SURYAGAGANA.COM
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಅದೊಂದು ಯಾನ ಮತ್ತು ಹೆಜ್ಜೇನು ಕಡಿತದ ದಾಳಿ I ಯಾಣದ ಮ್ಯಾಲೆ ಮೊದಲ ಹೆಜ್ಜೆ I
ನಾಗರಾಜ್ ಭಟ್ ರವರ ಬಳಿ Commerce and Accountancy Tuition ಗೆ ಹೋಗುತ್ತಿದ್ವಿ,
ನಾಗರಾಜ್ ಒಳ್ಳೆಯ ಉಪನ್ಯಾಸಕರು, ನಮ್ಮ ಬ್ಯಾಚಿನಲ್ಲಿದ್ದ ದೊರೇಶ್ ಗೌಡ ಇದೀಗಲು ಆಪ್ತ. ಟ್ಯೂಷನ್ ಕೂಡ ಮುಗಿಯುವ ಹಂತಕ್ಕೆ ಬಂದಾಯ್ತು, ಒಂದಿಷ್ಟು ವಿದ್ಯಾರ್ಥಿಗಳ ಸಲಹೆಯಂತೆ ‘ಒಂದು ದಿನದ ಯಾಣ ಪ್ರವಾಸ’ ಮಾಡಬೇಕೆಂದು ನಿರ್ಧರಿಸಿ ಅದರಂತೆ ಸುಮಾರು ಮೂವತ್ತು ವಿದ್ಯಾರ್ಥಿಗಳು ಹೊರಟು ‘ಯಾಣ’ ತಲುಪಿದ್ವಿ.
‘ಪ್ರವಾಸ ಎಂದ ಕೂಡಲೇ ಎಲ್ಲಿಲ್ಲದ ಖುಷಿ-ಸಂಭ್ರಮಕ್ಕೆ ಪಾರವೇ ಇರಲಿಲ್ಲ,’ ಹುಡುಗಿಯರು, ಹುಡುಗರಿಗಿಂತ ಫ್ಯಾಷನ್ ಮಾಡಿಕೊಂಡೇ ಬಂದಿದ್ರು, ಜತೆಯಲ್ಲಿ ಮನೆಯಿಂದ ತಂದಿದ್ದ ತಿಂಡಿಗಳನ್ನು ಎಲ್ಲರಿಗೂ ಕೊಟ್ಟು ಹಂಚಿ ತಿಂದು, ನಕ್ಕು, ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಮೆಲುಕು ಹಾಕುತ್ತಲಿ “ಯಾಣದ ನೆಲದ ಮ್ಯಾಲೆ ಮೊದಲ ಹೆಜ್ಜೆಗಳಿಟ್ವಿ” ಒಂದಿಷ್ಟು ಕೀಟಲೆ ಹುಡುಗರು ನಾಗರಾಜ್ ಭಟ್ ರವರ ಸೂಚನೆ ಮೀರಿ ‘ಶಿವ ಮತ್ತು ಮೋಹಿನಿ’ ಎನ್ನಲಾಗುವ ದುರ್ಗಮ ಬೆಟ್ಟಗಳ ಮೇಲೆ ಹತ್ತಿ ಅವಸರದಲ್ಲಿ ಕಣ್ಮರೆಯಾದರು.
‘ಇನ್ನೂಳಿದ ನಾವುಗಳು’ ಬೆಟ್ಟದ ಬುಡದಲ್ಲಿಯೇ ಗುಹಾಂತರವಾಗಿ ಕಾಣ ಸಿಗುವ ಬಲು ಎತ್ತರದಿ ‘ಸ್ವಯಂ ನಿರ್ಮಿತವಾಗಿರುವಂತಹ ಶಿವನ ಲಿಂಗ’ ಅದರ ಮೇಲೆ ನಿತ್ಯ ತೊಟ್ಟಿಕ್ಕುವ ನೀರಹನಿಗಳು ಹರಿದು ಮುಂದೆ ನದಿಯಾಗುವ *ಬೈರವೇಶ್ವರ ದೇವಳದಲ್ಲಿ* ಮೊದಲು ಪೂಜೆ ಸಲ್ಲಿಸಲು ಮುಂದಾದ್ವಿ, ಪೂಜೆ ಸಲ್ಲಿಸಿ, ಇನ್ನೇನು ‘ಯಾಣದ’ ಪಾಕೃತಿಕ ಸೌಂದರ್ಯವನ್ನು ನೋಡಿ ಅದರ ಸವಿ ಅನುಭವಿಸಬೇಕು, ತುಸು ಬಂಡೆಯೊಳಗೆ ನಿದ್ರಿಸುವಂತೆ ಅಪ್ಪಿ ಸುತ್ತಲು ದಿಟ್ಟಿಸಬೇಕು, ಕಡಿದಾದ ಬೆಟ್ಟಗಳ ನಡುವೆ ಮತ್ತಷ್ಟು ಸಾಗಿ ಮನಸಾರೆ ಕೂಗಬೇಕು, ಕೂಗಿದ ಆ ಕೂಗಿನ ಪ್ರತಿಸದ್ದು ಕಿವಿಗೊಟ್ಟಿ ಆಲಿಸಬೇಕು, ತಣ್ಣನೆಯ ನೀರ ಝರಿಗಳಲ್ಲಿ ಮೈಯೊಡ್ಡಿ ನಡುಗಬೇಕು, ಹೀಗೆ ಅನೇಕತೆಗಳಲ್ಲಿ ದಟ್ಟ ಹಸಿರ ಪರಿಸರ, ಸುತ್ತಲಿರುವ ಬೆಟ್ಟಗಳ ನಡುವಿನ ಅತೀ ಎತ್ತರದ ‘ಶಿವ ಮತ್ತು ಮೋಹಿನಿ’ ಯನ್ನು ತದ್ರೂಪಿಸುವ ಬೆಟ್ಟಗಳ ಒಳ ಪ್ರವೇಶಕ್ಕೆ ಸಜ್ಜಾಗಿದ್ವಿ.
ಆದರೆ ಅವಸರದಲ್ಲಿ ಮೇಲತ್ತಿ ಕಣ್ಮರೆಯಾಗಿದ್ದ ನಮ್ಮದೇ ಬ್ಯಾಚಿನ ಕೀಟಲೆ ಹುಡುಗರು ಎದ್ದೋ-ಬಿದ್ದರಂತೆ ಮೈ-ತರಚಿಸಿಕೊಂಡು ಎಡವಿಕೊಂಡು ಕೆಳಗಿಳಿದು ಸಿಕ್ಕ-ಸಿಕ್ಕಡೆ ಓಡಿ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿರುವುದನ್ನು ನೋಡಿ ಅವರೊಂದಿಗೆ ನಾವು ಸೇರಿಕೊಂಡ್ವಿ* ಇರುವ ಟವೆಲ್, ರಗ್ಗು ದುಪ್ಪಟಗಳಿಂದ ಮುಖ ಮುಚ್ಚಿ ತಡೆಯಲು ಪ್ರಯತ್ನಿಸಿದ್ವಿ, ಅದರಲ್ಲೊಬ್ಭ ನಿಸ್ಸೀಮ ಸಿಗರೇಟ್ ಹಚ್ಚಿ ಹೊಗೆದೂಡಿ ಆ ದಾಳಿ ತಡೆಯಲು ಪ್ರಯತ್ನಿಸಿದ, ಒಂದಿಷ್ಟು ಜನರು ಸ್ವಲ್ಪ ದೂರದಲ್ಲಿಯೇ ಇರುವ ನದಿಯಲ್ಲಿ ಮುಳುಗಿ ಬಿಡಿ ಎಂದು ದೂರದಿಂದಲೇ ಕೂಗಿ, ಕೂಗಿ ಹೇಳುತ್ತಿದ್ದರು, ನಾವುಗಳು ಹಾಗೇ ಓಡಿದ್ವಿ ನದಿ ನೀರಿನಲ್ಲಿ ಮುಳುಗಿ ಕಡಿತದಿಂದ ತಪ್ಪಿಸಿಕೊಂಡ್ವಿ ಅದಾಗ ದಾಳಿ ಕಡಿಮೆ ಆಯ್ತು, ಈ ಸಂದರ್ಭದಲ್ಲಿ ಲೆಕ್ಚರ್ ನಾಗರಾಜ್ ಭಟ್ಟರ ಸಹನೆ ಮಿತಿ ಮೀರಿತ್ತು, ಅವಸರದಲ್ಲಿ ಮೇಲತ್ತಿದ್ದ ಹುಡುಗರಿಗೆ ವಾಚಮಗೋಚರದಿ ಬೈಯ್ದರು, ನಂತರದಿ ಸಾವಧಾನಿಸಿ ಮತ್ತೊಮ್ಮೆ ಗುಹಾಂತರ ದೇವಳಕ್ಕೆ ಪೂಜೆ ಸಲ್ಲಿಸಿ ಹೊರಡುವಾಗ, ಅಲ್ಲಿ ನೆರೆದಿದ್ದ ಅನ್ಯ ಪ್ರವಾಸಿಗರು, ಚಾರಣಕ್ಕೆ ಬಂದವರಿಂದ ತಪರಾಕಿ ಬೈಗುಳ ಆಯ್ತು, ಯಾರು ಹೀಗೆ ಮಾಡಿದವರೆಂದು ಹುಡುಕಿ ಸಮಾ ತದುಕುವಂತೆ ಕೇಳಿದ್ರು, ನಾವುಗಳು ಬಿಟ್ಟು ಕೊಡದೇ ಸಿಟ್ಟಿಗೆದ್ದವರನ್ನು ಕುರಿತು ಕ್ಷಮೆಯಾಚಿಸಿದ್ವಿ,
ಕೊನೆಗೆ ಒಂದಿಷ್ಟು ಸಮಯದ ನಂತರ ‘ಯಾಣ’ ದ ಯಾನ ಮಾಡಲಾಗದೇ ಬಂದ ದಾರಿಗೆ ಸುಂಕವಿಲ್ಲದಂತೆ ಕೀಟಲೆ ಹುಡುಗರ ರಾದ್ದಾಂತಕ್ಕೆ ಯಾಣದ ಬಾಗಿಲಿಗೆ ಹೋಗಿದ್ದರು, ಅದರೊಳಗೆ ಪ್ರವೇಶಿಸುವುದಕ್ಕೆ ಸಾಧ್ಯವಾಗಲಿಲ್ಲ. ಲೆಕ್ಚರ್ ನಾಗರಾಜ್ ಭಟ್ರು ಎಲ್ಲರನ್ನು ಬಂದ ವಾಹನದಲ್ಲಿ ಅನ್ಯ ದಾರಿಗಾಣದೇ ಕೂರಿಸಿಕೊಂಡು ಅಲ್ಲಿನ ಜನರ ಸಲಹೆಯಂತೆ ವೈದ್ಯರ ಬಳಿ ಕರೆದುಕೊಂಡು ಹೋಧ್ರು, ನನಗೂ ಒಂದೆರೆಡು ಅವರನ್ನು ಸೇಪ್ ಮಾಡಲು ಮುಖಕ್ಕೆ ಟವೆಲ್ ಮುಚ್ಚುವುದಕ್ಕೆ ಹೋಗಿ ಕಡಿತಕ್ಕೆ ಒಳಗಾಗಿದ್ದು ಬಿಟ್ರೇ, ಕೀಟಲೆ ಹುಡುಗರೆಲ್ಲರಿಗೂ ಕಡಿತ ಹೆಚ್ಚಾಗಿತ್ತು, ನಾಲ್ಕೈದು ಹುಡುಗಿಯರಿಗು ಮುಖಕ್ಕೆ ಕಡಿದು ಮುಖದ “ಭಾಹು” ಹೆಚ್ಚಾಗಿತ್ತು, ವೈದ್ಯರು ನೋಡಿ ಉಗಿದರು, ಪ್ರಾಥಮಿಕ ಚಿಕಿತ್ಸೆಯು ಕೊಟ್ಟರು. ಅಲ್ಲಿಂದ ಮನೆ ಕಡೆ ವಾಪಸ್ಸಾಗಬೇಕಾದವರು ಪ್ರಯಾಣವನ್ನು ಒಂದು ದಿನ ಮುಂದುವರೆಸಿ ವಿದ್ಯಾರ್ಥಿಗಳ ಪೋಷಕರ ಒಪ್ಪಿಗೆ ಪಡೆದು ಎಲ್ರೂ ಮುರುಡೇಶ್ವರಕ್ಕೆ ಬಂದ್ವಿ.
‘ಲೆಕ್ಚರ್ ನಾಗರಾಜ್ ಭಟ್ರಿಗೆ ಒಮ್ಮೆಲೆ ಧಾವಂತ ಮಡುಗಟ್ಟಿತ್ತು’ ಜವಾಬ್ದಾರಿಯಿಂದ ಕರೆದುಕೊಂಡು ಬಂದ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಮನೆಗೆ ಕಳುಹ ತನಕದಿ ಯಾಕಪ್ಪ ಈ ಸಹವಾಸ ಎನ್ನುವಂತೆ ರೋಸಿ ಹೋಗಿತ್ತು, ಏಕೆಂದರೆ *ಯಾಣ* ದಲ್ಲಿ ದಾಳಿ ಮಾಡಿದ್ದ ಹೆಜ್ಜೇನು ಕಡಿತದಿಂದ ನಂಜು ಏರಿದರೆ ಏನು ಗತಿ ಎನ್ನುವಂತೆ ರಾತ್ರಿ ಪೂರ ನಿದುರೆ ಬಿಟ್ಟು ವಿದ್ಯಾರ್ಥಿಗಳನ್ನು ಕಾದಿದ್ದು ಆಯ್ತು, ಒಂದು ವೇಳೆ ಹಾಗೇ ಮನೆಗೆ ಕರೆದುಕೊಂಡು ಹೋಗಿದ್ರೇ.. ಒಂದಷ್ಟು ಹುಡುಗರ ,ಹುಡುಗಿಯರ ಊದಿದ್ದ (ಬಾಹು) ಮುಖವನ್ನು ನೋಡಿ ಪೋಷಕರು ಲೆಕ್ಚರ್ ಗೆ ಎಲ್ಲಿ ತಪರಾಕಿ ಹಾಕುತ್ತಾರೋ..? ಎನ್ನುವ ಭಯದಿ ಒಂದೇ ದಿನದ ಪ್ರವಾಸ ಎರಡು ದಿನಕ್ಕೆ ವಿಸ್ತರಿಸಿ ಯೋಗಕ್ಷೇಮ ನೋಡಿಕೊಂಡರು.
‘ಮತ್ತೇ ಬೆಳಗಾಯಿತು ರೂಮಿನಿಂದ ತಿಂಡಿಗೆ ಹೋಟೆಲ್ ಬಳಿ ಎಲ್ರೂ ಸೇರಿಕೊಂಡ್ವಿ’ ಪ್ರಾಥಮಿಕ ಚುಚ್ಚುಮದ್ದು, ಮಾತ್ರೆಗಳಿಂದ ಯಾರಿಗೂ ಏನು ತೊಂದರೆಯಾಗಿರಲಿಲ್ಲ ಮುಖದ ಊತ ಕಡಿಮೆಯಾಗಿತ್ತು, ಕಡಿತದ ನೋವು ಇತ್ತು ಎನ್ನುತ್ತಿದ್ರೂ ಇರಲಿ ಏನು ಆಗುವುದಿಲ್ಲ ಎಂದು ಸಮಾ ತಿಂಡಿ ತಿಂದು ಸಮುದ್ರದ ಅಲೆಯ ಜೊತೆ ಎಲ್ಲವು ಮರೆತು ಕಣಿದಾಡಿದ್ವಿ, ಏನು ಆಗಿಲ್ಲವೆಂಬಂತೆ ಸಂತಸದಿ ಮುಳುಗಿದ್ವಿ, ಅಪರಾಹ್ನದೊತ್ತಿಗೆ ಉಪ್ಪು ನೀರು ಮೈಮೇಲೆ ಸೋಕಿ ಇದ್ದ ಬಾಹು -ನೋವು ಎಲ್ಲವು ಮಾಯಾವಾಗಿ ಯಥಾಸ್ಥಿತಿಗೆ ವಿದ್ಯಾರ್ಥಿಗಳು ಇರುವುದನ್ನು ಗಮನಿಸಿದ ಉಪನ್ಯಾಸಕರು ವಾಪಸ್ಸಾಗೋಣ ಎಂದು ಶಿವಮೊಗ್ಗಕ್ಕೆ ರಾತ್ರಿ ಹೊತ್ತಿಗೆ ಕರೆದುಕೊಂಡು ಬಂದು ಬಿಟ್ರು.
SURYAGAGANA.COM
ಲೆಕ್ಚರ್ ನಾಗರಾಜ್ ಭಟ್ರಿಗೆ ಹೋದ ಜೀವ ಬಂದಂತಾಗಿತ್ತು, ಒಂದೆರೆಡು ದಿನದ ಬಳಿಕ ನೋಟ್ಸ್ ಬೇಕಿತ್ತು ಎಲ್ಲರೂ ಹೋಗಿದ್ವಿ, ನಮ್ಮ ಬ್ಯಾಚನ್ನು ನೋಡಿದ ಕೂಡಲೇ ಅವರು ಒಂದೇ ಸಮನೆ ಅರಚಿದ್ರು, ನಿಂತ ನೆಲದ ಮ್ಯಾಲೆ ನಿಲ್ಲದಂತೆ ಕೂಗಾಡುತ್ತಾ ಓಡಾಡಿದ್ರು, ಅಲ್ರಯ್ಯ ಯಾಣದಲ್ಲಿ ಅಷ್ಟು ಅವಸರ ಏನಿತ್ತು..? ಮೇಲೆ ಹತ್ತಿ ಹೋಗುವುದಕ್ಕೆ ಅಲ್ಲಿ ಏನು ಮಾಡಿದ್ರಿ ನಿಜ ಹೇಳ್ರಿ..? ಎಂದಾಗ ಅಸಲಿ ಸಂಗತಿ ಹೊರಬಿತ್ತು Sorry…. ಸರ್ ಮೇಲತ್ತಿ ಹೋದಾಗ ಇವನು ಜೇನುಗಳು ಗೂಡು ನೋಡಿ ಜೇನು ತಿನ್ನೋಣ ಎಂದು ಕಲ್ಲಲ್ಲಿ ಒಡೆದ ಜೇನು ಹತ್ತಿರದಲ್ಲಿತ್ತು ಅವು ಚೆದುರಿ ಬಂದಿದ್ದು ನೋಡಿ ಓಡಿ ಬಂದ್ವಿ ಅವು ಬಿಡಲಿಲ್ಲ, ಕಡಿಯುವುದಕ್ಕೆ ಶುರು ಮಾಡಿದ್ವು ಸರ್ ಎಂದ್ರು, ಕೆಳಗಿಳಿದಾಗ ರಗ್ಗು , ಟವೆಲ್ ಕೊಟ್ಟಿದ್ದಕ್ಕೆ ಬಚಾವ್ ಆದ್ವಿ ಸರ್ ಎಂದು ಬಡ-ಬಡಾಯಿಸುತ್ತಿದ್ದ ಹುಡುಗರ ಮಾತು ಕೇಳಿ ಒಮ್ಮೆಲೆ ಕೈ-ಮುಗಿದು ಸಾಕ್ರಪ್ಪ ನಿಮ್ಮ ಸಹವಾಸ, ಇನ್ಮುಂದೆ ಯಾರಿಗೂ ಈ ಹಿಂಸೆ ಮಾಡ್ಬೇಡಿ ನೋಟ್ಸ್ ತಗೊಂಡು ಹೋಗಿ ಮತ್ತೇ ಬರ್ಬೇಡಿ ಎಂದು ಕರಳು ಕಿವುಚುವಂತೆ ಹೇಳಿದ್ದನ್ನು ಗಮನಿಸಿ, ನಾವು ಅವರು ಮಾಡಿಕೊಂಡ ಬೇಸರಕ್ಕೆ ಔಷದವಿಲ್ಲ ಎಂದು ನಮಸ್ಕರಿಸಿ ಮನೆಕಡೆ ಒಬ್ಬರಿಗೊಬ್ಬರು ವಾಪಸ್ಸಾದ್ವಿ,
‘ನಿಜ ಹೇಳಬೇಕೆಂದರೆ’ ಲೆಕ್ಚರ್ ನಾಗರಾಜ್ ಭಟ್ರಿಗೆ ಆಂದು ಒಮ್ಮೆಲೆ ಭಯ ದುಗುಡ ಆವರಿಸಿಕೊಂಡಿದ್ದು ನಿಜ, ಇನ್ನೊಂದು ಹೆಚ್ಚುವರಿ ಪ್ರಯಾಣದ ವೆಚ್ಚವನ್ನು ಅವರೇ ಭರಿಸಿದ್ರು, ಹಾಗು ವೈದ್ಯರಿಂದ ಎಲ್ಲರಿಗೂ ತಪಾಸಣೆ ಮಾಡಿಸಿದ ವೆಚ್ಚಗಳು ಅವರನ್ನು ಬಹಳವಾಗಿ ಘಾಸಿಗೊಳಿಸಿತ್ತು, ಈ ಯಾಣದ ಯಾನ ಎಂದಿಗೂ ನಾಗರಾಜ್ ಭಟ್ರಿಗೆ ಆಗಲಿ ನಮ್ಮಗಳಿಗೆ ಆಗಲಿ ಮರೆಯಲಾಗದ ನೆನಪಿನ ಬುತ್ತಿಯೇ ಹೌದಾಗಿದೆ.
‘ಇನ್ನೂ ಹೆಜ್ಜೇನು ದಾಳಿ,’ ಕಡಿದವರಿಗೆ ಕಡಿವ ಹೆಜ್ಜೇನುಗಳು ಕಡಿತಕ್ಕೆ ಒಳಗಾಗದವರ ಮೇಲೆ ಕಡಿವುದಿಲ್ಲ, ಎನ್ನುವುದು ವೈಜ್ಞಾನಿಕ ಸತ್ಯವೂ ಆಗಿದೆ, ಏಕೆಂದರೆ ಅದು ಮೊದಲು ದಾಳಿ ಮಾಡಿದರೆ ಯಾರಿಗೆ ಕಡಿಯುತ್ತದೆ ಅದರ ವಾಸನೆಯನ್ನು ಗ್ರಹಿಸಿ ಅವರಿಗೆ ಮತ್ತಷ್ಟು ಘಾಸಿಗೊಳಿಸಲು ಪ್ರಯತ್ನಿಸುತ್ತದೇ ವಿನಃ ಪಕ್ಕದ ಹಾದು ಹೋಕ ಕಡಿಯದವರಿಗೆ ಕಡಿಯುವುದಿಲ್ಲ, ಆದರೆ ಅದೊಂದು ಧೈವಿಕ ನೆಲೆಯಾಗಿದ್ದರಿಂದ ಕೀಟಲೆ ಮಾಡಿದ ಹುಡುಗರನ್ನು ಹೆಜ್ಜೇನು ದಾಳಿ ಮಾಡಿತ್ತು ಇದೊಂದು ದೈವಿಕ ಪ್ರಮಾದವೆಂದು ಹೇಳಲಾಗಿತ್ತು.
ಇಂತಹ ಅವಸಾನಗಳ ನಡುವೆ ಮೊದಲ ಯಾಣ -ಯಾನ ಮುಗಿದಿತ್ತು.ಇನ್ನೊಮ್ಮೆ ಯಾಣದ ಚಾರಣ ಮಾಡುವಾಸೆ, ಅಪೂರ್ಣವಾಗಿರುವ ಯಾಣದ ಮಡಿಲಿನಲ್ಲಿ ಮಿಂದು ಪ್ರಾಕೃತಿಕ ಸೊಬಗನ್ನು ಸವಿಯುವಾಸೆ, ಅವಕಾಶ ಬಂದ್ರೆ ಖಂಡಿತ ಯಾಣದ ಕಡೆ ಯಾನ ಕುರಿತಾಗಿ ಚಿತ್ತವರಿಸುವೆ, ಇದರ ಅಂದಿನ ಅನುಭವ ಇಂದು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.



