Monday, August 3, 2026
Homeಸೂರ್ಯಗಗನI ಶಿವಮೊಗ್ಗ ಸ್ಬೂಡಾ ಅಧ್ಯಕ್ಷಗಾದಿಗೆ ಕಾಂಗ್ರೆಸ್ಸಿಗರ ಸಾಲು I ಪಕ್ಷಾಂತರಿಗಳ ಗೋಳು I

I ಶಿವಮೊಗ್ಗ ಸ್ಬೂಡಾ ಅಧ್ಯಕ್ಷಗಾದಿಗೆ ಕಾಂಗ್ರೆಸ್ಸಿಗರ ಸಾಲು I ಪಕ್ಷಾಂತರಿಗಳ ಗೋಳು I

I ಶಿವಮೊಗ್ಗ ಸ್ಬೂಡಾ ಅಧ್ಯಕ್ಷಗಾದಿಗೆ ಕಾಂಗ್ರೆಸ್ಸಿಗರ ಸಾಲು I ಪಕ್ಷಾಂತರಿಗಳ ಗೋಳು I

ಶಿವಮೊಗ್ಗ : ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (SBUDA)ದ ಅಧ್ಯಕ್ಷಗಾದಿಗೆ ಇಂದಿಗೆ ಬಿಸಿ ಚರ್ಚೆಗಳು ಕಾವಿಟ್ಟಿದೆ, ಇನ್ನೇನು ಕೆಲವೇ ದಿನಗಳಲ್ಲಿ ಅಧ್ಯಕ್ಷ ಜವಾಬ್ದಾರಿಯಿಂದ ನಿರ್ಗಮಿಸಲಿರುವ ಹೆಚ್‌ಎಸ್ ಸುಂದರೇಶ್ ಕಾಂಗ್ರೆಸ್ ಪಕ್ಷದ ಮತ್ತೊಂದು ಹುದ್ದೆ ಅಲಂಕರಿಸಬಾರದು ಎನ್ನುವ ಷಡ್ಯಂತ್ರವು ಲೇಪಿಸಿಕೊಂಡೇ  ಸಾಗಿದೆ,

ಮುಂದಿನ ಅವಧಿಗೆ ತಮಗೆ ಅಧ್ಯಕ್ಷಗಾದಿಯ ಹುದ್ದೆಗೆ ಅವಕಾಶ ಮುಂದುವರಿಕೆ ಕುರಿತಾಗಿ ರಾಜ್ಯದ ಹೈ ಕಮಾಂಡ್ ಬಳಿ ಆಯಾ ಸಚಿವರುಗಳ ನಿಯೋಗದೊಂದಿಗೆ ಗಿರಕಿ ಹೊಡೆಯುತ್ತಿರುವ ಪಟ್ಟಿಯಲ್ಲಿ ಹೆಚ್‌‌.ಸಿ. ಯೋಗೇಶ್, ಮಾಜೀ ಸೂಡಾ ಅಧ್ಯಕ್ಷ ಎನ್.ರಮೇಶ್, ಅಲ್ಪಸಂಖ್ಯಾತ ವಿಭಾಗದ ಮುಖಂಡರಾದ ಕಲೀಮ್, ಮಹಿಳಾ ಘಟಕದ ಸೌಗಂಧಿಕಾ, ರವರುಗಳಿದ್ದಾರೆ

ಇನ್ನೂ ಜೆಡಿಎಸ್ ಪಕ್ಷದಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಮನೆಗೆ ಗೃಹಪ್ರವೇಶ ಮಾಡಿರುವ ಎಂ‌‌.ಶ್ರೀಕಾಂತ್ ಕೂಡ ಸ್ಬೂಡಾ ಅಧ್ಯಕ್ಷೀಯ ಕನಸು ಕಂಡಿದ್ದಾರೆ, ಇದಲ್ಲದೆ ಪವರ್ ಪಾಲಿಟಿಕ್ಸ್ ನಲ್ಲಿರುವ ಆರ್.ಎಂ ಮಂಜುನಾಥ್ ಗೌಡ ಅವರ ನಿಯೋಗದೊಂದಿಗೆ ಪ್ರಯತ್ನ ಮಾಡಿದ್ದರೂ ಇಂತಿವರ ಮೇಲೆ “ಲ್ಯಾಂಡ್ ಲಿಟಿಗೇಶನ್ ಪ್ರಮೋಟರ್” ಎನ್ನುವ ಆರೋಪಗಳು ಕೇಳಿ ಬಂದಿರುವುದರಿಂದ ಬಹುತೇಕ ಹಿನ್ನಡೆ ಆಗುತ್ತದೆ, ಎನ್ನುವ ನಿಖರ ಮಾಹಿತಿಗಳು ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ‌

ಇಷ್ಟರ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಸಾಲಿನಲ್ಲಿರುವ ಎಸ್‌‌. ಕೆ ಮರಿಯಪ್ಪನವರು ಕೂಡ ಬೈರತಿ ಸುರೇಶ್ ಅವರೊಂದಿಗೆ ನೇರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದು ಹಿರಿತನ ಹಾಗೂ ಕಾಂಗ್ರೆಸ್ ಘಟಕದ ವಿವಿಧ ಜವಾಬ್ದಾರಿಯನ್ನು ನಿಭಾಯಿಸಿರುವ ಸಮಗ್ರತೆ ಇರುವುದರಿಂದ ಇಂತಿವರನ್ನೇ ಸೂಚಿಸುವ ಬಹುತೇಕ ಲಕ್ಷಣಗಳು ರಾಜಧಾನಿಯಿಂದ ಕೇಳಿ ಬಂದಿದೆ, ಇಂತಹದೊಂದು ಬೆಳವಣಿಗೆಗಳು ದರ್ಶಿಸಿಕೊಂಡಿರುವುದು ಜಿಲ್ಲಾ ಕಾಂಗ್ರೆಸ್ ನಲ್ಲಿ ಎಸ್‌.ಕೆ ಮರಿಯಪ್ಪನವರೇ ಅಂತಿಮ ಎನ್ನುವ ಚರ್ಚೆಗಳು ಕಾಪಿಟ್ಟಿವೆ,

ಸ್ಬೂಡಾ ಅಧ್ಯಕ್ಷೀಯ ಹುದ್ದೆ ಮತ್ತು ಆರೋಪದ ಹಂಗಾಮ : ನಡುವೆ ಅಚ್ಚರಿ ಎಂದರೇ ಲೆಕ್ಕವಿಲ್ಲದಷ್ಟು ಆರ್.ಟಿ ಐ ಅರ್ಜಿಗಳನ್ನು ಹಾಕಿ ಗುತ್ತಿಗೆಗಳನ್ನು ಪ್ರಶ್ನಿಸಿ ಬ್ಲಾಕ್ಮೇಲ್ ಮಾಡುತ್ತಿರುವ ಒಂದಿಬ್ಬರು ಸ್ಬೂಡಾ. ಮಹಾನಗರ ಪಾಲಿಕೆ, ಪಿಡಬ್ಲ್ಯೂಡಿ ಹಾಗೂ ಇದರ ವಿಭಾಗಗಳ ಇಂಜಿನಿಯರ್ ಗಳಿಗೆ ಪರ್ಸಂಟೇಜ್ ಯಾಚಿಸುವುದು..! ಅಥವಾ ಉಪ ಗುತ್ತಿಗೆ ಕಾಮಗಾರಿ ವಹಸಿಕೊಡುವಂತೆ ಅವಲತ್ತುಕೊಳ್ಳುವುದು ಹೆಗ್ಗಿಲ್ಲದೆ ಸಾಗಿದೆ, ಇವ್ಯಾವುದಕ್ಕೆ ಒಪ್ಪಿಕೊಳ್ಳದಿದ್ದೊಡೆ ಲೋಕಾಯುಕ್ತಕ್ಕೆ ಕೇಸು ದಾಖಲಿಸುವುದು, ನೋಡಿದರೆ ಇವರು ಗುತ್ತಿಗೆದಾರರೋ..?! ಅಥವಾ ಈ ಹೆಸರಿನಲ್ಲಿರುವ ಆರ್‌.ಟಿ.ಐ ಕಾರ್ಯಕರ್ತರೋ..?!, ಬ್ಲಾಕ್ಮೇಲ್ ಗಳೋ..?! ಎನ್ನುವುದು ಮುಂಧೆ ತನಿಖಾಧಿಕಾರಿಗಳೇ ಉತ್ತರಿಸಬೇಕಾಗಿದೆ, ಯಾವುದೇ ಅಧಿಕಾರದ ನ್ಯೂನ್ಯತೆಗಳು, ಭ್ರಷ್ಟಾಚಾರಗಳು ಪ್ರಶ್ನಿಸುವುದು ತಪ್ಪಲ್ಲದಿದ್ದರೂ ನೂರೈವತ್ತಕ್ಕೂ ಹೆಚ್ಚು ಆರ್.ಟಿ.ಐ ಅರ್ಜಿಗಳನ್ನು ವಿವಿಧ ಕಾಮಗಾರಿ ಇಲಾಖೆಗಳ ವಿಭಾಗಗಳಿಗೆ ಶಿವಮೊಗ್ಗದ ಗುತ್ತಿಗೆದಾರರಿಬ್ಬರು, ಅಸಲಿ ಜಿಎಸ್ಟಿ ಗುತ್ತಿಗೆದಾರರನ್ನು ಮೀರಿಸುವ ” ಖಾಲಿ ಪೇಪರ್ ಪರವಾನಿಗೆ” ಗುತ್ತಿಗೆದಾರರಾಗಿ ಏಕಾಎಕಿ ಟಾರ್ಗೆಟ್ ಮಾಡುವುದು ಕೂಡ ಲೋಕಾಯುಕ್ತರು ತನಿಖೆಗೆ ಒಳಪಡಿಸಲಿ ಎನ್ನುವುದಾಗಿದೆ,

ಈ ನಿಖರಾಂಶಗಳು ಬೆಳಕಿಗೆ ತರುವ ನಿಟ್ಟಿನಲ್ಲಿ ತನಿಖಾಧಿಕಾರಿಗಳು ಕೆಲಸ ಮಾಡಬೇಕಿದೆ, ಇದೊಂದು ಕರ್ತವ್ಯನಿರತ ಅಧಿಕಾರಿಗಳ ಮೇಲಿನ ಬ್ಲಾಕ್ಮೇಲ್ ಅಲ್ಲದೇ ಮತ್ತೇನಿಲ್ಲ,

ಕಾಂಗ್ರೆಸ್‌ ಮುಖಂಡರಿಂದಲೇ ಷಡ್ಯಂತ್ರ :  ಇಂತಹದೊಂದು ಆರೋಪವು ಸ್ಬೂಡಾ ಮೇಲೆ ಕೇಳಿ ಬಂದಿರುವ ಹಿಂದೆ ಸ್ಬೂಡಾ ಅಧ್ಯಕ್ಷಗಾದಿಗೆ ಹಪಾಹಪಿಸುತ್ತಿರುವ ಮಂದಿ ನಾಯಕರ ಶಾಮೀಲಿದೆ..! ಎನ್ನುವ ಚರ್ಚೆಗಳಿವೆ, ಅಸಲಿಗೆ ಆರ್.ಟಿ.ಐ ಮೂಲಕ ನೂರಕ್ಕೂ ಹೆಚ್ಚಿಗೆ ಅರ್ಜಿಗಳನ್ನು ವರುಷಗಳಿಂದ ಸಲ್ಲಿಸುತ್ತಿರುವ ಯಾರೇ ಆಗಲಿ ಈ ಅರ್ಜಿಗಳಲ್ಲಿರುವ ಮಾಹಿತಿಗಳನ್ನು ಪಡೆದರೇ..? ಪಡೆದ ಮಾಹಿತಿಗಳಂತೆ ನ್ಯೂನ್ಯತೆಗಳು ಕಂಡು ಬಂದವೇ..?! ಕಂಡು ಬಂದರೆ ಯಾಕೆ ತನಿಖಾ ಸಂಸ್ಥೆಗಳಿಗೆ, ಮೇಲಾಧಿಕಾರಿಗಳಿಗೆ, ಪತ್ರಿಕಾ ಹೇಳಿಕೆಗಳಿಗೆ ಬಿಡುಗಡೆ ಮಾಡಲಿಲ್ಲ..?! ಸಲ್ಲಿಸಿದ ಅಷ್ಟೂ ಅರ್ಜಿಗಳು ಏನಾದವು..?! ಆಯಾ ಇಂಜಿನೀಯರ್ ಗಳಿಂದ, ಜಿಎಸ್ಟಿ ಗುತ್ತಿಗೆದಾರರಿಂದ, ಕಂಪನಿಗಳಿಂದ ಕೋಟಿ, ಕೋಟಿ ಕರೆನ್ಸಿಗಳು ಏಣಿಸಲಾಗಿದಿಯಾ..?! ಇಂತಹದೊಂದು ಆತಂಕಕಾರಿ ಭ್ರಷ್ಟ ವ್ಯವಸ್ಥೆಗಳು ದಾಖಲೆಗಳ ಸಹಿತ ಬಹಿರಂಗಗೊಳ್ಳುವ ಜರೂರಿಯಿದೆ, ಹಾಗೂ ಇದೇ ಲೋಕಾಯುಕ್ತಕ್ಕೂ ದೂರು ಸಲ್ಲಿಸುವ ಬೆಳವಣಿಗೆಗಳ ಸ್ಪಷ್ಟತೆ ಇದೆ.

ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾ ರಾಜಕಾರಣ :  ಪ್ರಸ್ತುತ ಅವಧಿಯ ಅಧ್ಯಕ್ಷರಾಗಿ ಇನ್ನೇನು ಉಪಮುಖ್ಯಮಂತ್ರಿಗಳಾದ ಡಿ‌ಕೆ ಶಿವಕುಮಾರ್ ಅವರ ಆಪ್ತರಾಗಿರುವ ಹೆಚ್.ಎಸ್ ಸುಂದರೇಶ್ ಸ್ಬೂಡಾ ಅಧ್ಯಕ್ಷೀಯ ಅವಧಿ ಮುಗಿದ ಮೇಲೂ ಅವರೇ ಮುಂದುವರೆಯಬಾರದು ಹಾಗೂ ಮುಂದುವರೆಯದೇ ಮತ್ತೊಮ್ಮೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆ ಅಲಂಕರಿಸಬಾರದು ಎನ್ನುವ ಒಟ್ಟಾರೆ ಹಿನ್ನಲೆಯಲ್ಲಿ ಕೊನೆವರೆಗೂ ಕಾದು ಆರೋಪಿಸಿ ಒಂದೇ ಬಾಣಕ್ಕೆ ಎರಡು ಹಕ್ಕಿಗಳು ಒಡೆದಂತಾಗಿದೆ, ಇದೇ ವಿಷಯವಾಗಿ ಎನ್ನುವ ಆಪ್ತ ವಲಯವು ನೇರವಾಗಿ ತಮ್ಮದೇ ನಾಯಕರ ವಿರುದ್ದ ರಾಜ್ಯ ಹೈ ಕಮಾಂಡ್ ಬಳಿ ನಿಖರ ಮಾಹಿತಿಗಳನ್ನು ತಲುಪಿಸಿ ಮನವರಿಕೆ ಮಾಡಿಕೊಟ್ಟು ಶಿವಮೊಗ್ಗದ ಸ್ಬೂಡಾ ಅಧ್ಯಕ್ಷೀಯ ರಾಜಕೀಯಕ್ಕೆ ದಾಳ ಉರುಳಿಸಿರುವುದು ಕೆಲವರಿಗೆ ರಾಜಕೀಯ ಉರುಳು ತರಬಹುದು ಎನ್ನುವುದಿದೆ, ಅಥವಾ ಅಂತಹ ನಾಯಕರ ರಾಜಕೀಯ ಹಿನ್ನಡೆಗೆ ಕಾರಣವಾಗಬಹುದು,

ಒಟ್ಟಿನಲ್ಲಿ ಸ್ಬೂಡಾ ಎಂದರೇನು..?! ನಗರೀಕರಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಬಹುದಾದ ಹಲವು ಪ್ರಮುಖ ಯೋಜನೆಗಳೇನು.?! ಯಾವ್ಯಾವ ಯೋಜನೆಗಳ ಮಿತಿಗಳಿವೆ, ಅದರ ಕಾರ್ಯವ್ಯಾಪಿಯೇನು..?! ಎನ್ನುವ ಕನಿಷ್ಟ ಜ್ಞಾನದ ಕೊರತೆ ಇರುವವರಿಗೆ, ಹಾಗೂ ಪಕ್ಷಾಂತರಿಗಳಿಗೆ ಮುಂದಿನ ಅವಧಿಗೆ ಅಧ್ಯಕ್ಷಗಾದಿ ನೀಡಿದರೆ ಖಂಡಿತ ಶಿವಮೊಗ್ಗವನ್ನು ರಿಯಲ್ ಎಸ್ಟೇಟ್ ಮಾಫಿಯಾ ಸೃಷ್ಡಿಸಿಕೊಂಡು ಕಾಂಗ್ರೆಸ್ ಪಕ್ಷದ ಸಂಘಟನೆಯ ಬಲವರ್ಧನೆ ಕ್ಷೀಣಿಸಬಹುದು ಎನ್ನುವ ಲೆಕ್ಕಾಚಾರಗಳು ರಾಜ್ಯ ಹೈಕಮಾಂಡ್ ಹಾಗೂ ಜಿಲ್ಲೆಯ ಹಿರಿಯ ಕಾಂಗ್ರೆಸ್ಸಿಗರಿಗೆ ಗೊತ್ತು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇದೊಂದು ಹುದ್ದೆ ಜಿಲ್ಲೆಯ ವಿಷಯವಾಗಿರದೇ ರಾಜ್ಯದ ವಿಷಯವಾಗಿ ಕಾಂಗ್ರೆಸ್ ವಲಯದಲ್ಲಿ ವಿಷವಾಗಿ ಕಾಡುವುದರಲ್ಲಿ ಯಾವುದೇ ನಿಸ್ಸಂದೇಹವಾಗಿಲ್ಲ ಎನ್ನುವ ಮಾಹಿತಿಯ ಆಧಾರದ ಮೇಲೆ ರಾಜ್ಯದ ಕಾಂಗ್ರೆಸ್ ನಾಯಕರು ಎಸ್.ಕೆ ಮರಿಯಪ್ಪನವರನ್ನು ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಮುಂದಿನ ಅವಧಿಯ ಸ್ಬೂಡಾ ಅಧ್ಯಕ್ಷೀಯ ಜವಾಬ್ದಾರಿ ನೀಡಲಾಗುತ್ತದೆ ಎನ್ನುವ ರಾಜಕೀಯ ಬೆಳವಣಿಗೆಗಳು ಕಂಡು ಬಂದಿದೆ,

ಇನ್ನೂ ಯುವ ರಾಜಕಾರಣಿಯಾಗಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗರಿಷ್ಟ ಸವಾಲುಗಳನ್ನು ಎದುರಿಸಿದ ಹೆಚ್.ಸಿ ಯೋಗೇಶ್ 2028ರ ಅಸೆಂಬ್ಲಿ ಕಣಕ್ಕೆ ಮತ್ತೊಮ್ಮೆ ಇಳಿಸುವ ರಾಜಕೀಯ ಸ್ಥಿತ್ಯಂತರಗಳನ್ನು ಮನವರಿಕೆ ಮಾಡಿಕೊಟ್ಟು ಸ್ಬೂಡಾ ಅಕಾಂಕ್ಷಿಯಿಂದ ದೂರ ಉಳಿಸಿದ್ದಾರೆ ಇದಕ್ಕೆ ಹೆಚ್.ಸಿ ಯೋಗೇಶ್ ಅವರ ಕಡೆಯಿಂದಲೂ ಸಮ್ಮತಿ ವ್ಯಕ್ತಪಡಿಸಿದ್ದು ಎನ್ನುವ ರಾಜಕೀಯ ಬೆಳವಣಿಗೆಗಳಲ್ಲಿ ಸ್ಬೂಡಾ ಅಧ್ಯಕ್ಷೀಯ ಹುದ್ದೆ ಶಿವಮೊಗ್ಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I