ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಜಾಹಿರಾತಿನ ನೀಚ ಮನಸ್ಥಿತಿ. I
ಜಾಹಿರಾತುಗಳಿಗೂ ಜಾತಿಗಳಿದೆ,
ಜಾತಿಗಳಿಗಂಟಿದ ರಾಜಕಾರಣವಿದೆ..!
ಸ್ವಜನ ಸುದ್ದಿ, ಅಭಿವ್ಯಕ್ತಿಯ ಅಂದಣವಿದೆ,
ದುರಾಧಿಕಾರಗಳ ಹಸ್ತಾಕ್ಷರಗಳಿದೆ..!
ಎಲ್ಲೆಡೆಯೂ ಇದೆ ವಾಸ್ತವ ಮಜಲು,
ಶಿವಮೊಗ್ಗದಲ್ಲಿಯೂ ನಿತ್ಯ ಡ್ರಾಮವಿಟ್ಟಿದೆ..!
ಜಾಹಿರಾತಿಗಾಗಿ ಸುದ್ದಿ ಅತಿರಂಜಿಸುತ್ತಿದೆ,
ಪ್ರಶ್ನಿಸದ ಮುಖಗಳಿಗೆ ಶ್ರದ್ಧಾಂಜಲಿಗಳಿರಲಿ..!
ಊರು ತುಂಬೆಲ್ಲಾ ನಿಷೇಧಿತ ಪ್ಲೆಕ್ಸಿಗಳು,
ಅದರೊಳು ರೌಡಿ, ಜುಗಾರಿಗಳ ಪೋಟೋಗಳು,
ಸಂಚಾರಿ, ಕ್ರೈಂ ನಿಯಮಗಳ ಉಲ್ಲಂಘಿತಗಳು,
ಇಲ್ಲಿ ಡಿಸಿಯು ಮೌನ, ಎಸ್ಪಿಯೂ ಮೌನ..!
ಪತ್ರಿಕೆಗಳಿಗಿಲ್ಲದ ಬೆಲೆ, ರಾಜಕಾರಣದ ಪ್ಲೆಕ್ಸಿಗಿದೆ,
ಪತ್ರಿಕೆಗಳ ಕುರಿತಾಗಿ, ಆರೋಪಿಸುವ ಅಪ್ರಬುದ್ದರಿಗೆ,
ಜಾತಿ, ಸ್ವಜನತೆ, ಅವಕಾಶವಾದಿಗಳ ಬೆಂಬಲವಿದೆ..!
ಬೆಂಬಲಿತ ಅಭಿವ್ಯಕ್ತಿಗಳಿದ್ದರೆ ಮಾತ್ರದಿ ಪ್ಯಾಕೇಜುಗಳಿದೆ.
ಇದುವೆ ಜಾಹಿರಾತಿನ ನೀಚ ಮನಸ್ಥಿತಿ,
ಪತ್ರಿಕಾ ಹಾದಿ ಅಂಬುದು, ಯಾವನ ಪಿತ್ರಾರ್ಜಿತವಲ್ಲ,
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕರಪತ್ರವಲ್ಲ,
ಅಪ್ರಬುದ್ಧರ ಒಡಲಿನಾಳದ ವಿಕೃತಿಗಳಲ್ಲ.

