Monday, August 3, 2026
Homeಸೂರ್ಯಗಗನI ಸ್ಕೌಟ್ ಗೈಡ್ ಚಳುವಳಿಗೆ ಸೇರುವುದರಿಂದ ಕೌಶಲ್ಯ ವೃದ್ಧಿಸುತ್ತದೆ I ಶಕುಂತಲಾ ಚಂದ್ರಶೇಖರ್ I

I ಸ್ಕೌಟ್ ಗೈಡ್ ಚಳುವಳಿಗೆ ಸೇರುವುದರಿಂದ ಕೌಶಲ್ಯ ವೃದ್ಧಿಸುತ್ತದೆ I ಶಕುಂತಲಾ ಚಂದ್ರಶೇಖರ್ I

I ಸ್ಕೌಟ್ ಗೈಡ್ ಚಳುವಳಿಗೆ ಸೇರುವುದರಿಂದ ಕೌಶಲ್ಯ ವೃದ್ಧಿಸುತ್ತದೆ I ಶಕುಂತಲಾ ಚಂದ್ರಶೇಖರ್ I

ಶಿವಮೊಗ್ಗ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಜಂಬೂರೀ ಆನ್ ದಿ ಏರ್ ( ಜೋಟ ), ಜಂಬೂರೀ ಆನ್ ದಿ ಇಂಟರ್ನೆಟ್ ( ಜೋಟಿ ) ಕಾರ್ಯಕ್ರಮದಲ್ಲಿ ಭಾಗವಹಿಸಿ ಪದಾಧಿಕಾರಿಗಳು ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಂದುವರೆದು ತಂತ್ರಜ್ಞಾನ ಅಗಾಧವಾಗಿ ಬೆಳೆದಿರುವ ಇವತ್ತಿನ ಕಾಲಮಾನದಲ್ಲಿ ಎಲ್ಲರೊಂದಿಗೆ ಸ್ಕೌಟ್ ಗೈಡ್ ಮಕ್ಕಳು ಸಹ ಬೆಳೆಯಬೇಕೆಂದು ಹೇಳಿದರು ಮತ್ತು ಅದಕ್ಕೆ ಈ ಜೋಟ ಜೋಟಿ ಕಾರ್ಯಕ್ರಮ ಸಹಾಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಆಯುಕ್ತ ರೋವರ್  ಕೆ. ರವಿ ಮಾತನಾಡುತ್ತಾ ಸ್ಕೌಟ್ ಗೈಡ್ ಚಳುವಳಿಯ ವಿಶಿಷ್ಟ ಕಾರ್ಯಕ್ರಮ ಜೋಟ ಜೋಟಿ ಯಾಗಿದ್ದು, ಇದರ ಮೂಲಕ ವೈಜ್ಞಾನಿಕವಾಗಿಯೂ ಬೆಳೆಯಬಹುದಾಗಿದೆ ಎಂದು ಹೇಳಿದರು ಹಾಗೂ ಈ ಚಳುವಳಿಗೆ ಸೇರಿಕೊಂಡರೆ ದೇಶಪ್ರೇಮ, ಸಾಮಾಜಿಕ ಬದ್ಧತೆ ಬೆಳೆಯುವುದಲ್ಲದೆ ಮುಂದಿನ ಜೀವನಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು. ಕೇಂದ್ರ ಸ್ಥಾನಿಕ ಆಯುಕ್ತರಾದ  ಜಿ. ವಿಜಯ್ ಕುಮಾರ್ ಮಾತನಾಡುತ್ತ ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿರುವ ಸರ್ವರಿಗೂ ಅಭಿನಂದಿಸಿದರು.

ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿ ಘನಶ್ಯಾಮ್ ಗಿರಿಮಾಜಿ ಸರ್ವರನ್ನು ಸ್ವಾಗತಿಸಿದರು.  ರಾಜೇಶ್ ವಿ. ಅವಲಕ್ಕಿ, ಶಿವಮೊಗ್ಗ ಸ್ಥಳೀಯ ಸಂಸ್ಥೆ ಮತ್ತು ಶಿವಮೊಗ್ಗ ಆಮೇಚೂರ್ ರೇಡಿಯೋ ಕ್ಲಬ್ ಕಾರ್ಯದರ್ಶಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ಹ್ಯಾಮ್ ರೇಡಿಯೋ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂಧರ್ಭದಲ್ಲಿ ಶಿಕಾರಿಪುರ ತಾಲೂಕಿನ ಸರ್ಕಾರಿ ಪದವೀಪೂರ್ವ ಕಾಲೇಜಿನಿಂದ ಆಗಮಿಸಿದ್ದ ರೋವರ್ ಸ್ಕೌಟ್ ಲೀಡರ್ ಶ್ರೀ ಸದಾಶಿವಯ್ಯ ಮತ್ತು ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.

ಸ್ಕೌಟ್ ಮಾಸ್ಟರ್ ಶ್ರೀ ಅಣ್ಣಪ್ಪ ಒಂಟಮಾಳಿಗಿ  ಹಾಗೂ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜು, ಮಲ್ನಾಡ್ ಓಪನ್ ಗ್ರೂಪಿನ ಸದಸ್ಯರು, ಸರ್ಕಾರಿ ಹಿರಿಯ ಪ್ರಥಮಿಕ ಶಾಲೆ, ಆಳದಹಳ್ಳಿ ಮತ್ತು ವಿವಿಧ ಶಾಲೆ, ಕಾಲೇಜಿನ, ಮುಕ್ತದಳದ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.  ಅಣ್ಣಪ್ಪ ಒಂಟಮಾಳಿಗಿ  ಸರ್ವರಿಗೂ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಸಹ ಕಾರ್ಯದರ್ಶಿ  ವೈ. ಆರ್. ವೀರೇಶಪ್ಪ ಉಪಸ್ಥಿತರಿದ್ದರು. ಸ್ಕೈಪ್ ತಂತ್ರಶ ಮುಖಾಂತರ ಮಕ್ಕಳು ಇಂಡೋನ್ಎಷಿಯ, ಜಪಾನ್, ಮುಂತಾದ ದೇಶ ವಿದೇಶದ ಸ್ಕೌಟ್ ಗೈಡ್ ಮಕ್ಕಳೊಂದಿಗೆ ಸಂವಹನ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I