Monday, August 3, 2026
HomeಸಂಪಾದಕೀಯI ಮಲೆನಾಡಿನ I ಯಾಸೀನ್ ಕುರೇಶಿಯ I ಡೆಡ್ಲಿ ಸ್ಟೋರಿ...I

I ಮಲೆನಾಡಿನ I ಯಾಸೀನ್ ಕುರೇಶಿಯ I ಡೆಡ್ಲಿ ಸ್ಟೋರಿ…I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಮಲೆನಾಡಿನ I ಯಾಸೀನ್ ಕುರೇಶಿಯ I ಡೆಡ್ಲಿ ಸ್ಟೋರಿ…I

ಹೀಗೊಬ್ಬ ಮಲೆನಾಡಿನಲ್ಲಿ ಬೆಳೆದು ನಿಲ್ಲಬೇಕಾಗಿದ್ದ ಚಿಗುರನ್ನು ಹೊಸಕಿ ಹಾಕಿದ್ದು ಯಾತಕ್ಕಾಗಿ..? ಶುರುವಿನ ಪುಂಡಾಟಿಕೆ ಬದಲು ಮಾಡಿಕೊಂಡು ಸಾಮಾಜಿಕವಾಗಿ ಬೇರು ಬಿಟ್ಟಿದ್ದ ಯಾಸೀನ್ ಕುರೇಶಿ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಹಿಂದೂ-ಕ್ರೈಸ್ತ ಸಮುದಾಯದ ಮನಸುಗಳಿಗೆ ಹತ್ತಿರವಾಗಿ ಜಾತ್ಯಾತೀತೆಯನ್ನು ಮೆರೆದಿದ್ದ ಕಾಲಮಾನದಲ್ಲಿ ಯಾರೇ ಸಹಾಯ ಕೇಳಿ ಬಂದರು ಅವರಿಗೆ ಖಾಲಿಯಾಗಿ ಕಳಿಸುತ್ತಿರಲಿಲ್ಲ, ಅವರ ಬೆನ್ನಿಗೆ ನಿಂತು ಪರಿಹಾರ ಹುಡುಕಿಕೊಡುತ್ತಿದ್ದ ಯುವ ಮುಂದಾಳು ಯಾಸೀನ್ ಕುರೇಶಿ ಇದೀಗ ನೆನಪು ಮಾತ್ರವೇ ಆಗಿ ಹೋಗಿದ್ದಾನೆ,

ಒಮ್ಮೆ ಯಾಸೀನ್ ಕುರಿತಾಗಿ ಸುದ್ದಿ ಬೆರೆದಿದ್ದಾಗ, ಸಾಕಷ್ಟು ಪೋನ್‌ಗಳು ಪತ್ರಿಕಾ ಕಛೇರಿಗೆ ದೌಡಾಯಿಸಿದ್ದವು, ಅದರಲ್ಲಿ ಆತ ಮಾಡಿದ ಸಹಾಯ, ಬೆಂಬಲಗಳು ನೆನೆವು ಮಾಡಿ ಕಂಬನಿ ಮಿಡಿದ ಅನೇಕರಲ್ಲಿ ಅನ್ಯ ಧರ್ಮಿಯರು ಇದ್ದರು, ಎಂದರೆ ಆಚ್ಚರಿಯಾಗುತ್ತದೆ, ಮುಸ್ಲಿಂ ಸಮುದಾಯದಲ್ಲಿ ಇಂತಹ ವಿಶೇಷ ಗುಣಗಳ ಹೊಂದಿದ್ದ ಆತ ನೋಡು ನೋಡುತ್ತಿದ್ದಂತೆ ಬೆಳೆದು ಅಬ್ಬರದಿ ನಿಂದಿರುವುದು ಯಾವ ಕೆಟ್ಟ ದೃಷ್ಟಿ ಬಿದ್ದಿತ್ತೋ ಏನೋ..? ಆತ ನಾಯಕನಾಗಿ ನಿಲ್ಲುವ ಮೊದಲೇ ಆತನ ಆಧ್ಯಾಯಕ್ಕೆ ಇತಿ ಹಾಡಿರುವುದು ಬಲು ನೋವಿನ ಸಂಗತಿ ಎಂದು ಅದೆಷ್ಟೋ ಜನರ ಆಭಿಪ್ರಾಯವೂ ಆಗಿದೆ, ಬಹುಷ್ಯಃ ಆತನ ಮರ್ಡರ್ ಮಾಡಿದವರಿಗೂ ಇಂತಹ ಪಕ್ಷಾತೀತ, ಜಾತ್ಯಾತೀತ ಅಭಿಮಾನಿಗಳಿದ್ದಾರೆ, ಆತನಿಗಾಗಿ ಕಂಬನಿ ಮಿಡಿವ ಸಾವಿರಾರು ಹೃದಯಗಳಿವೆ ಎಂದು ಗೊತ್ತು ಮಾಡಿಕೊಂಡಿದ್ದರೆ ಖಂಡಿತವಾಗಿ ಇಂತಹದೊಂದು ದುರಂತದ ಘಟನೆಗೆ ಮುಂದಾಗುತ್ತಿರಲಿಲ್ಲವೇನೋ..? ಯಾರದ್ದೋ ಚಿತಾವಣೆಗೆ ತುತ್ತಾಗಿ ಯಾಸೀನ್ ಕುರೇಶಿಯನ್ನು ಮೋಸದಲ್ಲಿ ಮುಗಿಸಿದ್ದು ಇಂದಿಗೂ ಅವರ ಬೆಂಬಲಿಗರು, ಅಭಿಮಾನಿಗಳು ಮರೆತಿಲ್ಲವಾಗಿದೆ, ಇಂತಹದೊಂದು ಹವಾ ಸೃಷ್ಠಿಸಿ ಹೋದ ಯಾಸೀನ್ ನೆನಪಿನಲ್ಲಿ ಸಾಕಷ್ಟು ಸಾಮಾಜಿಕ ಸೇವೆಗಳು ಮುಂದುವರೆದಿದೆ, ಆತನ ಹೆಸರಿನಲ್ಲಿ ಹೋಟೆಲ್ ಆರಂಭವಾದರೆ, ರಕ್ತದಾನಗಳು ನಡೆಯುತ್ತಲೇ ಇದೆ, ವಿಶೇಷವಾಗಿ ಕಳೆದ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿಯೂ ಯಾಸೀನ್ ಕುರೇಶಿ ಪೋಟೋ ಹಿಡಿದು ಘೋಷಣೆ ಕೂಗಿ ತಮ್ಮ ಅಭಿಮಾನಗಳ ಮೆರೆದಿದ್ದು ಈ ನೆಲದಲ್ಲಿ ದರ್ಶಿಸಿಕೊಂಡಿದೆ,

ಅಸಲಿಗೆ ಅಂದು ನಡೆದ ಘಟನೆ : ಯಜ್ಮಾನ್, ಉಸ್ತಾದ್, ಬಯ್ಯ್ ಎಂದೇ ಕರೆಯುತ್ತಿದ್ದ ಯಾಸೀನ್ ಕುರೇಶಿಯನ್ನು ಮುಗಿಸಿ ಹಾಕಿಬಿಡಬೇಕೆಂದು ಮೂರು ಏರಿಯಾದ ಹುಡುಗರನ್ನು ಕಟ್ಟಿಕೊಂಡು ರಸ್ತೆ ಬದಿಯ ಕ್ಯಾಮೆರಾಗಳನ್ನು ದಾಟಿಕೊಂಡು, ಮಚ್ಚು-ಲಾಂಗ್‌ಗಳನ್ನು ಝಳಪಿಸಿ ಡ್ರಾಗ್ ಮಾಡಿಕೊಂಡು ಸರಿ ಸುಮಾರು ನಾಲ್ಕು ಜನಸಂದಣಿ ಏರಿಯಾಗಳಲ್ಲಿ ಹಾಡು ಹಗಲೇ ೦.೭೫೦ ಕಿ.ಮೀ ನ್ನು ಹದಿನೈದು ನಿಮಿಷಗಳ ಕಾಲ ಆಂತಕ ಸೃಷ್ಟಿಸುತ್ತಲೇ ಹೋಗಿದ್ದು ಒಂದು ಗುಂಪು, ಇನ್ನೊಂದು ಗುಂಪು ಈ ಮೊದಲೇ ಮಾತುಕತೆಗೆ ಕರೆದು ಪೂರ್ವ ಸ್ಕೆಚ್‌ನಂತೆ ಹಿಂಬದಿಯಿಂದಲೇ ಶುರುವಿಟ್ಟ ಗ್ಯಾಂಗ್‌ವಾರ್‌ನಲ್ಲಿ ಯಾಸೀನ್ ಕುರೇಶಿಯನ್ನು ಮುಗಿಸಿ ಹಾಕುವ ದಾಳಿ ಈ ನಂತರ ಶಿವಮೊಗ್ಗ ವಾಣಿಜ್ಯೋದ್ಯಮವೇ ತಲ್ಲಣಗೊಂಡು ಜನಜೀವನದ ನೆಮ್ಮದಿಗೆ ಕೊಳ್ಳಿ ಮಡಗಿದ ಅಸಲಿ ತ್ರಿಬಲ್ ಮರ್ಡರ್‌ನ ಕಥಾನಕವೇ ಅಷ್ಟೇ ಬೆಚ್ಚಿ ಬೀಳಿಸುವಂತಹದ್ದು, ಕುರೇಶಿ ಆಸ್ಪತ್ರೆಯಲ್ಲಿ ಸತ್ತು ಹೋದನೆಂಬ ಸುದ್ದಿ ಬೆಂಗಳೂರು ಭೂಗತ ಲೋಕದಲ್ಲಿ ಅತೀವ ಚರ್ಚೆಗೆ ಗ್ರಾಸವಾಗುತ್ತದೆ, ಯಾವ ಮತ-ಪಂಥಗಳ ಬೇದವಿಲ್ಲದೆ ಯಾಸೀನ್ ಕುರೇಶಿಯ ಕಳೆಬರಹದ ಅಂತಿಮ ಯಾತ್ರೆಗೆ ಸಾವಿರಾರು ಜನಸಮೂಹವೇ ಸಾಗಿ ಹೋಗುತ್ತದೆ, ಐ ಮಿಸ್ ಯೂ ಬಯ್ಯಾ ಎಂದು ಕಾಲೇಜು ಹುಡುಗರ ಸ್ಟೇಟಸ್‌ನಲ್ಲಿ ಕುರೇಶಿ ಸಾವಿಗೆ ಕಂಬನಿ ಮಿಡಿಯುತ್ತದೆ, ಎಂದರೆ ಯಾರೀತ ಯಾಸೀನ್ ಕುರೇಶಿ..? ಹದಿನೈದು ಕೇಸುಗಳಲ್ಲಿ ಕಾಣಿಸಿಕೊಂಡಿದ್ದ ಕುರೇಶಿ ಕೇವಲ ಎಂಟು ವರುಷಗಳಲ್ಲಿ ಯೂತ್ ಐ-ಕಾನ್ ಆಗಿದ್ದು ಹೇಗೆ..? ಈತನಿಗಿದ್ದ ಭೂಗತ ನಟೋರಿಯಸ್‌ಗಳ ಸಂಪರ್ಕವೇನು..? ಕುರೇಶಿಯನ್ನು ಮುಗಿಸಲೇಬೇಕು ಎಂದು ಸುಫಾರಿ ಕೊಟ್ಟಿದ್ದರೆ..? ಆಗಿದ್ದರೆ ಆ ನೆರಳು ಯಾವುದು..? ತನಿಖೆಯಲಿದ್ದ ಪಿಎಸ್‌ಐ ನೇತೃತ್ವದ ರೌಡಿ ನಿಯಂತ್ರಣ ದಳ ಇಂತಿವುಗಳನ್ನು ಬೇದಿಸಲು ಸಮರ್ಥವಾಗಿದಿಯಾ..? ಇಂತಹದೊಂದು ತಳದ ತನಿಖೆಗೆ ಪೊಲೀಸರು ಮುಂದಾಗಲಿಲ್ಲ,

ಬದಲಿಗೆ ಮರ್ಡರ್ ಮಾಡಿದ್ದ ಹುಡುಗರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ, ಪ್ರತಿಯಾಗಿ ಬಿದ್ದ ಡಬಲ್ ಮರ್ಡರ್ ಆರೋಪಿಗಳನ್ನು ಕೂಡ ಬಂಧಿಸಿ ಈ ಕೇಸಿನ ಕಡತ ಮುಚ್ಚಿದ್ದರು, ಆಗಾಗ್ಗೆ ಯಾಸೀನ್ ಕುರೇಶಿ ದನಿಗಳು ಅಲ್ಲಲ್ಲಿ ಕೇಳ ಬರುತ್ತಲೇ ಇದೆ, ಆತನ ಕುರಿತಾಗಿ ಮಾತಾಡಿಕೊಳ್ಳುತ್ತಾರೆ, ಬೆಳೆದು ನಿಲ್ಲುವ ಹೊತ್ತಿನಲ್ಲಿಯೇ ಮುಗಿಸಿ ಹಾಕಿರುವ ಹಿಂದೆ ಇರುವ ಸುಫಾರಿ ಕೊಟ್ಟವರಾರು ಎಂದು ಇಂದಿಗೂ ಸುತ್ತಲು ಬೊಟ್ಟು ಮಾಡಿ ಚರ್ಚಿಸುತ್ತಲೇ ಇರುವುದು, ಇತ್ತೀಚೆಗೆ ಯಾಸೀನ್ ಹುಡುಗರು ಎಂದು ಬ್ಯಾಟ್ ಬೀಸಿದ್ದ ಪ್ರಕರಣದಲ್ಲಿ ಕೋಟೆ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಜೈಲುಗಂಬಿಯ ಹಿಂದಗಡೆ ಸರಿಸಿದ್ದರು, ಆತನ ಕುರಿತಾಗಿ ಇರುವ ಅಭಿಮಾನಿಗಳು ಹಾಗೂ ಬೆಂಬಲದ ಕೋಟೆ ಮತ್ತಷ್ಟು ಬಿಗುವಾಗಿದೆ,

ಪೊಲೀಸರು ಕೂಡ ಯಾವ ಹೊತ್ತಿನಲ್ಲಿ ಆದರೂ ಮತ್ತೊಂದು ಗ್ಯಾಂಗ್‌ವಾರ್ ನಡೆದೆ ನಡೆಯುತ್ತದೆ ಎನ್ನುವ ಅನುಮಾನಗಳ ನಡುವೆ ಇದ್ದರೆ, ಜೈಲಿಗೆ ಹೋದವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಹೊತ್ತಿನಲ್ಲಿ ಹೀಗೊಂದು ಘಟನೆ ಘಟಿಸದೆ ಇರಲಾರದು ಎನ್ನುವ ಕಾರಣಕ್ಕೆ ಈ ಮೊದಲೇ ಮುಂಜಾಗ್ರತಾ ಕ್ರಮ ಜರುಗಿಸುತ್ತಿರುವುದು ಕಂಡು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I