Sunday, August 2, 2026
HomeಅಂಕಣI ಮಲೆನಾಡಿನ ದಣಿವರಿಯದ ಯುವದನಿ I ದೇವೇಂದ್ರಪ್ಪ I

I ಮಲೆನಾಡಿನ ದಣಿವರಿಯದ ಯುವದನಿ I ದೇವೇಂದ್ರಪ್ಪ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಮಲೆನಾಡಿನ ದಣಿವರಿಯದ ಯುವದನಿ I ದೇವೇಂದ್ರಪ್ಪ I

ಮಲೆನಾಡಿನ ಹೆಬ್ಬಾಗಿಲು ಹೋರಾಟಗಳು, ಚಳುವಳಿಗಳ ಉಗಮ ಸ್ಥಾನವಾಗಿದ್ದು, ಇಲ್ಲಿ ಬಹುತೇಕ ನಾಗರೀಕ ದನಿಗಳಿಂದಲೇ ನಾಯಕತ್ವದ ಅಧಿಪತ್ಯ ಸಾಧಿಸಿದ್ದಾರೆಯೇ ವಿನಃ, ಕಾಸು ಕೊಟ್ಟು ಜನಮಾನಸವನ್ನು ಖರೀದಿ ಮಾಡುವ ಅನೇಕತೆಗಳು ಇಲ್ಲಿ ನಶಿಸಿ ಹೋಗಿದೆ, ಇಂತಹ ಜೀವಂತ ಉದಾಹರಿತಗಳನ್ನು ಉದಾಹರಿಸಬಹುದು, ಭಗವದ್ಗೀತೆಯಲ್ಲಿ ಉಲ್ಲೇಖಿಸಿರುವಂತೆ ?ಜನಸೇವೆಯೇ ಜನಾರ್ಧನ ಸೇವೆ? ಎನ್ನುವ ಅರಿವಿನೊಂದಿಗೆ ಯಾರು ನಾಗರೀಕರ ಜಗಲಿಗಳಲ್ಲಿ ಕೂತು ಜನ ಸಂಕಟಗಳನ್ನು ಆಲಿಸಿ, ಸೇವೋನ್ಮುಖಿಯಾಗುತ್ತಾರೋ ನಿಜಕ್ಕೂ ಆಂತಹವರ ಸೇವೆ, ಈ ನೆಲದಲಿ ಶಾಶ್ವತವಾಗಿರುತ್ತದೆ.
ಇಂತಿವ ಟಿಪ್ಪಣಿಯೊಂದಿಗೆ ವಿದ್ಯಾರ್ಥಿ ದಿಸೆಯೊಳು ವಿದ್ಯಾರ್ಥಿ ವ್ಯಾಸಾಂಗ ಸಮಸ್ಯೆಗಳಿಗೆ ದನಿಗೂಡಿಸಿ ‘ಎನ್‌ಎಸ್‌ಯುಐ’ ಮುಖಂಡರಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರು, ವಿವಿಧ ಮೇರು ಜವಾಬ್ದಾರಿಗಳನ್ನು ನಿರ್ವಹಿಸಿ ಶ್ರೀ ಸಾಮಾನ್ಯರ ಸೆಳೆಯುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ಇವರು ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿತವಾಗಿ ಬಲವರ್ಧಿಸಿಕೊಳ್ಳುವುದಕ್ಕೆ ಕಾರಣರಾದರು, ಭಕ್ತಿಯ ಪರಾಕಾಷ್ಟೆಗೆ ತಲುಪವಂತೆ ಗುರುರಾಯರ ಭಕ್ತ ಸಮೂಹದಲ್ಲಿ ದರ್ಶಿಸಿಕೊಳ್ಳುತಲಿ ಪ್ರಾಣಿ ದಯಾಪರತೆಯಲ್ಲಿ ಮುಂದಾದ ಸಾಮಾಜಿಕ ಕಟ್ಟಾಳುವಾಗಿ, ಕೊರೋನಾ ಎನ್ನುವ ಸಾಂಕ್ರಮಿಕ ವೈರಸ್ ದಾಳಿಗೆ ತುತ್ತಾದ ಅತೀ ಸೂಕ್ಷ್ಮ ಸಂಗತಿಯಲ್ಲಿ ಜನಸೇವೆಗೆ ಟೊಂಕ ಕಟ್ಟಿ ನಿಂದವರು, ಹೀಗೆ ಒಂದು ಹೆಜ್ಜೆ ನೂರು ಕೆಲಸಗಳು ಎನ್ನುವಂತೆ ಬಹುತ್ವ ಗುಣರಾಶಿಗಳನ್ನು ಮೈಗೂಡಿಸಿಕೊಂಡು ಮಲೆನಾಡಿನ ಜನಮಾನಸದಲ್ಲಿ ಜಾತ್ಯಾತೀತವಾಗಿ, ಸಾಮಾಜಿಕ, ಸಾಮರಸ್ಯ, ಸಂವೇದನೆಗಳ ಜೀವನಗಳಲ್ಲಿ ಜೀವನಾಡಿ ಆದವರೇ ಮಲೆನಾಡಿನ ದಣಿವರಿಯದ ಯುವದನಿ ದೇವೇಂದ್ರಪ್ಪನವರು.

ಹೌದು ವ್ಯಕ್ತಿ ವಿಕಸನಗಳು ಹೇಗೆ ಬದಲುಗೊಂಡು ಜನಾಸರೆ ಆಗುತ್ತದೆ ಎನ್ನುವುದಕ್ಕೆ ಬಲವಾದ ಉದಾಹರಣೆಯೇ ದೇವೇಂದ್ರಪ್ಪನವರ ಸಾಮಾಜಿಕ ನಾಯಕತ್ವವಾಗಿದೆ, ಸೋತರು ಸರಿಯೇ ಸೇವೆ, ಪಕ್ಷನಿಷ್ಟೆ, ವ್ಯಕ್ತಿ ನಿಷ್ಟೆ, ದೈವನಿಷ್ಟೆಗಳಲ್ಲಿ ತಮ್ಮನ್ನು ತಾವು ಮೊಹರೊತ್ತಿಕೊಂಡಿದ್ದಾರೆ, ಇದೀಗ ಇದೇ ರಾಷ್ಟ್ರೀಯ ಪಕ್ಷದಲ್ಲಿ ದನಿ ಆಗುವುದಕ್ಕೆ ನೂರು ಜನರಿದ್ದಾರೆ, ಅಂದು ದನಿಯಾಗುವುದಕ್ಕೆ ಕಾಂಗ್ರೆಸ್‌ನಿಂದ ಕೆ. ದೇವೇಂದ್ರಪ್ಪನವರಿದ್ದರು, ಯಾವುದೇ ಸಾಂದರ್ಭಿಕತೆಯಲ್ಲಿಯು ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಅಪ್ಪಿಕೊಂಡು ಮುನ್ನಡೆದ ಮುಂದಾಳು, ಇಲ್ಲಿ ಹೊಗಳಿಕೆಯ ಉತ್ಪ್ರೇಕ್ಷೆಗಳು ಈ ಬರಹಕ್ಕಿಲ್ಲವಾದರೂ ಇದು ವಾಸ್ತವವೂ ಕೂಡ,

ಅಂದು ಧ್ವನಿಗೂಡಿಸುವುದಕ್ಕೆ ಯುವ ಸಮುದಾಯದ ತಂಡ ಕಟ್ಟುವುದಕ್ಕೆ ಅಗ್ರಸಾಲಿನಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷದ ಆಸರೆ, ನಂಬಿಕೆಯ ಬಾಹುಳ್ಯವನ್ನು ಬೆಸೆದು ಪಕ್ಷ ಸಂಘಟನೆಗೆ ಸೇತುವೆಯನ್ನು ನಿರ್ಮಿಸಿದ ಹೋರಾಟದ ಕಲಿ, ಆಚ್ಚರಿ ಎಂದರೆ ಇಂತಿವರೊಮ್ಮೆ ನಗರಸಭೆಯ ಚುನಾವಣೆಯ ಸ್ಪರ್ಧಾಳುವಾದಾಗ ಅಷ್ಟೆ ವ್ಯಾಪಾಕವಾದ ಬೆಂಬಲ ತಮ್ಮದೇ ಪಕ್ಷದಿಂದ ಆಗದಿದ್ದರೂ ಸಹ ಎಂದಿಗೂ ಪಕ್ಷನಿಷ್ಟೆಯಲ್ಲಿ ಕಿಂಚಿತ್ತು ಕಡಿತವಾಗಿಸಿಕೊಳ್ಳದೆ ಪಕ್ಷದ ಏಳಿಗೆಗಾಗಿ ಶ್ರಮಿಸಿದ ಯುವ ನಾಯಕ ಕೆ. ದೇವೇಂದ್ರಪ್ಪನವರು
ಇಂದಿಗೂ ಪಕ್ಷದ ಆಶಾದಾಯಕ ನಾಯಕತ್ವವನ್ನು ಸಾಧಿಸುವಲ್ಲಿ, ಅದನ್ನು ಕಾಪಿಟ್ಟುಕೊಳ್ಳುವಲ್ಲಿ ಯಶಸ್ಸು ಆಗಿದ್ದಾರೆ.

ಸ್ಥಳೀಯ ಪತ್ರಿಕೆಯೊಂದರ ವಿರುದ್ದ ದಾಳಿಯಾದ ಸಂದರ್ಭದಲ್ಲಿಯು ಯಾವುದೇ ಮುಲಾಜಿಲ್ಲದೆ, ಶಿವಮೊಗ್ಗ ನಗದ ಬಂದ್ ಕರೆ ನೀಡಿದ್ದರು ಇದಕ್ಕೆ ಜನಬೆಂಬಲವೂ ವ್ಯಕ್ತವಾಗಿತ್ತು, ಇದನ್ನು ಪರಾಂಭರಿಸಿದಾಗ ಕೆ.ದೇವೇಂದ್ರಪ್ಪ ಓರ್ವ ವ್ಯಕ್ತಿಯಲ್ಲ ಅವರೊಬ್ಬ ಶಕ್ತಿ ಎಂದೇ ಬಿಂಬಿತವಾಗುತ್ತಾರೆ, ಇವರೊಂದಿಗೆ ಗುರುತಿಸಿಕೊಂಡ ಅನೇಕ ಯುವಕರು ಇದೀಗ ಕಾಂಗ್ರೆಸ್ ಹಾಗೂ ಬೇರೆಡೆ ನಾಯಕತ್ವ ರೂಪಿಸಿಕೊಂಡಿದ್ದಾರೆ, ಹೀಗಾಗಿಯೇ ಒಂದಷ್ಟು ಪ್ರಮುಖರ ಅಭಿಮತದಂತೆ ಕೆ.ದೇವೇಂದ್ರಪ್ಪ ನಾಯಕತ್ವ ಕಟ್ಟಿಕೊಡುವ ಕಾರ್ಖಾನೆ ಎಂದೇ ಉವಾಚಿಸಿಕೊಳ್ಳುತ್ತಾರೆ,

ಈ ಸಾಕ್ಷ್ಯಗಳಿಂದಾಗಿಯೇ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಪ್ರಮುಖರಾಗಿ ಸಂಘಟಿತವಾದ ಸ್ಥಾನಗಳಲ್ಲಿದ್ದು ಪಕ್ಷಕ್ಕೆ ಬಲತುಂಬಿದವರು, ಕಾಂಗ್ರೆಸ್ ಪಕ್ಷದ ಮೇಲೆ ವಿಪಕ್ಷಗಳ ಆರೋಪಗಳು, ಹೇಳಿಕೆಗಳು, ನಾಯಕತ್ವ ನಿಂದನೆಗಳು ಎದುರಾದಗೆಲೆಲ್ಲಾ ಅದಕ್ಕೆ ಪ್ರತಿ ಹೇಳಿಕೆ, ಪ್ರತಿಭಟನೆಗಳು, ಮನವಿಗಳು, ಪತ್ರಿಕಾಗೋಷ್ಟಿಗಳನ್ನು ಮೊಳಗಿಸಿ ಜಿಲ್ಲಾ ಸಂಘಟನೆಗೆ ಹೆಗಲುಕೊಟ್ಟ ಯುವನಾಯಕರಾಗಿ ದಣಿವರಿಯದ ದನಿಯಾಗಿ ನಿಲ್ಲುತ್ತಾರೆ. ಇನ್ನೂ ಮುಂದುವರೆದಂತೆ ಪಕ್ಷದ ನಾಯಕರಾದ ಡಿ.ಕೆ ಶಿವಕುಮಾರ್‌ರವರ ಬ್ರಿಗೇಡ್ ಮಾಡಿಕೊಂಡು ಸಾಮಾಜಿಕ ಸೇವೆಯಲ್ಲಿ ಸೇವೋನ್ಮುಖಿಯಾಗುತ್ತಾರೆ, ಚೀನಾದಿಂದ ಬಳುವಳಿಯಂತೆ ಎರಗಿದ ಕೋರೋನಾ ವೈರಸ್ ಎನ್ನುವ ಸಾಂಕ್ರಮಿಕ ಯುದ್ದದಲ್ಲಿ ಇದೇ ಶಿವಮೊಗ್ಗದ ಜನತೆಗೆ ಊಟ, ಪುಡ್ ಕಿಟ್‌ಗಳನ್ನು ನೀಡಿ ಧೈರ್ಯ ತುಂಬಿದ ಕೆ.ದೇವೇಂದ್ರಪ್ಪನವರು ಉತ್ತಮ ವಾಗ್ಮಿಯು ಆಗಿದ್ದಾರೆ,

‘ ನನ್ನ ಪಕ್ಷ ನನ್ನ ಧ್ಯೇಯ’ ಎಂದೇ ಬಿಂಬಿತವಾಗುವ ಇವರು ಶಿವಮೊಗ್ಗ ನಗರದ ಗೋಶಾಲೆಗಳಿಗೆ ಉಚಿತವಾಗಿ ಮೇವು ನೀಡುವುದು , ರೈತಪರ ಹೋರಾಟಗಳಲ್ಲಿ ಚಿತ್ತವರಿಸುವುದು, ಡಿ.ಕೆ ಶಿವಕುಮಾರ್‌ರವರ ಹುಟ್ಟು ಹಬ್ಬದ ಪ್ರಯುಕ್ತ ಶಾರದಾ ಅಂದರ ವಿಕಾಸ ಮಕ್ಕಳಿಗೆ ಕುಡಿಯುವುದಕ್ಕೆ ಹಾಲು ಒದಗಿಸಲು ?ಹಸು ಮತ್ತು ಕರು? ವನ್ನು ದಾನವಾಗಿ ನೀಡುತ್ತಾರೆ, ಡಿ.ಕೆ ಶಿವುಕುಮಾರ್ ಕ್ಯಾಂಟಿನ್ ಎನ್ನುವ ಹೆಸರಿನಲ್ಲಿ ಸಾವಿರಾರು ಜನರಿಗೆ ಹಸಿವು ನೀಗಿಸುವ ಮಾತೃತ್ವದ ಮಾನವೀಯತೆಗೆ ಕಾರಣರಾಗಿ ಶ್ರಮಿಸಿದ ಕುರುಹುಗಳು ಈ ಮಲೆನಾಡಿನ ನೆಲದಲ್ಲಿದೆ, ಅಚ್ಚರಿ ಎಂದರೆ ಬಹುತೇಕ ನಾಯಕರು ಕಾಣೆಯಾದ ಕಾಲಮಾನವಿದು, ಇಂತಹ ಸಂದರ್ಭದಲ್ಲಿ ಲಾಕ್ಡೌನ್-ಸೀಲ್ಡೌನ್ ಆಗಿದೆ ಜನರಿಗಾಗಿ ಬದುಕುವ ಅವಕಾಶ ಆ ಗುರುರಾಯರು ನೀಡಿದ್ದಾರೆ ಎನ್ನುವ ಎದೆಗಟ್ಟಿತನದೊಳು ತುತ್ತು ನೀಡಿದ ದೇವೇಂದ್ರಪ್ಪನವರ ಮುಕ್ತತೆಯ ಸೇವೆಯಿಂದ ಒಂದಷ್ಟು ಜನ ಬಿಸಿಗಂಬನಿಗಳನ್ನು ತೊಟ್ಟಿಕ್ಕಿಸಿದ್ದು ಇದೆ.

ಒಟ್ಟಾರೆ ಬಹುತ್ವ ಮಾನವೀಯ ಮನಸು, ನಾಯಕತ್ವ, ಸೇವೋನ್ಮುಖಿಯ ಜೀವನಾಡಿಯಾಗಿ ತಮ್ಮ ಬದುಕನ್ನು ಡಿಸೈನ್ ಮಾಡಿಕೊಂಡಿರುವ ವ್ಯಕ್ತಿ ವಿಕಸನದ ಯುವನಾಯಕ ಕೆ.ದೇವೇಂದ್ರಪ್ಪ ಇಂದಿಗೂ ಯಾವ ನಿಷ್ಟೆಗಳಿಂದಲೂ ದೂರವಿಲ್ಲ, ಬದಲಿಗೆ ಎಲ್ಲವಕ್ಕೂ ಸಾಮಾಜಿಕವಾದ ಸಮ ಸಮಾಜದ ನ್ಯಾಯ ದೊರಕಿಸಿ ಕೊಡುವಲ್ಲಿ ಮುಂದಾಗಿರುವ ವಿಶೇಷ ನಾಯಕತ್ವದ ಯುವ ಮುಂದಾಳು ಆಗಿದ್ದು ಕಾಂಗ್ರೆಸ್ ಪಕ್ಷ ಇಂತಹ ಪಕ್ಷನಿಷ್ಟರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಿದರೆ ಅದು ಆ ಸ್ಥಾನಕ್ಕೆ ಸಂದ ಗೌರವ ಎಂದೇ ಭಾವಿಸಲಾಗುತ್ತದೆ, ಪಕ್ಷ ಯಾವುದೇ ಇರಲಿ ಜನಸಂಕಷ್ಟಗಳಿಗೆ ಆಸರೆ ಆಗುವವರೇ ನಿಜವಾದ ನಾಯಕತ್ವ ಎನ್ನುವ ಕೆ.ದೇವೇಂದ್ರಪ್ಪ ಜನಮಾನಸದೊಳಿನಲ್ಲಿದ್ದಾರೆ ಎನ್ನುವುದು ನನ್ನಯ ಅಂಬೋಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I