Sunday, August 2, 2026
Homeಅಂಕಣಈ ಹೊತ್ತಿನ I ಪತ್ರಿಕೋದ್ಯಮದ I ಹಾದಿಯೊಳು॒

ಈ ಹೊತ್ತಿನ I ಪತ್ರಿಕೋದ್ಯಮದ I ಹಾದಿಯೊಳು॒

ಬರೆಯುತ್ತಾರೆ ಗಾರಾ.ಶ್ರೀನಿವಾಸ್

ಈ ಹೊತ್ತಿನ ಪತ್ರಿಕೋದ್ಯಮದ ಹಾದಿಯೊಳು॒

ಪತ್ರಿಕೋದ್ಯಮ ಎನ್ನುವ ಶೀರ್ಷಿಕೆಯಲ್ಲಿ ಪತ್ರಿಕೋದ್ಯಮದ ಜವಾಬ್ದಾರಿ, ಹಾಗೂ ಅದರ ಮೌಲ್ಯದ ಉಳಿವಿಕೆಗಾಗಿ ನೈಜತೆಯ ಹಾದಿಯಲ್ಲಿ ಸಾಗಬೇಕಾಗಿದ್ದ ಈ ನೆಲೆ ಅದೆಷ್ಠು ಅನಾಹುತಕಾರಿಗಳತ್ತ ಸಾಗಿದೆ, ಪಕ್ಕಾ ಉದ್ಯಮದ ಮಾರುಕಟ್ಟೆಯತ್ತ ಕೊಂಡೊಯ್ಯಲಾಗಿದೆ, ಸಂವಿದಾನ ಬದ್ದ ಪತ್ರಿಕಾರಂಗದ ಕಾಯ್ದೆಗಳು ಉಲ್ಲಂಘಿಸುತ್ತಿರುವ ವಿಚಿಧ್ರಕಾರಿಗಳ ಕುರಿತಾದ ಒಂದಿಷ್ಠು ಸತ್ಯ ಘಟನೆಗಳಾಧರಿತ, ಜೀವಂತ ಉದಾರಣೆಯ ಸಹಿತ, ಈ ಪುಸ್ತಕದಲ್ಲಿ ಉಲ್ಲೇಖಿಸಿ ವಿವರಿಸಿದ್ದೇನೆ, ಇಲ್ಲಿ ಮೂಲ ಪತ್ರಿಕೋದ್ಯಮಕ್ಕಾಗಲಿ, ವ್ಯಥಾ ಆರೋಪಿಸುವುದಾಗಲಿ ಪುಸ್ತಕದ ಉದ್ದೇಶವಾಗಿರುವುದಿಲ್ಲ.

ತಪ್ಪು ಯಾರೇ ಮಾಡಿದರೂ ಅದು ಅಕ್ಷರಶಃ ತಪ್ಪೇ ಆಗಿರುತ್ತದೆ ಅದನ್ನು ಮುಚ್ಚಿಕೊಳ್ಳುವ ಯತ್ನದಿ ಮುಂದುವರೆದ ಭಾಗಗಳೇ ರಾದ್ದಾಂತದ ಘಟನಾವಳಿಗಳು ಅಲ್ಲಲ್ಲಿ ಕಾಣಸಿಗುತ್ತವೆಯಷ್ಠೆ, ಬಂಡವಾಳಷಾಹಿ ಹಾಗೂ ಬಂಡವಾಳರಹಿತ, ಹೀಗೆ ವಿಂಗಡಣೆಯಲ್ಲಿ ಸ್ಥಳೀಯ ಪತ್ರಿಕೆಗಳು ಅತೀವ ಸವಾಲಿನ ಸಡುವೆ ಹೆಜ್ಜೆಗಳಿಟ್ಟಿದ್ದರು ಸಹ ಸರಿ ಸುಮಾರು ೮೦% ರಷ್ಟು ಸ್ಥಳೀಯ ಪತ್ರಿಕೆಗಳು ಸಾರ್ವಜನಿಕವಾದ ಸುದ್ದಿಗಳ ಬಿತ್ತರಿಸುವಿಕೆಗೆ ಮುಂದಾಗಿರುವುದರಿಂದಲೇ ಇನ್ನೂ ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯದ ನೈಜತೆ ಉಳಿದುಕೊಂಡಿದೆ,

ಇದರ ಹೊರತಾಗಿ ಬಂಡವಾಳಷಾಹಿ ರಾಜ್ಯ ಪತ್ರಿಕೆಗಳು ಮುಖ ಪುಟಗಳಲ್ಲೇ ವರ್ಣರಂಜಿತ ಜಾಹಿರಾತಿಗಳನ್ನು ಮುದ್ರಿಸಿ ಕೊಳ್ಳುವಷ್ಠರ ಮಟ್ಟಿಗೆ ತನ್ನ ವ್ಯಾಪಾರಿ ಮನೋಭಾವವನ್ನು ಅನಾವರಣಗೊಳಿಸಿಕೊಂಡಿದೆ.
ಇನ್ನೂ ದೃಶ್ಯಮಾಧ್ಯಮಗಳು ಮುದ್ರಣ ಮಾಧ್ಯಮಗಳಿಗಿಂತಲೂ ಸಾವಿರ ಪಟ್ಟು ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳಬೇಕಾಗುತ್ತದೆ. ಹೀಗೆ ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಪ್ರಸ್ತುತ ಪತ್ರಿಕೋಧ್ಯಮದ ಬಹುತೇಕ ಹಾದಿ, ಕಾಸಿಗಾಗಿ ಸುದ್ದಿ, ಪತ್ರಿಕೆಗಳ ಮಾರಾಟ ದಂಧೆ, ಕಾನೂನು ಬಾಹಿಕ ಪತ್ರಿಕಾ ಮಾಲಿಕತ್ವ, ಪಬ್ಲಿಷರ್, ಬದಲಾವಣೆ, ಭಾರತೀಯ ಕಾನೂನು ಕಟ್ಟಳೆಗಳನು ಗಾಳಿಗೆ ತೂರಿದ ಅವ್ಯವಸ್ಥೆಯ ಆಗರಗಳ ಮೊದಲ ಹಂತದಲ್ಲಿ ಇಲ್ಲಿ ಅನಾವರಣಗೊಳಿಸಲಾಗಿದೆ,

ಒಟ್ಟಾರೆ ಭಾರತ ಸಂವಿಧಾನದ ನಾಲ್ಕನೇ ಅವಿಭಾಜ್ಯ ಅಂಗ ಪತ್ರಿಕಾಂಗವನ್ನು ಅವರುಗಳದೇ ಆದ ದಿಕ್ಕು ದಿಕ್ಕುಗಳಲ್ಲಿ ಕೊಂಡೊಯ್ದು ಅದರ ನಿಯಮಗಳ ಚೌಕಟ್ಟನ್ನು ಮುರಿದು ಮುನ್ನೆಡೆದರು ಸಂಬಂಧಿಸಿದ ಇಲಾಖೆಗಳು ಅತೀವ ಮೌನಕ್ಕೆ ಜಾರಿವೆ, ಅಸಲಿಗೆ ಪತ್ರಿಕೆಗಳ ಪ್ರಚುರತೆಗಾಗಿ ಆಯಾ ಜಿಲ್ಲಾಧಿಕಾರಿಗಳ ಕಛೇರಿಗೆ ಡಿಕ್ಲರೆಷನ್ ಅನುಮತಿಗಾಗಿ ಸಲ್ಲಿಸಲಾಗುವ ಅರ್ಜಿಗಳ ಕಡತಗಳನ್ನು ಸರಿಯಾಗಿ ಪರಿಶೀಲಿಸದೇ ಅನಾಮತ್ತಾಗಿ ಡಿಕ್ಲರೆಷನ್ ನೀಡುತ್ತಿರುವುದು ಈ ದಿನಮಾನದಲ್ಲಿ ಸಾಮಾನ್ಯವಾಗಿರುವುದು ಕೂಡ ಅಧಿಕಾರ ಬಾಹಿರ ಎನ್ನಬಹುದಾಗಿದೆ.

ಇಂತಹ ನೂರು ಎಡವಟ್ಟುಗಳ ನಡುವೆ ಪತ್ರಿಕಾಂಗದ ವ್ಯವಸ್ಥೆ ಸಾಗುತ್ತಿದ್ದರು ಡಿಕ್ಷರೆಷನ್ ನೀಡುವ ಜಿಲ್ಲಾಡಳಿತ, ಉಪವಿಭಾಗದಿಕಾರಿಗಳ ಕಛೇರಿ, ಟೈಟಲ್ ನೊಂದಣಿ ಮಾಡುವ ಓeತಿ ಖegisಣಡಿಚಿಣioಟಿ oಜಿ Iಟಿಜiಚಿ, ಹಾಗೂ ಈ ಎಲ್ಲಾ ನಿಯಮಾವಳಿಗಳು ಉಲ್ಲಂಘಿಸಿದಂತೆ ಪ್ರೆಸ್ ಕಾಯ್ದೆಯನ್ನು ಕಾಪಾಡಬೇಕಾದ Pಡಿess ಛಿouಟಿಛಿiಟ oಜಿ Iಟಿಜiಚಿ, ತಮ್ಮ ವ್ಯಾಪ್ತಿಗೆ ಸಂಬಂಧವಿಲ್ಲ ಎಂಬಂತೆ ತಾತ್ಸಾರತೆ ತೋರಿರುವುದರಿಂದಲೇ ಇಂತಹ ಸಂವಿಧಾನ ಬಾಹಿರಗಳಿಗೆ ಕಾರಣವಾಗಿದೆ.

ಒಟ್ಟಾರೆ ಪತ್ರಿಕೋದ್ಯಮದ ದಯನೀಯತೆ ಬಲವಾಗುತ್ತಲೇ ಸಾಗಿದೆ ಒಂದೆಡೆ ಪ್ರೆಸ್ ನಿಯಮಾವಳಿಗಳ ಉಲ್ಲಂಘನೆ ಎನ್ನುವುದು ಸಾಮಾನ್ಯವಾಗಿರುವ ನಡುವೆ ಸಂವಿಧಾನದ ನಾಲ್ಕನೇ ಅವಿಭಾಜ್ಯ ಅಂಗ ಪತ್ರಿಕಾಂಗ ವಾಸ್ತವವಾಗಿ ವ್ಯಾಪಾರಿಕರಣದ ದೃಷ್ಠೀಕೋನದಲ್ಲಿ ಆಂತರಿಕವಾಗಿ ಅನಾಯಾಸವಾಗಿ ಸಾಗುತ್ತಿದೆ, ಉದಾಹರಿತವಾಗಿ ಉದ್ಯಮ ಎನ್ನುವುದು ವ್ಯಾಪಾರ ವಹಿವಾಟು ಅಗಿರುವುದರಿಂದ ಅದರ ಮೂಲ ಉದ್ದೇಶ ಲಾಭವನ್ನು ಗಳಿಸುವುದೇ ಆಗಿದೆ. … ಅದು ಮನಸ್ಸಿನ ಜೊತೆ ಹಾಗೂ ಸಮಾಜದ ಜೊತೆ ನಡೆಸುವ ಸಂವಾದವಲ್ಲ ಎಂದಾದರೂ … ಸಮಾಜವನ್ನು ಕಟ್ಟುವ ಕೈಂಕರ್ಯದಲ್ಲಿ ತೊಡಗಬೇಕಾದ ಪತ್ರಿಕೋದ್ಯಮದ ಹೊಣೆಗಾರಿಕೆ ತುಂಬಾ ಮುಖ್ಯವಾಗುತ್ತದೆ ಎಂದು ಅದೆಷ್ಟು ಮಂದಿಗಳು ಅರಿತು ನಡೆಯುತ್ತಾರೆ ಎನ್ನುವುದು ಸೋಜಿಗದ ಸಂಗತಿಯಾಗಿದೆ.

ಇಂತಹ ಅನೇಕ ವಾಸ್ತವ ಬೆತ್ತಲ ಸತ್ಯಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ sಸಮಸ್ತ ಕಾರ್ಯನಿರತ ಪತ್ರಕರ್ತರು ಮುಂದಾಗಬೇಕಿದೆ ಅಲ್ಲದೆ ತಮ್ಮ ಮೂಲ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕಾಗಿದೆ.
ಇಂತಹದೊಂದು ಕಾರ್ಯಕ್ಕೆ ಕಾರ್‍ಯನಿರತರು ಮುಂದಾಗದಿದ್ದರೆ ಈ ಹೊತ್ತಿನ ದಿನಮಾನದಲ್ಲಿ ಶರವೇಗದಲ್ಲಿರುವ ಅಭಿವ್ಯಕ್ತಿ ಮಾರಣ ಹೋಮವನ್ನಾಗಲಿ ಅಥವಾ ಸಾಂವಿಧಾನಿಕ ಹಕ್ಕು ಚ್ಯುತಿಯಾಗಲಿ ತಡೆಯುವುದಕ್ಕೆ ಸಾಧ್ಯವಿಲ್ಲ, ಇಂತಹ ಅರಿವಿನ ಕೊರತೆಯಿಂದಾಗಿ ಇತಿಹಾಸದಲ್ಲಿ ಮೊದಲ ಭಾರಿಗೆ ಕರ್ನಾಟಕ ರಾಜ್ಯದಲ್ಲಿ ಮಾಧ್ಯಮದ ಮೇಲಿನ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆಗೋಡೆಯೊಂದನ್ನು ರೂಪಿಸಲು ವಿಧಾನಮಂಡಲದಲ್ಲಿ ನಡೆದ ಚರ್ಚೆಗೆ ರೆಕ್ಕೆ ಪುಕ್ಕಗಳನ್ನು ಜೋಡಿಸಲಾಗಿದೆ ಎನ್ನುವ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೆ ಜಾತಿ,ಧರ್ಮ,ತುಷ್ಠೀಕರಣದ ಓಲೈಕೆಯ ಪರಕಾಷ್ಠೆಗಳೇ ಕಾರಣ ಎನ್ನಬಹುದಾಗಿದೆ.

ವಿವೇಚನೆಯನ್ನು ಕಳೆದುಕೊಂಡ ಕೆಲ ಸೋಕಾಲ್ಡ್ ಪತ್ರಕರ್ತರಿಂದಾಗಿಯೇ, ಅವಿವೇಕಿ ರಾಜಕಾರಣಿಗಳು ಇಂತಹದ್ದೊಂದು ಸಂವಿಧಾನ ಬಾಹಿರ ಚರ್ಚೆಗೆ ಮತ್ತು ಅದರ ಕಾರ್ಯರೂಪಕ್ಕೆ ತರಲು ಹವಣಿಸುತ್ತಿದ್ದಾರೆ…!
ಇಂತಿವ ಸಂಗತಿಗಳಿಗನುಸಾರವಾಗಿ ಅತೀ ಮುಖ್ಯವಾಗಿರುವ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸಾಕಷ್ಟು ವಿಸ್ತಾರತೆಗಳಿವೆ ಇಲ್ಲಿ ದೃಶ್ಯ ಮಾಧ್ಯಮದ ಕಾರ್ಯವ್ಯಾಪಿ ಮತ್ತು ಮುದ್ರಣ ಮಾಧ್ಯಮಗಳ ಕಾಂiiವ್ಯಾಪಿಗಳಲ್ಲಿ ವ್ಯತ್ಯಾಸಗಳಿವೆ..ಹೀಗೆ ಇರುವ ವ್ಯತ್ಯಾಸ, ಅಂತರಗಳನ್ನು ಹೇಳುವ ಪ್ರಮೇಯವಿಲ್ಲವೆಂದು ತಿಳಿಸುತ್ತಾ ಮುದ್ರಣ ಮಾಧ್ಯಮದ ಕವಲಿನಲ್ಲಿರುವ ಬಹುತೇಕ ಸ್ಥಳೀಯ ಪತ್ರಿಕೆಗಳು ಇಂದಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿವೆ ಎನ್ನುವುದಷ್ಠೆ ಸಾವಧಾನಿಕ ಸಂಗತಿಯಾಗಿದೆ.

ಅತಿ ರಂಜನೆಯ ಸುದ್ದಿ ಭರಾಟೆಯಲ್ಲಿ ತನ್ನ ಇತಿ ಮಿತಿಯನ್ನು ಮೀರಿ ನಡೆಯುವ ಬೆರಳಣಿಕೆಯ ಪತ್ರಕರ್ತರು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಆಯ್ಕೆಯಾಗಿ ಆಡಳಿತ ನಡೆಸುವ ಜನಪ್ರತಿನಿಧಿಗಳ ಮೇಲೆ ಹೆಗ್ಗಿಲ್ಗದೆ ಸವಾರಿಗಳು, ಒಂದು ರೀತಿಯಲ್ಲಿ ಆಡಳಿತ ವ್ಯವಸ್ಥೆಯನ್ನೇ ಹೊತ್ತಿದ್ದೇವೆ ಎನ್ನುವ ಅನುಕರಣೆ ಸಲ್ಲದಾಗಿದ್ದರು ಇದನ್ನೇ ವೈಭವಿಕರಿಸುತ್ತಾರೆ,
ಇನ್ನೊಂದೆಡೆ ನ್ಯಾಯಾಂಗದ ನಡುವೆಯೂ ಮೂಗು ತೂರಿಸಿ ಅಂತಿಮ ತೀರ್ಪು ನೀಡುವ ಹಂತಕ್ಕೆ ಹೋದರೆ ಇದು ಪತ್ರಿಕಾಂಗದ ನಿಯಮಗಳ ಮೀತಿಗಳನ್ನು ಮೀರಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡಂತಲ್ಲವೇ..?
ಹೀಗೆ ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯಗಳ ಹರಣಕಾರರ ಅಮಲಿನೊಳಗೆ ಪತ್ರಿಕಾ ಹಾದಿಯನ್ನು ಅಪಾಯಕಾರಿಗೆ ತಳ್ಳುತ್ತಿರುವುದು ಅನಾಹುತಕಾರಿಯಲ್ಲವೇ..?
ಹೀಗಾಗಿ ಸಂವಿಧಾನ ಬದ್ದವಾದ ನಾಲ್ಕು ಅವಿಭಾಜ್ಯ ಅಂಗಗಳನ್ನು ಯಾವುದೇ ಕಾರಣಕ್ಕೂ ಅಪಾಯಕಾರಿಗೆ ತಳ್ಲುವ ಯತ್ನಗಳನ್ನು ಸಹಿಸಿ ಕೂರುವ ಪ್ರಜಾ ಚಿಂತನೆಗಳು ಅದಷ್ಠೆ ನಷ್ಠವನ್ನು ಅನುಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ.

ಹೀಗಾಗಿ ಯಾರು ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಸಂವಿಧಾನ ಬಾಹಿರವಾಗಿ ನಡೆದುಕೊಂಡು..ನಿಯಮಗಳನ್ನು ಉಲ್ಲಂಘಿಸುತ್ತಾರೋ..? ಅಂತಹ ಅನಾಹುತಗಳನ್ನೇ ಅಪಾಯಕಾರಿ ಪತ್ರಿಕೋದ್ಯಮ ಎಂದು ಕರೆದಿದ್ದೇನೆ ಇದು ಭಾರತಾಧ್ಯಂತ ಪಸರಿಸಿದ್ದು ಇಂತಹ ಅಪಾಯಕಾರಿ ವ್ಯವಸ್ಥೆಯನ್ನು ಬುಡ ಸಹಿತ ಕಿತ್ತೊಗೆವ ಹಾಗೂ ಕಾರ್ಯನಿರತ ಶ್ರಮಧಾನಿತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಪತ್ರಿಕಾಂಗದ ಬೆಂಬಲಿತ ಧ್ವನಿಯಾಗಿ ಸಂವಿಧಾನದ ಚೌಕಟ್ಟಿಗೆ ಲೇಪಿಸಿಕೊಂಡಿರುವ ಅಪಾಯಕಾರಿಯನ್ನು ತೊಳೆದು ಹಾಕಬೇಕಾಗಿದೆ ಅದಾಗಲೇ ನಾವುಗಳು ಸಂವಿಧಾನಕ್ಕೆ ಕೊಡುವ ಗೌರವ ಎನ್ನಬಹುದಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I