ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಬಹುತ್ವ ಮನಸಿನ I ಪ್ರಬುದ್ಧ ನಾಯಕತ್ವದ ದೀವಿಗೆ ಹಿಡಿದ I ಸಿ.ಎಸ್ ಷಡಾಕ್ಷರಿ I
ಹೊತ್ತು ಮುಳುಗಿದರು
ಹೊತ್ತಾರೆ ಬೆಳಗುಹುದು,
ಸಮಭಾವದ ಆಪ್ತತೆ,
ಸಹಜ ಮನೋಜ್ಞತೆ..
ನಾಯಕತ್ವದ ಹಾದಿ ಹಿಡಿದಿಹುದು,
ಪ್ರತಿ ಹೆಜ್ಜೆಗಳ ತಂತ್ರ,
ಸವಾಲುಗಳ ಆಸ್ವಾದಿಸುವಿಕೆ,
ನಗುವಿನಲ್ಲೆ ಪತಾಕೆ ಹಾರಿವುದು,
ಅದುವೇ ಷಡಾಕ್ಷರಿ ಸಾಮರ್ಥ್ಯವು, ಎನ್ನುವಂತೆ ಹೋರಾಟದ ಈ ತಳಸ್ಪರ್ಶಿ ನೆಲೆಯಲ್ಲಿ ಇವರದೊಂದು ಅಕ್ಷರಶಃ ಛಾಪು ಮೊಹರೊತ್ತಿದೆ, ಇಂತಿವರ ಕುರಿತಾಗಿ ವಿಸ್ತೃತಗೊಳಿಸಬೇಕಾದ ಸಾಲುಗಳಲ್ಲಿ ಬಹುಮುಖ್ಯವಾಗಿ ಎಲ್ಲರಲ್ಲಿಯೂ ಆಪ್ತತೆಯಲಿ ಬೆಸೆದುಕೊಳ್ಳುವ ಸಾಂಗತ್ಯದಿಂದಾಗಿಯೇ, ಸಿ.ಎಸ್ ಷಡಾಕ್ಷರಿ ಅವರು, ನೌಕರರ ಸಂಘಕ್ಕೆ ಮಾತ್ರ ಸೀಮಿತವಲ್ಲದೆ ಸಾರ್ವಜನಿಕ ವಲಯದಲ್ಲಿಯು ವಿಶೇಷ ಗುಣಮಾನ್ಯರಾಗಿ ದರ್ಶಿಸಿಕೊಳ್ಳುತ್ತಾರೆ, ಹೀಗಾಗಿಯೇ ಇವರ ಹೆಸರು ರಾಜ್ಯದಲ್ಲಿ ಪ್ರಚಲಿತದಲ್ಲಿದೆ,
ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವು ಮೊದಲ ಭಾರಿಗೆ ಅಧಿಕಾರದ ಗದ್ದುಗೆಗೆ ಏರಿದ ಅವಸರದಲ್ಲಿ ಬಿ.ಎಸ್ ಯಡಿಯೂರಪ್ಪನವರಿಗೆ ಆಪ್ತ ಸಹಾಯಕರಾಗಿ ನಿರ್ವಹಿಸಿದ ಕರ್ತವ್ಯದ ಪರಿಗೆ ಸಿ.ಎಸ್ ಷಡಾಕ್ಷರಿಯವರನ್ನು ಸಚಿವ ಸ್ಥಾನ-ಮಾನದಂತೆಯೇ ಗೌರವಿಸಿದ್ದು ಇಂದಿಗೆ ಇತಿಹಾಸ, ಕಾಲವು ಒಂದೇ ಸಮನಾಗಿ ಇರುವುದಿಲ್ಲ, ಆಯಾ ಕಾಲಕ್ಕೆ ರಾಜಕೀಯ ವಿದ್ಯಮಾನಗಳು ಬದಲುಗೊಳ್ಳಲೇಬೇಕು, ಒಂದೊಮ್ಮೆ ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗುವ ಅವಸರ ಎದುರಾಗಿತ್ತು, ಬಿ.ಎಸ್.ವೈ ಜತೆಗಿದ್ದು ಎಲ್ಲಾ ಪಟ್ಟುಗಳನ್ನು ಕರಗತವಾಗಿಸಿಕೊಂಡಿದ್ದ ಸಿ.ಎಸ್ ಷಡಾಕ್ಷರಿ ಅವರಿಗೆ ಈ ಗೆಲುವು ಅನಾಯಾಸವಾಗಿ ಕಟ್ಟಿಕೊಟ್ಟಿತ್ತು, ಈ ಗೆಲುವಿನ ಹಿಂದೆ ಬಿಎಸ್‌ವೈ ಅವರ ನೆರಳಿತ್ತು ಎನ್ನುವುದು ಕೂಡ ಅದಷ್ಟೆ ನಿಖರ ದನಿಗಳಿದ್ದವು, ಈ ನಂತರ ಎರಡನೇ ಭಾರಿಗೂ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಹೊಸತೊಂದು ಕಾಯಕಲ್ಪ ನೀಡುವಲ್ಲಿ ಯಶಸ್ವಿಯಾಗಿದ್ದರು, ನೌಕರರ ನ್ಯಾಯ ಸಮ್ಮತವಾದ ವಿಚಾರಗಳಲ್ಲಿ ನಿರಂತರತೆಯ ದನಿಯಾಗಿದ್ದರು,
ಈ ಮಾತ್ರದಿಂದಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಗೆದ್ದು ಬೀಗಿದ್ದರು, ಯಾರು ಹಿಂದೆಯೇ ಇರಲಿ, ಮುಂದೆಯೇ ಇರಲಿ ಯಾರಿಗೆ ತನ್ನೊಳಗಿನ ಆತ್ಮಗತವಾದ ಸಾಮರ್ಥ್ಯ ಇರುತ್ತದೋ ಅಂತಹವರು ಈ ಜಗದ ಜಗಲಿಗೆ ಕಟಿಬದ್ದ ಸಂದೇಶವನ್ನು ರವಾನಿಸಿ ಬಿಡುತ್ತಾರೆ, ಈ ನಿಟ್ಟಿನಲ್ಲಿ ಸಿ.ಎಸ್ ಷಡಾಕ್ಷರಿ ಅವರನ್ನು ಕಟ್ಟಿ ಹಾಕಲು ಯಾರಿಗೂ ಸಾಧ್ಯವಾಗಿಲ್ಲ, ಬಿಜೆಪಿಯ ಅಧಿಕಾರದ ಅವಧಿ ಮುಗಿದ ತರುವಾಯವು, ಬಿಎಸ್‌ವೈ ತೆರೆಯ ಮರೆಗೆ ಸರಿದರು, ಅವರ ಬಹುತ್ವದ ಹಾದಿಯ ನಾಗಲೋಟ ಮುಂದುವರೆದು ಎರಡನೇ ಭಾರಿಗೆ ರಾಜ್ಯಾಧ್ಯಕ್ಷರಾಗಿ, ರಾಜ್ಯದಲ್ಲಿನ ವಿವಿಧ ಹಂತದ ಲಕ್ಷಾಂತರ ನೌಕರರನ್ನು ಒಂದೇ ಸೂರಿನಡಿ ತರುವಲ್ಲಿ ಯಶಸ್ವಿಯಾಗಿದ್ದಾರೆ,
ಪಕ್ಷ ಆವುದಾದರೇನು, ನೌಕರರ ಸಾಮಾಜಿಕ ನ್ಯಾಯ ಮುಖ್ಯ ಎನ್ನುವುದೇ ಅವರ ಮೂಲ ಆಶಯವಾಗಿರುವುದರಿಂದಲೇ ಇಂದಿಗೂ ನೌಕರರ ಪಾಲಿನ ಬಹುದೊಡ್ಡ ನಾಯಕರಾಗಿ ಹೊರಹೊಮ್ಮಿದ್ದಾರೆ, ಈ ಸಾಲು ಅನೇಕತೆಗಳ ಉತ್ಪ್ರೇಕ್ಷೆ ಖಂಡಿತವಾಗಿಯೂ ಅಲ್ಲವಾಗಿದೆ, ಸಿ.ಎಸ್ ಷಡಾಕ್ಷರಿ ಅವರು ಬೆಳೆದಂತೆಲ್ಲಾ ಈ ಹೋರಾಟದ ನೆಲೆ ಶಿವಮೊಗ್ಗ ಹಿರಿಮೆ ಹೆಚ್ಚಿದೆ, ಈ ಕಾರಣವೇ ಅವರ ಮೇಲೆ ಆರೋಪಗಳ ಸುರಿಮಳೆಗೈಯಲಾಗಿತ್ತು, ಬಿಎಸ್‌ವೈ ಕುಟುಂಬದ ನಡುವಣವಿದ್ದ ಸಾಂಗತ್ಯಕ್ಕೊಂದು ಅಂದು ವಿಪಕ್ಷಗಳು ಪಟ್ಟಿಯನ್ನು ಹರಿಬಿಟ್ಟಿತ್ತು, ಇದು ಹೆಚ್ಚು ಕಾಲ ಉಳಿಲೇ ಇಲ್ಲ, ಏಕೆಂದರೆ ವಾಸ್ತವತೆಗಳ ಬುಟ್ಟಿ ತೆರೆದ ಮೇಲಷ್ಟೆ ಇದೊಂದು ಆಯಾ ಕಾಲಘಟ್ಟದ ಆರೋಪಗಳು ಎಂದು ರಾಜಕೀಯ ವಲಯದಲ್ಲಿ ಲಗತ್ತಾಗಿತ್ತು,
ಅಂದು ಕೂಡ ಇಂತಿವರು ತಮ್ಮ ಮೇಲಿನ ವಿಷಮತೆಯ ಸ್ಥಿತಿಯನ್ನು ಶಾಂತಚಿತ್ತದಿಂದಲೇ ಆಸ್ವಾದಿಸಿಕೊಂಡು ಎದುರಿಸಿದ್ದರು, ಇದೀಗಲೂ ವರ್ಗಾವಣೆಯ ಬ್ಯುಸಿ ವಾತಾವರಣಗಳು ಏರ್ಪಟ್ಟವು, ಇವೆಲ್ಲಾ ಸಾಂದರ್ಭಿಕ ಎಂಬಂತೆ ಸುಳಿದು ಸರಿದಿತ್ತು, ಏಕೆಂದರೆ ಸಿ.ಎಸ್ ಷಡಾಕ್ಷರಿ ಅವರ ಬತ್ತಳಿಕೆಯ ಬಾಣಗಳು ಅದಷ್ಟೆ ಚತುರತೆಯಲ್ಲಿ ತನ್ನ ಗುರಿ ಮುಟ್ಟುತ್ತದೆ, ಪ್ರತಿ ಸವಾಲುಗಳನ್ನು ಛಿದ್ರಗೊಳಿಸಿ ಮತ್ತೊಮ್ಮೆ ಬತ್ತಳಿಕೆ ಸೇರಿಕೊಳ್ಳುವ ಜಾಣ್ಮೆಗಳಿಂದಲೇ ಇಂದಿಗೂ ಸಿ.ಎಸ್ ಷಡಾಕ್ಷರಿಯವರನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುವುದು ಸಾಬೀತಾಗಿದೆ.
ಇನ್ನೂ ಶಿವಮೊಗ್ಗ ಜಿಲ್ಲಾ ನೌಕರರ ಪ್ರತಿನಿಧಿಯಾಗಿ, ರಾಜ್ಯದ ಒಟ್ಟು ನೌಕರರ ಪ್ರತಿನಿಧಿಯಾಗಿ ಹಲವು ಬದಲಾವಣೆಗಳಿಗೆ ಹಾಗೂ ಬೆಳವಣಿಗೆಗಳಿಗೆ ಅಭಿವೃದ್ದಿಗಳಿಗೆ ಕಾರಣೀಕರ್ತರಾಗಿರುವ ಇವರು ಪ್ರಸ್ತುತ ಅವಧಿಯಲ್ಲಿ ಯಾರು ಅಳಿಸಲಾಗದ, ಕೆಡವಲಾಗದ ಮೈಲಿಗಲ್ಲು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಜೀವಂತಿಕೆಯನ್ನು ಕಾಪಿಟ್ಟುಕೊಂಡಿರುವುದು ಗೊತ್ತು ಮಾಡಿಕೊಳ್ಳಬಹುದು, ನೌಕರರ ಹಕ್ಕುಗಳು, ಕುಟುಂಬದ ಭದ್ರತೆಗಳು, ನೌಕರರ ರಕ್ಷಣೆ, ಮಹಿಳಾ ನೌಕರರಿಗೆ ವಿಶೇಷ ಸೌಲಭ್ಯ, ಯಾವುದೇ ಸರ್ಕಾರವಾಗಲಿ.. ಅಲ್ಲಿ ಸ್ಪಷ್ಟತೆಯಲ್ಲಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಿ.ಎಸ್ ಷಡಾಕ್ಷರಿ ಅವರ ಶ್ರಮದಾನ ಶಾಶ್ವತವಾಗಿ ಶಾಸನವಾದಂತಿದೆ,
ಪ್ರಸ್ತುತ ಅವಧಿಯಲ್ಲೂ ಕಾಂಗ್ರೆಸ್ ನೇತೃತ್ವದ ಸರ್ಕಾರವಿದೆ, ಕಳೆದ ಅವಧಿಯ ಸಿದ್ದರಾಮಯ್ಯನವರ ಕಾಲಮಾನದಿಂದ ಈ ಹೊತ್ತಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಿನಮಾನದವರೆಗೆ ಅದೇ ಮಾದರಿಯಲ್ಲಿಯೇ ನೌಕರರ ಕುರಿತಾಗಿ ಸ್ಪಂದನೆಗಳಿದೆ, ಚರ್ಚೆಗಳಿದೆ, ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಚಾಕಚಕ್ಯತೆಗಳಿದೆ, ಬಿಎಸ್‌ವೈ ಅಂತೆಯೇ ಈ ಅವಧಿಗಳ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರಿ ನೌಕರರ ನಡುವಣ ಭರವಸೆಯ ಸೇತುವೆಯಾಗಿರುವುದು ಶ್ಲಾಘನೀಯವಾಗಿದೆ,
ಅವಕಾಶ ಸಿಗುತ್ತದೆ, ಈ ಅವಕಾಶಗಳು ಸದುಪಯೋಗವಾಗಬೇಕು ಅಲ್ಲದೆ, ಹೊಸತೊಂದು ಚರಿತ್ರೆಯ ನಿರ್ಮಾತರಾಗುವುದು ವಿರಳ ಇದು ಅಸಾಧ್ಯವು ಕೂಡ, ಇಂತಹದೊಂದು ಸಾಲುಗಳನ್ನು ಸಿ.ಎಸ್ ಷಡಾಕ್ಷರಿಯವರು ಹುಸಿಗೊಳಿಸಿ ನಿಜಕ್ಕೂ ಇತಿಹಾಸ ಬರೆದು, ಲಕ್ಷಾಂತರ ನೌಕರರ ಪಾಲಿನ ಆಶಾದಾಯಕರಾಗಿದ್ದಾರೆ, ಈ ಮೂಲಕ ಜನಮನ್ನಣೆಗೂ ಪಾತ್ರರಾಗಿದ್ದಾರೆ,
ಇದೇ ಅಸಲಿ ಮಾತ್ರದಿಂದಲಿ ಶಿವಮೊಗ್ಗದಲ್ಲಿ ಹೀಗೊಂದು ಚರ್ಚೆ ಹೊರಬಿದ್ದಿದೆ, ಎರಡು ಭಾರಿ ಶಿವಮೊಗ್ಗ ಜಿಲ್ಲಾ ನೌಕರರ ಸಂಘದ ಪ್ರತಿನಿಧಿಯಾಗಿ, ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಎರಡು ಭಾರಿ ಪ್ರತಿನಿಧಿಯಾಗಿ ನ್ಯಾಯಸಮ್ಮತವಾಗಿ ನಡೆದುಕೊಂಡು ನೌಕರರ ಬದುಕುಗಳಿಗೆ ಜೀವದುಂಬಿದ ಸಿ.ಎಸ್ ಷಡಾಕ್ಷರಿ ಅವರು ಮುಂದಿನ ೨೦೨೮ರ ರಾಜ್ಯದ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ, ನೌಕರಿಗೆ ಹಾಗೂ ನೌಕರರ ಸಂಘಕ್ಕೆ ಭಾವಕಂಬನಿಯೊಳು ಬೀಳ್ಕೊಡಲಿದ್ದಾರೆ, ಎನ್ನುವ ಸುದ್ದಿಗಳು ಸಂಚಲನ ಸೃಷ್ಟಿಸಿದೆ, ಇನ್ನೊಂದೆಡೆ ಶಿವಮೊಗ್ಗ ನಗರ ಡಿ.ಲಿಮಿಟೇಶನ್ ಅಡಿಯಲ್ಲಿ ೨೧ ಹಳ್ಳಿಗಳು ಶಿವಮೊಗ್ಗ ಮಹಾನಗರ ಪಾಲಿಕೆಗೆ ಸೇರ್ಪಡೆಯಾಗಲಿದ್ದು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಗಳು ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಾಗಿ ವಿಂಗಡಣೆಯಾಗಲಿದೆ ಎನ್ನುವ ರಾಜಕೀಯ ಬೆಳವಣಿಗೆಗಳು ಇವೆ, ಹೀಗೆನಾದರೂ ಆದರೆ ಸಿ.ಎಸ್ ಷಡಾಕ್ಷರಿಯವರು ಉತ್ತರ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದಾರೆ ಎನ್ನುವುದಿದೆ, ಇನ್ನೂ ಈ ಡಿ.ಲಿಮಿಟೇಶನ್ ಆಗದೆ ವಿಂಗಡಣೆಯ ತಾಂತ್ರಿಕ ಮುಗ್ಗಟ್ಟುಗಳು ಎದುರಾಗಿ ಕ್ಷೇತ್ರ ಇದ್ದಂತೆಯೇ ಇದ್ದರೂ ಸಿ.ಎಸ್ ಷಡಾಕ್ಷರಿ ಅವರ ಶಾಸಕತ್ವದ ಚುನಾವಣೆ ಖಾತ್ರಿ ಎನ್ನುವುದು ಜನ ಜಗಲಿಗಳಲ್ಲಿ ಬಿರುಸುಗೊಂಡ ಚರ್ಚೆಯಾಗಿದೆ.
ಒಟ್ಟಿನಲ್ಲಿ ಸಿ.ಎಸ್ ಷಡಾಕ್ಷರಿ ಅವರು ರಾಜ್ಯದಲ್ಲೊಂದು ಸಂಘಟಿತ ಭೂಪಟವಾಗಿರುವುದು ಅಕ್ಷರಶಃ ವಾಸ್ತವದ ಮಜಲಾಗಿದೆ ಎನ್ನುವುದೇ ನನ್ನಯ ಅಂಬೋಣ

