Sunday, August 2, 2026
HomeಸಂಪಾದಕೀಯI ಊರು ಕೊಳ್ಳೆ ಹೊಡೆದ ಮ್ಯಾಲೆ ದಿಡ್ಡಿ ಬಾಗಿಲು ಹಾಕಿದ್ರಂತೆ I ಏನ್ರೀ ಎಸ್ಪಿ ಮಿಥುನ್...

I ಊರು ಕೊಳ್ಳೆ ಹೊಡೆದ ಮ್ಯಾಲೆ ದಿಡ್ಡಿ ಬಾಗಿಲು ಹಾಕಿದ್ರಂತೆ I ಏನ್ರೀ ಎಸ್ಪಿ ಮಿಥುನ್ ಸುಳ್ಳು ಹೇಳೋಕೆ ಬರೋಲ್ವೇನ್ರಿ.. I

I ಊರು ಕೊಳ್ಳೆ ಹೊಡೆದ ಮ್ಯಾಲೆ ದಿಡ್ಡಿ ಬಾಗಿಲು ಹಾಕಿದ್ರಂತೆ I ಏನ್ರೀ ಎಸ್ಪಿ ಮಿಥುನ್ ಸುಳ್ಳು ಹೇಳೋಕೆ ಬರೋಲ್ವೇನ್ರಿ.. I

ಮೊನ್ನೆ ನಡೆದ ಶಿವಮೊಗ್ಗ ನಗರದ ಮಾರ್ನಾಮಿಬೈಲು ಯಾನೇ ಜೆಸಿ ನಗರದ ಭಾರತ್ ಫೌಂಡ್ರಿ ಆಜು, ಬಾಜಿನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಳದ ತುಸು ಮುಂದಡಿ ರಾತ್ರಿ ಹೊತ್ತಿನ ಸರಿಗೆ ಇದೇ ಏರಿಯಾದ ಅಮ್ಜದ್ ಮೇಲೆ ಮಾರಣಾಂತಿಕವಾಗಿ ಹಲ್ಲೆಯಾಗಿ ಆತ ಬದುಕುಳಿದಿದ್ದೇ ಈ ದೇವಳದ ಪಲ್ಲಕ್ಕಿ ಕಾರಣವಾಗಿದೆ, ಹೌದು ಅಮ್ಜದ್ ಕೂಡ ಇಲ್ಲಿನ ಕನ್ನಡ ಸಂಘಟನೆಗಳಿಗೆ ಹಾಗೂ ದೇವಳಕ್ಕೆ ದೇಣಿಗೆ ನೀಡಿದ್ದವನು, ಈ ಕಾರಣ ಮಾತ್ರದಿ ಹಂತಕರಿಂದ ಬದುಕುಳಿದ ಎನ್ನುವ ಮಾತಿದೆ.

ಏನೇ ಆಗಲಿ ಕಾನೂನು ಮೀರಿ ಹಲ್ಲೆ ನಡೆಸಿದವರಿಗೆ ಕಾನೂನು ರಿತ್ಯಾವೇ ಶಿಕ್ಷೆಯಾಗಲಿ, ಆದರೆ ಸತ್ಯ ಯಾವತ್ತಿದ್ದರೂ ಹೊಗೆಯಾಡುತ್ತಲೇ ಇರುತ್ತದೆ ಅಲ್ಲವೇ.. ಅಮ್ಜದ್ ನಡೆಸುತ್ತಿರುವ ಕೇರಂ ಕ್ಲಬ್ ಬೈಪಾಸ್‌ನ ಎಸ್‌ಎಫ್ ಬ್ಯಾಟರಿ ಷಾಪ್ ಕಟ್ಟದ ಮೊದಲ ಮಹಡಿನಲ್ಲಿದೆ ಇದಲ್ಲದೆ ಹೊಳೆ ಬಸ್‌ಸ್ಟ್ಯಾಪ್ ಬಳಿ ಇರುವ ಮಾಂಡವಿ ಬಾರ್ ಪಕ್ಕದಲ್ಲಿ ಇಸ್ಪೀಟ್ ಅಡ್ಡೆ ಇದೆ ಹಾಗೂ ಓಸಿ ದುನಿಯಾದಲ್ಲಿ ಈತನ ಹೆಸರು ಮೊದಲ ಪಟ್ಟಿಯಲ್ಲಿದೆ, ಎಲ್ಲವೂ ದೊಡ್ಡಪೇಟೆ ಪೊಲೀಸ್ ಠಾಣೆಯವರಿಗೆ ಗೊತ್ತಿದೆ, ಈ ಜೊತೆಗೆ ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್ ಕೇಸಿನ ನಾನೂರಕ್ಕೂ ಹೆಚ್ಚು ಮಹಜರ್‌ನಲ್ಲಿ ಅಮ್ಜದ್‌ನನ್ನೇ ಬಳಸಿಕೊಂಡು ಸಹಿ ಮಾಡಿಸಿಕೊಳ್ಳಲಾಗಿದೆ, ಈ ರೀತಿಯ ಕಸಾಯಿ ಮಹಜರ್‌ಗಳ ರಿಪೋರ್ಟ್ ಕುರಿತಾಗಿ ಉನ್ನತಮಟ್ಟದ ಪೊಲೀಸ್ ತನಿಖೆ ನಡೆದರೆ ಮೊದಲು ಅಮಾನತ್ತುಗೊಳ್ಳುವುದು ಇದೇ ಎಸ್ಪಿ ಮಿಥುನ್ ಕುಮಾರ್ ಎನ್ನುವುದು ಬಿಎನ್‌ಎಸ್ ಕಾಯ್ದೆ ಉಲ್ಲಂಘನೆಯ ಎಫೆಕ್ಟ್ ತಿಳಿಸುತ್ತದೆ.

ಯಾಕೆ ಈ ಟಿಪ್ಪಣಿ ಅಂದರೆ ಅಮ್ಜದ್ ಓರ್ವ ದೇಣಿಗೆ ನೀಡುವಲ್ಲಿ ಮುಂದಾಗುತ್ತಾನೆ, ಅದೇ ರೀತಿ ಆಯಾ ಠಾಣೆಗಳಿಗೂ ಹಪ್ತಾ ನೀಡುತ್ತಿದ್ದಾನೆ ಎನ್ನುವ ನಿಖರತೆಗಳಿವೆ, ೨೦೨೩ರಲ್ಲಿ ಡೌಟ್ ಡಕಾಯಿತಿ ಕೇಸು ದಾಖಲಾಗಿದೆ, ೨೦೨೪ರಲ್ಲಿ ಇಂತಹ ಜುಗಾರಿ ಗಡಿಪಾರು ಮಾಡಲಾಗಿದೆ ಎನ್ನುವ ಪೊಲೀಸ್ ಮಾಹಿತಿಗಳು ಸುಳ್ಳು ಆಗಿವೆಯೇ..? ಇಂತಿವುಗಳ ಕುರಿತಾಗಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯಾಗಿರುವ ನಿಮಗೆ ಈತನ ಬಗ್ಗೆ ರೆಸ್ಯೂಮ್ ಇಲ್ಲವೇ..? ಅಥವಾ ಇಂತಹ ಜುಗಾರಿಗಳಿಂದ ನಿಮಗೆ ಫಿಕ್ಸ್ ಕರೆನ್ಸಿ ಕಂತೆಗಳು ತಲುಪೇ ಇಲ್ಲವೆ.. ಇದು ಆಚ್ಚರಿಯಾದರು ತಾವುಗಳು ಅಮ್ಜದ್ ಬಗ್ಗೆ ಮಾಹಿತಿಯೇ ಇಲ್ಲ ಎಂಬಂತೆ ಈತನೋರ್ವ ಸ್ಕ್ರ್ಯಾಪ್ ಮರ್ಚೆಂಟ್ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಯಾವ ಲೆಕ್ಕಾಚಾರಗಳಿವೆ ಎನ್ನುವುದು ಸಧ್ಯದ ಪ್ರಶ್ನಾರ್ಥಕವಾಗಿದೆ, ನಿಮಗೆ ಸುಳ್ಳು ಹೇಳುವುದಕ್ಕೂ ಬರುತ್ತಿಲ್ಲವೇ.. ಈ ರೀತಿಯ ಸುಳ್ಳು ಹೇಳುವುದರ ಮುಖೇನ ಆತನೊಂದಿಗೆ ಯಾವ ಸಂಪರ್ಕಗಳು ಇಲ್ಲವೆಂಬುವುದು ಸಾಬೀತಾಗಬೇಕೆ..!

ಏನೇ ಆಗಲಿ ಹಂತಕರ ಮಾರಕಾಸ್ತ್ರಗಳಿಗೆ ಇಂದು ಕೈ ಬೆರಳು ತುಂಡು ಮಾಡಿಕೊಂಡು, ಕಿಡ್ನಿ ಲ್ಯಾಪ್ಸ್ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್‌ನಲ್ಲಿ ದಾಖಲಾಗಿರುವ ಅಮ್ಜದ್ ಔಟ್ ಆಫ್ ಡೇಂಜರ್, ಶಿವಮೊಗ್ಗದಲ್ಲಿ ರೌಡಿ ನಿಯಂತ್ರಣ ದಳ ಏನೋ ಜಾರಿಗೆ ತಂದಿದ್ದಾಯ್ತು..? ಇದು ಯಾವ ಕಾರಣಕ್ಕೆ ಎನ್ನುವುದು ಇಂದಿಗೂ ಗೊತ್ತು ಮಾಡಿಕೊಳ್ಳದ ಸಂಗತಿಯಾಗಿದೆ, ಇದನ್ನು ಎಸ್ಪಿ ಮಿಥುನ್‌ರವರ ನೇತೃತ್ದಲ್ಲಿಯೇ ಕೊಳೆಯುತ್ತಲಿದೆ,

ಇಂತಹ ಹಲವು ಸಂಗತಿಗಳ ನಡುವೆ ಒಂದಷ್ಟು ಹಿಂದಿನ ಪ್ಲ್ಯಾಷ್ ಬ್ಯಾಕ್ ಕೂಡ ಗಣನೆಗೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆಗಳಿವೆ, ಇದಕ್ಕಾಗಿಯೇ ಬರೆಯುತ್ತಾರೆ ಗಾರಾ.ಶ್ರೀನಿವಾಸ್ ಅಂಕಣದಲ್ಲಿ ಮಲೆನಾಡಿನಲ್ಲಿ ಸುಫಾರಿ ಹತ್ಯೆಗಳ ಫೈಲ್ಸ್ ಎನ್ನುವ ನೈಜ ಚಿತ್ರಣಗಳನ್ನು ಬರಹಗಳ ಮೂಲಕ ಅಭಿವ್ಯಕ್ತಿಸಲಾಗುತ್ತಿದೆ,

ಇಂತಹದೊಂದು ಅಭಿವ್ಯಕ್ತಿಯಡಿ ಪ್ಲ್ಯಾಷ್ ಬ್ಯಾಕ್ ಕಡೆಗೆ ಚಿತ್ತವರಿಸಿ ಬರೋಣ, ಬೆಂಗಳೂರು ಮತ್ತು ಶಿವಮೊಗ್ಗದ ಮಾಫಿಯಾ ನಂಟು ಇಂದು ನಿನ್ನೆಯದಲ್ಲ, ಶಿವಮೊಗ್ಗದ ಅಣ್ಣಾನಗರದಲ್ಲಿದ್ದ ಕೊತ್ವಾಲ್ ರಾಮಚಂದ್ರನಿಂದಿಡಿದು ಇಲ್ಲಿವರೆಗೂ ಸಾವಿರ ಉದಾಹರಣೆಗಳು ಸಾಕ್ಷೀಕರಿಸಿವೆ, ಇದನ್ನು ಆಗಾಗ್ಗೆ ವಿವರಿಸುತ್ತಲೇ ಇದ್ದೇನೆ, ಆಗಾಗ್ಗೆ ಬೆಂಗ್ಳೂರಿನಲ್ಲಿ ನಟೋರಿಯಸ್ ಡಾನ್ಗಳಿಗೂ ಬೆಂಬಿಡದೇ ಪೆರೆಡ್ ನಡೆಸಿ ಖಡಕ್ ಕೋಕಾ ವಾರ್ನಿಂಗ್ ಕೊಟ್ಟಿರುವ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬೆಂಗ್ಳೂರು ಭೂಗತ ಲೋಕದ ಬುಡವನ್ನು ಕಿತ್ತೊಸೆಯಲು ಮುಂದಡಿಯಿಕ್ಕಿದ್ದಾರೆ ಅದಕ್ಕೆ ಆಡಳಿತದ ಅಸ್ತು ಮೇಲ್ನೋಟಕ್ಕೆ ದೊರೆತಿದೆ,

ಇಂತಹ ಭಾರಿ ಹೆಜ್ಜೆಗಳ ಮುನ್ನ ತಿದ್ದಿಕೊಳ್ಳುವುದಕ್ಕೆ ಪೆರೆಡ್ ನಡೆಸಿ ಇಂತಹದೊಂದು ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ ಈ ಸಂದರ್ಭದಲ್ಲಿ ಮುದಿ ಮುಲಾಮ ಅಲಿಯಾಸ್ ಲೋಕೇಶ್ ಬೆಂಗ್ಳೂರ್ ಮಾಫಿಯಾ ಡಾನ್ಗೂ ಖಡಕ್ ಎಚ್ಚರಿಸಿದ್ದಾರೆ, ಅಸಲಿಗೆ ಈ ಮುಲಾಮ ಯಾರು…? ಎನ್ನುವ ಮೂಲ ಹುಡುಕಿದರೆ ಈತನೂ ಶಿವಮೊಗ್ಗದವನೇ ಆಗಿದ್ದಾನೆ, ಕೆರೆ ಅಂಗಳದ ನಿವಾಸಿಯಾಗಿದ್ದ ಈತನ ಕುಟುಂಬ ಬೆಂಗ್ಳೂರಿಗೆ ವಲಸೆ ಹೋಗುತ್ತದೆ,

ಅದಾಗ ಇದೇ ಮುಲಾಮ ಹದಿ ಹರೆಯದ ಆಸು-ಪಾಸಿನಲ್ಲಿದ್ದವ, ಆದರೆ ಈತ ಬೆಂಗ್ಳೂರಿಗೆ ಹೋಗಿ ಫೀಲ್ಡ್ ಮಾಡುತ್ತಲೇ ಡಾನ್ ಆದ, ಆದ್ರೇ ಯಾವುದೇ ಕಾರಣಕ್ಕೂ ತಾನೂ ಶಿವಮೊಗ್ಗದವನು ಎಂದು ಇಲ್ಲಿವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ ಬದಲಿಗೆ ಶಿವಮೊಗ್ಗದ ಹುಡುಗರಿಗೆ ಬೆಳೆಸಿದ ಭೂಪ, ಫೀಲ್ಡ್ ಮಾಡ್ಬೇಕು ಅಂದುಕೊಂಡು ಸಣ್ಣ-ಪುಟ್ಟ ಕೇಸು ಮಾಡಿ ಬೆಂಗ್ಳೂರಿಗೆ ಹೋದ ಶಿವಮೊಗ್ಗದ ಹುಡಗರಿಗೆ ಫೀಲ್ಡ್ ಕೆಲಸ ಕೊಟ್ಟ ಭೂಗತ ಮಾಲೀಕನು ಹೌದು, ಇಂತಹದೊಂದು ಜೀವಂತ ಸಾಕ್ಷ್ಯಗಳಲ್ಲಿ ಕಳೆದ ವರ್ಷಗಳ ಹಿಂದಷ್ಟೆ ಮಾಜೀ ಬಜರಂಗಿ ಶಿವಮೊಗ್ಗದ ಹೆಬ್ಬೆಟ್ಟು ಮಂಜನಿಗೆ ಹಿರಿಯೂರಿನಲ್ಲಿ ಕೊರಂಗು ಕೃಷ್ಣನ ಮೇಲೆ ಅಟ್ಯಾಕ್ ಮಾಡಿ ಮುಗಿಸಲು ಸುಫಾರಿ ಕೊಟ್ಟಿದ್ದು, ಇದೇ ಮುಲಾಮ,

ಹೀಗೆ ಶಿವಮೊಗ್ಗದ ಹುಡುಗರ ಬೆಂಗ್ಳೂರು ಫೀಲ್ಡ್ ನಲ್ಲಿ ಸಾವಿರಕ್ಕೂ ಅಧಿಕರಿದ್ದಾರೆ, ಇದ್ರಲ್ಲಿ ಒಂದಿಬ್ಬರು ಸಿಸಿಬಿ ಪೊಲೀಸರು ನಡೆಸಿದ ಎನ್ ಕೌಂಟರ್‌ನಲ್ಲಿ ಹತರಾಗಿದ್ದಾರೆ, ಅತೀ ಮುಖ್ಯವಾಗಿ ಬಹುತೇಕ ಸುಫಾರಿ ಹತ್ಯೆಗಳಂತಹ ಬೀಕರ ಹತ್ಯೆಗಳ ದಾಳಿಗಳಲ್ಲಿ ಶಿವಮೊಗ್ಗದ ಹುಡುಗರ ಪಾತ್ರವಿದೆ, ನೆಲಮಂಗಲದಲ್ಲಿ ಬೆಮೆಲ್ ಕೃಷ್ಣಪ್ಪನ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಬೆತ್ತನಗೆರೆ ಸೀನ ಸೀದಾ ಶಿವಮೊಗ್ಗದ ಕಡೆ ಬರುತ್ತಾನೆ ಬಂದಾಗ ಆತನಿಗೆ ಆಶ್ರಯ ಆತಿಥ್ಯ ನೀಡಿದವರ ಪಟ್ಟಿಯೇ ಇದೆ, ಬೆಮೆಲ್ ಕೃಷ್ಣಪ್ಪನನ್ನು ಹತ್ಯೆಗೈಯುವ ಪ್ರಕರಣದಲ್ಲೂ ಶಿವಮೊಗ್ಗದ ಹುಡುಗರಿದ್ರೂ ಎನ್ನುವ ಪ್ರಕರಣಗಳು ಕೇಸುಗಳು ಯಾಮಾರುತ್ತಲೇ ಇವೆ,

ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ನ ಆರ್‌ಜಿ ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿಕೊಂಡು ವರ್ಷಿಣಿಗೆ ಕಾದು ಕುಳಿತಿದ್ದ ರೌಡಿ ಲಕ್ಷ್ಮಣನ ಹತ್ಯೆಯಲ್ಲಿಯು ಶಿವಮೊಗ್ಗದ ಹುಡುಗರ ಹೆಜ್ಜೆ ಗುರುತುಗಳಿದ್ದವು ಎನ್ನುವುದು ಇಂದಿಗೂ ಗೌಪ್ಯವಾಗಿಯೇ ಭೂಗತ ಲೋಕದಲ್ಲಿ ಮುದುಡಿಕೊಂಡಿದೆ,

ಇನ್ನೂ ಅಂದು ಯಲಹಂಕದ ಅಲ್ಲಾಳ್ ಸಂದ್ರದ ಕ್ಲಬ್ನಲ್ಲಿ ಮಚ್ಚಾ ಮಂಜನಿಗೆ ಮುಗಿಸುವ ಗುಂಪಿನಲ್ಲೂ ಶಿವಮೊಗ್ಗದ ಹುಡುಗರಿದ್ರು, ಹೀಗೆ ಬೆಂಗ್ಳೂರಿನ ಜೊತೆ-ಜೊತೆಗೆ ಮಂಡ್ಯದಲ್ಲಿ ನಡೆದ ಜಡೆಜಾ ರವಿ ಹತ್ಯೆ, ಹಾಸನದಲ್ಲಿ ರಾಜಕಾರಣಿಯೊಬ್ಬರ ಹತ್ಯೆ, ಇಂತಹ ಸಾಲೋ-ಸಾಲು ಹತ್ಯೆಗಳಲ್ಲಿ ಶಿವಮೊಗ್ಗದ ಹುಡುಗರ ನೆರಳಿದೆ ಎನ್ನುವುದು ಎಡಿಜಿಪಿ ಹೆಚ್ಚುವರಿ ಅಪರಾಧ ನಿಯಂತ್ರಣ ದಳಕ್ಕೆ ಗೊತ್ತಿದ್ದರು ಯಾಕೆ ಇದುವರೆಗೂ ಇದನ್ನು ಇಲ್ಲಿವರೆಗೆ ತನಿಖೆಯನ್ನು ಎಳೆದು ತರಲಾಗಲಿಲ್ಲ ಎನ್ನುವುದು ಇಂದಿಗೂ ಅಚ್ಚರಿ, ಇದೀಗಲೂ ಬೆಂಗ್ಳೂರಿನ ಯಾವುದೇ ಗಲ್ಲಿಗಳ ರೌಡಿ ಗುಂಪುಗಳ ಸಹಚರರು, ಡಾನ್ಗಳು, ಫೀಲ್ಡ್ ಮಾಡುವ ಸುಫಾರಿ ಹಂತಕರ ಪಟ್ಟಿಯಲ್ಲಿ ಶಿವಮೊಗ್ಗದ ಹುಡುಗರಿದ್ದಾರೆ ಎಂಬುದು ಶಿವಮೊಗ್ಗದ ಎಸ್ಪಿ ಮಿಥುನ್‌ರವರಿಗೆ ಗೊತ್ತಿಲ್ಲ ಪಾಪ, ಇದರ ಬಗ್ಗೆ ತನಿಖೆಯ ಗೋಜ್ಯಾಕೆ ಎನ್ನುವಂತೆ ಹವಾ ನಿಯಂತ್ರಿತ ಕೊಠಡಿಯಲ್ಲಿ ಅರಾಮಾಗಿದ್ದಾರೆ,

ಸಾಲದಕ್ಕೆ ನಟೋರಿಯಸ್‌ಗಳಿಗೆ ಮರ್ಚೆಂಟ್ ಪಟ್ಟ ಬಿರುದು ಬಾವಲಿಗಳ ನೀಡಿ ನಿರುಮ್ಮಳವಾಗಿ ಕಾಸು ಎಣಿಕೆ ಮಾಡಿಕೊಂಡು ಬ್ಯಾಲೆನ್ಸ್ ಮಾಡುತ್ತಿರುವುದು ನಾಗರೀಕರು ದರ್ಶಿಸಿಕೊಳ್ಳುವ ಕರ್ಮವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I