ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಶಿವಮೊಗ್ಗದ ಟೆರರ್ ಭೂಪಟದ I ಎಚ್.ಎಂ ಫೈಲ್ಸ್ I
ಹೀಗೊಂದು ವಾಸ್ತವದ ಸ್ಟೋರಿಯ ಹಿಂದೆ, ವೈಟ್ ಕಾಲರ್ ರಾಜಕಾರಣಿಯ ರಾಜಕೀಯ ಸಾಮ್ರಾಜ್ಯ ನಿರ್ಮಾಣ, ಎಲ್ಲವೂ ತನ್ನ ಹಿಡಿತದಲ್ಲಿದಟ್ಟುಕೊಳ್ಳುವ ಹಪಾಹಪಿತನದಿ, ಜೀವಭಯದಿ ಸರಣಿ ಕೊಲೆಗಳು ನಡೆದಿರಬಹುದಾದ ಅಸಲಿ ಕಥಾನಕಗಳ ಒಳಹೂರಣವಿದು, ಕೋಟಿ ಕಂತೆಗಳಲ್ಲಿ ತೂಗಿಕೊಳ್ಳುವ ಈ ವೈಟ್ ಕಾಲರ್‌ನ ಕಪ್ಪು ಹೆಜ್ಜೆಗಳು, ಶಿವಮೊಗ್ಗದಲ್ಲಷ್ಟೆ ಅಲ್ಲದೆ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಾಸುಹೊಕ್ಕಾಗಿದೆ, ಈ ನಡುವೆ ಪಕ್ಕದ ರಾಜ್ಯ ಗೋವಾ, ಮುಂಬೈ ಅಂತಹ ಮಹಾನಗರಿಗಳಲ್ಲಿ ಈತನ ಜುಗಾರಿ ದಂಧೆಗಳಿವೆ, ಇಂತಹ ಅಪಾಯಕಾರಿ ವೈಟ್ ಕಾಲರ್ ಮೇಲೆ ಸುಫಾರಿ ಹತ್ಯೆಗಳಂತಹ ಬೀಕರತೆಗಳ ಆರೋಪಗಳಿವೆ, ಭೂಗತ ಲೋಕದಲ್ಲಿ ಇಂತಹದೊಂದು ಚರ್ಚೆ ಮಡುಗಟ್ಟಿದೆ, ಶಿವಮೊಗ್ಗದಲ್ಲಿಯು ಈ ಪರಿ ರೌಡಿಗಳು ಹೊಡೆದಾಡಿಕೊಂಡು ಬೀದಿ ಹೆಣವಾಗಲು ಈತನದ್ದೇ ಪಿತೂರಿಗಳಿವೆ ಎನ್ನುವ ಅಸಲಿ ಮಾಹಿತಿಗಳು ಪತ್ರಿಕಾ ಕಛೇರಿಗೆ ಲಿಖಿತವಾಗಿ ವಿಸ್ತೃತಗೊಳ್ಳುತ್ತಿದೆ, ಇಂತಹ ಅನೇಕತೆಗಳ ವರಾತಗಳ ಮುನ್ನದಿ, ಶಿವಮೊಗ್ಗದ ಹೆಚ್.ಎಂ ಫೈಲ್ಸ್ ಕುರಿತಾಗಿ ತಿಳಿದುಕೊಳ್ಳಬೇಕಾದ ಅತೀ ಜರೂರತ್ತಿದೆ ಎನ್ನುವ ಟಿಪ್ಪಣಿಯೊಂದಿಗೆ ಕಳೆದ ಸಂಚಿಕೆಯಿಂದ ಇನ್ನೊಂದು ಸಂಚಿಕೆಗೆ ವಿಸ್ತೃತಗೊಳಿಸಲಾಗುತ್ತಿದೆ,
ಹೀಗೆ ಜೈಲು ಸೇರಿಕೊಂಡ ಹೆಬ್ಬೆಟ್ಟು ಮಂಜನ ಹೆಸರು ಭೂಗತ ಲೋಕದಲ್ಲಿ ಹರಿದಾಡುತ್ತದೆ ಹೀಗೊಬ್ಬ ಫೀಲ್ಡ್ ಮಾಡೋ ಟೆರರ್ ಕುರಿತಾದ ಗುಣಗಾನ ಶುರುವಾಗುತ್ತದೆ, ಆದರೆ ಇಲ್ಲಿ ಸುಫಾರಿ ಕೊಟ್ಟಿದ್ದು ಯಾರು…!?ಯಾವ ಸೇಡಿಗಾಗಿ ಹೆಬ್ಬೆಟ್ಟು ಮಂಜನಿಗೆ ಸುಫಾರಿ ಕೊಟ್ಟಿದ್ದರು… ಯಾರಿಗೆ ಕೊರಂಗು ಕೃಷ್ಣನ ಮೇಲೆ ಭಯ ಶುರುವಾಗಿತ್ತು..? ಎಂಬುವುದೇ ಹಲವು ತಿರುವುಗಳಿಗೆ ಕಾರಣವಾಗಿತ್ತು,
ಹೌದು ಅಂದು ಮಾಮೂಲಿ ಪೋಟೋಗ್ರಾಫರ್ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಯಾನೆ ಮಚ್ಚಾ ಮಂಜ ರಾತ್ರೋ ರಾತ್ರಿ ಭೂಗತ ಹೆದ್ದಾರಿಗಳಲ್ಲಿ ಕಾಣಿಸಿಕೊಂಡಿದ್ದವನು, ಆದರೆ ಹೆಚ್ಚಾಗಿ ಯಾರೊಂದಿಗೆ ಧ್ವೇಷ ಕಟ್ಟಿ ಕೊಂಡಿದ್ದವನಲ್ಲ ಅದಾಗ ಎದ್ದಿದ ಭಾರಿ ರಿಯಲ್ ಎಸ್ಟೇಟ್ ಹವಾದಲ್ಲಿ ಗೋಪಾಲಯ್ಯ ಹಾಗೂ ಮಚ್ಚಾ ಮಂಜನ ನಡುವೆ ವಾಗ್ವಾದವಿತ್ತು ಇದು ಧ್ವೇಷಕ್ಕೆ ತಿರುಗಿತ್ತು, ಮಚ್ಚಾ ಮಂಜ ಬದುಕಿದ್ದರೆ ತನ್ನನ್ನೆ ಮುಗಿಸಿ ಬಿಡುತ್ತಾನೆ ಎನ್ನುವ ಇರಾದೆಯಲ್ಲಿ ಗೋಪಾಲಯ್ಯ ಯಲಂಹಕದ ಹಾದಿಯಲ್ಲಿರುವ ಅಲ್ಲಾಳ್ ಸಂದ್ರದ ರೆಸಾರ್ಟ್‌ನಲ್ಲಿ ಮಚ್ಚಾ ಮಂಜ ಇರುವ ಖಚಿತ ಮಾಹಿತಿಯ ಮೇರೆಗೆ ಸರಿ ಸುಮಾರು ೬೦ಕ್ಕೂ ಹೆಚ್ಚು ರೌಡಿಗಳನ್ನು ಬಿಟ್ಟು ಮಲಗಿಸಿದನೆಂಬ ಸುದ್ದಿ ರಾಚಿತ್ತು , ಮಚ್ಚಾ ಮಂಜನ ಹೆಣ ಯಾವಾಗ ನೆಲಕ್ಕುರುಳುತ್ತೋ ಕೊಲೆಯಲ್ಲಿದ್ದವರು ಎನ್ನುವ ಸಂಶಯದ ಮೇಲೆಯೇ ಟೋನಿ,ಸೂರಿ, ಅಂತಹ ಅವಳಿ ಕೊಲೆಗಳು ಅಲ್ಲಲ್ಲಿ ಬಿದ್ದ ಹೆಣಗಳು ೧೦ ಕ್ಕೂ ಹೆಚ್ಚು, ಹೀಗೆ ಸಿಕ್ಕ ಸಿಕ್ಕವರನ್ನು ಕೊಲೆ ಮಾಡಿಸಿದ್ದವನು ಬೇರಾರು ಅಲ್ಲ ರೆಸಾರ್ಟ್‌ನಲ್ಲಿ ಕೊಲೆಯಾಗಿ ಹೋಗಿದ್ದ ಮಚ್ಚಾ ಮಂಜನ ಆಪ್ತ ಗೆಳೆಯ ರೌಡಿ ಕೊರಂಗು ಕೃಷ್ಣ ಎನ್ನುವ ಸಂಗತಿ ಸರಣಿ ಕೊಲೆಗಳು ಮಾಡಿ ಮುಗಿಸಿದ್ದ ಕೊರಂಗುವಿನ ಹುಡುಗರು ಪೋಲಿಸರ ಲಾಠಿ ಏಟಿಗೆ ವದರಿಕೊಂಡಿದ್ದರು,
ಈ ಸೇಡಿನ ಕೊಲೆಗಳ ಅಟ್ಟಹಾಸಕ್ಕೆ ನಿಜಕ್ಕೂ ಬೆದರಿ ಹೋಗಿತ್ತು ಬೆಂಗಳೂರಿನ ಪಾತಕ ಲೋಕ, ಅದಾಗಲೇ ಕಾಮಾಕ್ಷಿಪಾಳ್ಯದ ಗೋಪಾಲಯ್ಯ ಸಣ್ಣಕ್ಕೆ ಕಂಪಿಸತೊಡಗಿದ್ದ, ಇನ್ನೇನು ಮಚ್ಚಾಮಂಜನ ಕೊಲೆ ತನ್ನಿಂದಲೇ ಆಗಿದೆ ಎಂದು ಖಾತ್ರಿ ಪಡಿಸಿಕೊಡಿರುವ ಕೊರಂಗು ಕೃಷ್ಣ ಹೀನಾಡಿ ಬಿಭತ್ಸಕರ ಕೊಲೆಗಳ ಹಿಂದಿದ್ದಾನೆ ಎಂದುಕೊಂಡೇ ಒಂದಿಷ್ಟು ದಿನಗಳು ತಲೆಮರೆಸಿಕೊಂಡಿದ್ದರು, ಇತ್ತಕಡೆ ಚೆನೈನ ಬೀಚ್‌ನಲ್ಲಿ ಕುಳಿತು ಖಾಸಗಿ ಟಿವಿ ವಾಹಿನಿಯೊಂದಕ್ಕೆ ಬೈಟ್ಸ್ ಕೊಟ್ಟಿದ್ದ ಕೊರಂಗು ಕೃಷ್ಣ ಮಚ್ಚಾ ಮಂಜನ ಕೊಲೆ ಹಿಂದಿರುವ ಎಲ್ಲರನ್ನು ಮುಗಿಸಿ ಜೈಲು ಸೇರುತ್ತೇನೆ ಎಂದಿದ್ದ, ಆದರೆ ಪೊಲೀಸರು ಕೊರಂಗುವನ್ನು ಆರೆಸ್ಟ್ ಮಾಡಲು ಸಫಲರಾಗಿದ್ದರು,
ಹೀಗೆ ಜೈಲು ಪಾಲಾದ ಕೊರಂಗು ಕೃಷ್ಣನನ್ನು ಪರಪ್ಪನ ಅಗ್ರಹಾರದಲ್ಲೇ ಮುಗಿಸಲು ಒಂದು ದೊಡ್ಡ ಯತ್ನವೇ ಆಗಿತ್ತು ಇದರ ಸುಳಿವರಿತ ಕೊರಂಗು ಕೃಷ್ಣ ಜೈಲರ್ ಬಳಿ ತನ್ನನ್ನು ಹಾಗೂ ತನ್ನ ಸಹಚರರನ್ನು ಸ್ಥಳಾಂತರಿಸುವಂತೆ ಅವಲತ್ತುಕೊಂಡಿದ್ದನು, ಇಲ್ಲಿ ಈ ಸ್ಥಿತಿಯಲ್ಲಿದ್ದ ಬೆಂಗಳೂರು ಪಾತಕ ಲೋಕಕ್ಕೇ ಎಂಟ್ರಿ ಸಿಕ್ಕಿದ್ದ ಹೆಬ್ಬೆಟ್ಟು ಮಂಜ ಮುಲಾಮನ ತೆಕ್ಕೆಯಲ್ಲಿ ಕಾಣಿಸಿಕೊಂಡಿದ್ದ ಅದಾಗಲೇ ಕೊರಂಗು ಕೃಷ್ಣನನ್ನು ಮುಗಿಸಲು ಸುಫಾರಿ ನೀಡಲಾಗಿತ್ತು ಎನ್ನುವ ಮಾತಿದೆ, ಈ ಸುಫಾರಿ ನೀಡಿದವರ ಪಟ್ಟಿ ಬೆಂಗಳೂರಿನ ಸಿಸಿಬಿಯವರ ಕೈಗೂ ಎಟುಕಿತ್ತು, ಒಂದು ಮಾಹಿತಿಯ ಪ್ರಕಾರ ಗೋಪಾಲಯ್ಯ, ಮುಲಾಮ ಸೇರಿದಂತೆ ಮುಂತಾದವರು ಹೆಬ್ಬೆಟ್ಟು ಮಂಜನಿಗೆ ಪುಸಲಾಯಿಸಿ ಕಳುಹಿಸಿದ್ದರು ಎನ್ನುವುದಾಗಿತ್ತು,
‘ಅಂತೂ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ಎನ್ನುವಂತೇ’ ಅಂಡರ್ ವರ್ಲ್ಡ್ ಡಾನ್ ಎನಿಸಿಕೊಳ್ಳುವ ತರಾತುರಿಯಲ್ಲಿದ್ದ ಹೆಬ್ಬೆಟ್ಟು ಮಂಜ ಕೊರಂಗು ಕೃಷ್ಣನನ್ನು ಮುಗಿಸಲು ಚಿತ್ರದುರ್ಗ ಬಳಿಯಿರುವ ಹಿರಿಯೂರು ಬಳಿಯಲ್ಲಿನ ಡಾಬದಲ್ಲಿ ಮುಗಿಬೀಳುತ್ತಾನೆ. ಹೀಗೆ ಹೆಬ್ಬೆಟ್ಟು ಮಂಜನ ಫೀಲ್ಡ್.. ಕೊರಂಗು ಕೃಷ್ಣನನ್ನು ಮುಗಿಸುವ ಹಂತಕ್ಕೆ ತಲುಪಿತ್ತು ಅಂದು ಕರ್ನಾಟಕ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕೂಡ ಸೇರಿ ಹೋಗಿದ್ದನು, ಅಸಲಿಗೆ ಬೆಂಗಳೂರಿನಲ್ಲಿ ಈ ಹಂತಕ್ಕೆ ತಲುಪಿದ ಟೆರರ್ ಹಂತಕ ಹೆಬ್ಬೆಟ್ಟು ಮಂಜ ಶಿವಮೊಗ್ಗದಲ್ಲಿ ಏನೆಲ್ಲಾ ಬಾನಗಡಿ ಎಬ್ಬಿಸಿದ್ದ ಎನ್ನುವುದರ ವಿವರಗಳ ಮುನ್ನದಿ
ಮುದಿ ಕೊರಂಗು ಕೃಷ್ಣನನ್ನು ಮುಗಿಸಲು ಹೆಣೆದಿದ್ದ ಸ್ಕೆಚ್ ಅಷ್ಟೆ ನಿಬ್ಬೆರಗಾಗಿಸುತ್ತದೆ : ಹೌದು ಕೊರಂಗು ಕೇಸಿಗಾಗಿ ಆತನನ್ನು ಚಿತ್ರದುರ್ಗ ಜೈಲಿನಿಂದ ಬೆಂಗ್ಳೂರಿಗೆ ಕರೆತರಲಾಗುತ್ತದೆ, ಹೀಗೆ ಕೋರ್ಟು ಕೇಸು ಮುಗಿಸಿಕೊಂಡು ಪೊಲೀಸ್ ಬಂದೋಬಸ್ತಿನಲ್ಲಿಯೇ ವಾಪಾಸ್ಸು ಹೋಗುತ್ತಾರೆ ಅದಾಗಲೇ ಅಟ್ಯಾಕ್ ಮಾಡ್ಬೇಕು, ಎಂದು ಹೆಬ್ಬೆಟ್ಟು ಮಂಜ ತನ್ನ ಸ್ನೇಹಿತರೊಂದಿಗೆ ಟೂ-ವ್ಹೀಲರ್ ಬೈಕ್‌ನಿಂದ ನೆಲಮಂಗಲ ಟೋಲ್ ದಾಟುತ್ತಾನೆ, ಹೀಗೆ ಹಿರಿಯೂರು ಬಳಿಯವರೆಗೂ ಎಷ್ಟು ಹಂಪ್ಸ್‌ಗಳು ಸಿಗುತ್ತದೆ, ಎಷ್ಟು ಟೋಲ್ ಸಿಗುತ್ತದೆ, ಯಾವಾಗ ಪೊಲೀಸ್ ಪಹರೆನಲ್ಲಿದ್ದ ವಾಹನ ಸ್ಲೋ ಆಗುತ್ತದೋ ಅದಾಗಲೇ ಅಟ್ಯಾಕ್ ಮಾಡ್ಬೇಕೋ ಅಥವಾ ಟಿ-ಕಾಫಿಗಾಗಿ ನಿಲ್ಲಿಸಿದರೆ ಅದೇ ಡಾಬಾದಲ್ಲಿಯೇ ಕೊರಂಗುವಿನ ಕತೆ ಮುಗಿಸಬೇಕೋ ಎಂದು ಮೊದಲು ಫಿಲ್ಡ್ ಸರ್ವೆ ಮಾಡುತ್ತಾನೆ,
ಹೀಗಾಗಿಯೇ ಹೆಬ್ಬೆಟ್ಟು ಮಂಜ ಓರ್ವ ಟೆರರ್ ಹಾಗೂ ಬುದ್ದಿವಂತ ಎನ್ನುವುದನ್ನು ಈ ಅಟ್ಯಾಕ್‌ನಿಂದಲೇ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ, ಇದರಂತೆ ಅಂದು ಮಹೂರ್ತ ಫಿಕ್ಸ್ ಆಗಿ ಬಿಡುತ್ತದೆ, ಕೊರಂಗು ಕೃಷ್ಣನಿಗೆ ಸಣ್ಣದೊಂದು ಸುಳಿವು ಕೂಡ ಇರುವುದಿಲ್ಲ, ಪೊಲೀಸ್ ಪಹರೆಗಳ ನಡುವೆ ಕೋರ್ಟಿಗೆ ಕರೆತರಲಾಗುತ್ತದೆ, ಹೀಗೆ ಕರೆತಂದ ಪೊಲೀಸರು ಕೋರ್ಟಿನ ಕಲಾಪ ಮುಗಿಸಿ ಹಿಂತಿರುಗುವ ಮುನ್ನದಿ ಎಲ್ಲಿಯು ಅನುಮಾನಿತಗಳಿಲ್ಲದೆ ಹೆಬ್ಬೆಟ್ಟು ಹಿಂದೆ ಬಿದ್ದಿರುತ್ತಾನೆ, ಹೀಗೆ ಬಂದವರು ಮೊದಲ ನೆಲಮಂಗಲ ಟೋಲ್‌ನಲ್ಲಿಯೇ ಮುಗಿಸಿ ಬಿಡಲು ಮುಂದಾಗುತ್ತಾನೆ ಆದರೆ ಅಲ್ಲಿ ಪೊಲೀಸರು ವಾಹನದಿಂದ ಕೆಳಗಿಳಿಯುವುದಿಲ್ಲ ಬದಲಿಗೆ ಈ ಅಟ್ಯಾಕ್‌ನಿಂದ ಎಲ್ಲಿ ತಪ್ಪಿಸಿಕೊಳ್ಳುತ್ತಾನೆ ಎನ್ನುವುದರ ಸುಳಿವರಿತ ಮುಂದಿನ ಹಂಪ್ಸ್‌ಗಳ ಲೆಕ್ಕಾಚಾರದಂತೆ ಅಲ್ಲಿ ಮುಗಿಸೋಣ ಎಂದು ಹಿಂಬಾಲಿಸುತ್ತಲೇ ಸಾಗುತ್ತಾನೆ,
ಅಷ್ಟರೊಳಗೆ ಹಿರಿಯೂರು ಸಮೀಪದ ಡಾಬಾ ಪೊಲೀಸರಿಗೂ ಬಹಿರ್ದೆಸೆ, ಹಾಗೂ ತಿಂದುಂಡುವ ಅಮಲಿನಲ್ಲಿ ಜೋಪಾನವಾಗಿ ಕೆಳಗಿಳಿಯುತ್ತಾರೆ, ಇದನ್ನೆ ಕಾಯುತ್ತಿದ್ದ ಹೆಬ್ಬೆಟ್ಟು ಮಂಜ ಮತ್ತು ಸಹಚರರು ಡಾಬಾಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಮುಗಿ ಬೀಳುತ್ತಾರೆ, ಇದೇನು ಘಟನೆ ಎನ್ನುವ ತುಲನೆಗೈಯುವ ಹೊತ್ತಿಗೆ ಪೊಲೀಸರು ಮರೆಯಾಗಿ ಬಚಾವಾಗಿ ಬಿಡೋಣ ಎಂದು ತಪ್ಪಿಸಿಕೊಳ್ಳುತ್ತಾರೆ ಸ್ಟಡಿ ಆಗಿದ್ದ ಹೆಬ್ಬೆಟ್ಟು ಮಂಜ ಬೀಸೋ ಏಟಿಗೆ ಕೊರಂಗು ನೆಲಕ್ಕುರುಳಿ ಬೀಳುತ್ತಾನೆ,
ಇಂತಹದೊಂದು ಸ್ಕೆಚ್ ಹಾಗೂ ಅತನಲ್ಲಿದ್ದ ಖದರ್ ಕುರಿತಾಗಿ ಇಡೀ ಭೂಗತ ಜಗತ್ತು ಬೆಸ್ತು ಬೀಳುತ್ತದೆ, ಹೀಗಾಗಿಯೇ ಇಂದಿಗೂ ಹೆಬ್ಬೆಟ್ಟು ಮಂಜನ ಎದುರು ಹಾಕಿಕೊಂಡವರು ಉಳಿದಿಲ್ಲ, ಆತನ ಸಿಂಡಿಕೇಟ್ ಪಕ್ಕದ ಕಾರಾವಾರ, ಗೋವಾ, ಮುಂಬೈ ಹಾಗೂ ಆಂದ್ರದ ಗಡಿಭಾಗಗಳಲ್ಲಿ ವಿಸ್ತರಿಸಿದೆ, ಅಲ್ಲದೆ ಮೂಲತಃ ಶಿವಮೊಗ್ಗದಲ್ಲಿಯು ಈತನ ಸಿಂಡಿಕೇಟ್‌ನಲ್ಲಿ ನಾನೂರಕ್ಕು ಹೆಚ್ಚು ಪಕ್ಕಾ ಹುಡುಗರ ಗ್ಯಾಂಗು ಆಗಾಗ್ಗೆ ಹೆಬ್ಬೆಟ್ಟು ಮಂಜನ ಜಪವನ್ನು ಸದ್ದಿಲ್ಲದೆ ಮಾಡುತ್ತಿದೆ, ಈ ಕಾರಣಕ್ಕಾಗಿಯೇ ಇತ್ತೀಚೆಗೆ ಬೆಂಗಳೂರಿನ ಡಾನ್ ಸೈಲೆಂಟ್ ಸುನೀಲನನ್ನು ಕರೆಯಿಸಿ ರಾಯಲ್ ಆರ್ಕಿಡ್‌ನಲ್ಲಿ ಬೂರಿ ಉಪಚಾರ ಮಾಡಿ ಇಲ್ಲಿಯ ಹುಡುಗರನ್ನು ಪರಿಚಯಿಸಿರುವ ಓರ್ವ ವೈಟ್ ಕಾಲರ್ ಸೈಲೆಂಟಾಗಿ ಸೈಲೆಂಟ್ ಸುನೀಲನ ಸಿಂಡಿಕೇಟ್ ಖಾತೆ ತೆರೆದಿದ್ದಾನೆ.
ಮುಂದಿನ ಸಂಚಿಕೆಗೆ ಕಾದು ಓದಿ…


