I ನಟ ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ I ವೀರಕೇಸರಿ ಕನ್ನಡ ಸಂಘದಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ I
ಶಿವಮೊಗ್ಗ : ಕರ್ನಾಟಕ ರತ್ನ ಡಾ, ಪುನೀತ್ ರಾಜಕುಮಾರ್ ರವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ
ಇಂದು ವಿದ್ಯಾನಗರದ ವೀರಕೇಸರಿ ಕನ್ನಡ ಯುವಕರ ಸಂಘದ ಅಧ್ಯಕ್ಷರಾದ ಪುನೀತ್ ರವರ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು,
ಅನ್ನಸಂತರ್ಪಣೆಗೆ ನಟ ಆರ್ಯ (ದೀಪು) ಹಾಗೂ ಬಿಜೆಪಿ ಗ್ರಾಮಾಂತರ ಮುಖಂಡರಾದ ಗಿರಿ ಭದ್ರಾಪುರ ಅವರುಗಳು ಚಾಲನೆ ನೀಡಿದರು, ಈ ಸಂದರ್ಭದಲ್ಲಿ ವೀರಕೇಸರಿ ಕನ್ನಡ ಯುವಕರ ಸಂಘದ ಕಾರ್ಯಕರ್ತರು, ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿದ್ದರು,

