ಳಬಹುದಾಗಿದೆ, ಇನ್ನೂ ಈ ಒಳ ರಾಜಕೀಯ ವೈಷಮ್ಯಗಳಿಂದಲೇ ಶಿವಮೊಗ್ಗದಲ್ಲಿ ನಡೆಯುತ್ತಿರುವ ಬರ್ಬರ ಕೊಲೆ, ಸುಲಿಗೆಗಳು, ಜುಗಾರಿಗಳು, ಲ್ಯಾಂಡ್ ಲಿಟಿಗೇಶನ್‌ಗಳು, ಭಯಬೀತ ಭೂಗತ ಚಟುವಟಿಕೆಗಳ ವಿರುದ್ದ ಮಾತಾನಾಡುತ್ತಿಲ್ಲ, ಬದಲಿಗೆ ಇದಕ್ಕೆ ಕಡಿವಾಣ ಹಾಕುವ ಪತ್ರಿಕಾಗೋಷ್ಠಿಗಳು ನಡೆಯುತ್ತಿಲ್ಲವಾಗಿದೆ, ಬಡವರ ಸೂರುಗಳಿಗೆ ಬೇಲಿ ಸುತ್ತಿ, ಸಕ್ಷಮ ಪ್ರಾಧಿಕಾರಕ್ಕೆ ಸುಳ್ಳು ದಾಖಲೆಗಳನ್ನು ದಾಖಲಿಸಿ ಬಡ ಬದುಕುಗಳನ್ನು, ಹೋರಾಟಗಾರರನ್ನು ಬೀದಿಗೆ ತಳ್ಳುತ್ತಿದ್ದರೂ ಇದು ಸರಿ ಎನ್ನುವಷ್ಟರ ಮಟ್ಟಿಗೆ ಮುಂದಿನ ಅಸೆಂಬ್ಲಿ ಟಿಕೆಟ್ ಅಕಾಂಕ್ಷಿಗಳ ನಿಲುವುಗಳಾಗಿದೆ,
ಈ ಬರಹದ ಸವಾಲಿನ ಮೂಲಕ ಉವಾಚಿಸುತ್ತೇನೆ, ಸಿ.ಎಸ್ ಷಡಾಕ್ಷರಿ, ಎಂ.ಶ್ರೀಕಾಂತ್, ಇಂದಿಗೂ ಶಿವಮೊಗ್ಗದಲ್ಲಿನ ಭೂಗತ ಚಟುವಟಿಕೆಗಳ ವಿರುದ್ದ ದನಿ ಎತ್ತಲಿಲ್ಲ ಯಾಕೆ..? ಲ್ಯಾಂಡ್ ಲಿಟಿಗೇಶನ್ ಕುರಿತಾಗಿ ಹೋರಾಟಗಳು ರೂಪಿಸಲಿಲ್ಲವೇಕೆ..? ಮಟ್ಕಾ ಮರ್ಡರ್, ಸೇಡಿನ ಹತ್ಯೆಗಳು, ದುಂಡಾವರ್ತನೆಗಳ ಕೊಲೆಗಳು, ಬೆದರಿಕೆಗಳು ಜರುಗುತ್ತಿದ್ದರು ಈ ಬಗ್ಗೆ ಸಾಮಾನ್ಯವಾದ ಹೇಳಿಕೆಗಳು ನೀಡಲಿಲ್ಲ, ಬದಲಿಗೆ ಇವರೆಲ್ಲಾ ಅಸೆಂಬ್ಲಿ ಟಿಕೇಟ್ ಅಕಾಂಕ್ಷಿಗಳು ಎನ್ನುವುದು ಮತ್ತೊಂದು ಮೈಲಿಗಲ್ಲಿಗಾ..? ಅಚ್ಚರಿ ಎಂದರೆ ಕೆಲ ನಾಯಕರಿಗೆ ಮಹಾಭಾರತದ ಕರ್ಣನಿಗೆ ಹೋಲಿಸಿ ಮತ್ತೊಮ್ಮೆ ಶಿವಮೊಗ್ಗಕ್ಕಿಳಿಸಿದಂತೆ ಲೇಪಿಸಿಕೊಳ್ಳುವ ದುರಂತದ ಪರಮಾಧಿಗಳನ್ನು ಒಮ್ಮೆಲೆ ದರ್ಶಿಸಿಕೊಂಡು, ಮುಂದಾದರು ಯುವ ಸಮುದಾಯ ಸಾಮಾಜಿಕವಾಗಿ ಅನ್ಯ ಮಾರ್ಗ ಕಂಡುಕೊಳ್ಳಲಿ, ಇರುವುದೊಮ್ಮೆ ಹೋಗುವುದೊಮ್ಮೆ, ಹೋರಾಟಗಳನ್ನೇ ಅಮರಿಕೊಂಡು ನಾಯಕರಾಗಿ ಎಂದಿಗೂ ಇಂತಿವ ಅವಕಾಶವಾದಿಗಳನ್ನು ಬೆಂಬಲಿಸದಿರಿ, ಎನ್ನುವುದು ಈ ಬರಹದ ಅಂಬೋಣ.

