ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ನಿವೃತ್ತಿ ಕ್ರೈಂ ಕತಿಗಳ ಫೈಲ್ಸ್ I
ಡ್ಯೂಟಿನಲ್ಲಿದ್ದಾಗ ಏನ್ ಮಾಡ್ತಿದ್ರಿ..
ರಿಟೈರ್ಡ್ ಆಗಿ ಮನೇಲಿ ಕೋರೋ ಹೊತ್ನಾಗೆ,
ಬಿಡ್ಸಿ, ಬಿಡ್ಸಿ ಹೇಳೋ ನಿಮ್ಮ ಕ್ರೈಂ ಸ್ಟೋರಿಗೆ
ಬೆಂಕಿ ಬೀಳ್ಲೀ, ಸುಡು ಇಜ್ಜಿಲ ಮಸಿಯಾಗ್ಲಿ,
ಮಾತು ಎತ್ತಿದ್ರೆ ಸಾಕು, ಡೆಡ್ಲಿ ಸೋಮನ ಸ್ಟೋರಿ,
ಕೊತ್ವಾಲ, ಬಾಂಬು ಕೃಷ್ಣ, ಗೆಡ್ಡೆ ನಾಗನ ಇಸ್ಟರಿ,
ಬಲರಾಮ, ಜಯರಾಜ, ಮುತ್ತಪ್ಪನ ಸ್ಕೆಚ್ಗಳು,
ಬಪ್ಪರಿ ನಿವೃತ್ತಿಗಳಾ..? ಕಾಗಕ್ಕ-ಗೂಬಕ್ಕನ ಕತಿಗಳು,
ಐಪಿಎಸ್ ಓಂ ಪ್ರಕಾಶ್ ತುಸು ನೆಮ್ದಿಯಾಗಿರಲಿಲ್ಲ,
ಎಸ್ ಕೆ ಉಮೇಶ್, ಬಿ.ಕೆ ಶಿವರಾಮ್, ಅಶೋಕ್ ಕುಮಾರ್,
ನೀವ್ಯಾಕೆ ರಕ್ತಸಿಕ್ತ ಕತೆಗಳನ್ನೇ ಅತಿರಂಜಿಸುತ್ತಿದ್ದೀರಿ,
ಆ ಎಲಿಮೆಂಟರಿಗಳಿಗಿಂತಲೂ ತಮಗೆಲ್ಲವೂ ಗೊತ್ತಿದಿಯಾ..?
ಒಂದಿಷ್ಟು ಸತ್ಯ ಒಂದಿಷ್ಟು ಹಸಿ ಸುಳ್ಳಿನ ಕಂತೆಗಳೊಳು,
ಅದೇನು ಡೇಂಜರಸ್..? ಯಾವುದು ಟೆರರ್ ಅಟ್ಯಾಕ್..!
ಇಂತಿವುಗಳೆಲ್ಲಾ ಸಾಮಾಜಿಕ, ಜನಸ್ನೇಹಿ ಕರ್ತವ್ಯಗಳಾ..?
ತಮ್ಮದೇ ಕರ್ತವ್ಯ, ನೀವೇನು ಕಂಟ್ರೋಲ್ ಮಾಸ್ಟರ್ಸ್ ಗಳಾ..?
ಇಂದೇ ಪೊಲೀಸ್ ಪ್ರಾಧಿಕಾರಕ್ಕೆ ದೂರು ಸಲ್ಲಿಕೆ,
ಕ್ರೈಂ ಲೋಕದ ಪಾತಾಕಿಗಳೊಂದಿಗೆ ಅದ್ಯಾವ ಪರಿ ನಂಟಿತ್ತು,
ಅವರು ಉಂಡಿದ್ದು, ಸ್ಕಲನಿಸಿದ್ದು, ಮಲಗಿದ್ದು ಗೊತ್ತೇ..!?
ಸ್ವಾಮಿ ನಿವೃತ್ತಿಗಳಾ..?! ಇಂದೇ ಅತಿರಂಜನೆಗಳ ನಿಲ್ಸಿ,

