Sunday, August 2, 2026
HomeಅಂಕಣI ಮೂರು ಸಾವಿರಕ್ಕೂ ಹೆಚ್ಚು ಯಶಸ್ವಿ ಆಪರೇಷನ್ ಮಾಡಿದ I ಮಲೆನಾಡಿನ ಕ್ಯಾನ್ಸರ್ ವೈದ್ಯ I...

I ಮೂರು ಸಾವಿರಕ್ಕೂ ಹೆಚ್ಚು ಯಶಸ್ವಿ ಆಪರೇಷನ್ ಮಾಡಿದ I ಮಲೆನಾಡಿನ ಕ್ಯಾನ್ಸರ್ ವೈದ್ಯ I ಅಶ್ವಿನ್ ಹೆಬ್ಬಾರ್ I ಫೈಲ್ಸ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಮೂರು ಸಾವಿರಕ್ಕೂ ಹೆಚ್ಚು ಯಶಸ್ವಿ ಆಪರೇಷನ್ ಮಾಡಿದ I ಮಲೆನಾಡಿನ ಕ್ಯಾನ್ಸರ್ ವೈದ್ಯ I ಅಶ್ವಿನ್ ಹೆಬ್ಬಾರ್ I ಫೈಲ್ಸ್ I

ಮಲೆನಾಡು ಅನೇಕ ಚಳುವಳಿಗಳನ್ನು ಕಟ್ಟಿ ಕೊಟ್ಟಿದ ನೆಲೆ, ಹೋರಾಟಗಳನ್ನು ರೂಪಿಸಿ ಸಾಮಾಜಿಕ ನ್ಯಾಯ ಬಯಸಿದ ಗಟ್ಟಿ ದನಿಗಳ ಪ್ರತಿಧ್ವನಿ ಶಿವಮೊಗ್ಗ ಎಂದರೆ ಅದೊಂದು ಸಮಗ್ರತೆಯ ಸಾಕ್ಷೀಭೂತ ಮೇರು ಶಿಖರವಾಗಿದೆ, ಈ ಟಿಪ್ಪಣಿಯೊಂದಿಗೆ ಮನುಷ್ಯವಾದ, ಜೀವಪರ ನಿಲುವುಗಳು ಸಂಘಟಿತವಾಗಿಲ್ಲದಿದ್ದೊಡೆ ಅದೊಂದು ಅಪಮೌಲ್ಯವಾಗಿ ಬಿಡುತ್ತದೆ, ತಪ್ಪು ಯಾರೇ ಮಾಡಿದರೂ ಅದು ತಪ್ಪೇ, ಈ ತಪ್ಪಿನ ಗ್ರಹಿಕೆಗಳು ಯಾರಾರಿಗೆ ಯಾವ ಮಜಲುಗಳಲ್ಲಿ ಆಗಿವೆ, ಈ ತಪ್ಪುಗಳು ಯಾರಿಗೆ ಲಾಭದಾಯಕವಾಗಿ ಮಾಡಿಕೊಳ್ಳಬಹುದು ಎನ್ನುವ ಹೊಂಚಿನ ಈ ದಿನಮಾನದೊಳು ತನ್ನೆಲ್ಲಾ ನಿರಂತರ ಸೇವೆಯನ್ನು ಮರೆತು ಬಿಟ್ಟಿತೇ..? ಈ ಮಲೆನಾಡಿನ ಸಂಘಟನೆಗಳು, ಜನಪರ ದನಿಗಳು ಅತೀ ಮುಖ್ಯವಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಎನ್ನುವ ಪ್ರಶ್ನೆಯ ಅವಲೋಕನಕ್ಕೆ ಮಲೆನಾಡಿನ ಖ್ಯಾತ ವೈದ್ಯ ಕ್ಯಾನ್ಸರ್ ಸರ್ಜನ್ ಹಾಗೂ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ಮುಂದಾಗಿರಬಹುದೇನೋ..?!

ಏಕೆಂದರೆ ಶಿವಮೊಗ್ಗದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪ್ರಾಧ್ಯಾಪಕರಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಖ್ಯಾತ ವೈದ್ಯ ಕ್ಯಾನ್ಸರ್ ಸರ್ಜನ್ ಹಾಗೂ ಪ್ರಾಧ್ಯಪಕ ಡಾ.ಅಶ್ವಿನ್ ಹೆಬ್ಬಾರ್ ಮೇಲಿನ ಆರೋಪಗಳು ಅವರ ಮೇಲೆ ಸ್ಥಳೀಯ ಪೊಲೀಸರು ದಾಖಲಿಸಿರುವ ಕೇಸು, ಡಿವೈಎಸ್ಪಿ ಬಾಬು ಆಂಜನಪ್ಪ ಹಾಗೂ ಎಸ್ಪಿ ಮಿಥುನ್ ಕುಮಾರ್ ಅವರುಗಳ ಉತನ್ನಮಟ್ಟದ ತನಿಖೆಗಳ ಹೆಜ್ಜೆಗಳು ಮುಂದೊಂದು ದಿನ ಮತ್ತೊಂದು ಅಸಲಿ ತನಿಖೆಗೆ ಒಳಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, ಸಧ್ಯಕ್ಷೆ ಈ ಕೇಸಿನ ಸತ್ಯಾಸತ್ಯತೆಯ ವಿಚಾರಣೆ ನ್ಯಾಯಾಲಯದಲ್ಲಿದ್ದು ಪರ-ವಿರೋಧಗಳ ವಾದ ಪ್ರತಿವಾದ ಜರುಗಿ, ಇರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಹೊರ ಬೀಳುವ ಆದೇಶ ಏನೇ ಇದ್ದರು ಇದೊಂದು ವ್ಯವಸ್ಥಿತ ಸಂಚಿನ ದಾಳಿಯೇ..? ಎಲ್ಲಾ ಅರ್ಹತೆಗಳಿರುವ ಡಾ.ಅಶ್ವಿನ್ ಹೆಬ್ಬಾರ್ ಎಲ್ಲಿ ಡೀನ್ ಆಗಿ ಬಿಡುತ್ತಾರೋ..? ಎನ್ನುವ ಆತಂಕ ಹಾಗೂ ಅಧಿಕಾರದ ಹಪಾಹಪಿತನದ ಸ್ವಾದಕ್ಕಾಗಿ ಕ್ಯಾರೆಕ್ಟರ್ ಲೆಸ್ ಮಾಡುವುದಕ್ಕೆ ಹೂಡಲಾಗಿರುವ ಪೂರ್ವಯೋಜಿತ ಸಂಚುಗಳೇ..?! ಎನ್ನುವ ಸತ್ಯಾಂಶಗಳ ತನಿಖೆಗಳು ಪೊಲೀಸರು ಕೈಗೊಳ್ಳಲೇ ಇಲ್ಲ ಬದಲಿಗೆ ಸಂತ್ರಸ್ಥೆಯ ದೂರಿನ ಸತ್ಯಾಂಶ ಆಗ್ರಹಗಳ ಅರಿಯದೆ ದೂರಿಗೂ ಹಾಗೂ ಪ್ರಾಥಮಿಕ ವರ್ತಮಾನ ವರದಿಯ ದಾಖಲೆಗೆ ಯಾವುದೇ ಸಾಮ್ಯತೆಗಳಿಲ್ಲ ಎನ್ನುವುದು ಉನ್ನತ ಮಟ್ಟದ ಪೊಲೀಸರು ತನಿಖಿಸಬೇಕಾದ ಜರೂರತ್ತಿದೆ, ಈ ನಿಖರತೆಯ ಅರಿತು ಇದೀಗ ಐಎಂಎ ಶಿವಮೊಗ್ಗ ಅಧ್ಯಕ್ಷರಾಗಿ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿಯಾಗಿ ಡಾ. ಕೆ.ಎಸ್.ಶುಭ್ರತಾ ಅವರುಗಳು ಅಧಿಕಾರ ಸ್ವೀಕರಿಸಿದ್ದು ಮೊದಲ ಸವಾಲಿನಂತೆಯೇ ಈ ಖ್ಯಾತ ವೈದ್ಯ ಕ್ಯಾನ್ಸರ್ ಸರ್ಜನ್ ಹಾಗೂ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್‌ರವರ ಕೇಸಿನ ತಳಸ್ಪರ್ಶಿಯಾಗಿ ತನಿಖಿಸಲು ಪ್ರತ್ಯೇಕ ಮನವಿಯನ್ನು ಸಲ್ಲಿಸಲು ಮುಂದಾಗಲಿ ಎನ್ನುವುದು ಈ ಬರಹದ ಆಶಯವಾಗಿದೆ.

ಒಂದು ದೂರು ವಿದ್ಯಾರ್ಥಿಗಳ ಪ್ರತಿಭಟನೆ, ಅನೇಕರ ಒತ್ತಾಯ, ಕೆಲ ಮಾಧ್ಯಮಿಗಳ ತರಾತುರಿ ಆಪಾದನೆಯ ವರದಿಗಳು ಪರಿಗೆ ವೈದ್ಯ ಕ್ಯಾನ್ಸರ್ ಸರ್ಜನ್ ಹಾಗೂ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ಮೇಲೆ ಡಿವೈಎಸ್ಪಿ ಬಾಬು ಅಂಜನಪ್ಪನವರ ಆದೇಶದ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ೨೦-೦೬-೨೦೨೫ ರ ರಾತ್ರಿ ೮ ಗಂಟೆಗೆ ಸಂತ್ರಸ್ಥೆಯೊಬ್ಬರು ತಮ್ಮ ಮೇಲಾದ ಲೈಂಗಿಕ ಕಿರುಕುಳ ಕುರಿತಾಗಿ ದೂರಿನನ್ವಯದಂತೆ ಎಸ್ಸಿ.ಎಸ್ಟಿ ಕಾಯ್ದೆ ಅಟ್ರಾಸಿಟಿ ಕೇಸು ದಾಖಲಿಸಿಕೊಂಡಿದ್ದಾರೆ, ಯಾವುದೇ ಸಂತ್ರಸ್ಥೆ ಈ ರೀತಿಯಾಗಿ ದೂರು ನೀಡಲು ಠಾಣೆಗೆ ದೌಡಾಯಿಸಿದಾಗ ಕ್ರಮ ಜರುಗಿಸುವುದು ಹಾಗೂ ಅದರ ಸತ್ಯಾಸತ್ಯತೆಯ ಬಗ್ಗೆ ವಿದ್ಯಾರ್ಥಿನಿಯ ವ್ಯಾಸಾಂಗವನ್ನು ಕೂಡ ಗಮನದಲ್ಲಿಟ್ಟುಕೊಂಡು, ಸಲ್ಲಿಸಲಾಗಿರುವ ದೂರಿನ ಸೂಕ್ಷ್ಮತೆಗಳ ಮೇಲೆ ಬೆಳಕು ಚೆಲ್ಲುವುದು, ಜಾಗೃತಗೊಳಿಸಿ ಪ್ರಕರಣದ ತೀವ್ರತೆಯ ಬಗ್ಗೆ ಅರಿವು ಮೂಡಿಸುವುದು ಠಾಣಾಧಿಕಾರಿಯ ಅಥವಾ ಉನ್ನತ ಮಟ್ಟದ ಪೊಲೀಸರ ಕರ್ತವ್ಯವಾಗಿದೆ, ಆದರೆ ಇಲ್ಲಿ ಈ ವಿಚಾರಣಾ ಕ್ರಮಕ್ಕೆ ಮುಂದಾಗದೆ, ಸಂತ್ರಸ್ಥೆ ನೀಡಿರುವ ದೂರಿನಲ್ಲಿ ಲೈಂಗಿಕ ದೌರ್ಜನ್ಯ ಎಂದಿದ್ದರೆ ಇಂತಿವರು ಜಾತಿ ದೌರ್ಜನ್ಯದ ಕೇಸು ದಾಖಲಿಸುವ ಷರಾವನ್ನು ದೂರಿನ ಹಿಂಬದಿ ಬರೆದಿರುವುದು ಪರಾಂಭರಿಸಿದರೆ ನಿಜಕ್ಕೂ ಎಂತಹವರಿಗೂ ಅರ್ಥವಾಗಬಲ್ಲದಾಗಿದೆ. ಈ ದೂರಿನ ವಿಚಾರಣೆ ಕೋರ್ಟ್ ತೀರ್ಮಾನಿಸುತ್ತದೆ ಅದಾಗ ಬೀಳುವ ಹೊತ್ತಿಗೆ ಸಂಪೂರ್ಣವಾಗಿ ಸಲ್ಲಿಸಿದ ಶ್ರೆಷ್ಠ ವೈದ್ಯಕೀಯ ಸೇವೆ ಕದಡಿ ಕೆಸರು ಆಗುತ್ತದೆ, ಇದು ಮಾನವ ಸಂಪತ್ತಿನ ಹಕ್ಕುಗಳೇ..? ವೈದ್ಯನಾಗುವುದಕ್ಕೆ ಆಗುವ ಶ್ರಮದಾನಗಳು, ನಂತರದ ನಿಷ್ಠೆಯ ಸೇವೆಗಳಿಗೆಲ್ಲಿ ಬೆಲೆಯಿದೆ ಅಲ್ಲವೇ..! ಇಲ್ಲಿ ಓರ್ವ ವೈದ್ಯ ಬದುಕಿನ ಮನುಷ್ಯ ಮೌಲ್ಯದ ಮೇಲೆ ಹಕ್ಕುಗಳು ಚ್ಯುತಿಗೊಂಡಿವೆ, ಮಾನವ ಹಕ್ಕುಗಳ ಆಯೋಗವು ಇಲ್ಲಿ ನಡುವೆ ಧಾವಿಸಿ ಪ್ರಶ್ನಿಸುವ ಹಂತಗಳು ದೂರವಿಲ್ಲ, ಹೀಗಾಗಿ ಮತ್ತೊಮ್ಮೆ ಎಸ್ಪಿ. ಡಿವೈಎಸ್ಪಿ, ವೈದ್ಯಕೀಯ ಅಧೀಕ್ಷಕರು ಎಲ್ಲರೂ ಇದಕ್ಕೆ ಹೊಣೆ ಹೊತ್ತುಕೊಳ್ಳಬೇಕಾದ ಸಾಂದರ್ಭಿಕತೆಗಳಿವೆ,

ಆದರೆ ಪ್ರಸ್ತುತವಾಗಿ ಕೇಸು ಆಗಿದೆ, ಕೆಲ ಮಾಧ್ಯಮಿಗಳು ತೇಜೋವಧೆ ಬರುವಂತೆ ಸುದ್ದಿ ಸಂಭ್ರಮದಲ್ಲಿ ಕುಣಿ ತೋಡಿ ತೋಳ ಹಳ್ಳಕ್ಕೆ ಬಿತ್ತು ಎಂಬಂತೆ ವೈದ್ಯ ಕ್ಯಾನ್ಸರ್ ಸರ್ಜನ್ ಹಾಗೂ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ರವರನ್ನು ಕೆಡವಲಾಗಿದೆ, ಈ ರೀತಿ ಕೆಡುವುದಕ್ಕೆ ಈ ಸಂತ್ರಸ್ಥೆ ನೀಡಿದ ದೂರು ಮಾತ್ರವಲ್ಲ, ಇದರ ಹಿಂದೆ ಡೀನ್ ಹುದ್ದೆಯ ಅಧಿಕಾರದ ಹಪಾಹಪಿತನಗಳಿದೆ ಎನ್ನುವುದು ಬಹುಷ್ಯಃ ಈ ಸಂತ್ರಸ್ಥೆಗೆ ಅರಿವಿಗೆ ಬಂದಿಲ್ಲ ಅನಿಸುತ್ತದೆ, ಇರಲಿ ಈ ಸಂತ್ರಸ್ಥೆಯ ದೂರಿನ ನ್ಯಾಯ ಸಿಗುವುದಿದ್ದರೆ ಕೋರ್ಟಿನಲ್ಲಿ ವಿಚಾರಣೆಯಲ್ಲಿ ಸಿಗಲಿ, ಅಲ್ಲಿಯವರೆಗೆ ಕೋರ್ಟು ಕಟೆಕಟೆಗಳಲ್ಲಿ ನಿಲ್ಲಬೇಕಾದ ವ್ಯಾಸಾಂಗದ ಜೀವನ ಒಂದು ಸವಾಲು ಎನ್ನಬಹುದಾಗಿದೆ, ಈ ದೂರನ್ನೆ ಆಧಾರವಾಗಿಟ್ಟುಕೊಂಡು ಬಂಧನ, ತೇಜೋವದೆ, ಆಮಾನತ್ತು ಆದೇಶ, ಈ ನಡುವೆ ಡಾ.ಅಶ್ವಿನ್ ಹೆಬ್ಬಾರ್ ತಂದೆಯ ಸಾವು, ಎಲ್ಲವೂ ಆಗಿ ಹೋಗಿದೆ, ಇನ್ನೇನು ಉಳಿದಿಲ್ಲ, ಅರ್ಹತೆಯಿಲ್ಲದ ದಾಖಲಾತಿಗಳಿಗೆ ವೈದ್ಯಕೀಯ ಅಧೀಕ್ಷಕನ ಹುದ್ದೆ ನೀಡಿದ ಅಂದಿನ ಸರ್ಕಾರದ ಸುತ್ತೋಲೆಗಳು, ಇದೀಗ ಡೀನ್ ಆಗುವುದಕ್ಕೆ ಸಲ್ಲಿಸಲಾಗಿರುವ ದಾಖಲಾತಿಗಳಿಗೆ ಸಿಮ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸರ್ಜನ್ ಆಗಿ ಮೂರು ಸಾವಿರಕ್ಕೂ ಹೆಚ್ಚು ಯಶಸ್ವಿ ಆಪರೇಷನ್ ಮಾಡಿದ ಡಾ.ಅಶ್ವಿನ್ ಹೆಬ್ಬಾರ್ ರವರ ಗಣನೀಯವಾದ ಸೇವೆ ಅಡ್ಡಲಾಗಿ ನಿಂದಿತೆ..? ಎನ್ನುವುದನ್ನು ಮುಂದಿನ ತನಿಖೆ ಕೈಗೊಳ್ಳಲು ಮಾನವ ಹಕ್ಕುಗಳ ಆಯೋಗ ಹಾಗೂ ಈ ಪ್ರಕರಣದ ಮರು ಪರಿಶೀಲನೆಗೆ ಇಂಡಿಯನ್ ಮೆಡಿಕಲ್ ಅಸೋಸಿಯೆಷನ್ ಮುಂದಾಗಬೇಕಿದೆ, ಇಲ್ಲದಿದ್ದೊಡೆ ಈಗಾಗಲೇ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರೋಗಿಗಳ ತುರ್ತು ಆಪರೇಷನ್ ಮಾಡಿ ಬಡ-ಮಧ್ಯಮ ಬದುಕುಗಳ ಎದೆ ಚರಿಗೆಗಳಿಗೆ ಧೈರ್ಯ ತುಂಬುತ್ತಿದ್ದ ಡಾ.ಅಶ್ವಿನ್ ಹೆಬ್ಬಾರ್ ಸೇವೆ ಈ ಮಲೆನಾಡಿನ ಜನತೆಗೆ ಅಗತ್ಯವಾಗಿ ಬೇಕಾಗಿದೆ,

ಅತೀವ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದವರಿಗೆ ಆಶಾಕಿರಣವಾಗಿದ್ದ ಡಾ.ಅಶ್ವಿನ್ ಹೆಬ್ಬಾರ್‌ರವರಿಗೆ ಡೀನ್ ಆಗಿ ಆಗಬೇಕಾದದ್ದು ಏನೀಲ್ಲ, ಯಾರದ್ದೋ ಮುಲಾಜಿಗೆ ಅನರ್ಹತೆಯ ಸೃಷ್ಠಿಸಿದ ಮಂದಿಗೆ ಈ ಭಾರಿ ಹುದ್ದೆ ನೀಡಲಿ, ಇದಕ್ಕಾಗಿಯೇ ಓರ್ವ ವೈದ್ಯ ಹಾಗೂ ವೈದ್ಯನ ಬದುಕಿನ ಅಂತ್ಯಕ್ಕೆ ಮುಂದಾಗದಿರಲಿ ಎನ್ನುವುದು ಈ ವರದಿಯ ಉದ್ದೇಶವಾಗಿದೆ, ಡೀನ್ ಹುದ್ದೆಗೆ ಬೇಕಾಗಿರುವುದು ಪ್ರಾಧ್ಯಾಪಕ ಶೈಕ್ಷಣಿಕ ನಾಯಕತ್ವದ ಅನುಭವ, ಗಣನೀಯ ಬೋಧನೆ ಮತ್ತು ಸಂಶೋಧನಾ ದಾಖಲೆ ಮತ್ತು ಪಠ್ಯಕ್ರಮ ಅಭಿವೃದ್ಧಿ ಮತ್ತು ಅಧ್ಯಾಪಕರ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಬಲವಾದ ಆಡಳಿತಾತ್ಮಕ ಕೌಶಲ್ಯಗಳು ಬೇಕಾಗುತ್ತವೆ. ನಿರ್ದಿಷ್ಟ ಅವಶ್ಯಕತೆಗಳು ಸಂಸ್ಥೆ ಮತ್ತು ಡೀನ್ ಹುದ್ದೆಯ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತವೆ, ಆದರೆ ಉನ್ನತ ಶಿಕ್ಷಣದ ಪ್ರವೃತ್ತಿಗಳ ಆಳವಾದ ತಿಳುವಳಿಕೆಯೂ ಸಹ ನಿರ್ಣಾಯಕವಾಗಿದೆ, ಇದೆಲ್ಲವೂ ಅರ್ಹತೆ ಡಾ.ಅಶ್ವಿನ್ ಹೆಬ್ಬಾರ್ ರವರಿಗೆ ಇದ್ದೇ ಇತ್ತು, ಪ್ರಾಧ್ಯಾಪಕನಾಗಿ ಹಾಗೂ ಕ್ಯಾನ್ಸರ್ ವೈದ್ಯನಾಗಿ ಸಲ್ಲಿಸಿರುವ ಸೇವೆ ಹದಿನೆಂಟು ವರ್ಷಗಳು, ಇದೆಲ್ಲವೂ ಮನಗಂಡಿಯೇ ಇಂತಿವರ ಮೇಲೆ ದಾಳಿಗಳಾಗಿದೆ, ಇದರಿಂದ ಬಡ-ಮಧ್ಯಮ ಕುಟುಂಬಗಳಿಂದ ಬಂದಂತಹ ಕ್ಯಾನ್ಸರ್ ರೋಗಿಗಳಿಗೆ ಅನಾನುಕೂಲವೂ ಆಗಿದೆ ಸ್ಥಳೀಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೇಳೋಕೆ ಕ್ಯಾನ್ಸರ್ ಸರ್ಜನ್ ಆಗಿ ಡಾ.ಅಶ್ವಿನ್ ಹೆಬ್ಬಾರ್ ಒಬ್ಬರೆ ಇದ್ದರೂ ಇನ್ನೊಂದಿಷ್ಟು ವರ್ಷಗಳ ಕಾಲ ಇವರ ಸೇವೆ ಇಲ್ಲಿ ಮುಂದುವರೆದಿದ್ದರೆ ಅನುಕೂಲವಾಗುತಿತ್ತು,

ಆದರೆ ಇದನ್ನೆಲ್ಲಾ ಖಾಸಗಿ ಟ್ರೀಟ್, ಚಿಕಿತ್ಸೆಗೆ, ಆಪರೇಷನ್‌ಗೆ ಚೀಟಿ ಬರೆದುಕೊಟ್ಟು ಮೆಗ್ಗಾನ್ ಬೆಡ್‌ನಿಂದ ಡಿಸ್ಚಾರ್ಜ್ ಮಾಡುತ್ತಿರುವುದು ಕೂಡ ಇಲ್ಲಿನ ಶಾಸಕರು ಹಾಗೂ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಚಿತ್ತವರಿಸಲಿ ಎಂಬುದು ಸಧ್ಯದ ಅಂಬೋಣ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I